‘ಸಂಸದ ತೇಜಸ್ವಿ ಸೂರ್ಯ, ಚಕ್ರವರ್ತಿ ಸೂಲಿಬೆಲೆ ಹತ್ಯೆಗೆ ಸಂಚು ರೂಪಿಸಿದ ಸಂಘಟನೆಗಳು ಶಾಶ್ವತವಾಗಿ ಬ್ಯಾನ್ ಮಾಡಬೇಕು’

ಶಿವಮೊಗ್ಗ ಲೈವ್.ಕಾಂ | SHIKARIPURA | 18 ಜನವರಿ 2020 ಸಂಸದ ತೇಜಸ್ವಿ ಸೂರ್ಯ, ಚಿಂತಕ ಚಕ್ರವರ್ತಿ ಸೂಲಿಬೆಲೆ ಹತ್ಯೆಗೆ SDPI ಸಂಘಟನೆ ಸಂಚು ರೂಪಿಸಿದೆ ಎಂಬುದು ಸಾಬೀತಾಗಿದೆ. ಇಂತಹ ದೇಶದ್ರೋಹಿ ಸಂಘಟನೆಯನ್ನು ಶಾಶ್ವತವಾಗಿ ಬ್ಯಾನ್ ಮಾಡಬೇಕು. ಮುಂದೆ ಈ ಸಂಘಟನೆ ತಲೆ ಎತ್ತದಂತೆ ನೋಡಿಕೊಳ್ಳಬೇಕು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ. ಶಿಕಾರಿಪುರ ತಾಲೂಕು ಚಿಕ್ಕಮಾಗಡಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸುರೇಶ್ ಕುಮಾರ್ ಅವರು, SDPI ಮತ್ತು ಪಿಎಫ್ಐ ಸಂಘಟನೆಗಳ ಕುರಿತು ಹಿಂದಿನಿಂದಲು ಹೇಳುತ್ತಿದ್ದೇವೆ. … Read more

ಶಿವಮೊಗ್ಗಕ್ಕೆ ರಾಜ್ಯ ಮುಖ್ಯ ಚುನಾವಣಾಧಿಕಾರಿ ಭೇಟಿ, ಕಾಲೇಜಿನಿಂದ ಹೊರಗಿರುವ ಯುವ ಮತದಾರರ ನೋಂದಣಿಗೆ ಸೂಚನೆ

ಶಿವಮೊಗ್ಗ ಲೈವ್.ಕಾಂ | SHIMOGA | 18 ಜನವರಿ 2020 ಶಾಲಾ ಕಾಲೇಜುಗಳನ್ನು ಹೊರತುಪಡಿಸಿ ಹೊರಗಿರುವ ಯುವ ಮತದಾರರ ನೋಂದಣಿಗೆ ವಿಶೇಷ ಗಮನ ಹರಿಸುವ ಅಗತ್ಯವಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ ಕುಮಾರ್ ಅವರು ತಿಳಿಸಿದರು. ಜಿಲ್ಲಾಧಿಕಾರಿ ಕಚೇರಿಯಲ್ಲಿ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಕುರಿತು ಪ್ರಗತಿ ಪರಿಶೀಲನೆ ನಡೆಸಿದ ಸಂಜೀವ್ ಕುಮಾರ್, ಜಿಲ್ಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಸಂದರ್ಭ, ಶಾಲಾ ಕಾಲೇಜುಗಳಿಗೆ ಹೆಚ್ಚಿನ ಆದ್ಯತೆ ನೀಡಿ ಅರ್ಹ ವಿದ್ಯಾರ್ಥಿಗಳನ್ನು ಮತದಾರರ ಪಟ್ಟಿಗೆ ಸೇರಿಸುವ ಕಾರ್ಯ … Read more

ಕೊಲ್ಲೂರ, ಕೊಡಚಾದ್ರಿ ಮಧ್ಯೆ ಇನ್ಮುಂದೆ ಬರಲಿದೆ ಕೇಬಲ್ ಕಾರ್, ಏನಿದು ಯೋಜನೆ? ಎಷ್ಟಾಗುತ್ತೆ ಗೊತ್ತಾ ವೆಚ್ಚ?

