ಎಂಟು ಪಾಸಿಟಿವ್ ಪ್ರಕರಣ, ಆದರೂ ಗ್ರೀನ್ ಜೋನ್‌ನಲ್ಲೇ ಉಳಿಯುತ್ತೆ ಶಿವಮೊಗ್ಗ, ಹೇಗದು ಗೊತ್ತಾ?

Corona PPE Kit and swab box

ಶಿವಮೊಗ್ಗ ಲೈವ್.ಕಾಂ | SHIMOGA NEWS | 10 ಮೇ 2020 ಎಂಟು ಕರೋನ ಪಾಸಿಟಿವ್ ಪ್ರಕರಣಗಳು ಕಂಡು ಬಂದರೂ ಶಿವಮೊಗ್ಗ ಜಿಲ್ಲೆ ಹಸಿರು ವಲಯದಲ್ಲಿಯೆ ಮುಂದುವರೆಯಲಿದೆ. ಇದು ಶಿವಮೊಗ್ಗದ ಜನರು ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ. ಕರೋನ ಪಾಸಿಟಿವ್ ಕಂಡು ಬಂದಲ್ಲಿ ಜಿಲ್ಲೆ ಹಸಿರು ವಲಯದಿಂದ ಆರೆಂಜ್ ಅಥವಾ ರೆಡ್ ಜೋನ್‍ಗೆ ಹೋಗಲಿದೆ. ಆದರೆ ಎಂಟು ಪಾಸಿಟಿವ್ ಪ್ರಕರಣ ಕಂಡು ಬಂದರೂ ಶಿವಮೊಗ್ಗ ಜಿಲ್ಲೆ ಗ್ರೀನ್ ಜೋನ್‍ನಲ್ಲಿಯೆ ಉಳಿಯಲಿದೆ. ಯಾಕೆ ಗ್ರೀನ್ ಜೋನ್‍ನಲ್ಲೇ ಉಳಿಯಲಿದೆ? ‘ಈ … Read more

BREAKING NEWS | ಶಿವಮೊಗ್ಗಕ್ಕು ವಕ್ಕರಿಸಿದ ಕರೋನ, ಎಂಟು ಮಂದಿಗೆ ಪಾಸಿಟಿವ್

100520 Corona Positive In Shimoga 1

ಶಿವಮೊಗ್ಗ ಲೈವ್.ಕಾಂ | SHIMOGA CITY | 10 ಮೇ 2020 ಈತನಕ ಗ್ರೀನ್ ಜೋನ್‌ನಲ್ಲಿದ್ದ ಶಿವಮೊಗ್ಗ ಜಿಲ್ಲೆಗು ಕರೋನ ಸೋಂಕು ವಕ್ಕರಿಸಿಕೊಂಡಿದೆ. ಎಂಟು ಮಂದಿಯಲ್ಲಿ ಪಾಸಿಟಿವ್ ಕಾಣಿಸಿಕೊಂಡಿದೆ. ಯಾರಿಗೆಲ್ಲ ಪಾಸಿಟಿವ್ ಬಂದಿದೆ? ಗುಜರಾತ್ ರಾಜ್ಯದ ಅಹಮದಾಬಾದ್‌ನಿಂದ ಒಂಭತ್ತು ಮಂದಿ ಶಿವಮೊಗ್ಗಕ್ಕೆ ಬಸ್ಸಿನಲ್ಲಿ ಆಗಮಿಸಿದ್ದರು. ಈ ಪೈಕಿ ಎಂಟು ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ, ಅಹಮದಾಬಾದ್‌ನಿಂದ ಬಂದಿದ್ದ ಒಂಭತ್ತು ಮಂದಿ ಪೈಕಿ ಏಳು ಜನ ಶಿಕಾರಿಪುರದವರು, … Read more

ಶಿವಮೊಗ್ಗ ಚೆಕ್‌ಪೋಸ್ಟ್‌ನಲ್ಲಿ ಲಾರಿ ತಪಾಸಣೆ ನಡೆಸುತ್ತಿದ್ದ ಪೊಲೀಸರಿಗೆ ಕಾದಿತ್ತು ಶಾಕ್, ತಕ್ಷಣ ಲಾರಿ ವಶಕ್ಕೆ

