ಶಿವಮೊಗ್ಗ ಪಾಲಿಕೆ ಮೇಯರ್ ಚುನಾವಣೆಗೆ ಬಿಗ್ ಟ್ವಿಸ್ಟ್, ನಾಮಪತ್ರ ಸಲ್ಲಿಸಿದ ಕಾಂಗ್ರೆಸ್ ಕ್ಯಾಂಡಿಡೇಟ್, ಬಿಜೆಪಿ ಪಾಳಯದಲ್ಲಿ ಢವಢವ

ಶಿವಮೊಗ್ಗ ಲೈವ್.ಕಾಂ | SHIMOGA | 27 ಜನವರಿ 2020 ತೀವ್ರ ಕುತೂಹಲ ಕೆರಳಿಸಿರುವ ಶಿವಮೊಗ್ಗ ಮಹಾನಗರ ಪಾಲಿಕೆ ಮೇಯರ್ ಚುನಾವಣೆಗೆ, ಮೊದಲ ನಾಮಪತ್ರ ಸಲ್ಲಿಕೆಯಾಗಿದೆ. ಅಪರ ಜಿಲ್ಲಾಧಿಕಾರಿ ಅನುರಾಧ ಅವರಿಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಇವತ್ತು ನಾಮಪತ್ರ ಸಲ್ಲಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಯಮುನಾ ರಂಗೇಗೌಡ ನಾಮಪತ್ರ ಸಲ್ಲಿಸಿದ್ದಾರೆ. ಪಾಲಿಕೆ ವಿರೋಧ ಪಕ್ಷದ ನಾಯಕ ರಮೇಶ್ ಹೆಗ್ಡೆ, ಕಾರ್ಪೊರೇಟರ್ ಹೆಚ್.ಸಿ.ಯೋಗೇಶ್, ಪ್ರಮುಖರಾದ ರಂಗನಾಥ್ ಸೇರಿದಂತೆ ಹಲವರು ಈ ವೇಳೆ ಉಪಸ್ಥಿತರಿದ್ದರು. ಮೇಯರ್ ಸ್ಥಾನ ಬಿಸಿಎಂ (ಬಿ) ಮಹಿಳೆಗೆ … Read more

ಸೇತುವೆಯಿಂದ ಕೆಳಗೆ ಹಾರಿದ ಕಂಟೈನರ್ ಲಾರಿ, ಅಫಘಾತದಲ್ಲಿ ಲಾರಿ ಜಖಂ

ಶಿವಮೊಗ್ಗ ಲೈವ್.ಕಾಂ | SHIMOGA | 26 ಜನವರಿ 2020 ತಾಲೂಕಿನ ಸೂಡೂರು ಸೇತುವೆಯಿಂದ ಕುಮದ್ವತಿ ನದಿಗೆ ಶನಿವಾರ ಸಂಜೆ ಟ್ರಕ್‌ವೊಂದು ಕೆಳಕ್ಕೆ ಬಿದ್ದ ಪರಿಣಾಮ ಟ್ರಕ್ ಚಾಲಕನಿಗೆ ಕಾಲು ಹಾಗೂ ತಲೆಗೆ ಗಾಯಗಳಾಗಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಕಂಟೈನರ್ ಕೊಂಡೊಯ್ಯುತ್ತಿದ್ದ ಟ್ರಕ್‌ ಶಿವಮೊಗ್ಗ ಕಡೆಯಿಂದ ಹೊಸನಗರ ಮಾರ್ಗವಾಗಿ ಕುಂದಾಪುರಕ್ಕೆ ತೆರಳುತ್ತಿತ್ತು ಎನ್ನಲಾಗಿದೆ. ಅಪಘಾತ ಸಂಭವಿಸಿದ ಸ್ಥಳ ಶಿವಮೊಗ್ಗ ಹಾಗೂ ಹೊಸನಗರ ತಾಲೂಕಿನ ಗಡಿ ಪ್ರದೇಶದಲ್ಲಿದೆ. ಸ್ಥಳಕ್ಕೆ ಕುಂಸಿ ಹಾಗೂ ರಿಪ್ಪನ್‌ಪೇಟೆ ಪೊಲೀಸರು ಭೇಟಿ ನೀಡಿದರು. ಆದರೆ … Read more

