ಮಂಗಳೂರಲ್ಲಿ ಬಾಂಬ್ ಇಟ್ಟವನಿಗಾಗಿ ಸಾಗರ, ಹೊಸನಗರದಲ್ಲಿ ನಡೆದಿತ್ತು ಶೋಧ, ಪೊಲೀಸರು ಎಲ್ಲೆಲ್ಲಿ ತಲಾಷ್ ಮಾಡಿದ್ದರು ಗೊತ್ತಾ?

police jeep

ಶಿವಮೊಗ್ಗ ಲೈವ್.ಕಾಂ | SHIMOGA | 23 ಜನವರಿ 2020 ಮಂಗಳೂರು ವಿಮಾನ ನಿಲ್ದಾಣದಲ್ಲಿ ಜೀವಂತ ಬಾಂಬ್ ಇರಿಸಿದ್ದ ಆದಿತ್ಯರಾವ್‌ಗಾಗಿ ಶಿವಮೊಗ್ಗ ಪೊಲೀಸರು ಮಂಗಳವಾರ ರಾತ್ರಿಯಿಡಿ ಶೋಧಕಾರ್ಯ ನಡೆಸಿದ್ದಾರೆ. ಲಭ್ಯ ಮಾಹಿತಿ ಮೇರೆಗೆ ಪೊಲೀಸರು ಶೋಧ ಕಾರ್ಯಕ್ಕೆ ಮುಂದಾಗಿದ್ದು, ಅಷ್ಟರಲ್ಲಾಗಲೇ ಆತ ಸಾಗರದಿಂದ ಬೆಂಗಳೂರಿಗೆ ಹೋಗಿದ್ದಾನೆಂಬ ಬಗ್ಗೆ ಪೊಲೀಸ್ ಮೂಲಗಳಿಂದ ಮಾಹಿತಿ ತಿಳಿದು ಬಂದಿದೆ. ಮಂಗಳೂರಿನಿಂದ ಆತ ಉಡುಪಿ ಮಾರ್ಗವಾಗಿ ಜಿಲ್ಲೆಯ ಹೊಸನಗರ, ಸಾಗರ ತಲುಪಿರುವ ಬಗ್ಗೆ ಶಂಕೆ ವ್ಯಕ್ತಪಡಿಸಲಾಗಿತ್ತು. ಆ ಆಧಾರದ ಮೇಲೆ ಹೊಸನಗರದಲ್ಲಿ ತಪಾಸಣೆ … Read more

ಪದವಿಯ ಎಲ್ಲ ವಿದ್ಯಾರ್ಥಿಗಳಿಗೂ ಲ್ಯಾಪ್’ಟಾಪ್ ವಿತರಿಸುವಂತೆ ಆಗ್ರಹ, ಸರ್ಕಾರದ ಮೇಲೆ ವಿದ್ಯಾರ್ಥಿಗಳ ಒತ್ತಡ

ಶಿವಮೊಗ್ಗ ಲೈವ್.ಕಾಂ | SHIMOGA | 22 ಜನವರಿ 2020 ಪದವಿ ಓದುತ್ತಿರುವ ಎಲ್ಲ ವಿದ್ಯಾರ್ಥಿಗಳಿಗು, ಲ್ಯಾಪ್’ಟಾಪ್ ವಿತರಿಸಬೇಕು ಎಂದು ಒತ್ತಾಯಸಿ ಶಿವಮೊಗ್ಗ NSUI ವತಿಯಿಂದ ಇವತ್ತು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು. ಕಾಂಗ್ರೆಸ್ ಸರ್ಕಾರವಿದ್ದಾಗ ರಾಜ್ಯದಲ್ಲಿ ಪದವಿ ವಿದ್ಯಾರ್ಥಿಗಳಿಗೆ ಲ್ಯಾಪ್’ಟಾಪ್ ಕೊಡಲಾಗಿತ್ತು. ಆದರೆ ಕಳೆದ ಎರಡು ವರ್ಷದಿಂದ ವಿದ್ಯಾರ್ಥಿಗಳಿಗೆ ಲ್ಯಾಪ್’ಟಾಪ್ ವಿತರಣೆ ಆಗಿರಲಿಲ್ಲ. ಈ ಬಾರಿ ಪುನಃ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಲ್ಯಾಪ್’ಟಾಪ್ ವಿತರಿಸಲಾಗಿದೆ. ಕಳೆದು ಎರಡು ವರ್ಷದಿಂದ ಲ್ಯಾಪ್’ಟಾಪ್ ಸಿಗದ ವಿದ್ಯಾರ್ಥಿಗಳಿಗೂ … Read more

