BREAKING NEWS | ಶಿವಮೊಗ್ಗದಲ್ಲಿ ಇಬ್ಬರು ಮಕ್ಕಳು ಸೇರಿ 6 ಮಂದಿಗೆ ಕರೋನ, ಒಬ್ಬರಿಗೆ ತೀವ್ರ ಉಸಿರಾಟದ ಸಮಸ್ಯೆ

Corona PPE Kit and swab box

ಶಿವಮೊಗ್ಗ ಲೈವ್.ಕಾಂ | SHIMOGA NEWS | 21 ಮೇ 2020 ಶಿವಮೊಗ್ಗ ಜಿಲ್ಲೆಯಲ್ಲಿ ಮತ್ತೆ ಆರು ಕರೋನ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಇದರಿಂದ ಜಿಲ್ಲೆಯಲ್ಲಿ ಕರೋನ ಸೋಂಕಿತರ ಸಂಖ್ಯೆ 30ಕ್ಕೆ ಏರಿಕೆಯಾಗಿದೆ. ಆರು ಹೊಸ ಪ್ರಕರಣಗಳ್ಯಾವುದು? ಪೇಷೆಂಟ್ ನಂಬರ್ 1498 | 60 ವರ್ಷದ ಮಹಿಳೆ ಪಿ1499 | 21 ವರ್ಷದ ಮಹಿಳೆ ಪಿ1500 | 3 ವರ್ಷದ ಗಂಡು ಮಗು ಪಿ1501 | 3 ವರ್ಷದ ಹೆಣ್ಣು ಮಗು ಪಿ1502 | 56 ವರ್ಷದ … Read more

ಪ್ರಧಾನಿ ಮೋದಿ ವಿರುದ್ಧ ಅವಹೇಳನ ಟ್ವೀಟ್, ಸಾಗರದಲ್ಲಿ ದೂರು

SAGARA MAP GRAPHICS 1

ಶಿವಮೊಗ್ಗ ಲೈವ್.ಕಾಂ | SAGARA | 21 ಮೇ 2020 ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಅವಹೇಳನಕಾರಿ ಪೋಸ್ಟ್  ಪ್ರಕಟಿಸಿದ ಟ್ವಿಟರ್‌ ಖಾತೆ ವಿರುದ್ಧ ಸಾಗರದಲ್ಲಿ ದೂರು ದಾಖಲಾಗಿದೆ. @INCIndia ಎಂಬ ಟ್ವಿಟರ್ ಖಾತೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಗಾಳಿ ಸುದ್ದಿ ಹರಡಲಾಗುತ್ತಿದೆ ಎಂದು ಆರೋಪಿಸಲಾಗಿದೆ. ಈ ಟ್ವೀಟರ್ ಖಾತೆಯ ನಿರ್ವಾಹಕರು, ಅಧ್ಯಕ್ಷರು ಮತ್ತು ಸಂಬಂಧಪಟ್ಟವರ ವಿರುದ್ಧ ಸಾಗರದ ವಕೀಲ ಕೆ.ವಿ.ಪ್ರವೀಣ್ ದೂರು ನೀಡಿದ್ದಾರೆ. ಪಿಎಂ ಕೇರ್ಸ್ ಫಂಡ್‍ ಪ್ರಧಾನಿ ಅವರ ವೈಯಕ್ತಿಕ … Read more