ಅರಣ್ಯ ಇಲಾಖೆ ಅಧಿಕಾರಿಗಳ ಭರ್ಜರಿ ಬೇಟೆ, ಆನೆ ದಂತ, ಚಿರತೆ ಉಗುರು ಮಾರಾಟಕ್ಕೆ ಯತ್ನಿಸುತ್ತಿದ್ದವರು ಅಂಧರ್

ಶಿವಮೊಗ್ಗ ಲೈವ್.ಕಾಂ | SHIMOGA | 25 ಜನವರಿ 2020 ಅರಣ್ಯ ಇಲಾಖೆ ಸಂಚಾರಿ ದಳದ ಸಿಬ್ಬಂದಿ ಇವತ್ತು  ಎರಡು ಪ್ರತ್ಯೇಕ ಕಾರ್ಯಾಚರಣೆ ನಡೆಸಿ, ಚಿರತೆ ಉಗುರು ಮತ್ತು ಆನೆ ದಂತ ಮಾರಾಟ ಮಾಡುತ್ತಿದ್ದವರನ್ನು ಅರೆಸ್ಟ್ ಮಾಡಿದ್ದಾರೆ. ಕೇಸ್ 1 | ಆನೆ ದಂತ ಮಾರಾಟಕ್ಕೆ ಯತ್ನಿಸಿದವರು ಅರೆಸ್ಟ್ ಆನೆ ದಂತ ಮಾರಾಟಕ್ಕೆ ಯತ್ನಿಸಿದ ಇಬ್ಬರನ್ನು ಅರಣ್ಯ ಇಲಾಖೆ ಸಂಚಾರಿ ದಳದ ಸಿಬ್ಬಂದಿಗಳು ಬಂಧಿಸಿದ್ದಾರೆ. ಬಂಧಿತರು ಚಿಕ್ಕಮಗಳೂರು ತಾಲೂಕು ನಾಲೂರು ಗ್ರಾಮದ ರಾಜಗೋಪಾಲ ಮತ್ತು ನೆರಟೂರು ಗ್ರಾಮದ … Read more

ಸಬ್ ಇನ್ಸ್’ಪೆಕ್ಟರ್ ಅಮಾನತಿಗೆ ಆಗ್ರಹ, ಭದ್ರಾವತಿಯಲ್ಲಿ ಮಾಜಿ ಶಾಸಕರ ನೇತೃತ್ವದಲ್ಲಿ ಅಹೋರಾತ್ರಿ ಧರಣಿ

ಶಿವಮೊಗ್ಗ ಲೈವ್.ಕಾಂ | BHADRAVATHI | 25 ಜನವರಿ 2020 ಗ್ರಾಮಾಂತರ ಪಿಎಸ್‌ಐ ಸುನಿಲ್ ಕುಮಾರ್ ಅಮಾನತಿಗೆ ಒತ್ತಾಯಿಸಿ ಮಾಜಿ ಶಾಸಕ ಎಂ.ಜೆ.ಅಪ್ಪಾಜಿ ನೇತೃತ್ವದಲ್ಲಿ ಮಿನಿವಿಧಾನಸೌಧ ಮುಂಭಾಗ ಅಹೋರಾತ್ರಿ ಅನಿರ್ದಿಷ್ಟಾವದಿ ಧರಣಿ ಸತ್ಯಾಗ್ರಹ ನಡೆದಿದೆ. ಈ ಸಂದರ್ಭ ಮಾತನಾಡಿದ ಪ್ರತಿಭಟನಾಕಾರರು, ಕೂಡ್ಲಿಗೆರೆ, ಜಿಪಂ ವ್ಯಾಪ್ತಿಯ ಅರಳಿಹಳ್ಳಿಯಲ್ಲಿ ಜಿಪಂ ಸದಸ್ಯ ಎಸ್.ಮಣಿಶೇಖರ್ ಸಹಸ್ರಾರು ರೈತ ಕುಟುಂಬಗಳಿಗೆ ಅನುಕೂಲ ಕಲ್ಪಿಸಲು ಬಳಸೋಕೆರೆ ಅಭಿವೃದ್ಧಿಗೆ ಮುಂದಾಗಿದ್ದರು. ಈ ಹಿನ್ನೆಲೆಯಲ್ಲಿ ಕೆರೆಪಕ್ಕದ, ಅದೇ ಗ್ರಾಮದ ಮಲ್ಲಿಕಾರ್ಜುನ, ಚಂದ್ರ, ಹೇಮಕುಮಾರ್, ನಾಗರಾಜ್ ಎಂಬ ಸಹೋದರರು … Read more