Kodachadri Mountain Hosanagara 1

ಶಿವಮೊಗ್ಗ ಲೈವ್.ಕಾಂ | SHIMOGA | 18 ಜನವರಿ 2020 ಕೊಡಚಾದ್ರಿ ಮತ್ತು ಕೊಲ್ಲೂರು ನಡುವೆ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ಸಾರ್ವಜನಿಕ ಸಹಭಾಗಿತ್ವದಲ್ಲಿ ಕೇಬಲ್ ಕಾರ್ ಸಂಪರ್ಕ ವ್ಯವಸ್ಥೆ ಕಲ್ಪಿಸಲು ಉದ್ದೇಶಿಸಲಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಅವರು ಹೇಳಿದರು. ಪ್ರವಾಸಿ ಮಂದಿರದಲ್ಲಿ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿ ಕುರಿತು ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ತಜ್ಞರೊಂದಿಗೆ ಸಮಾಲೋಚನೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಕೊಲ್ಲೂರು ಮತ್ತು ಕೊಡಚಾದ್ರಿ ನಡುವೆ ಸುಮಾರು 32 ಕಿ.ಮೀ. ದೂರದ ಅಂತರವಿದ್ದು, 11ಕಿ.ಮೀ. … Read more

ಹುಲಿ, ಸಿಂಹಧಾಮದಲ್ಲಿ ಸಂಸದ ರಾಘವೇಂದ್ರ ಸಫಾರಿ, ಮೈಸೂರು ಮಾದರಿಯಲ್ಲಿ ಆಗಲಿದೆ ಅಭಿವೃದ್ಧಿ, ಏನೇನು ಪ್ಲಾನ್ ಇದೆ ಗೊತ್ತಾ?

180120 Shimoga MP Safari Tyavarekoppa 1

ಶಿವಮೊಗ್ಗ ಲೈವ್.ಕಾಂ | SHIMOGA | 18 ಜನವರಿ 2020 ಶಿವಮೊಗ್ಗದ ತ್ಯಾವರೆಕೊಪ್ಪದಲ್ಲಿರುವ ಹುಲಿ ಮತ್ತು ಸಿಂಹಧಾಮಕ್ಕೆ ಸಂಸದ ಬಿ.ವೈ.ರಾಘವೇಂದ್ರ ಭೇಟಿ ನೀಡಿದ್ದರು. ಅಲ್ಲದೆ ಹಿರಿಯ ಅಧಿಕಾರಿಗಳ ಜೊತೆಗೆ ಸಫಾರಿಗೆ ತೆರಳಿ, ಪ್ರಾಣಿಗಳು, ವಿವಿಧ ಅಭಿವೃದ್ಧಿ ಕಾಮಗಾರಿಗಳ ಕುರಿತು ಮಾಹಿತಿ ಪಡೆದರು. ವಿಸ್ತರಣೆಯ ಹೊಸ ಪ್ಲಾನ್ ಹುಲಿ, ಸಿಂಹಧಾಮಕ್ಕೆ ಪ್ರವಾಸಿಗರ ಸಂಖ್ಯೆ ಹೆಚ್ಚಳ ಮಾಡುವ ಸಲುವಾಗಿ ಹೊಸ ಪ್ಲಾನ್’ಗಳನ್ನು ಸಿದ್ಧಪಡಿಸಲಾಗಿದೆ. ಇದರ ಕುರಿತು ಅಧಿಕಾರಿಗಳ ಜೊತೆಗೆ ಸಂಸದ ರಾಘವೇಂದ್ರ ಚರ್ಚಿಸಿದರು. ಬಳಿಕ ಸುದ್ದಿಗೋಷ್ಠಿ ನಡೆಸದ ಸಂಸದ ಬಿ.ವೈ.ರಾಘವೇಂದ್ರ, … Read more

ರಾಜ್ಯದಲ್ಲೇ ಮೊದಲ ಸರ್ಕಾರಿ ನೌಕರರ ಕ್ಯಾಂಟೀನ್ ಶಿವಮೊಗ್ಗದಲ್ಲಿ ಆರಂಭ, ಎಲ್ಲಿದೆ ಕ್ಯಾಂಟೀನ್? ಇಲ್ಲಿ ಏನೇನು ಸೌಲಭ್ಯವಿದೆ ಗೊತ್ತಾ?