ಶಿವಮೊಗ್ಗದ ಕ್ವಾರಂಟೈನ್ ಸೆಂಟರ್‌ನಲ್ಲಿ ಸ್ಥಳೀಯರ ದಾಂಧಲೆ, ಚೇರು, ಟೇಬಲ್, ಸಿಸಿಟಿವಿ ಪುಡಿಪುಡಿ

200520 Clash in Quarantine Center 1

ಶಿವಮೊಗ್ಗ ಲೈವ್.ಕಾಂ | SHIMOGA | 20 ಮೇ 2020 ಹೊರ ರಾಜ್ಯ ಮತ್ತು ಜಿಲ್ಲೆಯಿಂದ ಬಂದವರನ್ನು ತಮ್ಮ ಏರಿಯಾದ ಹಾಸ್ಟೆಲ್‍ನಲ್ಲಿ ಕ್ವಾರಂಟೈನ್ ಮಾಡುವುದನ್ನು ವಿರೋಧಿಸಿ ಸ್ಥಳೀಯರು ದಿಢೀರ್ ಪ್ರತಿಭಟನೆ ನಡೆಸಿದರು. ಅಲ್ಲದೆ ಹಾಸ್ಟೆಲ್ ಒಳಗಿದ್ದ ಚೇರು, ಟೇಬಲ್, ಸಿಸಿಟಿವಿ ಕ್ಯಾಮರಾಗಳನ್ನು ಧ್ವಂಸ ಮಾಡಿದ್ದಾರೆ. ಶಿವಮೊಗ್ಗ ನಗರದ ಬಾಪೂಜಿನಗರದಲ್ಲಿ ಘಟನೆ ನಡೆದಿದೆ. ಇಲ್ಲಿನ ಸರ್ಕಾರಿ ಹಾಸ್ಟೆಲ್‍ನಲ್ಲಿ ಜಿಲ್ಲಾಡಳಿತ ಕ್ವಾರಂಟೈನ್‍ಗೆ ವ್ಯವಸ್ಥೆ ಮಾಡಿದೆ. ಇವತ್ತು ಕೆಲವರನ್ನು ಕ್ವಾರಂಟೈನ್ ಮಾಡಲು ಬಸ್ಸಿನಲ್ಲಿ ಕರೆತರಲಾಗಿತ್ತು. ಈ ವೇಳೆ ಸ್ಥಳೀಯರು ತೀವ್ರ ವಿರೋಧ … Read more

ಶಿವಮೊಗ್ಗ ಎಸ್‌ಪಿ ಕಚೇರಿ ಸೀಲ್ ಡೌನ್ ವರದಿಯೇ ಸುಳ್ಳು, ನೂತನ ಎಸ್‌ಪಿ ಅಧಿಕಾರ ಸ್ವೀಕಾರ ಅನ್ನೋದು ನಿರಾಧಾರ

200520 Shimoga DC KB Shivakumar 1

ಶಿವಮೊಗ್ಗ ಲೈವ್.ಕಾಂ | SHIMOGA | 20 ಮೇ 2020 ಕೋವಿಡ್ ಹಿನ್ನೆಲೆಯಲ್ಲಿ ಶಿವಮೊಗ್ಗ ನಗರದಲ್ಲಿ ಎಸ್‍.ಪಿ ಕಚೇರಿ ಸೇರಿದಂತೆ ಯಾವುದೇ ಸರ್ಕಾರಿ ಕಚೇರಿಯನ್ನು ಸೀಲ್‍ಡೌನ್ ಮಾಡಲಾಗಿಲ್ಲ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಸ್ಪಷ್ಟಪಡಿಸಿದರು. ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ ಸೇರಿದಂತೆ ಮೂರು ಮಂದಿ ಪೊಲೀಸ್ ಅಧಿಕಾರಿಗಳು ಕ್ವಾರೆಂಟೈನ್‍ನಲ್ಲಿದ್ದಾರೆ. ಇನ್ನುಳಿದಂತೆ ಯಾವುದೇ ಪೊಲೀಸ್ ಅಧಿಕಾರಿಗಳು ಕ್ವಾರೆಂಟೈನ್‍ನಲ್ಲಿರುವುದಿಲ್ಲ. ಆದರೆ ಮುಂಜಾಗರೂಕತಾ ಕ್ರಮವಾಗಿ ಈಗಾಗಲೇ 11 ಮಂದಿ ಪೊಲೀಸ್ ಅಧಿಕಾರಿಗಳ ಗಂಟಲ ದ್ರವ ಪರೀಕ್ಷೆ … Read more