ಸರಿಯಾದ ಟೈಮಿಗೆ ಬಸ್ಸು ಬೇಕು, ಕೂಡಲೇ ಸರ್ಕಾರ ಬಸ್ಸು ಬಿಡಬೇಕು, ವಿದ್ಯಾರ್ಥಿಗಳ ಆಗ್ರಹ

ಶಿವಮೊಗ್ಗ ಲೈವ್.ಕಾಂ | SHIMOGA | 22 ಜನವರಿ 2020 ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ಬಸ್ಸಿನ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿ ಎಬಿವಿಪಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಮಲ್ಲಿಗೇನಹಳ್ಳಿಯ ವಾಜಪೇಯ ಬಡಾವಣೆಯಲ್ಲಿರುವ ವಿದ್ಯಾರ್ಥಿನಿಲಯಕ್ಕೆ ತೆರಳಲು ಮತ್ತು ಅಲ್ಲಿಂದ ಕಾಲೇಜಿಗೆ ಬರಲು ವಿದ್ಯಾರ್ಥಿಗಳಿಗೆ ಬಸ್ಸಿನ ವ್ಯವಸ್ಥೆ ಇಲ್ಲ. ಬೆಳಗ್ಗೆ 9 ಗಂಟೆ ಮತ್ತು ಸಂಜೆ 4.45ರ ಹೊತ್ತಿಗೆ ಬಸ್ಸಿನ ವ್ಯವಸ್ಥೆ ಮಾಡಬೇಕು ಎಂದು ವಿದ್ಯಾರ್ಥಿಗಳು ಒತ್ತಾಯಿಸಿದರು. ಈ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು, ಜಿಲ್ಲಾಧಿಕಾರಿಗೆ ಮನವಿ … Read more

ಶಿವಮೊಗ್ಗ ನ್ಯೂ ಮಂಡ್ಲಿಯಲ್ಲಿ ಯುವಕನ ಮರ್ಡರ್ ಮಾಡಿದ್ದವರು ದೊಡ್ಡಪೇಟೆ ಪೊಲೀಸರ ಬಲೆಗೆ

Doddapete police station in shimoga

ಶಿವಮೊಗ್ಗ ಲೈವ್.ಕಾಂ | SHIMOGA | 22 ಜನವರಿ 2020 ಹುಡುಗಿ ವಿಚಾರಕ್ಕೆ ಸಂಬಂಧಿಸಿ ನ್ಯೂಮಂಡ್ಲಿ ಆಟೋ ಸ್ಟಾಂಡ್ ಬಳಿ ಯುವಕನನ್ನು ಕೊಲೆಮಾಡಿದ್ದ ಇಬ್ಬರು ಆರೋಪಿಗಳನ್ನು ದೊಡ್ಡಪೇಟೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳನ್ನು ನ್ಯೂ ಮಂಡ್ಲಿಯಲ್ಲೇ ಅರೆಸ್ಟ್ ಮಾಡಲಾಗಿದೆ. ಇದೇ ಬಡಾವಣೆಯ ತೌಹೀದ್ ಖಾನ್ (19), ಮಹಮ್ಮದ್ ಯೂನಸ್ (19) ಬಂಧಿತರು. ಭಾನುವಾರ ಸಂಜೆ ಮಹಮ್ಮದ್ ಆಲಿ ಅಲಿಯಾಸ್ ಎಂ.ಡಿ.ಆಲಿ ಎಂಬಾತನನ್ನು ಕೊಲೆ ಮಾಡಿದ್ದರು. ಆರೋಪಿಗಳ ಪತ್ತೆಗೆ ಡಿವೈಎಸ್ಪಿ ಉಮೇಶ್ ನಾಯ್ಕ ಮಾರ್ಗದರ್ಶನದಲ್ಲಿ ಸಿಪಿಐ ಆರ್.ಎಂ.ವಸಂತಕುಮಾರ್ ನೇತೃತ್ವದಲ್ಲಿ ದೊಡ್ಡಪೇಟೆ … Read more