ಶಿವಮೊಗ್ಗ ಲೈವ್.ಕಾಂ | SHIMOGA | 18 ಜನವರಿ 2020 ಸರಕಾರಿ ನೌಕರರಿಗಾಗಿ ರಾಜೇಂದ್ರ ನಗರದ ಕಂದಾಯ ನೌಕರರ ಭವನದಲ್ಲಿ ಆರಂಭಿಸಲಾಗಿರುವ ಕ್ಯಾಂಟೀನ್ ಅನ್ನು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಕ್ಷರಿ, ಸರಕಾರಿ ನೌಕರರು ಹಾಗೂ ಅಧಿಕಾರಿಗಳಿಗೆ ರಿಯಾಯಿತಿ ದರದಲ್ಲಿ ದಿನ ಬಳಕೆ ಹಾಗೂ ಗೃಹೋಪಯೋಗಿ ವಸ್ತುಗಳನ್ನು ದೊರಕಿಸಿಕೊಡುವ ಪರಿಕಲ್ಪನೆ ಇಟ್ಟುಕೊಂಡು ಈ ಕ್ಯಾಂಟೀನ್ ಆರಂಭಿಸಲಾಗಿದೆ. ಈ ಕ್ಯಾಂಟೀನ್‌ ಮೂಲಕ ಆಹಾರ ಧಾನ್ಯ, ದೈನಂದಿನ ಮನೆ ಬಳಕೆ … Read more

ವೇದಿಕೆಯಲ್ಲೇ ಇಂಜೆಕ್ಷನ್ ಚುಚ್ಚಿಸಿಕೊಂಡರು ಸಾಗರ ಎಂಎಲ್ಎ, ಗ್ರಾಮ ಪಂಚಾಯಿತಿ ಅಧ್ಯಕ್ಷ, ಕಾರಣವೇನು ಗೊತ್ತಾ?

ಶಿವಮೊಗ್ಗ ಲೈವ್.ಕಾಂ | SAGARA | 18 ಜನವರಿ 2020 ಕೆಎಫ್‌ಡಿ ನಿರೋಧಕ ಲಸಿಕೆ ಹಾಕಿಸಿಕೊಳ್ಳಲು ಜನ ಹಿಂದೇಟು ಹಾಕುತ್ತಿದ್ದು, ಅವರಲ್ಲಿ ಜಾಗೃತಿ ಮೂಡಿಸಲು ಸಾಗರ ಕ್ಷೇತ್ರದ ಶಾಸಕ ಹರತಾಳು ಹಾಲಪ್ಪ ಮತ್ತು ತುಮರಿ ಗ್ರಾಪಂ ಅಧ್ಯಕ್ಷ ಜಿ.ಟಿ. ಸತ್ಯನಾರಾಯಣ ಅವರು ಚುಚ್ಚುಮದ್ದು ಕಾರ್ಯಕ್ರಮದ ವೇದಿಕೆಯಲ್ಲೇ ಲಸಿಕೆ ಹಾಕಿಸಿಕೊಂಡರು. ಸಾಗರ ತಾಲೂಕಿನಲ್ಲಿ ಈ ವರ್ಷ ಮತ್ತೆ ಮಂಗನ ಕಾಯಿಲೆ ಕಾಣಿಸಿಕೊಂಡಿದ್ದು, ಮಹಿಳೆಯೊಬ್ಬರು ಈಗಾಗಲೇ ಮೃತಪಟ್ಟಿದ್ದಾರೆ. ಆದರೆ ರೋಗ ನಿರೋಧಕ ಲಸಿಕೆ ಪಡೆಯಲು ಜನರು ಹಿಂದೇಟು ಹಾಕುತ್ತಿದ್ದಾರೆ. ಆರೋಗ್ಯ … Read more