ಶಿವಮೊಗ್ಗದ ಪೊಲೀಸ್ ಅಧಿಕಾರಿಗಳು ಕ್ವಾರಂಟೈನ್‌ಗೆ, ರಾತ್ರೋರಾತ್ರಿ ನೂತನ ಅಧಿಕಾರಿಗಳ ನಿಯೋಜನೆ, ಯಾರನ್ನೆಲ್ಲ ನೇಮಿಸಲಾಗಿದೆ?

police jeep

ಶಿವಮೊಗ್ಗ ಲೈವ್.ಕಾಂ | SHIMOGA NEWS | 20 ಮೇ 2020 ಶಿವಮೊಗ್ಗ ಪೊಲೀಸ್ ಇಲಾಖೆಗೆ ಕರೋನ ಸೋಂಕಿನ ಬಿಸಿ ತಟ್ಟಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ಸೇರಿ ಹಲವರನ್ನು ಕ್ವಾರಂಟೈನ್‍ಗೆ ಒಳಪಡಿಸಲಾಗಿದೆ. ಈ ನಡುವೆ ಬೆಂಗಳೂರಿನಿಂದ ನೂತನ ಪೊಲೀಸರನ್ನು ನಿಯೋಜಿಸಿ ಸರ್ಕಾರ ಆದೇಶ ಹೊರಡಿಸಿದೆ. ರಾತ್ರೋರಾತ್ರಿ ಹೊಸ ಎಎಸ್‍ಪಿ ಶಿವಮೊಗ್ಗ ಜಿಲ್ಲೆಗೆ ನೂತನ ಹೆಚ್ಚುವರಿ ಪೊಲೀಸ್ ಅಧೀಕ್ಷಕರನ್ನು ನಿಯೋಜಿಸಲಾಗಿದೆ. ಜಯಪ್ರಕಾಶ್ ಅವರನ್ನು ನೂತನ ಹೆಚ್ಚುವರಿ ಪೊಲೀಸ್ ಅಧೀಕ್ಷಕರನ್ನಾಗಿ ನೇಮಕ ಮಾಡಿ, ಪೊಲೀಸ್ ಮಹಾನಿರ್ದೆಶಕರು ಆದೇಶ ಹೊರಡಿಸಿದ್ದಾರೆ. ಜಿಲ್ಲೆಗೆ … Read more

ಮೆಗಾ ಧಾರಾವಾಹಿಯಂತಿದ್ದ 20 ಲಕ್ಷ ಕೋಟಿ ಪ್ಯಾಕೇಜ್ ಬರಿ ಪುಸ್ತಕದ ಬದನೆಕಾಯಿ, ಶಿವಮೊಗ್ಗ ಕಾಂಗ್ರೆಸ್ ಆಕ್ರೋಶ

H-S-Sundaresh-Congress-President

ಶಿವಮೊಗ್ಗ ಲೈವ್.ಕಾಂ | SHIMOGA NEWS | 20 ಮೇ 2020 ಕೇಂದ್ರ ಸರ್ಕಾರ ಘೋಷಣೆ ಮಾಡಿರುವ 20 ಲಕ್ಷ ಕೋಟಿ ಹಣದ ಪ್ಯಾಕೇಜ್ ಒಂದು ವಾರದ ಟಿವಿ ಮೆಗಾ ಧಾರಾವಾಹಿಯಂತಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್.ಸುಂದರೇಶ್ ಲೇವಡಿ ಮಾಡಿದರು. ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕರೋನಾ ಸಂಕಷ್ಟದ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಘೋಷಿಸಿರುವ ಈ 20 ಲಕ್ಷ ಕೋಟಿ ಪ್ಯಾಕೇಜ್, ಕೇವಲ ಪುಸ್ತಕದ ಬದನೆಕಾಯಿಯಂತೆ ಕಾಣುತ್ತಿದೆ ಎಂದು ವ್ಯಂಗ್ಯವಾಡಿದರು. 2 ತಿಂಗಳ ಕಾಲ ಲಾಕ್‌ಡೌನ್‌ನಿಂದಾಗಿ ದೇಶದ … Read more

