ಮೂರು ದಿನದಿಂದ ಒಂದೂ ಇಲ್ಲ ಪಾಸಿಟಿವ್ ಕೇಸ್, ಜಿಲ್ಲಾಡಳಿತಕ್ಕೂ ನೆಮ್ಮದಿ, ಜನರಿಗೂ ಖುಷಿ, ಹೇಗಾಯ್ತು ಗೊತ್ತಾ ಇದೆಲ್ಲ?

Shivamogga City 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 28 ಮೇ 2020 ಕಳೆದ ಮೂರು ದಿನದಿಂದ ಶಿವಮೊಗ್ಗ ಜಿಲ್ಲೆಯಲ್ಲಿ ಒಂದೂ ಕರೋನ ಪಾಸಿಟಿವ್ ಪ್ರಕರಣ ಕಾಣಿಸಿಕೊಂಡಿಲ್ಲದೆ ಇರುವುದು ಜಿಲ್ಲಾಡಳಿತ ಮತ್ತು ಜನರು ನಿಟ್ಟುಸಿರು ಬಿಡುವಂತೆ ಮಾಡಿದೆ. ಈ ನಡುವೆ ಸೋಂಕಿತ ನಾಲ್ಕು ಮಂದಿ ಗುಣವಾಗಿ ಮನೆ ಸೇರಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಒಂದೇ ಒಂದು ಪಾಸಿಟಿವ್ ಇಲ್ಲ ಜಿಲ್ಲೆಯಾದ್ಯಂತ ಕಳೆದ ಮೂರು ದಿನದಲ್ಲಿ ಒಂದೇ ಒಂದು ಪಾಸಿಟಿವ್ ಪ್ರಕರಣ ಪತ್ತೆಯಾಗಿಲ್ಲ. ಕಂಟೈನ್ಮೆಂಟ್ ಜೋನ್‍ಗಳಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವ ಹಿನ್ನೆಲೆಯಲ್ಲಿ … Read more

ಮೇ 25ರ ಶಿವಮೊಗ್ಗ ಕರೋನ ರಿಪೋರ್ಟ್ | ಒಂದೇ ದಿನ 400ಕ್ಕೂ ಹೆಚ್ಚು ಜನರಿಗೆ ಪರೀಕ್ಷೆ, ಈತನಕ ಎಷ್ಟು ಮಂದಿಯಿ ಟೆಸ್ಟ್ ಆಗಿದೆ?

Mc-Gann-Hospital

ಶಿವಮೊಗ್ಗ ಲೈವ್.ಕಾಂ | SHIMOGA | 26 ಮೇ 2020 ಕರೋನ ಸೋಂಕು ಹರಡದಂತೆ ತಡೆಯಲು ಶಿವಮೊಗ್ಗದಲ್ಲಿ ಹೆಚ್ಚು ಜನರನ್ನು ಟೆಸ್ಟ್‍ಗೆ ಒಳಪಡಿಸಲಾಗುತ್ತಿದೆ. ಈಗಾಗಲೇ ಏಳು ಸಾವಿರ ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಈತನಕ ಒಟ್ಟು 34 ಮಂದಿಯಲ್ಲಿ ಪಾಸಿಟಿವ್ ಕಾಣಿಸಿಕೊಂಡಿದ್ದು, ಉಳಿದ ರಿಪೋರ್ಟ್‍ಗಳು ಈತನಕ ನೆಗೆಟಿವ್ ಬಂದಿರುವುದು ಶಿವಮೊಗ್ಗದ ಪಾಲಿಗೆ ನೆಮ್ಮದಿ ಮೂಡಿಸಿದೆ. ಮೇ 25ರಂದು ಸಂಗ್ರಹಿಸಿದ ಗಂಟಲು ದ್ರವ ಮಾದರಿ = 411 ಇದುವರೆಗು ನಡೆಸಿದ ಒಟ್ಟು ಮಾದರಿಗಳ ಪರೀಕ್ಷೆ = 7230 ನೆಗೆಟಿವ್ ವರದಿ … Read more

ಶಿವಮೊಗ್ಗದಲ್ಲಿ ನಾಲ್ವರು ಕರೋನ ಸೋಂಕಿತರು ಗುಣಮುಖ, ಆಸ್ಪತ್ರೆಯಿಂದ ಬೀಳ್ಕೊಡುಗೆ, ಯಾರು? ಎಲ್ಲಿಯವರು ಗೊತ್ತಾ?