ನಮ್ಮ ಪೌರತ್ವ ಪ್ರಶ್ನಿಸಲು ಪ್ರಭುತ್ವಕ್ಕೆ ಯಾವ ಅಧಿಕಾರವೂ ಇಲ್ಲ, ಕೇಂದ್ರ ಸರ್ಕಾರದ ನಡೆ ವಿರುದ್ಧ ಆಕ್ರೋಶ

ಶಿವಮೊಗ್ಗ ಲೈವ್.ಕಾಂ | SHIMOGA | 25 ಜನವರಿ 2020 ಸಂವಿಧಾನ ವಿರೋಧಿ ಸಿಎಎ, ಎನ್‌ಆರ್‌ಸಿ ಹಾಗೂ ಎನ್‌ಪಿಆರ್‌ ಕಾಯ್ದೆ ವಿರೋಧಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಶಾಖೆಯಿಂದ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು. ಪೌರತ್ವ ತಿದ್ದುಪಡಿ ಕಾಯ್ದೆ ಪ್ರಜಾಪ್ರಭುತ್ವ ನಾಶ ಮಾಡುವುದಲ್ಲದೆ ಮನುಧರ್ಮ ಶಾಸ್ತ್ರವನ್ನು ಎತ್ತಿ ಹಿಡಿಯುತ್ತದೆ. ತಮಗಿಷ್ಟ ಬಂದಂತೆ ಸಂವಿಧಾನದ ಮೇಲೆ ನರ್ತನ ಮಾಡಲು ಈ ಕಾಯ್ದೆ ಸಹಾಯ ಮಾಡುತ್ತದೆ. ಇದಕ್ಕೆ ಮನುವಾದಿಗಳು ಮುಂದಾಗಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಭಾರತದಲ್ಲಿ ನೂರಾರು … Read more

ಗಾಂಧಿ ಪಾರ್ಕ್’ನಲ್ಲಿ ಆಕರ್ಷಕ ಫಲಪುಷ್ಪ ಪ್ರದರ್ಶನ, ಈ ಬಾರಿಯ ವಿಶೇಷತೆಗಳೇನು? ಯಾವೆಲ್ಲ ಬಗೆಯ ಡಿಸೈನ್’ಗಳಿವೆ ಗೊತ್ತಾ?

ಶಿವಮೊಗ್ಗ ಲೈವ್.ಕಾಂ | SHIMOGA | 24 ಜನವರಿ 2020 ಗಣರಾಜ್ಯೋತ್ಸವ ಅಂಗವಾಗಿ ಶಿವಮೊಗ್ಗದ ಗಾಂಧಿ ಪಾರ್ಕ್ ಆವರಣದಲ್ಲಿರುವ ಫಲಪುಷ್ಪ ಪ್ರದರ್ಶನ ಆಯೋಜಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಫಲಪುಷ್ಪ ಪ್ರದರ್ಶನಕ್ಕೆ ಇವತ್ತು ಚಾಲನೆ ನೀಡಿದರು. ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494 ವಾಟ್ಸಪ್ ನಂಬರ್ | 7411700200 ಈ ಮೇಲ್ ಐಡಿ | shivamoggalive@gmail.com