ಶಿವಮೊಗ್ಗ – ಬೆಂಗಳೂರು ನಡುವೆ ಮತ್ತೊಂದು ಹೊಸ ರೈಲು, ಟೈಮಿಂಗ್ಸ್ ಏನು? ಎಲ್ಲೆಲ್ಲಿದೆ ಗೊತ್ತಾ ಸ್ಟಾಪ್?

Train engine and boggies

ಶಿವಮೊಗ್ಗ ಲೈವ್.ಕಾಂ | SHIMOGA | 22 ಜನವರಿ 2020 ಶಿವಮೊಗ್ಗ – ಯಶವಂತಪುರ ನಡುವೆ ಜ.23ರಿಂದ ತತ್ಕಾಲ್‌ ಎಕ್ಸ್‌ಪ್ರೆಸ್‌ ಹೊಸ ರೈಲು (06539-06540) ವಾರದಲ್ಲಿ ನಾಲ್ಕು ದಿನ (ಮಂಗಳವಾರ, ಬುಧವಾರ, ಗುರುವಾರ ಮತ್ತು ಶುಕ್ರವಾರ) ಸಂಚರಿಸಲಿದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ರೈಲು ಸೇವೆಗೆ ಜ.23ರಂದು ಮಧ್ಯಾಹ್ನ 3ಕ್ಕೆ ಶಿವಮೊಗ್ಗ ನಗರ ರೈಲ್ವೆ ನಿಲ್ದಾಣದಲ್ಲಿ ಚಾಲನೆ ದೊರೆಯಲಿದೆ. ಸಚಿವ ಕೆ.ಎಸ್. ಈಶ್ವರಪ್ಪ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಉಪಸ್ಥಿತರಿರುವರು ಎಂದು ಹೇಳಿದ್ದಾರೆ. ಬೆಳಗ್ಗೆ … Read more

ಮೆಗ್ಗಾನ್ ಅಸ್ಪತ್ರೆಲಿ ಡ್ಯೂಟಿ ಡಾಕ್ಟರ್ ಇರಲ್ಲ, ಬಿಪಿ ಮಾತ್ರೆ ಸಿಗ್ತಿಲ್ಲ, ಸಮಸ್ಯೆ ಪರಿಹಾರಕ್ಕೆ ಗಡುವು ಫಿಕ್ಸ್ ಮಾಡಿದ ಮಿನಿಸ್ಟರ್

220120 Eshwarappa Visit Mc Gann Hospital 1

ಶಿವಮೊಗ್ಗ ಲೈವ್.ಕಾಂ | SHIMOGA | 22 ಜನವರಿ 2020 ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ನೇತೃತ್ವದ ನಿಯೋಗ ಇವತ್ತು ಮೆಗ್ಗಾನ್ ಆಸ್ಪತ್ರೆಗೆ ಭೇಟಿ ನೀಡಿತ್ತು. ಈ ವೇಳೆ ಹಲವು ನ್ಯೂನತೆಗಳು ಕಂಡು ಬಂದಿದ್ದು, ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡರು. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಔಷಧ ಕೊರತೆ, ಸಿಬ್ಬಂದಿಗಳಿಗೆ ಸಂಬಳ ವ್ಯತ್ಯಯ ಸೇರಿದಂತೆ ಹಲವು ವಿಚಾರಗಳು ಚರ್ಚೆಗೆ ಬಂದವು. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ 2009ರಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಂಜೂರಾಗಿದ್ದರು, ಕಾಮಗಾರಿ ಪೂರ್ಣಗೊಂಡಿಲ್ಲ. ಈ ಕುರಿತು ಸಭೆಯಲ್ಲಿ ಪ್ರಸ್ತಾಪಿಸಿದ … Read more