250220 First Corona Cases Discharge 1

ಶಿವಮೊಗ್ಗ ಲೈವ್.ಕಾಂ | SHIMOGA | 25 ಮೇ 2020 ಕರೋನ ಸೋಂಕಿಗೆ ಚಿಕಿತ್ಸೆ ಪಡೆದು ಗುಣಮುಖವಾಗಿರುವ ನಾಲ್ವರನ್ನು ಇವತ್ತು ಮೆಗ್ಗಾನ್‌ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಮಾಡಲಾಗಿದೆ. ಜಿಲ್ಲೆಯಲ್ಲಿ ಕರೋನಾದಿಂದ ಮುಕ್ತರಾದ ಮೊದಲ ಪ್ರಕರಣ ಇದು. ಯಾರೆಲ್ಲ‌ ಡಿಸ್ಚಾರ್ಜ್ ಆಗಿದ್ದಾರೆ? ಮೆಗ್ಗಾನ್‌ ಆಸ್ಪತ್ರೆಯ ಐಸೊಲೇಷನ್‌ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಾಲ್ಕು ಮಂದಿ ಸೋಂಕಿತರನ್ನು ಬಿಡುಗಡೆ ಮಾಡಲಾಗಿದೆ. ಇವರೆಲ್ಲ ಗುಜರಾತ್‌ ರಾಜ್ಯದ ಅಹಮದಾಬಾದ್‌ನಿಂದ ಶಿವಮೊಗ್ಗಕ್ಕೆ ಆಗಮಿಸಿದ್ದರು. ಒಟ್ಟು ಒಂಭತ್ತು ಮಂದಿ ಆಗಮಿಸಿದ್ದರು. ಈ ಪೈಕಿ ಎಂಟು ಮಂದಿಗೆ ಕರೋನ ಪಾಸಿಟಿವ್‌ … Read more

ಮೇ 24ರ ಶಿವಮೊಗ್ಗ ಕರೋನ ರಿಪೋರ್ಟ್ | ಬರಬೇಕಿದೆ 339 ಜನರ ಟೆಸ್ಟಿಂಗ್ ರಿಪೋರ್ಟ್, ಈತನಕ ಎಷ್ಟು ಪರೀಕ್ಷೆಯಾಗಿದೆ ಗೊತ್ತಾ?

Corona PPE Kit and swab box

ಶಿವಮೊಗ್ಗ ಲೈವ್.ಕಾಂ | SHIMOGA | 25 ಮೇ 2020 ಕರೋನ ಸೋಂಕು ಹರಡದಂತೆ ತಡೆಯಲು ಶಿವಮೊಗ್ಗದಲ್ಲಿ ಹೆಚ್ಚು ಜನರನ್ನು ಟೆಸ್ಟ್‍ಗೆ ಒಳಪಡಿಸಲಾಗುತ್ತಿದೆ. ಈಗಾಗಲೇ ಆರೂವರೆ ಸಾವಿರ ಜನರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಈತನಕ ಒಟ್ಟು 32 ಮಂದಿಯಲ್ಲಿ ಪಾಸಿಟಿವ್ ಕಾಣಿಸಿಕೊಂಡಿದ್ದು, ಉಳಿದ ರಿಪೋರ್ಟ್‍ಗಳು ಈತನಕ ನೆಗೆಟಿವ್ ಬಂದಿರುವುದು ಶಿವಮೊಗ್ಗದ ಪಾಲಿಗೆ ನೆಮ್ಮದಿ ಮೂಡಿಸಿದೆ. ಮೇ 24ರಂದು ಸಂಗ್ರಹಿಸಿದ ಗಂಟಲು ದ್ರವ ಮಾದರಿ = 284 ಇದುವರೆಗು ನಡೆಸಿದ ಒಟ್ಟು ಮಾದರಿಗಳ ಪರೀಕ್ಷೆ = 6819 ನೆಗೆಟಿವ್ ವರದಿ … Read more

