ಸಿಎಂ ಹೈಟೆಕ್’ಗೊಳಿಸಿದ್ದ KSRTC, ಖಾಸಗಿ ಬಸ್ ನಿಲ್ದಾಣಕ್ಕೆ ನೀರು ಕಟ್, ಕಾರಣವೇನು? ಅಧಿಕಾರಿಗಳ್ಯಾಕೆ ಕ್ಯಾರೆ ಅನ್ನುತ್ತಿಲ್ಲ?

010220 KSRTC and Private Bus Stand 1

ಶಿವಮೊಗ್ಗ ಲೈವ್.ಕಾಂ | SHIMOGA | 1 ಫೆಬ್ರವರಿ 2020 ಶಿವಮೊಗ್ಗದ KSRTC ಮತ್ತು ಖಾಸಗಿ ಬಸ್ ನಿಲ್ದಾಣಕ್ಕೆ ಕಳೆದ ಏಳು ತಿಂಗಳಿಂದ ನೀರಿನ ಪೂರೈಕೆ ಕಟ್ ಮಾಡಲಾಗಿದೆ. ಸರಿಯಾದ ಸಮಯಕ್ಕೆ ಬಿಲ್ ಕಟ್ಟಿದರು, ದುಡ್ಡು ಕೊಡ್ತೀವಿ ಅಂದರು ನೀರಿನ ಸಂಪರ್ಕ ಸಿಗುತ್ತಿಲ್ಲ. ಇದೇ ಕಾರಣಕ್ಕೆ ಗುತ್ತಿಗೆದಾರರು ಟ್ಯಾಂಕರ್’ಗಳಲ್ಲಿ ನೀರು ತರಿಸುತ್ತಿದ್ದಾರೆ. ಯಡಿಯೂರಪ್ಪ ಅವರು ಈ ಹಿಂದೆ ಮುಖ್ಯಮಂತ್ರಿ ಆಗಿದ್ದಾಗ 2008ರಲ್ಲಿ ಬಸ್ ನಿಲ್ದಾಣವನ್ನು ಹೈಟೆಕ್’ಗೊಳಿಸಿದ್ದರು. ಆದರೆ ಇದೇ ಹೈಟೆಕ್ ಬಸ್ ನಿಲ್ದಾಣಕ್ಕೆ ಏಳು ತಿಂಗಳಿಂದ ನೀರಿನ … Read more

ಸಾಮೂಹಿಕ ವಿವಾಹದಲ್ಲಿ ಆಯನೂರು ಮಂಜುನಾಥ್ ಪುತ್ರಿ ಮದುವೆ, ಎಷ್ಟು ಜೋಡಿ ಹೊಸ ಬಾಳಿಗೆ ಕಾಲಿಟ್ಟವು ಗೊತ್ತಾ?

300120 Ayanur Manjunath Daughter Marriage 1

ಶಿವಮೊಗ್ಗ ಲೈವ್.ಕಾಂ | SHIMOGA | 30 ಜನವರಿ 2020 ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಇವತ್ತು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಅವರ ಮಗಳ ಮದುವೆ ನೆರವೇರಿತು. ಪಿಇಎಸ್ ಕಾಲೇಜು ಆವರಣದಲ್ಲಿರುವ ಪ್ರೇರಣಾ ಕನ್ವೆನ್ಷನ್ ಹಾಲ್’ನಲ್ಲಿ ಮದುವೆ ನಡೆಯಿತು. ಇದರ ವಿಡಿಯೋ ರಿಪೋರ್ಟ್ ಇಲ್ಲಿದೆ ಆಯನೂರು ಮಂಜುನಾಥ್ ಅವರ ಮಗಳು ಶಮಾತ್ಮಿಕ, ಮೈಸೂರಿನ ಮಹೇಂದ್ರ ಅವರೊಂದಿಗೆ ನೆರವೇರಿತು. ಇದೇ ವೇಳೆ 50 ಜೋಡಿಗಳು ಹೊಸ ಬಾಳಿಗೆ ಕಾಲಿಟ್ಟವು. ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494 … Read more

ಕುಪ್ಪಳ್ಳಿ ಕವಿಮನೆಯಲ್ಲಿ ಕಳ್ಳತನ ಮಾಡಿದ್ದ ಅಪರಾಧಿಗಳಿಗೆ ಶಿಕ್ಷೆ, ಎಷ್ಟು ವರ್ಷ ಜೈಲು, ದಂಡದ ಮೊತ್ತ ಎಷ್ಟು ಗೊತ್ತಾ?