ಶಿವಮೊಗ್ಗದಲ್ಲಿನ ಭೀಕರ ಅಪಘಾತದ ಸಿಸಿಟಿವಿ ವಿಡಿಯೋ ವೈರಲ್, ಡೇಂಜರ್ ಸ್ಪಾಟ್ ಆಗುತ್ತಿದೆ ಈ ಸರ್ಕಲ್, ವಾಹನ ಚಾಲಕರೇ ಎಚ್ಚರ

170120 Accident In Mahaveera Circle 1

ಶಿವಮೊಗ್ಗ ಲೈವ್.ಕಾಂ | SHIMOGA | 18 ಜನವರಿ 2020 ಶಿವಮೊಗ್ಗದ ಮಹಾವೀರ ಸರ್ಕಲ್’ನಲ್ಲಿ ಇವತ್ತು ಶುಕ್ರವಾರ ಬೆಳಗ್ಗೆ ಸಂಭವಿಸಿದ ಭೀಕರ ಅಪಘಾತದ ಸಿಸಿಟಿವಿ ವಿಡಿಯೊ ಲಭ್ಯವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ. ಅಪಘಾತದ ರಭಸಕ್ಕೆ ದ್ವಿಚಕ್ರ ವಾಹನ ಸವಾರರು ಗಾಳಿಯಲ್ಲಿ ಹಾರಿ ರಸ್ತೆಗೆ ಬೀಳುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ATNC ಕಾಲೇಜು ಕಡೆಯಿಂದ ವೇಗವಾಗಿ ಬಂದ ಕಾರು ಮತ್ತು ರೈಲ್ವೆ ನಿಲ್ದಾಣದ ಕಡೆಯಿಂದ ಬರುತ್ತಿದ್ದ ಬೈಕ್ ನಡುವೆ ಅಪಘಾತ ಸಂಭವಿಸಿದೆ. ಕಾರು ಮತ್ತು ಬೈಕು ಒಟ್ಟಿಗೆ … Read more

ಶಿವಮೊಗ್ಗದಲ್ಲಿ ಬೆಳ್ಳಂಬೆಳಗ್ಗೆ ಭೀಕರ ಅಪಘಾತ, ಬೈಕು, ಕಾರು ಢಿಕ್ಕಿ, ಒಬ್ಬ ಸಾವು, ಪೊಲೀಸ್ ಚೌಕಿಯು ಜಖಂ

ಶಿವಮೊಗ್ಗ ಲೈವ್.ಕಾಂ | SHIMOGA | 17 ಜನವರಿ 2020 ಶಿವಮೊಗ್ಗದ ಮಹಾವೀರ ಸರ್ಕಲ್’ನಲ್ಲಿ ಭೀಕರ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಬೈಕ್ ಸವಾರನೊಬ್ಬ ಸಾವನ್ನಪ್ಪಿದ್ದು, ಇಬ್ಬರಿಗೆ ಗಂಭೀರ ಗಾಯವಾಗಿದೆ. ಬೈಕ್ ಮತ್ತು ಕಾರಿನ ಮಧ್ಯೆ ಡಿಕ್ಕಿಯಾಗಿದೆ. ಬೈಕ್ ಸವಾರ ನಾಗರಾಜ್ (24) ಗಂಭೀರವಾಗಿ ಗಾಯಗೊಂಡಿದ್ದು, ಮೃತರಾಗಿದ್ದಾರೆ. ಹರೀಶ್, ರವಿ ಎಂಬುವವರಿಗೆ ಗಂಭೀರ ಗಾಯವಾಗಿದ್ದು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕಾರು ಪಲ್ಟಿ, ಬೈಕು ನುಜ್ಜುಗುಜ್ಜು ರೈಲ್ವೆ ನಿಲ್ದಾಣದ ಕಡೆಯಿಂದ ಬರುತ್ತಿದ್ದ ಬೈಕ್ ಮತ್ತು ಕಾರಿನ ನಡುವೆ … Read more

ಭದ್ರಾವತಿಯಲ್ಲಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಹತ್ಯೆ ಯತ್ನದ ಆರೋಪ, ಜಿಲ್ಲಾ ಪಂಚಾಯಿತಿ ಸದಸ್ಯ ಆಸ್ಪತ್ರೆಗೆ ದಾಖಲು