ಪಿ1305ಗೆ ಕರೋನ ಸೋಂಕು ತಗುಲಿದ್ದು ಹೇಗೆ ಅನ್ನೋದೇ ನಿಗೂಢ, ಊಹಾಪೋಹದಿಂದ ಕುಂಸಿ, ಚೋರಡಿ ಸುತ್ತಲು ಆತಂಕ

Mc-Gann-Hospital

ಶಿವಮೊಗ್ಗ ಲೈವ್.ಕಾಂ | SHIMOGA NEWS | 20 ಮೇ 2020 ಪೇಷೆಂಟ್ ನಂಬರ್ 1305 ಕೇಸ್ ಜಿಲ್ಲಾಡಳಿತಕ್ಕೆ ದೊಡ್ಡ ಸವಾಲಾಗಿದೆ. ಇವರಿಗೆ ಕರೋನ ಸೋಂಕು ತಗುಲಿದ್ದು ಹೇಗೆ ಅನ್ನುವುದು ಈತನಕ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಹಾಗಾಗಿ ಸೋಂಕು ಮತ್ತಷ್ಟು ಜನಕ್ಕೆ ಹರಡಬಹುದೆ ಎಂಬ ಅನುಮಾನ ಮೂಡಿದೆ. ಶಿವಮೊಗ್ಗ ತಾಲೂಕು ಬಾಳೆಕೊಪ್ಪ ಗ್ರಾಮದ ಪಿ1305 ಅವರಿಗೆ ಸೋಂಕು ತಗುಲಿರುವ ಕುರಿತು ನಿನ್ನೆ ಸ್ಟೇಟ್ ಬುಲೆಟಿನ್‍ನಲ್ಲಿ ಪ್ರಕಟಿಸಲಾಗಿದೆ. ಇವರಿಗೆ 63 ವರ್ಷ ವಯಸ್ಸು. ಇವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು … Read more

ಶಿವಮೊಗ್ಗದಲ್ಲಿ ಕರೋನ ಕಂಟೈನ್ಮೆಂಟ್ ಜೋನ್ ಹೆಚ್ಚಳ, ಮೂರು ಗ್ರಾಮ ಸಂಪೂರ್ಣ ಸ್ಥಬ್ಧ, ಯಾವೆಲ್ಲ ಗ್ರಾಮಗಳು ಗೊತ್ತಾ?

150520 Rajadakatte Sealdown 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 20 ಮೇ 2020 ಶಿವಮೊಗ್ಗ ಜಿಲ್ಲೆಯಲ್ಲಿ ಕಂಟೈನ್ಮೆಂಟ್ ಜೋನ್‍ಗಳ ಸಂಖ್ಯೆ ಹೆಚ್ಚಳವಾಗಿದೆ. ಈ ತನಕ ಒಂದೆ ಕಂಟೈನ್ಮೆಂಟ್ ಜೋನ್ ಇತ್ತು. ಆದರೆ ಎರಡು ಹೊಸ ಪಾಸಿಟಿವ್ ಪ್ರಕರಣದಿಂದ ಕಂಟೈನ್ಮೆಂಟ್ ಜೋನ್ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ. ಕಂಟೈನ್ಮೆಂಟ್ ಜೋನ್ 1 | ತೀರ್ಥಹಳ್ಳಿ ತಾಲೂಕಿನ ಗ್ರಾಮ ಪೇಷೆಂಟ್ ನಂಬರ್ 995 ಮುಂಬೈನಿಂದ ತೀರ್ಥಹಳ್ಳಿ ತಾಲೂಕು ಹಳ್ಳಿಕಬೈಲು ಗ್ರಾಮಕ್ಕೆ ಬಂದಿದ್ದರು. ಮರು ದಿನವೆ ಇವರಿಗೆ ಕರೋನ ಪಾಸಿಟಿವ್ ಬಂದಿತ್ತು. ಪಿ995 ಮತ್ತು … Read more

ತೀರ್ಥಹಳ್ಳಿ ತಾಲೂಕಿನಲ್ಲಿ ಮತ್ತೊಬ್ಬರಿಗೆ KFD ಪಾಸಿಟಿವ್, ಎಲ್ಲಿಯವರು? ಸೋಂಕಿತರ ಸಂಖ್ಯೆ ಈಗೆಷ್ಟಾಯ್ತು?