100520 Truck Seized During Lockdown 1

ಶಿವಮೊಗ್ಗ ಲೈವ್.ಕಾಂ | SHIMOGA | 10 ಮೇ 2020 ರಾತ್ರೋರಾತ್ರಿ ಲಾರಿಯಲ್ಲಿ ಶಿವಮೊಗ್ಗದಿಂದ ಹೊರಗೆ ಸಾಗಿಸಲು ಪ್ರಯತ್ನಿಸಿದ ಲಾರಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಶಿವಮೊಗ್ಗದಿಂದ ರಾಜಸ್ಥಾನಕ್ಕೆ ಕರೆದೊಯ್ಯಲು ಯತ್ನಿಸಲಾಗಿತ್ತು. ರಾಜಸ್ಥಾನಕ್ಕೆ ತೆರಳಬೇಕಿದ್ದ ಜನರನ್ನು ಲಾರಿಯಲ್ಲಿ ಕರೆದೊಯ್ಯಲು ಪ್ರಯತ್ನಿಸಲಾಗಿತ್ತು. ಚೆಕ್‍ಪೋಸ್ಟ್‍ನಲ್ಲಿ ತಪಾಸಣೆ ನಡೆಸುವ ವೇಳೆ ಘಟನೆ ಬೆಳಕಿಗೆ ಬಂದಿದೆ. ‘ಕೆಲವರನ್ನು ಲಾರಿಯಲ್ಲಿ ಅಪಾಯಕರ ರೀತಿಯಲ್ಲಿ ಕರೆದೊಯ್ಯಲಾಗುತ್ತಿತ್ತು. ಚೆಕ್‍ಪೋಸ್ಟ್‍ನಲ್ಲಿ ತಪಾಸಣೆ ವೇಳೆ ಘಟನೆ ಬೆಳಕಿಗೆ ಬಂದಿದೆ. ಜನರಿಗೆ ತಮ್ಮ ಮನೆಗಳಿಗೆ ತೆರಳುವಂತೆ ಸೂಚಿಸಲಾಗಿದೆ. ಒಂದು ವೇಳೆ ರಾಜಸ್ಥಾನಕ್ಕೆ ಹೋಗಲೇಬೇಕು … Read more

ಶಿವಮೊಗ್ಗದಲ್ಲಿ ದಿಢೀರ್ ಡೆಮೊ ಸೀಲ್ ಡೌನ್ ಆಗಿದ್ದ ಬಡಾವಣೆಗಳಲ್ಲಿ ಇವತ್ತು ಹೇಗಿದೆ ಗೊತ್ತಾ ಪರಿಸ್ಥಿತಿ?

080520 Siddaiah Road Sudden Seal Down 1

ಶಿವಮೊಗ್ಗ ಲೈವ್.ಕಾಂ | SHIMOGA | 8 ಮೇ 2020 ಡೆಮೊ ಸೀಲ್‍ ಡೌನ್‍ನಿಂದಾಗಿ ಆತಂಕಕ್ಕೀಡಾಗಿದ್ದ ಬಡಾವಣೆಗಳಲ್ಲಿ ಇವತ್ತು ಬಿಗ್ ರಿಲೀಫ್‍ ಸಿಕ್ಕಿದೆ. ಬೆಳಗ್ಗೆಯಿಂದ ಜನಜೀವನ ಸಹಜ ಸ್ಥಿತಿಗೆ ಮರಳಿದೆ. ಸೀಗೆಹಟ್ಟಿ, ಭಾರತಿ ಕಾಲೋನಿ, ಸಿದ್ದಯ್ಯ ರಸ್ತೆ, ಆರ್‍.ಎಂ.ಎಲ್‍ ನಗರದಲ್ಲಿ ಸುತ್ತಮುತ್ತ ಬಡಾವಣೆಗಳಲ್ಲಿ ಗುರುವಾರ ಸಂಜೆ ಡೆಮೊ ಸೀಲ್‍ ಡೌನ್ ಮಾಡಲಾಗಿತ್ತು. ಇದರಿಂದ ಶಿವಮೊಗ್ಗದಲ್ಲಿ ಆತಂಕ ಹುಟ್ಟಿತ್ತು. ಆದರೆ ಇವತ್ತು ಬೆಳಗ್ಗೆಯಿಂದ ಈ ಬಡಾವಣೆಯಲ್ಲಿ ರಿಲೀಫ್‍ ನೀಡಲಾಗಿತ್ತು. ಅಂಗಡಿಗಳು ಓಪನ್, ಜನ ಸಂಚಾರ ನಾರ್ಮಲ್ ಬೆಳಗ್ಗೆಯಿಂದಲೇ ಈ … Read more

