ಶಿವಮೊಗ್ಗದಲ್ಲಿ ಸಂಜೆ ವೇಳೆಗೆ ಜೋರು ಗಾಳಿ, ಗುಡುಗು ಸಹಿತ ದಿಢೀರ್ ಮಳೆ

rain in shimoga

ಶಿವಮೊಗ್ಗ ಲೈವ್.ಕಾಂ | SHIMOGA | 21 ಏಪ್ರಿಲ್ 2020 ಶಿವಮೊಗ್ಗ ನಗರದಲ್ಲಿ ಜೋರು ಗಾಳಿ, ಗುಡುಗು ಸಹಿತ ಮಳೆಯಾಗುತ್ತಿದೆ. ಸಂಜೆ ವೇಳೆಗೆ ದಿಢೀರ್ ಮಳೆ ಶುರುವಾಗಿದೆ. ವಿಪರೀತ ಶಕೆ ಮತ್ತು ಬೆಳಗ್ಗೆಯಿಂದ ಭಾರೀ ಬಿಸಿಲಿನಿಂದ ಜನರು ಬಳಲಿದ್ದರು. ದಿಢೀರ್ ಮಳೆಯಿಂದಾಗಿ ವಾತಾವರಣ ಸ್ವಲ್ಪ ಕೂಲ್ ಆಗಲಿದೆ. ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494 ವಾಟ್ಸಪ್ ನಂಬರ್ | 7411700200 ಈ ಮೇಲ್ ಐಡಿ | shivamoggalive@gmail.com

ಮಾಸ್ಕ್ ಧರಿಸದವರಿಗೆ ಫೈನ್ ಹಾಕ್ತೀವಿ ಅಂತಿದ್ದರು, ಅನುಮಾನದಿಂದ ವಿಚಾರಿಸಿದ ಗ್ರಾಮಸ್ಥರಿಗೆ ಕಾದಿತ್ತು ಶಾಕ್

prison hand cuff image

ಶಿವಮೊಗ್ಗ ಲೈವ್.ಕಾಂ | SHIMOGA | 21 ಏಪ್ರಿಲ್ 2020 ಲಾಕ್‍ಡೌನ್ ಸಂದರ್ಭವನ್ನು ಬಳಿಸಿಕೊಂಡು ಜನರಿಂದ ಹಣ ವಸೂಲಿ ಮಾಡುತ್ತಿದ್ದ ನಕಲಿ ಪೊಲೀಸ್ ಮತ್ತು ನಕಲಿ ಆರೋಗ್ಯ ಇಲಾಖೆ ಅಧಿಕಾರಿ ಜೈಲು ಸೇರಿಸಿದ್ದಾರೆ. ಶಿವಮೊಗ್ಗ ತಾಲೂಕಿನ ಗ್ರಾಮಗಳಲ್ಲಿ ಜನರನ್ನ ಬೆದರಿಸಿ ಹಣ ವಸೂಲಿಗಿಳಿದಿದ್ದರು. ಹಣ ವಸೂಲಿ ಹೇಗೆ? ಯಾಕೆ? ಕರೋನ ಹರಡದಂತೆ ತಡೆಗಟ್ಟಲು ಮಾಸ್ಕ್ ಧರಿಸಬೇಕು ಎಂದು ಆರೋಗ್ಯ ಇಲಾಖೆ ಜನರಿಗೆ ಸೂಚನೆ ನೀಡಿದೆ. ಇದನ್ನೇ ಬಂಡವಾಳ ಮಾಡಿಕೊಂಡ ಯುವಕರಿಬ್ಬರು, ವಾಹನಗಳಲ್ಲಿ ಹೋಗುತ್ತಿದ್ದವರನ್ನು ತಡೆಯುತ್ತಿದ್ದರು. ತಮ್ಮನ್ನು ಪೊಲೀಸ್ … Read more

ಅಧ್ಯಕ್ಷರ ಕೊಠಡಿಗೆ ಬೀಗ ಹಾಕಿದ ಪ್ರಕರಣಕ್ಕೆ ಟ್ವಿಸ್ಟ್, ಸದಸ್ಯರ ವಿರುದ್ಧ ಪೊಲೀಸ್ ಕೇಸ್ಗೆ ಸೂಚನೆ, ಅನುಪಾಲನ ವರದಿಗೆ ಆಗ್ರಹ