ಶಿವಮೊಗ್ಗ ಜಿಲೆಯಲ್ಲಿ ರಂಜಾನ್ ಸಾಮೂಹಿಕ ಪ್ರಾರ್ಥನೆ ಮಾಡುವಂತಿಲ್ಲ, ಶುಭಾಶಯ ಕೋರುವಾಗ ಇರಲಿ ಎಚ್ಚರ

230520 Muslim Meeting in Ramzan 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 23 ಮೇ 2020 ಲಾಕ್‍ಡೌನ್ ಹಿನ್ನೆಲೆ ರಂಜಾನ್‌ ಹಬ್ಬವನ್ನು ಸರ್ಕಾರದ ಮಾರ್ಗಸೂಚಿಯಂತೆ ಮನೆಯಲ್ಲಿಯೇ ಸರಳ ಹಾಗೂ ಅರ್ಥಪೂರ್ಣವಾಗಿ ಆಚರಿಸುವಂತೆ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಮನವಿ ಮಾಡಿದರು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಮುಸ್ಲಿಮ್ ಸಮುದಾಯದ ಪ್ರತಿನಿಧಿಗಳ ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ, ಲಾಕ್‍ಡೌನ್ ಹಿನ್ನೆಲೆಯಲ್ಲಿ ಸಾಮೂಹಿಕ ಪ್ರಾರ್ಥನೆಗೆ ಅವಕಾಶವಿರುವುದಿಲ್ಲ. ಈ ಹಿನ್ನಲೆಯಲ್ಲಿ ಮನೆಯಲ್ಲಿಯೇ ಪ್ರಾರ್ಥನೆ ಸಲ್ಲಿಸಬಹುದಾಗಿದೆ. ಈ ವಿಶೇಷ ಸಂದರ್ಭದಲ್ಲಿ ಎಲ್ಲರೂ ಜಿಲ್ಲಾಡಳಿತದೊಂದಿಗೆ ಕೈಜೋಡಿಸಿ ಸಹಕರಿಸಬೇಕು ಎಂದರು. ರಂಜಾನ್ ಶುಭಾಶಯಕ್ಕಾಗಿ ಕೈಕುಲುಕುವುದು, … Read more

ಚಲಿಸುತ್ತಿದ್ದ ಕಾರಿನಲ್ಲಿ ದಿಢೀರ್ ಬೆಂಕಿ, ಧಗಧಗ ಹೊತ್ತಿ ಉರಿದ ಕಾರು

230520 Car Burnt In Holehonnur 1 1

ಶಿವಮೊಗ್ಗ ಲೈವ್.ಕಾಂ | HOLEHONNURU NEWS | 23 ಮೇ 2020 ಪೂಜೆಗೆಂದು ತೆರಳುತ್ತಿದ್ದವರ ಕಾರಿನಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡಿದೆ. ಕೆಲವೆ ಕ್ಷಣದಲ್ಲಿ ಕಾರು ಸಂಪೂರ್ಣ ಸುಟ್ಟು ಹೋಗಿದೆ. ಶಿವಮೊಗ್ಗ – ಚಿತ್ರದುರ್ಗ ರಾಷ್ಟ್ರೀಯ ಹೆದ್ದಾರಿ 13ರ ಕೂಡ್ಲಿ ಕ್ರಾಸ್ ಬಳಿ ಚಲಿಸುತ್ತಿದ್ದ ಕಾರಿನ ಮುಂಭಾಗದಲ್ಲಿ ಹೊಗೆ ಕಾಣಿಸಿಕೊಂಡಿದೆ. ಕಾರಿನಲ್ಲಿದ್ದ ಅಪ್ಪ, ಮಗ ಕೂಡಲೇ ರಸ್ತೆ ಪಕ್ಕಕ್ಕೆ ನಿಲ್ಲಿಸಿ, ಕೆಳಗಿಳಿದಿದ್ದಾರೆ. ಕೆಲವೇ ಕ್ಷಣದಲ್ಲಿ ಕಾರು ಧಗಧಗ ಹೊತ್ತಿ ಉರಿದಿದೆ. ಪೂಜೆಗೆ ಹೊರಟಿದ್ದಾಗ ಅವಘಡ ಶಿವಮೊಗ್ಗದ ನೆಹರು ರಸ್ತೆಯ … Read more