ಶಿವಮೊಗ್ಗ ಲೈವ್.ಕಾಂ | THIRTHAHALLI | 30 ಜನವರಿ 2020 ರಾಷ್ಟ್ರಕವಿ ಕುವೆಂಪು ಅವರ ಕುಪ್ಪಳಿಯ ಕವಿಮನೆಯಲ್ಲಿ ಕಳ್ಳತನ ಮಾಡಿದ್ದ ಆರೋಪಿಗಳಿಗೆ ತೀರ್ಥಹಳ್ಳಿ ನ್ಯಾಯಾಲಯ ಶಿಕ್ಷೆ ವಿಧಿಸಿದೆ. ಪದ್ಮವಿಭೂಷಣ ಪದಕ ಸೇರಿ ಇತರೆ ಅಮೂಲ್ಯ ವಸ್ತು ಕಳ್ಳತನವಾಗಿತ್ತು. ಈ ಪ್ರಕರಣದ ಅಪರಾಧಿಗಳಿಗೆ ಎರಡು ವರ್ಷ ಜೈಲು ಮತ್ತು 5 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ. ಪ್ರಕರಣದ ಮೊದಲ ಅಪರಾಧಿ ಮೃತಪಟ್ಟಿದ್ದಾನೆ. ದಾವಣಗೆರೆ ಜಿಲ್ಲೆ ತುರಚಘಟ್ಟದ ಬೆಳಂದೂರಿನ ರೇವಣಸಿದ್ದಪ್ಪ ವಿಚಾರಣಾ ಹಂತದಲ್ಲಿಯೇ ಮೃತನಾಗಿದ್ದಾನೆ. ಇನ್ನು, ರೇವಣಸಿದ್ದಪ್ಪಗೆ … Read more

ಹಳ್ಳಕ್ಕೆ ಉರುಳಿದ ಕ್ಯಾಂಟರ್ ಲಾರಿ, ಶಿವಮೊಗ್ಗದ ಹೊಸಮನೆಯಲ್ಲಿ ನಡೆಯುತ್ತಿರುವ ಮದುವೆಗೆ ಬರುತ್ತಿದ್ದ ಮೂವರು ಸಾವು

ಶಿವಮೊಗ್ಗ ಲೈವ್.ಕಾಂ | SHIMOGA | 29 ಜನವರಿ 2020 ಕ್ಯಾಂಟರ್ ಪಲ್ಟಿಯಾಗಿ ಶಿವಮೊಗ್ಗದ ಹೊಸಮನೆಯಲ್ಲಿ ನಡೆಯುತ್ತಿದ್ದ ಮದುವೆ ಸಮಾರಂಭಕ್ಕೆ ಬರುತ್ತಿದ್ದ ಮೂವರು ಮಹಿಳೆಯರು ಮೃತಪಟ್ಟಿದ್ದಾರೆ. ಚಾಲಕನ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಶಿವಮೊಗ್ಗ ಚನ್ನಗಿರಿ ತಾಲೂಕಿನ ಗಡಿಯಲ್ಲಿರುವ ಚನ್ನಗಿರಿಯ ಮಾವಿನಕಟ್ಟೆ ಗ್ರಾಮದ ಬಳಿ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ನಾಗರತ್ನಮ್ಮ (70), ವರಲಕ್ಷ್ಮಿ (60), ಅನುಷಾ (25)  ಮೃತಪಟ್ಟಿದ್ದಾರೆ. 17 ಜನರು ಗಾಯಗೊಂಡಿದ್ದು, ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಶಿವಮೊಗ್ಗದ ಹೊಸಮನೆ ಬಡಾವಣೆಯಲ್ಲಿ … Read more

ಶಿವಮೊಗ್ಗಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಭೇಟಿ, ಅಧಿಕಾರಿಗಳ ಜೊತೆ ದಿಢೀರ್ ಮೀಟಿಂಗ್