200420 TP President Office Door Locked 1

ಶಿವಮೊಗ್ಗ ಲೈವ್.ಕಾಂ | SAGARA | 21 ಏಪ್ರಿಲ್ 2020 ಸಾಗರ ತಾಲೂಕು ಪಂಚಾಯಿತಿ ಅಧ್ಯಕ್ಷರ ಕೊಠಡಿಗೆ ಬೀಗ ಹಾಕಿದ ಪ್ರಕರಣ ಮತ್ತೊಂದು ಟ್ವಿಸ್ಟ್  ಪಡೆದುಕೊಂಡಿದೆ. ಬೀಗ ಹಾಕಿದವರ ವಿರುದ್ಧ ದೂರು ನೀಡುವಂತೆ ಆದೇಶಿಸಿ ತಾಲೂಕು ಪಂಚಾಯಿತಿ ಇಒಗೆ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಸೂಚನೆ ನೀಡಿದ್ದಾರೆ. ಅಧ್ಯಕ್ಷರ ಕೊಠಡಿಗೆ ಬೀಗ ಹಾಕಿ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ. ಹಾಗಾಗಿ ಬೀಗ ಹಾಕಿದವರ ವಿರುದ್ಧ ಕೂಡಲೇ ದೂರು ದಾಖಲಿಸಿ ಅನುಪಾಲನ ವರದಿ ನೀಡುವಂತೆ ಇಒಗೆ ಪತ್ರ ಬರೆದು ಸೂಚಿಸಿದ್ದಾರೆ. ಕೆಲವು … Read more

ಶಿವಮೊಗ್ಗ ಮೆಡಿಕಲ್ ಕಾಲೇಜಲ್ಲಿ 133 ಹುದ್ದೆ ನೇಮಕಕ್ಕೆ ಸಂಸದ ರಾಘವೇಂದ್ರ ಸೂಚನೆ

200420 MP Raghavendra Meeting in SIMS 1

ಶಿವಮೊಗ್ಗ ಲೈವ್.ಕಾಂ | SHIMOGA | 19 ಏಪ್ರಿಲ್ 2020 ಶಿವಮೊಗ್ಗ ಮೆಡಿಕಲ್ ಕಾಲೇಜಿನಲ್ಲಿ ಖಾಲಿಯಿರುವ ಹುದ್ದೆಗಳನ್ನು ತುಂಬುವುದು ಸೇರಿದಂತೆ ಕಾಲೇಜಿನಲ್ಲಿ ಸೌಲಭ್ಯಗಳನ್ನು ಉತ್ತಮಪಡಿಸಲು ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ತಿಳಿಸಿದರು. ಶಿವಮೊಗ್ಗ ಮೆಡಿಕಲ್ ಕಾಲೇಜಿನಲ್ಲಿ ಜಿಲ್ಲೆಯ ಜನಪ್ರತಿನಿಧಿಗಳ ಹಾಗೂ ಹಿರಿಯ ಅಧಿಕಾರಿಗಳ ಸಭೆ ನಡೆಸಿದರು. 133 ಹುದ್ದೆ ಭರ್ತಿಗೆ ಕ್ರಮ ಮೆಡಿಕಲ್ ಕಾಲೇಜಿನಲ್ಲಿ ಖಾಲಿಯಿರುವ  ಸಿ ದರ್ಜೆಯ 133 ಹುದ್ದೆಗಳನ್ನು ಗುತ್ತಿಗೆ ಆಧಾರದಲ್ಲಿ ಭರ್ತಿ ಮಾಡಲು ಕ್ರಮ ಕೈಗೊಳ್ಳಬೇಕು. ರೋಸ್ಟರ್ ನಿಯಮಾವಳಿಯನ್ನು ನೇಮಕಾತಿಯಲ್ಲಿ … Read more