160120 ZP Member Assault in Bhadravathi 1

ಶಿವಮೊಗ್ಗ ಲೈವ್.ಕಾಂ | SHIMOGA | 15 ಜನವರಿ 2020 ಜಿಲ್ಲಾ ಪಂಚಾಯಿತಿ ಸದಸ್ಯರೊಬ್ಬರ ಮೇಲೆ ಭದ್ರಾವತಿಯಲ್ಲಿ ಹಲ್ಲೆ ನಡೆದಿದೆ. ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮಾಜಿ ಶಾಸಕ ಅಪ್ಪಾಜಿಗೌಡ ಸೇರಿದಂತೆ ಹಲವು ಪ್ರಮುಖರು ಆಸ್ಪತ್ರೆಗೆ ಭೇಟಿ ನೀಡಿದ್ದರು. ಹಲ್ಲೆಗೇನು ಕಾರಣ? ಕೂಡ್ಲಿಗೆರೆ ಜಿಲ್ಲಾ ಪಂಚಾಯಿತಿ ಸದಸ್ಯ ಮಣಿಶೇಖರ್ ಹಲ್ಲೆಗೊಳಗಾಗಿದ್ದಾರೆ. ಭದ್ರಾವತಿ ತಾಲೂಕು ಅರಳಿಹಳ್ಳಿ ಕೆರೆಯ ಹೂಳು ತೆಗಿಸುವ ಕಾರ್ಯ ನಡೆಯುತ್ತಿತ್ತು. ಜಿಲ್ಲಾ ಪಂಚಾಯಿತಿ ವತಿಯಿಂದ ನಡೆಯುತ್ತಿದ್ದ ಕಾಮಗಾರಿಯ ಪರಿಶೀಲನೆಗೆ ಮಣಿಶೇಖರ್ ಅವರು ತೆರಳಿದ್ದರು. ಈ ವೇಳೆ … Read more

ಶಿವಮೊಗ್ಗ ಸಿಟಿ ಬಸ್, ಬೈಕ್ ನಡುವೆ ಡಿಕ್ಕಿ, ಸವಾರ ಸಾವು, ರೊಚ್ಚಿಗೆದ್ದ ಜನರಿಂದ ಬಸ್ ಮೇಲೆ ಕಲ್ಲು, ಗ್ಲಾಸ್ ಪೀಸ್ ಪೀಸ್

ಶಿವಮೊಗ್ಗ ಲೈವ್.ಕಾಂ | SHIMOGA | 15 ಜನವರಿ 2020 ಶಿವಮೊಗ್ಗದ ಮಿಳಘಟ್ಟ ರಸ್ತೆಯಲ್ಲಿ ಬೈಕ್ ಮತ್ತು ಸಿಟಿ ಬಸ್ ನಡುವೆ ಅಪಘಾತ ಸಂಭವಿಸಿದೆ. ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತನನ್ನು ಸಾದಿಕ್ (31) ಎಂದು ಗುರುತಿಸಲಾಗಿದೆ. ಅಪಘಾತದ ಸ್ಥಳದಲ್ಲೇ ಸಾದಿಕ್ ಕೊನೆಯುಸಿರೆಳೆದಿದ್ದಾರೆ. ಅಪಘಾತವಾಗುತ್ತಿದ್ದಂತೆ ಸಾರ್ವಜನಿಕರು ಗುಂಪುಗೂಡಿದ್ದಾರೆ. ಅಲ್ಲದೆ ಸಿಟಿ ಬಸ್’ಗೆ ಕಲ್ಲು ತೂರಿದ್ದಾರೆ. ಗಾಜು ಪುಡಿ ಪುಡಿಯಾಗಿದೆ. ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿದರು. ಘಟನೆಯಿಂದಾಗಿ ಮಿಳಘಟ್ಟ ರಸ್ತೆಯಲ್ಲಿ ಕೆಲಕಾಲ ವಾಹನ ಸಂಚಾರ ಸಂಪೂರ್ಣ … Read more