ಮಹಾರಾಷ್ಟ್ರದಿಂದ ಬಂದವರಿಗೆ ರಾತ್ರೋರಾತ್ರಿ ಕ್ವಾರಂಟೈನ್‌ಗೆ ಯತ್ನ, ಭದ್ರಾವತಿ ಜಂಕ್ಷನ್‌ನಲ್ಲಿ ಸ್ಥಳೀಯರ ಆಕ್ರೋಶ

230520 Bhadravathi Junction Quarantine Clash 1

ಶಿವಮೊಗ್ಗ ಲೈವ್.ಕಾಂ | BHADRAVATHI NEWS | 23 ಮೇ 2020 ಮಹಾರಾಷ್ಟ್ರದಿಂದ ಬಂದವರ ಹಾಸ್ಟೆಲ್ ಕ್ವಾರಂಟೈನ್‍ಗೆ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ ಘಟನೆ ಭದ್ರಾವತಿ ತಾಲೂಕು ಜಂಕ್ಷನ್‍ನಲ್ಲಿ ನಡೆದಿದೆ. ಗ್ರಾಮ ಪಂಚಾಯಿತಿಗಾಗಲಿ, ಗ್ರಾಮಸ್ಥರಿಗಾಗಲಿ ತಿಳಿಸದೆ ಏಕಾಏಕಿ ಕ್ವಾರಂಟೈನ್ ಮಾಡಿದ್ದಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಮಹಾರಾಷ್ಟ್ರದಿಂದ ಬಂದಿರುವ 18 ಮಂದಿಯನ್ನು ಇಲ್ಲಿನ ಸರ್ಕಾರಿ ಹಾಸ್ಟೆಲ್ ಒಂದರಲ್ಲಿ ಕ್ವಾರಂಟೈನ್ ಮಾಡಲು ಕರೆತರಲಾಗಿತ್ತು. ಗ್ರಾಮಸ್ಥರಿಗೆ ತಿಳಿಸದೆಯೆ ಏಕಾಏಕಿ ಬಂದು ಕ್ವಾರಂಟೈನ್ ಮಾಡುತ್ತಿರುವುದಕ್ಕೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದರು. ಭದ್ರಾವತಿ ಗ್ರಾಮಾಂತರ ಠಾಣೆ … Read more

ಶಿವಮೊಗ್ಗದ ಲ್ಯಾಬ್‌ನಲ್ಲಿ ದಾಖಲೆ ಪ್ರಮಾಣದ ಕರೋನ ಪರೀಕ್ಷೆ, ಶಹಬ್ಬಾಸ್ ಅಂದ್ರು ಡಿಸಿ, ಎಷ್ಟು ತಪಾಸಣೆಯಾಗಿದೆ ಗೊತ್ತಾ?