290120 CM Visit Shivamogga 1

ಶಿವಮೊಗ್ಗ ಲೈವ್.ಕಾಂ | SHIMOGA | 29 ಜನವರಿ 2020 ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಖಾಸಗಿ ಕಾರ್ಯಕ್ರಮ ನಿಮಿತ್ತ ಶಿವಮೊಗ್ಗಕ್ಕೆ ಆಗಮಿಸಿದ್ದಾರೆ. ಹೆಲಿಪ್ಯಾಡ್’ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಯಡಿಯೂರಪ್ಪ, ನಾಳೆ ಬೆಳಗ್ಗೆ ದೆಹಲಿಗೆ ತೆರಳುತ್ತಿರುವುದಾಗಿ ತಿಳಿಸಿದರು. ಸಿಎಂ ಯಡಿಯೂರಪ್ಪ ಹೇಳಿದ್ದೇನು? ವಿಡಿಯೋ ಇಲ್ಲಿದೆ ನೋಡಿ ಇನ್ನು, ಹೆಲಿಪ್ಯಾಡ್’ಗೆ ಆಮಿಸಿದ ಮುಖ್ಯಮಂತ್ರಿ ಯಡಿಯೂರಪ್ಪ, ಶಿವಮೊಗ್ಗ ಪ್ರವಾಸಿ ಮಂದಿರದಲ್ಲಿ ಅಧಿಕಾರಿಗಳ ಜೊತೆಗೆ ಕೆಲವು ನಿಮಿಷ ಸಭೆ ನಡೆಸಿದರು. ಬಳಿಕ ಸಾರ್ವಜನಿಕರಿಂದ ಮನವಿ ಸ್ವೀಕರಿಸಿದರು. ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ … Read more

ಎಲೆಕ್ಷನ್ ಮುಗಿಯೋವರೆಗೆ ಮೌನಕ್ಕೆ ಶರಣು, ಸ್ಥಾಯಿ ಸಮಿತಿ ಸದಸ್ಯತ್ವ ಬೇಡ ಅಂದ್ರು, ದೂರದಲ್ಲೇ ನಿಂತು ಸಂಭ್ರಮ ಕಣ್ತುಂಬಿಕೊಂಡ್ರು

290120 Anitha Ravishankar Silence 1

ಶಿವಮೊಗ್ಗ ಲೈವ್.ಕಾಂ | SHIMOGA | 29 ಜನವರಿ 2020 ಸ್ಥಾಯಿ ಸಮಿತಿ ಸದಸ್ಯತ್ವ ಬೇಡವೇ ಬೇಡ ಅಂದರು..! ಚುನಾವಣೆ ಪ್ರಕ್ರಿಯೆ ಮುಗಿಯೋವರೆಗು ಮೌನವಾಗಿ ಕುಳಿತರು..! ವೇದಿಕೆ ಕೆಳಗೆ ನಿಂತು ವಿಷ್ ಮಾಡುತ್ತಿದ್ದವರನ್ನು ವೇದಿಕೆಗೆ ಎಳೆದೊಯ್ದ ನಿರ್ಗಮಿತ ಉಪ ಮೇಯರ್..! ಮೇಯರ್ ಸ್ಥಾನದ ಪ್ರಬಲ ಆಕಾಂಕ್ಷಿ ಅನಿತಾ ರವಿಶಂಕರ್, ಚುನಾವಣೆ ಪ್ರಕ್ರಿಯೆ ಮುಗಿಯುವವರೆಗು ಮೌನಕ್ಕೆ ಶರಣಾಗಿದ್ದರು. ಮೇಯರ್ ಸ್ಥಾನದ ಚುನಾವಣೆಗೆ ಸ್ಪರ್ಧಿಸಲು ಸುವರ್ಣ ಶಂಕರ್ ಅವರಿಗೆ ಪಕ್ಷ ಗ್ರೀನ್ ಸಿಗ್ನಲ್ ನೀಡಿತು. ಇದು ಅನಿತಾ ರವಿಶಂಕರ್ ಅವರಿಗೆ … Read more

ಶಿವಮೊಗ್ಗದ ನೂತನ ಮೇಯರ್, ಉಪ ಮೇಯರ್ ಆಯ್ಕೆ, ಯಾರು ಗೊತ್ತಾ ಹೊಸ ಪ್ರಥಮ ಪ್ರಜೆ?