ತೀರ್ಥಹಳ್ಳಿಯಲ್ಲಿ ಹಾರ್ಡ್‌ವೇರ್ ಸಾಮಗ್ರಿ ಹೊತ್ತ ಲಾರಿ ಪಲ್ಟಿ, ಶಿವಮೊಗ್ಗ ಭದ್ರಾವತಿ ನಡುವೆ ಲಾರಿ ಅಪಘಾತ

080520 Lorry Accident Near Thirthahalli 1

ಶಿವಮೊಗ್ಗ ಲೈವ್.ಕಾಂ | SHIMOGA | 8 ಮೇ 2020 ಶಿವಮೊಗ್ಗ ಮತ್ತು ತೀರ್ಥಹಳ್ಳಿಯಲ್ಲಿ ಸಂಭವಿಸಿದ ಪ್ರತ್ಯೇಕ ಘಟನೆಯಲ್ಲಿ ಎರಡು ಲಾರಿಗಳು ಅಪಘಾತಕ್ಕೀಡಾಗಿವೆ. ತೀರ್ಥಹಳ್ಳಿ ರಿಪೋರ್ಟ್ ಹಾರ್ಡ್‍ವೇರ್ ಸಾಮಾಗ್ರಿಗಳನ್ನು ತುಂಬಿಕೊಂಡು ಬರುತ್ತಿದ್ದ ಲಾರಿಯೊಂದು ತೀರ್ಥಹಳ್ಳಿ ತಾಲೂಕು ಕುಡುಮಲ್ಲಿಗೆ ಬಳಿ ಉರುಳಿ ಬಿದ್ದಿದೆ. ಆಂಧ್ರ ಪ್ರದೇಶದಿಂದ ತೀರ್ಥಹಳ್ಳಿಯ ಸಿರಿಬೈಲು ಗ್ರಾಮದ ಅಂಗಡಿಯೊಂದಕ್ಕೆ ಹಾರ್ಡ್‍ವೇರ್ ವಸ್ತುಗಳನ್ನು ತುಂಬಿಕೊಂಡು ಬರುತ್ತಿತ್ತು. ನಿದ್ರೆ ಮಂಪರಿನಲ್ಲಿ ಅಪಘಾತ ಸಂಭವಿಸಿರುವ ಶಂಕೆ ಇದೆ. ಶಿವಮೊಗ್ಗ ವರದಿ ಶಿವಮೊಗ್ಗದ ಭದ್ರಾವತಿ ಹೈವೇಯಲ್ಲಿ ಲಾರಿಯೊಂದ ಪಲ್ಟಿಯಾಗಿದೆ. ಮಲವಗೊಪ್ಪದ ಬಳಿ … Read more

ಸೂಗೂರಲ್ಲಿ ಮೊಬೈಲ್ ಸ್ಫೋಟ, ಬಾಲಕನ ಕಣ್ಣು, ಕೈ, ಮೊಣಕಾಲುಗಳಿಗೆ ಗಾಯ

shivamogga graphics map

ಶಿವಮೊಗ್ಗ ಲೈವ್.ಕಾಂ | SHIMOGA | 8 ಮೇ 2020 ಕೀಪ್ಯಾಡ್ ಮೊಬೈಲ್ ಸ್ಪೋಟಗೊಂಡು ಬಾಲಕನೊಬ್ಬನಿಗೆ ಗಾಯವಾಗಿದೆ. ಶಿವಮೊಗ್ಗ ತಾಲೂಕು ಸೂಗುರು ಗ್ರಾಮದಲ್ಲಿ ಘಟನೆ ಸಂಭವಿಸಿದೆ. ರಾಕೇಶ್, ಗಾಯಗೊಂಡ ಬಾಲಕ. ಬಲಗಣ್ಣು, ಕೈ ಮತ್ತು ಮೊಣಕಾಲುಗಳಿಗೆ ಗಾಯವಾಗಿದೆ. ಪೋಷಕರು ಕೂಡಲೇ ರಾಕೇಶ್‍ನನ್ನು ಮೆಗ್ಗಾನ್ ಅಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಿದ್ದಾರೆ. ಮೊಬೈಲ್ ಬಳಕೆ ಮಾಡುವ ಹೊತ್ತಿಗೆ ಸ್ಫೋಟಗೊಂಡಿದ್ದು, ಬಾಲಕ ಗಾಯಗೊಂಡಿದ್ದಾನೆ. ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494 ವಾಟ್ಸಪ್ ನಂಬರ್ | 7411700200 ಈ ಮೇಲ್ ಐಡಿ … Read more

