ಕೆರೆಗಿಳಿದು ಸ್ವಚ್ಛತೆ ಆರಂಭಿಸಿದ ಎಂಎಲ್ಎ, ಸಾಗರದ ಪ್ರಸಿದ್ಧ ಕೆರೆ ಇನ್ಮುಂದೆ ಕ್ಲೀನ್ ಕ್ಲೀನ್

ಶಿವಮೊಗ್ಗ ಲೈವ್.ಕಾಂ | SHIMOGA | 11 ಜನವರಿ 2020 ಗಣಪತಿ ಕೆರೆ ಪುನಶ್ಚೇತನದ ಹಿನ್ನೆಲೆ ಇವತ್ತಿನಿಂದ ಸ್ವಚ್ಛತಾ ಕಾರ್ಯ ಆರಂಭಿಸಲಾಗಿದೆ. ಶಾಸಕ ಹರತಾಳು ಹಾಲಪ್ಪ ಅವರೇ ಕೆರೆಗಿಳಿದು ಸ್ವಚ್ಛತೆ ಕಾರ್ಯಕ್ಕೆ ಚಾಲನೆ ನೀಡಿದರು. ಇವತ್ತಿಂದ ಎರಡು ದಿನ ಸ್ವಚ್ಛತಾ ಕಾರ್ಯ ನಡೆಯಲಿದೆ. ರಾಫ್ಟಿಂಗ್ ಬೋಟುಗಳನ್ನು ಬಳಕೆ ಮಾಡಿಕೊಂಡು ಸ್ವಚ್ಛತಾ ಕಾರ್ಯ ನಡೆಸಲಾಗುತ್ತಿದೆ. ಶಾಸಕ ಹರತಾಳು ಹಾಲಪ್ಪ ಅವರು ರಾಫ್ಟಿಂಗ್ ಬೋಟ್ ಬಳಸಿ, ಕೆರೆ ಸ್ವಚ್ಛತಾ ಕಾರ್ಯ ನಡೆಸಿದರು. ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494 … Read more

ಶಿವಮೊಗ್ಗದಲ್ಲಿ ವೈಭವದ ತೆಪ್ಪೋತ್ಸವ, ಕಣ್ತುಂಬಿಕೊಂಡು ಪುನೀತರಾದ ಭಕ್ತ ಸಮೂಹ, ಮೆರಗು ಹೆಚ್ಚಿಸಿದ ಪಟಾಕಿ

110120 Teppotsava in Shimoga 1

ಶಿವಮೊಗ್ಗ ಲೈವ್.ಕಾಂ | SHIMOGA | 11 ಜನವರಿ 2020 ಕೋರ್ಪಲಯ್ಯ ಛತ್ರದ ಬಳಿ ತುಂಗಾ ನದಿಯಲ್ಲಿ ಶ್ರೀ ಸೀತಾರಾಮಾಂಜನೇಯ ಸ್ವಾಮಿ ತೆಪ್ಪೋತ್ಸವವು ವೈಭವದಿಂದ ನೆರವೇರಿತು. ದೊಡ್ಡ ಸಂಖ್ಯೆಯಲ್ಲಿ ಆಗಿಮಿಸಿದ್ದ ಭಕ್ತರು ತೆಪ್ಪೋತ್ಸವವನ್ನು ಕಂಡು ಪುನೀತರಾದರು. ಸೀತಾ ಕಲ್ಯಾಣ ಮಹೋತ್ಸವದ ಅಂಗವಾಗಿ ತೆಪ್ಪೋತ್ಸವ ಆಯೋಜಿಸಲಾಗಿತ್ತು. ಕೋಟೆ ಶ್ರೀ ಸೀತಾರಾಮಾಂಜನೇಯ ದೇವಸ್ಥಾನದ ಆವರಣದಿಂದ ದೇವರ ಮೆರವಣಿಗೆ ನಡೆಸಲಾಯಿತು. ದೊಡ್ಡ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದರು. ಕೋರ್ಪಲಯ್ಯ ಛತ್ರದವರೆಗೆ ಮೆರವಣಿಗೆ ನಡೆಯಿತು. ಆ ಬಳಿಕ ದೇವರ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ, … Read more