290120 New Palike Mayor Election 1

ಶಿವಮೊಗ್ಗ ಲೈವ್.ಕಾಂ | SHIMOGA | 29 ಜನವರಿ 2020 ಶಿವಮೊಗ್ಗದ ನೂತನ ಮೇಯರ್ ಮತ್ತು ಉಪ ಮೇಯರ್ ಆಯ್ಕೆ ಸುಗಮವಾಗಿ ನಡೆಯಿತು. ಬಿಜೆಪಿಯ ಸುವರ್ಣ ಶಂಕರ್ ನೂತನ ಮೇಯರ್ ಮತ್ತು ಸುರೇಖಾ ಮುರಳೀಧರ್ ಅವರು ಉಪ ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಮಹಾನಗರ ಪಾಲಿಕೆ ಸಭಾಂಗಣದಲ್ಲಿ, ಬಿಗಿ ಭದ್ರತೆಯಲ್ಲಿ ಮೇಯರ್ ಮತ್ತು ಉಪ ಮೇಯರ್ ಆಯ್ಕೆ ಪ್ರಕ್ರಿಯೆ ನಡೆಯಿತು. ಕಾಂಗ್ರೆಸ್, ಜೆಡಿಎಸ್ ಕೂಡ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದು ವಿಶೇಷವಾಗಿತ್ತು. ಯಾರಿಗೆಷ್ಟು ಮತ ಸಿಕ್ತು ಗೊತ್ತಾ? ಮೇಯರ್ ಸ್ಥಾನಕ್ಕೆ ಬಿಜೆಪಿ … Read more

ಕಣ್ಣೀರು ಹಾಕುತ್ತ ಬಿಜೆಪಿ ಕಚೇರಿಯಿಂದ ಹೊರ ನಡೆದ ಮೇಯರ್ ಆಕಾಂಕ್ಷಿ, ಕೊನೆಗೂ ಮೇಯರ್, ಉಪಮೇಯರ್ ಹೆಸರು ಫೈನಲ್

290120 Mayor Election meeting final 1

ಶಿವಮೊಗ್ಗ ಲೈವ್.ಕಾಂ | SHIMOGA | 29 ಜನವರಿ 2020 ಮೈಸೂರಿನಿಂದ ಬಂದರು ಬಿಜೆಪಿ ಕಾರ್ಪೊರೇಟರ್’ಗಳು. ಕಣ್ಣೀರು ಹಾಕುತ್ತ ಹೊರ ಸಭೆಯಿಂದ ಹೊರ ನಡೆದ ಮೇಯರ್ ಆಕಾಂಕ್ಷಿ. ಮಹತ್ವದ ಸಭೆಯಲ್ಲಿ ಮೇಯರ್, ಉಪ ಮೇಯರ್ ಅಭ್ಯರ್ಥಿಗಳ ಘೋಷಣೆ. ಮೇಯರ್, ಉಪ ಮೇಯರ್ ಆಯ್ಕೆ ಸಂಬಂಧ ಬಿಜೆಪಿ ಕಚೇರಿಯಲ್ಲಿ ಇವತ್ತು ಮಹತ್ವದ ಸಭೆ ನಡೆಯಿತು. ಸಚಿವ ಕೆ.ಎಸ್.ಈಶ್ವರಪ್ಪ ಸಭೆಯ ನೇತೃತ್ವ ವಹಿಸಿದ್ದರು. ಮೈಸೂರಿಗೆ ತೆರಳಿದ್ದ ಬಿಜೆಪಿ ಕಾರ್ಪೊರೇಟರ್‌ಗಳು ಬಸ್ಸಿನಲ್ಲಿ ಶಿವಮೊಗ್ಗಕ್ಕೆ ಹಿಂತಿರುಗಿದ್ದಾರೆ. ನೇರವಾಗಿ ಬಿಜೆಪಿ ಕಚೇರಿಗೆ ಆಗಮಿಸಿದ ಕಾರ್ಪೊರೇಟರ್‌ಗಳು … Read more