ಶಿವಮೊಗ್ಗದ ಸಿಟಿ ಬಸ್ಸುಗಳಿಗೆ ಮತ್ತೆ ಬಿಸಿ ಮುಟ್ಟಿಸಿದ ಟ್ರಾಫಿಕ್ ಪೊಲೀಸ್, ಒಂದೇ ದಿನ 13 ಬಸ್ಸುಗಳ ಮೇಲೆ ಕೇಸ್

Shimoga City Nehru Road General Image 1

ಶಿವಮೊಗ್ಗ ಲೈವ್.ಕಾಂ | SHIMOGA | 24 ಜನವರಿ 2020 ಟ್ರಾಫಿಕ್ ನಿಯಮ ಉಲ್ಲಂಘಿಸುತ್ತಿರುವ ಶಿವಮೊಗ್ಗದ ಸಿಟಿ ಬಸ್’ಗಳಿಗೆ ಪೊಲೀಸರು ಸರಿಯಾಗಿಯೇ ಬಿಸಿ ಮುಟ್ಟಿಸುತ್ತಿದ್ದಾರೆ. ನಿರಂತರವಾಗಿ ದಂಡ ಪ್ರಯೋಗ ಮಾಡುತ್ತಿದ್ದಾರೆ. ಇದೇ ರೀತಿ ವರ್ತನೆ ಮುಂದುವರೆಸಿದರೆ ಇನ್ಮುಂದೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಶಿವಮೊಗ್ಗ ಪೊಲೀಸರು ವಾರ್ನಿಂಗ್ ನೀಡಿದ್ದಾರೆ. ಎಲ್ಲೆಂದರಲ್ಲಿ ಬಸ್ಸುಗಳನ್ನು ನಿಲ್ಲಿಸಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲಾಗುತ್ತಿದೆ. ಇದರಿಂದ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದೆ. ಈ ಕುರಿತು ಸಾರ್ವಜನಿಕರ ದೂರು ಹೆಚ್ಚಾದ ಹಿನ್ನೆಲೆ, ಶಿವಮೊಗ್ಗ ಟ್ರಾಫಿಕ್ ಪೊಲೀಸರು ವಿಶೇಷ ಕಾರ್ಯಾಚರಣೆ … Read more

ಟ್ರಾಕ್ಟರ್, ಟಿಲ್ಲರ್ ಜಪ್ತಿ ವಿರುದ್ಧ ರೈತರ ಆಕ್ರೋಶ, ಶಿವಮೊಗ್ಗ PLD ಬ್ಯಾಂಕ್ ಮುಂದೆ ಪ್ರತಿಭಟನೆ

ಶಿವಮೊಗ್ಗ ಲೈವ್.ಕಾಂ | SHIMOGA | 23 ಜನವರಿ 2020 ರಾಜ್ಯ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನಿಂದ ರಾಜ್ಯಾದ್ಯಂತ ರೈತರ ಟ್ರಾಕ್ಟರ್, ಟಿಲ್ಲರ್’ಗಳನ್ನು ಜಪ್ತಿ ಮಾಡುತ್ತಿರುವ ಕ್ರಮ ಖಂಡಿಸಿ, ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ಶಿವಮೊಗ್ಗದ PLD ಬ್ಯಾಂಕ್ ಮುಂದೆ ಪ್ರತಿಭಟನೆ ನಡೆಸಲಾಯಿತು. ಕೃಷಿ ಬೆಲೆ ಆಯೋಗ 19 ಬೆಳೆಗಳ ಉತ್ಪಾದನಾ ವೆಚ್ಚ ಪ್ರಕಟಿಸಿದೆ. ಈ ಪೈಕಿ 18 ಬೆಳೆ ನಷ್ಟದಲ್ಲಿ ಮಾರಾಟ ಮಾಡುತ್ತಿದ್ದಾರೆಂದು ಹಿಂದಿನ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿತ್ತು. … Read more

ಶಿವಮೊಗ್ಗ ರಂಗಾಯಣದಲ್ಲಿ ಪಪೆಟ್ ಶೋ, ಶಾಲಾ ಮಕ್ಕಳಿಗೆ ಉಚಿತ ಪ್ರವೇಶ, ಏನಿದು ಶೋ? ಸ್ಪೆಷಾಲಿಟಿ ಏನು ಗೊತ್ತಾ?