ತಿಲಕನಗರ, ಜೈಲ್ ರಸ್ತೆಯಲ್ಲಿ ಲಾಕ್‌ಡೌನ್ ಆದೇಶ ಉಲ್ಲಂಘಿಸಿದ ಅಂಗಡಿ ಮಾಲೀಕರ ವಿರುದ್ಧ ಕೇಸ್

jayanagara police station in shimoga

ಶಿವಮೊಗ್ಗ ಲೈವ್.ಕಾಂ | SHIMOGA | 19 ಏಪ್ರಿಲ್ 2020 ಲಾಕ್‍ಡೌನ್‍ ಆದೇಶ ಉಲ್ಲಂಘನೆ ಮಾಡಿ ಫ್ಯಾನ್ಸಿ ಸ್ಟೋರ್, ಬುಕ್ ಶಾಪ್ ಮತ್ತು ಚಪ್ಪಲಿ ಅಂಗಡಿಗಳನ್ನು ತೆರೆದು ವ್ಯಾಪಾರ ಮಾಡುತ್ತಿದ್ದ ವ್ಯಕ್ತಿಗಳ ವಿರುದ್ಧ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜೈಲ್ ರಸ್ತೆಯ ಫ್ಯಾನ್ಸಿ ಸ್ಟೋರ್ ಮತ್ತು ಬುಕ್ ಶಾಪ್ ಮಾಲೀಕ ಸುರೇಶ್ ಅವರ ವಿರುದ್ಧ ಪ್ರಕರಣ ದಾಖಲಾಗಿದೆ. ಇನ್ನು ತಿಲಕನಗರದ ಮುಖ್ಯ ರಸ್ತೆಯಲ್ಲಿರುವ ಚಪ್ಪಲಿ ಅಂಗಡಿ ಮಾಲೀಕ ರಾಘವೇಂದ್ರ ಎಂಬುವವರ ವಿರುದ್ಧ ಪ್ರಕರಣ ದಾಖಲಾಗಿದೆ. ಲಾಕ್‍ಡೌನ್ … Read more

ಶಿವಮೊಗ್ಗದ ಎಸಿ ಕಚೇರಿ ಆವರಣದಲ್ಲಿ ನಿಲ್ಲಿಸಿದ್ದ ಕಾರಿನಲ್ಲಿ ಬೆಂಕಿ

18020 AC office Car fire 1

ಶಿವಮೊಗ್ಗ ಲೈವ್.ಕಾಂ | SHIMOGA | 18 ಏಪ್ರಿಲ್ 2020 ಶಿವಮೊಗ್ಗ ಉಪ ವಿಭಾಗಾಧಿಕಾರಿ ಕಚೇರಿ ಆವರಣದಲ್ಲಿ ನಿಲ್ಲಿಸಿದ್ದ ಕಾರಿನಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡಿದೆ. ಇದರಿಂದ ಸ್ಥಳದಲ್ಲಿ ಕೆಲಕಾಲ ಅತಂಕದ ಪರಿಸ್ಥಿತಿ ನಿರ್ಮಾಣವಾಗಿತ್ತು. ಕಾರಿನಲ್ಲಿ ಹೊಗೆ ಕಾಣಿಸಿಕೊಳ್ಳುತ್ತಿದ್ದಂತೆ ಸ್ಥಳೀಯರು ಮತ್ತು ಪೊಲೀಸರು ಅಗ್ನಿಶಾಮಕ ಸಿಬ್ಬಂದಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಎಸಿ ಕಚೇರಿ ಪಾರ್ಕಿಂಗ್‍ನಲ್ಲಿ ದರಗಿಗೆ ಬೆಂಕಿ ಹಚ್ಚಲಾಗಿತ್ತು. ಅದರ ಮೇಲೆ ಕಾರು ತಂದಿ ನಿಲ್ಲಿಸಿದ್ದೆ ಅವಘಡಕ್ಕೆ ಕಾರಣ … Read more

ಸಾಗರ ರಸ್ತೆಯಲ್ಲಿ ದಿಢೀರ್ ಪರಿಶೀಲನೆಗಿಳಿದ ಡಿಸಿ, ಎಸ್ಪಿ, ವಾಹನಗಳು ಸೀಜ್, ಹೇಗಿತ್ತು ಗೊತ್ತಾ ಕಾರ್ಯಾಚರಣೆ?