ದೊಡ್ಡಪೇಟೆ ಠಾಣೆ ಪೊಲೀಸರ ಕಾರ್ಯಾಚರಣೆ, ಮರಳು ಸಂಗ್ರಹ ಮಾಡಿದ್ದ ಲಾರಿಗಳು ಸೀಜ್

ಶಿವಮೊಗ್ಗ ಲೈವ್.ಕಾಂ | SHIMOGA | 27 ಜನವರಿ 2020 ಅವಧಿ ಮೀರಿದ ಪರ್ಮಿಟ್’ಗಳನ್ನು ಇಟ್ಟುಕೊಂಡು, ಲಾರಿಯಲ್ಲಿ ಮರಳು ಸಂಗ್ರಹ ಮಾಡಿದ್ದ ಆರೋಪದ ಮೇಲೆ ದೊಡ್ಡಪೇಟೆ ಠಾಣೆ ಪೊಲೀಸರು ಲಾರಿಗಳನ್ನು ವಶಕ್ಕೆ ಪಡೆದಿದ್ದಾರೆ. ನ್ಯೂ ಮಂಡ್ಲಿ ಬೈಪಾಸ್ ರಸ್ತೆಯಲ್ಲಿ ದೊಡ್ಡಪೇಟೆ ಪೊಲೀಸರು ಕಾರ್ಯಾಚರಣೆ ನಡೆಸಿದರು. ಮರಳು ತುಂಬಿದ್ದ 13 ಲಾರಿಗಳನ್ನು ವಶಕ್ಕೆ ಪಡೆಯಲಾಗಿದೆ. ಅಲ್ಲದೆ ಮಾಲೀಕರು ಮತ್ತು ಚಾಲಕರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪ್ರಕರಣ ಸಂಬಂಧ ಗಣಿ ಮತ್ತು ಭೂ ವಿಜ್ಞಾನ … Read more

ಅವತ್ತು ಸಿದ್ದರಾಮಯ್ಯ ಹಿಂದೆ ಸರಿದಿದ್ದರು, ಇವತ್ತು ಯಡಿಯೂರಪ್ಪ ಆ ನಿರ್ಧಾರಕ್ಕೆ ಬಂದಿರುವುದು ಸರಿಯಲ್ಲ, ರೈತ ಸಂಘದ ವಾರ್ನಿಂಗ್

ಶಿವಮೊಗ್ಗ ಲೈವ್.ಕಾಂ | SHIMOGA | 27 ಜನವರಿ 2020 ಕೃಷಿ ಕ್ಷೇತ್ರಕ್ಕೆ ಬಂಡವಾಳ ಹರಿಸಲು ಕರ್ನಾಟಕ ಭೂಸುಧಾರಣಾ ಕಾಯ್ದೆಯ ಸೆಕ್ಷನ್ 5ನ್ನು ರಾಜ್ಯ ಸರ್ಕಾರ ತಿದ್ದುಪಡಿ ಮಾಡುವುದನ್ನು ರಾಜ್ಯ ರೈತ ಸಂಘ ಪ್ರಬಲವಾಗಿ ವಿರೋಧಿಸುತ್ತದೆ ಎಂದು ರೈತ ಮುಖಂಡ ಕೆ.ಟಿ. ಗಂಗಾಧರ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆ.ಟಿ.ಗಂಗಾಧರ್, ಈ ಕಾಯ್ದೆಗೆ ತಿದ್ದುಪಡಿ ತರುವುದರ ಮೂಲಕ ರೈತರ ಭೂಮಿಯನ್ನು ಗುತ್ತಿಗೆ ಪಡೆದು, ಅದೇ ಭೂಮಿಯನ್ನು ಆಧಾರವಾಗಿಟ್ಟುಕೊಂಡು, ಕೃಷಿ ಸಂಬಂಧಿತ ಸಾಲವನ್ನು ಪಡೆಯಲು ಕಂಪನಿಗಳಿಗೆ ಅವಕಾಶ ಮಾಡಿಕೊಡಲಾಗುತ್ತದೆ. ರಾಜ್ಯದಲ್ಲಿ … Read more