THIRTHAHALLI MAP GRAPHICS 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 20 ಮೇ 2020 ಕರೋನ ಆತಂಕದ ನಡುವೆ ಮಂಗನ ಕಾಯಿಲೆ ಭೀತಿ ಉಲ್ಬಣಿಸಿದೆ. ತೀರ್ಥಹಳ್ಳಿ ತಾಲೂಕಿನಲ್ಲಿ ಮತ್ತೊಬ್ಬರಿಗೆ KFD ಸೋಂಕು ತಗುಲಿರುವುದು ದೃಢಪಟ್ಟಿದೆ. ದೇವಂಗಿ ಆರೋಗ್ಯ ಕೇಂದ್ರ ವ್ಯಾಪ್ತಿಯ ಯಡುಗಡ್ಡೆ ಗ್ರಾಮದ ವ್ಯಕ್ತಿಯೊಬ್ಬರಿಗೆ ಸೋಂಕು ತಗುಲಿದೆ. ಅವರನ್ನು ತೀರ್ಥಹಳ್ಳಿ ತಾಲೂಕಿನ ಜೆ.ಸಿ.ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ತೀರ್ಥಹಳ್ಳಿ ತಾಲೂಕಿನ ಮಂಗನ ಕಾಯಿಲೆ ಸೋಂಕಿತರ ಸಂಖ್ಯೆ 138ಕ್ಕೆ ಏರಿಕೆಯಾಗಿದೆ. ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494 ವಾಟ್ಸಪ್ ನಂಬರ್ | … Read more

ಶಿವಮೊಗ್ಗ ಜಿಲ್ಲಾಡಳಿತಕ್ಕೆ ತಲೆನೋವು ತಂದ ಪೇಷಂಟ್ ನಂಬರ್ 1304, ಪೊಲೀಸರು, ಅಧಿಕಾರಿಗಳೇ ಕ್ವಾರಂಟೈನ್

Mc-Gann-Hospital

ಶಿವಮೊಗ್ಗ ಲೈವ್.ಕಾಂ | SHIMOGA NEWS | 19 ಮೇ 2020 ಕರೋನ ಸೋಂಕಿತ ಪೇಷಂಟ್‍ ನಂಬರ್ 1304 ಶಿವಮೊಗ್ಗ ಜಿಲ್ಲಾಡಳಿತಕ್ಕೆ ದೊಡ್ಡ ತಲೆನೋವು ತಂದಿದೆ. ಸೋಂಕಿತೆಗೆ ಆಪ್ತ ಸಮಾಲೋಚನೆ ನಡೆಸಿದ್ದ ಅಧಿಕಾರಿಗಳೆಲ್ಲ ಈಗ ಕ್ವಾರಂಟೈನ್‍ಗೆ ಒಳಗಾಗುವಂತಾಗಿದೆ. 15 ವರ್ಷದ ಬಾಲಕಿಯನ್ನು ಮೆಗ್ಗಾನ್ ಆಸ್ಪತ್ರೆಗೆ ಕರೆತಂದು ಆರೋಗ್ಯ ತಪಾಸಣೆ ನಡೆಸಲಾಗುತ್ತಿತ್ತು. ಪ್ರಕರಣವೊಂದರ ಸಂಬಂಧ ಈ ಬಾಲಕಿಯನ್ನು ಪೊಲೀಸರು ವಿಚಾರಣೆ ನಡೆಸಿದ್ದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಿಬ್ಬಂದಿ ಈ ಬಾಲಕಿಗೆ ಆಪ್ತ ಸಮಾಲೋಚನೆಯನ್ನು ನಡೆಸಿದ್ದರು ಎಂದು … Read more