ಮೇ 7ರ ಕರೋನ ರಿಪೋರ್ಟ್ | ಶಿವಮೊಗ್ಗ ಸೇಫ್, 27 ಮಂದಿಗೆ ಆಸ್ಪತ್ರೆಯಲ್ಲಿ ಕ್ವಾರಂಟೈನ್, ಬರಬೇಕಿದೆ 110 ರಿಪೋರ್ಟ್

Mc-Gann-Hospital

ಶಿವಮೊಗ್ಗ ಲೈವ್.ಕಾಂ | SHIMOGA | 08 ಮೇ 2020 ಕರೋನ ಸೋಂಕ ಹರಡದಂತೆ ತಡೆಯಲು ಶಿವಮೊಗ್ಗದಲ್ಲಿ ಹೆಚ್ಚು ಜನರನ್ನು ಟೆಸ್ಟ್‍ಗೆ ಒಳಪಡಿಸಲಾಗುತ್ತಿದೆ. ಎರಡು ಸಾವಿರಕ್ಕೂ ಹೆಚ್ಚು ಜನರಿಗೆ ಪರೀಕ್ಷೆಯಾಗಿದೆ. ಬಹುತೇಕ ನೆಗಟಿವ್ ರಿಪೋರ್ಟ್ ಬರುತ್ತಿರುವುದು ಶಿವಮೊಗ್ಗದವರ ಪಾಲಿಗೆ ನೆಮ್ಮದಿ ಮೂಡಿಸಿದೆ. ಪ್ರಸ್ತುತ ಜಿಲ್ಲೆಯಲ್ಲಿ ನಿಗಾದಲ್ಲಿರುವವರು = 584 14 ದಿನ ನಿಗಾ ಅವಧಿ ಪೂರೈಸಿದವರು = 00 28 ದಿನ ನಿಗಾ ಅವಧಿ ಪೂರೈಸಿದವರು = 584 ಆಸ್ಪತ್ರೆಯ ಕ್ವಾರಂಟೈನ್’ನಲ್ಲಿ ಇರುವವರು = 27 ಹಾಸ್ಟೆಲ್ … Read more

ಶಿವಮೊಗ್ಗದ ಕೆಲವೆಡೆ ಡೆಮೊ ಸೀಲ್‌ಡೌನ್‌, ಊಹಾಪೋಹಕ್ಕೆ ಜನ ಗಢಗಢ, ಏನಿದು ಡೆಮೊ? ಇದನ್ನ ಮಾಡಿದ್ದೇಕೆ?

070520 Sigehatti Demo Seal Down 1 1

ಶಿವಮೊಗ್ಗ ಲೈವ್.ಕಾಂ | SHIMOGA | 7 ಮೇ 2020 ಶಿವಮೊಗ್ಗ ನಗರದ ಕೆಲವು ಕಡೆ ಪೊಲೀಸರು ದಿಢೀರ್ ಸೀಲ್‍ಡೌನ್ ಮಾಡಿದ್ದಾರೆ. ಸಂಜೆ ವೇಳೆಗೆ ಕೆಲವು ಏರಿಯಾಗಳನ್ನು ಸೀಲ್‍ಡೌನ್ ಮಾಡಿದ್ದರಿಂದ ಜನರು ಭೀತಿಗೊಳಗಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಊಹಾಪೋಹದ ಸುದ್ದಿಗಳು ಹರಿದಾಡಿವೆ. ಆದರೆ ಪೊಲೀಸರು ಇದನ್ನ ‘ಡೆಮೊ ಸೀಲ್‍ ಡೌನ್’ ಎಂದು ಬಣ್ಣಿಸಿದ್ದಾರೆ. ಎಲ್ಲೆಲ್ಲಿ ಡೆಮೊ ಸೀಲ್‍ ಡೌನ್ ಮಾಡಲಾಗಿದೆ? ನಗರದ ಸೀಗೆಹಟ್ಟಿ, ಭಾರತಿ‌ ಕಾಲೋನಿ, ಸಿದ್ದಯ್ಯ ರಸ್ತೆ, ಆರ್.ಎಂ.ಎಲ್ ನಗರದಲ್ಲಿಸೀಲ್‍ಡೌನ್ ಮಾಡಲಾಗಿದೆ. ಸಂಜೆ ವೇಳೆಗೆ ಈ ಬಡಾವಣೆಗಳನ್ನು … Read more