ಶಿವಮೊಗ್ಗ ಲೈವ್.ಕಾಂ | SHIMOGA | 23 ಜನವರಿ 2020 ಗಣರಾಜ್ಯೋತ್ಸವ ಪ್ರಯುಕ್ತ ಜ.25ರಂದು ಶಿವಮೊಗ್ಗ ರಂಗಾಯಣದಿಂದ ಪ್ಲಾಸ್ಟಿಕ್‌ನ ಅನಾಹುತ ವಿವರಿಸುವ ‘ಪ್ಲಾಸ್ಟಿ ಸಿಟಿ’ ಪಪಟ್ ಶೋ (ಸೂತ್ರಧಾರಿ ಗೊಂಬೆಯಾಟ) ಹಮ್ಮಿಕೊಳ್ಳಲಾಗಿದೆ ಎಂದು ರಂಗಾಯಣದ ನಿರ್ದೇಶಕ ಸಂದೇಶ ಜವಳಿ ತಿಳಿಸಿದರು. ಅಂದು ಬೆಳಗ್ಗೆ 11ಕ್ಕೆ ಸುವರ್ಣ ಸಂಸ್ಕೃತಿ ಭವನದಲ್ಲಿ ಶಾಲಾ ಮಕ್ಕಳಿಗೆ ಉಚಿತ ಪ್ರದರ್ಶನ ಏರ್ಪಡಿಸಿದ್ದು ಸಂಜೆ 6.30ಕ್ಕೆ ಸಾರ್ವಜನಿಕರಿಗೆ ಪ್ರದರ್ಶನ ಏರ್ಪಡಿಸಿದ್ದು 20 ರೂ. ಶುಲ್ಕ ನಿಗದಿಪಡಿಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಹೆಗ್ಗೋಡಿನ ಶ್ರವಣ ನಿರ್ದೇಶನದ … Read more

ಶಿವಮೊಗ್ಗದಲ್ಲಿ ಶಾಸಕ ರೇಣುಕಾಚಾರ್ಯ ಪ್ರತಿಕೃತಿಗೆ ಬೆಂಕಿ, ಎಂಎಲ್ಎಯನ್ನು ಕೂಡಲೆ ಬಂಧಿಸುವಂತೆ ಆಗ್ರಹ

ಶಿವಮೊಗ್ಗ ಲೈವ್.ಕಾಂ | SHIMOGA | 23 ಜನವರಿ 2020 ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಮುಸ್ಲಿಂ ಸಮುದಾಯದ ವಿರುದ್ಧ ಬಹಿರಂಗ ಸಭೆಯಲ್ಲಿ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಸಿಟಿಜನ್ಸ್ ಯುನೈಟೆಡ್ ಮೂವ್‌ಮೆಂಟ್ ಸಂಘಟನೆ  ಕಾರ್ಯಕರ್ತರು ಶಿವಮೊಗ್ಗದಲ್ಲಿ ಪ್ರತಿಭಟನೆ ನಡೆಸಿದರು. ಜ.21ರಂದು ಹೊನ್ನಾಳಿಯಲ್ಲಿ ನಡೆದ ಬಿಜೆಪಿ ಸಭೆಯಲ್ಲಿ ಮುಸ್ಲಿ ಸಮುದಾಯದ ವಿರುದ್ಧ ಅವಹೇಳನಕಾರಿಯಾಗಿ ಮತ್ತು ಪ್ರಚೋದನಾಕಾರಿಯಾಗಿ ರೇಣುಕಾಚಾರ್ಯ ಮಾತನಾಡಿದ್ದಾರೆ. ಕೋಮು ಗಲಭೆಗೆ ಪ್ರಚೋದಿಸಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದರು. ರೇಣುಕಾಚಾರ್ಯ ಅವರನ್ನು ಶಾಸಕ ಸ್ಥಾನದಿಂದ … Read more