170420 DC SP Sudden Inspection in Shimoga 1

ಶಿವಮೊಗ್ಗ ಲೈವ್.ಕಾಂ | SHIMOGA | 17 ಏಪ್ರಿಲ್ 2020 ಕರೋನಾ ವೈರಸ್ ಹಿನ್ನೆಲೆಯಲ್ಲಿ ನಗರದಲ್ಲಿ ರಸ್ತೆ ಸಂಚಾರಕ್ಕೆ ನಿರ್ಬಂಧ ವಿಧಿಸಿದ್ದರೂ, ಅನಾವಶ್ಯಕವಾಗಿ ರಸ್ತೆಗಿಳಿದಿದ್ದ ವಾಹನ ಸವಾರರಿಗೆ ಸ್ವತಃ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಅವರು ಬಿಸಿ ಮುಟ್ಟಿಸಿದರು. ಅಲ್ಕೋಳಾ ಸರ್ಕಲ್‍ನಲ್ಲಿ ದಿಢೀರ್ ತಪಾಸಣೆ ಆರಂಭಿಸಿದ ಜಿಲ್ಲಾಧಿಕಾರಿ ಹಾಗೂ ಎಸ್ಪಿ ಅವರು, ಪ್ರತಿಯೊಂದು ವಾಹನವನ್ನು ನಿಲ್ಲಿಸಿ ಮನೆ ಬಿಟ್ಟು ಹೊರಗೆ ಬಂದಿರುವುದರ ಉದ್ದೇಶ ಪ್ರಶ್ನಿಸಿದರು. ಆಸ್ಪತ್ರೆ, ಮೆಡಿಕಲ್, ಕೃಷಿ ಚಟುವಟಿಕೆ, ಸ್ಥಳೀಯವಾಗಿ ಸಾಮಾನು ಖರೀದಿಯಂತಹ ಅತ್ಯವಶ್ಯಕ … Read more

ತಪ್ಪಿದ ಭಾರಿ ದುರಂತ, ವಿದ್ಯಾನಗರ ಬಳಿ ವೇಗವಾಗಿ ಬಂದು ಬ್ಯಾರಿಕೇಡ್‌ಗೆ ಲಾರಿ ಡಿಕ್ಕಿ, ಪೊಲೀಸರು ಜಸ್ಟ್ ಮಿಸ್

170420 Over Speed Lorry Chased by police 1

ಶಿವಮೊಗ್ಗ ಲೈವ್.ಕಾಂ | SHIMOGA | 17 ಏಪ್ರಿಲ್ 2020 ಖಾಲಿ ರಸ್ತೆಯಲ್ಲಿ ವೇಗವಾಗಿ ಬಂದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಬ್ಯಾರಿಕೇಡ್‍ಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಒಬ್ಬ ಸಬ್‍ ಇನ್ಸ್‍ಪೆಕ್ಟರ್ ಮತ್ತು ಇಬ್ಬರು ಪಿಎಸ್‍ಐಗಳು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಲಾಕ್‍ಡೌನ್ ಹಿನ್ನೆಲೆ ಸಹ್ಯಾದ್ರಿ ಕಾಲೇಜು ಬಳಿ ವಿದ್ಯಾನಗರ ಟ್ರಾಫಿಕ್‍ ಠಾಣೆ ಮುಂಭಾಗ ಪೊಲೀಸರು ಬ್ಯಾರಿಕೇಡ್‍ ಹಾಕಿ ವಾಹನಗಳ ತಪಾಸಣೆ ನಡೆಸುತ್ತಿದ್ದರು. ರಾತ್ರಿ ಈ ಬ್ಯಾರಿಕೇಡ್‍ ಬಳಿಗೆ ಬಂದ ಲಾರಿ ವೇಗ ತಗ್ಗದೆ ಬ್ಯಾರಿಕೇಡ್‍ಗೆ ಗುದ್ದಿದೆ. ಡಿಕ್ಕಿ … Read more