ಶಿವಮೊಗ್ಗ ಗೋಪಿ ಸರ್ಕಲ್‌ನಲ್ಲಿ ಪಾಲಿಕೆ ಅಧಿಕಾರಿಗಳಿಂದ ಮಾಸ್ಕ್ ಕಾರ್ಯಾಚರಣೆ

070520 Fine in Shimoga For Mask 1

ಶಿವಮೊಗ್ಗ ಲೈವ್.ಕಾಂ | SHIMOGA | 07 ಮೇ 2020 ಮಾಸ್ಕ್ ಹಾಕದೆ ರಸ್ತೆಗಿಳಿದವರಿಗೆ ಮಹಾನಗರ ಪಾಲಿಕೆ ವತಿಯಿಂದ ದಂಡ ಹಾಕಲಾಗುತ್ತಿದೆ. ಶಿವಮೊಗ್ಗದ ಗೋಪಿ ಸರ್ಕಲ್‍ನಲ್ಲಿ ವಾಹನಗಳನ್ನು ತಡೆದು ದಂಡ ಕಟ್ಟಿಸಿಕೊಳ್ಳಲಾಗುತ್ತಿದೆ. ಮಾಸ್ಕ್ ಹಾಕದೆ ರಸ್ತೆಯಲ್ಲಿ ಓಡಾಡುತ್ತಿದ್ದವನ್ನು ಹಿಡಿದು 200 ರೂ. ದಂಡ ಹಾಕಲಾಗುತ್ತಿದೆ. ಇವತ್ತು ಗೋಪಿ ಸರ್ಕಲ್‍ನಲ್ಲಿ ನೂರಕ್ಕೂ ಹೆಚ್ಚು ಜನರಿಗೆ ದಂಡ ಹಾಕಲಾಗಿದೆ. ಪಾಲಿಕೆ ಅಧಿಕಾರಿಗಳ ತಂಡ ಇವತ್ತು ಸರ್ಕಲ್‍ನಲ್ಲಿ ದಿಢೀರ್ ಕಾರ್ಯಾಚರಣೆ ನಡೆಸಿತು. ವಾಹನಗಳಲ್ಲಿ ಮಾಸ್ಕ್ ಇಲ್ಲದೆ ಬರುವವರನ್ನು ತಡೆದು ದಂಡ ಹಾಕಲಾಗುತ್ತಿದೆ. … Read more

ಶಿವಮೊಗ್ಗದಲ್ಲಿ ಇವತ್ತು ಪ್ರಾಣಿ ವಧೆ, ಮಾಂಸ ಮಾರಾಟ ಸಂಪೂರ್ಣ ಬಂದ್

shivamogga graphics map

ಶಿವಮೊಗ್ಗ ಲೈವ್.ಕಾಂ | SHIMOGA | 7 ಮೇ 2020 ಶಿವಮೊಗ್ಗ ನಗರದಲ್ಲಿ ಇವತ್ತು ಪ್ರಾಣಿ ವಧೆ ಮತ್ತು ಮಾಂಸ ಮಾರಾಟ ನಿಷೇಧಿಸಿ ಮಹಾನಗರ ಪಾಲಿಕೆ ಆದೇಶ ಹೊರಡಿಸಿದೆ. ಬುದ್ಧ ಜಯಂತಿ ಅಂಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಮಾಂಸ ಮಾರಾಟದ ಮಾಲೀಕರು ತಮ್ಮ ಉದ್ದಿಮೆಯನ್ನು ಒಂದು ದಿನ ಸ್ಥಗಿತಗೊಳಿಸಬೇಕು. ಒಂದು ವೇಳೆ ಆದೇಶ ಉಲ್ಲಂಘಿಸಿ ಮಾಂಸ ಮಾರಾಟ ಮಾಡಿದರೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮಹಾನಗರ ಪಾಲಿಕೆ ಆಯುಕ್ತ ಚಿದಾನಂದ ವಟಾರೆ ಎಚ್ಚರಿಕೆ ನೀಡಿದ್ದಾರೆ.   … Read more