220520 VRDL Lab SIMS Shimoga 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 22 ಮೇ 2020 ಶಿವಮೊಗ್ಗದ ವಿಆರ್‍ಡಿಎಲ್‍ ಲ್ಯಾಬ್‍ನಲ್ಲಿ ದಾಖಲೆ ಪ್ರಮಾಣದ ಪರೀಕ್ಷೆ ನಡೆಸಲಾಗಿದೆ. ಒಂದೇ ದಿನ 700ಕ್ಕೂ ಹೆಚ್ಚು ಗಂಟಲು ದ್ರವ ಪರೀಕ್ಷೆಯಾಗಿದೆ. ಇದರಿಂದಾಗಿ ಕರೋನ ಕುರಿತ ಆತಂಕ ಬಹುಬೇಗ ನಿವಾರಣೆಯಾಗುತ್ತಿದೆ. ಗುರುವಾರ ಒಂದೇ ದಿನ 781 ಗಂಟಲು ದ್ರವ ಸ್ಯಾಂಪಲ್ ಫಲಿತಾಂಶ ಬಂದಿದೆ. ಪ್ರಯೋಗಾಲಯದ ಸಿಬ್ಬಂದಿಗಳ ನಿರಂತರ ಪರೀಕ್ಷೆ ನಡೆಸುತ್ತಿರುವುದರಿಂದ ಇಷ್ಟೊಂದು ಪ್ರಮಾಣದ ಪರೀಕ್ಷೆಯಾಗಿದೆ. ಹಾಗಾಗಿ ಲ್ಯಾಬ್ ಸಿಬ್ಬಂದಿಗೆ ಜಿಲ್ಲಾಡಳಿತ ಅಭಿನಂದನೆ ಸಲ್ಲಿಸಿದೆ. ಮೂರು ಜಿಲ್ಲೆಯದ್ದು ಇಲ್ಲೇ … Read more

ಸೋನಿಯಾ ಗಾಂಧಿ ವಿರುದ್ಧ ಎಫ್ಐಆರ್, ಪೊಲೀಸ್ ಕ್ರಮ ಸರಿಯೋ ತಪ್ಪೋ ಸಂಪುಟದಲ್ಲಿ ಚರ್ಚೆ

Eshwarappa General Image 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 22 ಮೇ 2020 ಸಾಗರ ಪಟ್ಟಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ದೂರನ್ನು ಆಧರಿಸಿ ಪಿಎಸ್‍ಐ ಅವರು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ವಿರುದ್ಧ ಎಫ್‍ಐಆರ್ ದಾಖಲಿಸಿರುವುದು ಸರಿಯೋ ತಪ್ಪೋ ಎಂಬ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸುವುದಾಗಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ. ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಈಶ್ವರಪ್ಪ, ಕರೋನಾ ತಡೆಯಲು ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷ ಒಂದಾಗಿ ಹೋರಾಟ ನಡೆಸುತ್ತಿರುವಾಗ ಸೋನಿಯಾಗಾಂಧಿ ನೀಡಿರುವ ಹೇಳಿಕೆ ದೇಶದ ಪ್ರತಿಯೊಬ್ಬರಿಗೂ ನೋವು … Read more

ಶಿವಮೊಗ್ಗ ಜಿಲ್ಲೆಯಲ್ಲಿ ಆಟೋ ಸಂಚಾರಕ್ಕೆ ಹೊಸ ರೂಲ್ಸ್, ಏನೆಲ್ಲ ರೂಲ್ಸ್ ಮಾಡಲಾಗಿದೆ ಗೊತ್ತಾ?

Nehru-Road-with-Auto-Shivamogga

ಶಿವಮೊಗ್ಗ ಲೈವ್.ಕಾಂ | SHIMOGA NEWS | 22 ಮೇ 2020 ಕರೋನ ಸೋಂಕು ಹರಡುವ ಆತಂಕವಿರುವ ಹಿನ್ನೆಲೆ ಜಿಲ್ಲೆಯಲ್ಲಿ ಆಟೋ ಸಂಚಾರಕ್ಕೆ ಜಿಲ್ಲಾಡಳಿತ ಹೊಸ ನಿಯಮ ಘೋಷಿಸಿದೆ. ಈ ನಿಯಮಗಳನ್ನು ಆಟೋ ಚಾಲಕರು ಕಡ್ಡಾಯವಾಗಿ ಪಾಲಿಸಬೇಕು. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಆಟೋ ಚಾಲಕರು ಮತ್ತು ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ಏನೆಲ್ಲ ನಿಯಮಗಳನ್ನು ಪಾಲಿಸಬೇಕಿದೆ? ಆಟೋದಲ್ಲಿ ಚಾಲಕ ಮತ್ತು ಪ್ರಯಾಣಿಕರ ನಡುವೆ ತೆಳುವಾದ ಪ್ಲಾಸ್ಟಿಕ್ ಶೀಟ್ … Read more