ಶಿವಮೊಗ್ಗ ಡಿಸಿ, ರಕ್ಷಣಾಧಿಕಾರಿ ಜೊತೆ ಪ್ರಧಾನಿ ಮೋದಿ ವಿಡಿಯೋ ಸಂದೇಶ ವೀಕ್ಷಿಸಿದ ಜಿಲ್ಲಾ ಉಸ್ತುವಾರಿ ಮಿನಿಸ್ಟರ್

140420 Eshwarappa Watching Modi Programme 1

ಶಿವಮೊಗ್ಗ ಲೈವ್.ಕಾಂ | SHIMOGA | 14 ಏಪ್ರಿಲ್ 2020 ಕರೋನ ಲಾಕ್‌ಡೌನ್‌ ವಿಸ್ತರಣೆ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರು ಇವತ್ತು ವಿಡಿಯೋ ಸಂದೇಶ ನೀಡಿದ್ದಾರೆ. ಮೇ ೩ರವರೆಗೆ ಲಾಕ್‌ಡೌನ್‌ ವಿಸ್ತರಣೆ ಆಗಲಿದೆ ಎಂದು ತಿಳಿಸಿದ್ದಾರೆ. ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಸಂದೇಶವನ್ನು ವೀಕ್ಷಿಸಿದರು. ಜಿಲ್ಲಾ ಪಂಚಾಯಿತಿ ಆವರಣದಲ್ಲಿರುವ ಸಭಾ ಕೊಠಡಿಯಲ್ಲಿ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್‌, ಜಿಲ್ಲಾ ರಕ್ಷಣಾಧಿಕಾರಿ ಕೆ.ಎಂ.ಶಾಂತರಾಜು, ಜಿಲ್ಲಾ ಪಂಚಾಯಿತಿ ಸಿಇಓ ವೈಶಾಲಿ ಸೇರಿದಂತೆ ಕೆಲವು … Read more

ಶಿವಮೊಗ್ಗದಲ್ಲಿ ಇವತ್ತು ಒಂದು ದಿನ ಪ್ರಾಣಿವಧೆ, ಮಾಂಸ ಮಾರಾಟ ನಿಷೇಧ, ಉಲ್ಲಂಘಿಸಿದರೆ ಕಾನೂನು ಕ್ರಮ

Mahanagara-Palike-Shivamogga

ಶಿವಮೊಗ್ಗ ಲೈವ್.ಕಾಂ | SHIMOGA | 14 ಏಪ್ರಿಲ್ 2020 ಶಿವಮೊಗ್ಗ ನಗರದಲ್ಲಿ ಇವತ್ತು ಪ್ರಾಣಿವಧೆ ಮತ್ತು ಮಾಂಸ ಮಾರಾಟವನ್ನ ನಿಷೇಧಿಸಿ ಮಹಾನಗರ ಪಾಲಿಕೆ ಕಮಿಷನರ್‌ ಆದೇಶ ಹೊರಡಿಸಿದ್ದಾರೆ. ಏಪ್ರಿಲ್‌ ೧೪ರಂದು ಡಾ.ಬಿ.ಆರ್.ಅಂಬೇಡ್ಕರ್‌ ಜಯಂತಿ ಹಿನ್ನೆಲೆಯಲ್ಲಿ ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ ಪ್ರಾಣಿವಧೆ ಮತ್ತು ಮಾಂಸ ಮಾರಾಟ ನಿಷೇಧಿಸಲಾಗಿದೆ. ಇವತ್ತು ಒಂದು ದಿನ ತಮ್ಮ ಉದ್ದಿಮೆಯನ್ನು ಬಂದ್‌ ಮಾಡಬೇಕು ಎಂದು ಮಾಂಸ ಮಾರಾಟದ ಅಂಗಡಿ ಮಾಲೀಕರಿಗೆ ಕಮಿಷನರ್‌ ಸೂಚಿಸಿದ್ದಾರೆ. ಒಂದು ವೇಳೆ ಆದೇಶ ಉಲ್ಲಂಘಿಸಿ ಮಾಂಸ ಮಾರಾಟ ಮಾಡಿದರೆ … Read more