ಶಿವಮೊಗ್ಗದ ಬಸ್ ಸ್ಟಾಂಡ್, ರೈಲ್ವೆ ನಿಲ್ದಾಣದಲ್ಲಿ ಶ್ವಾನದಳ, ಬಾಂಬ್ ಪತ್ತೆ ದಳದಿಂದ ಪರಿಶೀಲನೆ, ಎಲ್ಲೆಲ್ಲೂ ಕಟ್ಟೆಚ್ಚರ

210120 Dog Squad Checking in Shimoga 1

ಶಿವಮೊಗ್ಗ ಲೈವ್.ಕಾಂ | SHIMOGA | 21 ಜನವರಿ 2020 ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್ ಪತ್ತೆಯಾದ ಹಿನ್ನೆಲೆ ರಾಜ್ಯಾದ್ಯಂತ ಅಲರ್ಟ್ ಘೋಷಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಶಿವಮೊಗ್ಗದಲ್ಲು ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಶ್ವಾನ ದಳದಿಂದ ಪರಿಶೀಲನೆ ಶಿವಮೊಗ್ಗದ KSRTC ಬಸ್ ನಿಲ್ದಾಣ, ರೈಲ್ವೆ ನಿಲ್ದಾಣದಲ್ಲಿ ಇವತ್ತು ಶ್ವಾನ ದಳ, ಬಾಂಬ್ ಪತ್ತೆ ದಳದಿಂದ ಪರಿಶೀಲನೆ ನಡೆಯಿತು. KSRTC ಬಸ್ ನಿಲ್ದಾಣದ ವೇಯ್ಟಿಂಗ್ ರೂಂ, ಕಟ್ಟಡದಲ್ಲಿರುವ ಮಳಿಗೆ, ಲಗೇಜ್ ರೂಂ, ಪಾರ್ಕಿಂಗ್ ಸೇರಿದಂತೆ ವಿವಿಧೆಡೆ ತಪಾಸಣೆ ನಡೆಸಲಾಯಿತು. … Read more

ಪಿಳ್ಳಂಗೆರೆ ಬಳಿ 52 ಪ್ರಯಾಣಿಕರಿದ್ದ ಖಾಸಗಿ ಬಸ್ ಪಲ್ಟಿ, ಭಾರೀ ಅನಾಹುತ ಜಸ್ಟ್ ಮಿಸ್

ಶಿವಮೊಗ್ಗ ಲೈವ್.ಕಾಂ | SHIMOGA | 21 ಜನವರಿ 2020 ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ ಪಲ್ಟಿಯಾಗಿದೆ. ಬಸ್ಸಿನಲ್ಲಿ 52 ಪ್ರಯಾಣಿಕರಿದ್ದರು. ಸ್ವಲ್ಪದರಲ್ಲೇ ಭಾರೀ ಅನಾಹುತ ತಪ್ಪಿದೆ. ಶಿವಮೊಗ್ಗದ ಪಿಳ್ಳಂಗೆರೆ ಬಳಿ ಘಟನೆ ಸಂಭವಿಸಿದೆ. ರಸ್ತೆ ತಿರುವಿನಲ್ಲಿ ಬಸ್ಸು, ಚಾಲಕನ ನಿಯಂತ್ರಣ ತಪ್ಪಿ, ಪಲ್ಟಿ ಹೊಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ನಾಲ್ಕು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯವಾಗಿದೆ. ಸ್ಥಳೀಯರ ನೆರವಿನಿಂದ ಪ್ರಯಾಣಿಕರ ರಕ್ಷಣೆ ಮಾಡಲಾಯಿತು. ಹೊಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ … Read more

ಯುವತಿ ವಿಚಾರವಾಗಿ ಯುವಕನಿಗೆ ಚಾಕು ಇರಿದ ಭಗ್ನ ಪ್ರೇಮಿ, ನ್ಯೂ ಮಂಡ್ಲಿಯಲ್ಲಿ ಯುವಕ ಸಾವು

murder graphical image

ಶಿವಮೊಗ್ಗ ಲೈವ್.ಕಾಂ | SHIMOGA | 20 ಜನವರಿ 2020 ಯುವತಿಯೊಬ್ಬಳ ವಿಚಾರವಾಗಿ ಭಗ್ನಪ್ರೇಮಿಗಳ ನಡುವಿನ ವೈಷಮ್ಯ, ಯುವಕನೊಬ್ಬನ ಕೊಲೆಯಲ್ಲಿ ಅಂತ್ಯಗೊಂಡಿದೆ. ಶಿವಮೊಗ್ಗದ ನ್ಯೂ ಮಂಡ್ಲಿ ಸರ್ಕಲ್’ನಲ್ಲಿ ಘಟನೆ ನಡೆದಿದೆ. ಮೊಹಮ್ಮದ್ ಅಲಿ (23) ಕೊಲೆಯಾದ ಯುವಕ. ತೋಹಿದ್ ಹತ್ಯೆ ಮಾಡಿದಾತ. ಯುವತಿಯೊಬ್ಬಳ ವಿಚಾರವಾಗಿ ಇಬ್ಬರ ನಡುವೆ ವೈಷಮ್ಯ ಬೆಳೆದಿತ್ತು. ಭಾನುವಾರ ಸಂಜೆ ಹೊಟೇಲ್ ಒಂದರ ಸಮೀಪ ಸ್ನೇಹಿತರ ಜೊತಗೆ ನಿಂತಿದ್ದ ಮೊಹಮ್ಮದ್ ಅಲಿಗೆ, ಬೈಕ್’ನಲ್ಲಿ ಬಂದ ತೋಹಿದ್, ಚಾಕು ಇರಿದಿದ್ದಾನೆ. ತೀವ್ರ ರಕ್ತಸ್ರಾವದಿಂದ ಒದ್ದಾಡುತ್ತಿದ್ದ ಮೊಹಮದ್ … Read more

ಆಯನೂರು ಬಳಿ ಅಪಘಾತ, ಟಿಪ್ಪರ್, ಗೂಡ್ಸ್ ಆಟೋ ಡಿಕ್ಕಿ, ಒಬ್ಬ ಸಾವು, ಗೂಡ್ಸ್ ಆಟೋ ನುಜ್ಜುಗುಜ್ಜು

ಶಿವಮೊಗ್ಗ ಲೈವ್.ಕಾಂ | SHIMOGA | 18 ಜನವರಿ 2020 ಟಿಪ್ಪರ್ ಲಾರಿ ಮತ್ತು ಟಾಟಾ ಏಸ್ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಘಟನೆಯಲ್ಲಿ ಒಬ್ಬರು ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಲಗೇಜ್ ಆಟೋ ಚಾಲಕ ಆಯನೂರು ಕೋಟೆಯ ಭಾಷಾ ಸಾಬ್ (55) ಮೃತರು. ಘಟನೆಯಲ್ಲಿ ಇನ್ನಿಬ್ಬರು ಗಾಯಗೊಂಡಿದ್ದು, ಅವರಕ್ಕು ಕೂಡಲೇ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಯಿತು. ಆಯನೂರಿನ ವೀರಗಾರನ ಭೈರನಕಪ್ಪದ ಬಳಿ ಘಟನೆ ನಡೆದಿದೆ. ಟಿಪ್ಪರ್ ಚಾಲಕನ ಅಜಾಗರುಕತೆಯೆ ಅಪಘಾತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಘಟನೆ ಬಳಿಕ ಟಿಪ್ಪರ್ … Read more