ಈರುಳ್ಳಿ ಹಾರ ಹಾಕಿಕೊಂಡು, ಗೋಪಿ ಸರ್ಕಲ್ ಮಧ್ಯದಲ್ಲಿ ಒಲೆ ಹಚ್ಚಿ ಹಾಲು ಕಾಯಿಸಿ ಪ್ರತಿಭಟನೆ

ಶಿವಮೊಗ್ಗ ಲೈವ್.ಕಾಂ | SHIMOGA | 10 ಜನವರಿ 2020 ಅಡುಗೆ ಅನಿಲ, ಈರುಳ್ಳಿ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ, ಶಿವಮೊಗ್ಗದಲ್ಲಿ ಇವತ್ತು ಪ್ರತಿಭಟನೆ ನಡೆಸಲಾಯಿತು. ಮಹಿಳಾ ಕಾಂಗ್ರೆಸ್ ನೇತೃತ್ವದಲ್ಲಿ ಗೋಪಿ ಸರ್ಕಲ್’ನಲ್ಲಿ ಮಹಿಳೆಯರು ಪ್ರತಿಭಟನೆ ನಡೆಸಿದರು. ಸರ್ಕಲ್’ನಲ್ಲೇ ಒಲೆ ಹೆಚ್ಚಿದರು ಈರುಳ್ಳಿ ಹಾರ ಹಾಕಿಕೊಂಡು, ಗೋಪಿ ಸರ್ಕಲ್’ನಲ್ಲೇ ಒಲೆ ಹಚ್ಚಿದ ಪ್ರತಿಭಟನಾಕಾರರು, ಹಾಲು ಕಾಯಿಸಿದರು. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಮಹಿಳಾ ಕಾಂಗ್ರೆಸ್ … Read more

ಶಿವಮೊಗ್ಗ ಗಾಡಿಕೊಪ್ಪದ ಬಳಿ ಚಾನೆಲ್’ನಲ್ಲಿ ಮನೆಗಳ್ಳನ ಮೃತದೇಹ, ಅನುಮಾನಾಸ್ಪದ ಸಾವು

vinobanagara polic station and police jeep

ಶಿವಮೊಗ್ಗ ಲೈವ್.ಕಾಂ | SHIMOGA | 9 ಜನವರಿ 2020 ತುಂಗಾ ನಾಲೆಯಲ್ಲಿ ವ್ಯಕ್ತಿಯೊಬ್ಬನ ಮೃತದೇಹ ಪತ್ತೆಯಾಗಿದೆ. ಮೃತ ವ್ಯಕ್ತಿಯನ್ನು ಠಕ್ಕರ್ ಫಯಾಜ್ ಎಂದು ಗುರುತಿಸಲಾಗಿದೆ. ಗಾಡಿಕೊಪ್ಪದ ಬಳಿ ಇರುವ ತುಂಗಾ ನಾಲೆಯಲ್ಲಿ ಮೃತದೇಹ ಪತ್ತೆಯಾಗಿದೆ. ವಿನೋಬನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಠಕ್ಕರ್ ಫಯಾಜ್ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈತ ಹಲವು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಶಿವಮೊಗ್ಗದ ವಿವಿಧ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳಿವೆ. ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ … Read more

ಶಿವಮೊಗ್ಗದಲ್ಲಿ FM ರೇಡಿಯೋ, 10 ಕೆವಿ ಟ್ರಾನ್ಸ್’ಮೀಟರ್ ಸ್ಥಾಪನೆಗೆ ಮನವಿ, ಕೇಂದ್ರ ಸಚಿವರನ್ನು ಭೇಟಿಯಾದ ಸಂಸದ ರಾಘವೇಂದ್ರ

ಶಿವಮೊಗ್ಗ ಲೈವ್.ಕಾಂ | SHIMOGA | 9 ಜನವರಿ 2020 ಶಿವಮೊಗ್ಗದಲ್ಲಿ ಎಪ್.ಎಂ ರೇಡಿಯೋ ಕೇಂದ್ರ ಸ್ಥಾಪಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಸಂಸದ ಬಿ.ವೈ.ರಾಘವೇಂದ್ರ ಅವರು ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವ್ಡೇಕರ್ ಅವರನ್ನು ಭೇಟಿಯಾಗಿ ಈ ಸಂಬಂಧ ಚರ್ಚೆ ನಡೆಸಿದರು. ಕಲೆ, ಸಂಸ್ಕೃತಿ, ಸಾಹಿತ್ಯಕ್ಕೆ ಶಿವಮೊಗ್ಗ ಹೆಸರಾಗಿದೆ. ಹಾಗೆಯೆ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸಬೇಕಿದೆ. ಇದಕ್ಕೆ ಎಫ್.ಎಂ ಸೂಕ್ತವಾಗಿದ್ದು ಜಿಲ್ಲೆಯಲ್ಲಿ ಅವಕಾಶ ನೀಡಬೇಕು ಎಂದು ಮನವಿ ಮಾಡಿದರು. ಸಹ್ಯಾದ್ರಿ ಕಾಲೇಜು … Read more

ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿ ಚುರುಕು, ಬೆಂಗಳೂರಿನಿಂದ ಬಂತು ಅಧಿಕಾರಿಗಳ ಟೀಂ

080120 Shimoga Airport MP Visit Location 1

ಶಿವಮೊಗ್ಗ ಲೈವ್.ಕಾಂ | SHIMOGA | 8 ಜನವರಿ 2020 ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿಗೆ ಈಗ ಚುರುಕು ಮುಟ್ಟಿದೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (BIAL) ಅಧಿಕಾರಿಗಳ ತಂಡ, ಸೋಗಾನೆಗೆ ಭೇಟಿ ನೀಡಿತ್ತು. ವಿಮಾನ ನಿಲ್ದಾಣದ ಕಾಮಗಾರಿ ಆರಂಭದ ಕುರಿತು ಪರಿಶೀಲನೆ ನಡೆಸಿದರು. ಸಂಸದ ಬಿ.ವೈ.ರಾಘವೇಂದ್ರ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಮತ್ತು ಅಧಿಕಾರಿಗಳ ತಂಡ ವಿಮಾನ ನಿಲ್ದಾಣದ ಜಾಗವನ್ನು ಪರಿಶೀಲನೆ ನಡೆಸಿತು. ಅಲ್ಲದೆ ರನ್ ವೇ ಕುರಿತ ಗೊಂದಲ ನಿವಾರಣೆಗೆ ಚರ್ಚೆ ನಡೆಸಿತು. ವಿಮಾನ ನಿಲ್ದಾಣಕ್ಕೆ … Read more

ಶಿವಮೊಗ್ಗಕ್ಕೆ ಅವನೇ ಶ್ರೀಮನ್ನಾರಾಯಣ ಸಿನಿಮಾ ಟೀಂ, ರಕ್ಷಿತ್ ಶೆಟ್ಟಿ ಜೊತೆ ಸೆಲ್ಫಿಗೆ ಮುಗಿಬಿದ್ದ ಫ್ಯಾನ್ಸ್

070120 Rakshit Shetty Visit Theaters Shimoga 1

ಶಿವಮೊಗ್ಗ ಲೈವ್.ಕಾಂ | SHIMOGA | 7 ಜನವರಿ 2020 ಶಿವಮೊಗ್ಗದಲ್ಲಿ ಇವತ್ತು ಅವನೇ ಶ್ರೀಮನ್ನಾರಾಯಣನ ಹವಾ. ರಕ್ಷಿತ್ ಶೆಟ್ಟಿ ಜೊತೆ ಸೆಲ್ಫಿಗೆ ಮುಗಿಬಿದ್ದ ಅಭಿಮಾನಿ ಬಳಗ. ಅವನೇ ಶ್ರೀಮನ್ನಾರಾಯಣ ಸಿನಿಮಾ ತಂಡ ಇವತ್ತು ಶಿವಮೊಗ್ಗದ ಭಾರತ್ ಸಿನಿಮಾಸ್’ಗೆ ಭೇಟಿ ನೀಡಿತ್ತು. ಸಿನಿಮಾ ನೋಡುತ್ತಿದ್ದ ಪ್ರೇಕ್ಷಕರನ್ನು ಭೇಟಿಯಾಗಿ ಸೆಲ್ಫಿ ಕ್ಲಿಕ್ಕಿಸಿಕೊಂಡರು. ಇದೇ ವೇಳೆ ಶಿವಮೊಗ್ಗದಲ್ಲಿ ಅವನೇ ಶ್ರೀಮನ್ನಾರಾಯಣಗೆ ಭರ್ಜರಿ ರೆಸ್ಪಾನ್ಸ್ ನೋಡಿ, ನಟ ರಕ್ಷಿತ್ ಶೆಟ್ಟಿ, ನಟಿ ಶಾನ್ವಿ ಶ್ರೀವಾತ್ಸವ್, ಪ್ರಮೋದ್ ಶೆಟ್ಟಿ, ಬಾಲಾಜಿ ಮನೋಹರ್, ನಿರ್ದೇಶಕ … Read more

ಇವತ್ತು ಮಧ್ಯರಾತ್ರಿಯಿಂದ ಭದ್ರಾ ನಾಲೆಗಳಿಗೆ ನೀರು, ಎಷ್ಟು ನೀರು ಹರಿಸಲಾಗುತ್ತೆ? ಕೊನೆ ದಿನ ಯಾವತ್ತು?

Bhadra-Dam-No-Water

ಶಿವಮೊಗ್ಗ ಲೈವ್.ಕಾಂ | SHIMOGA | 07 ಜನವರಿ 2020 ಭದ್ರಾ ನಾಲೆಗಳಲ್ಲಿ ನೀರು ಹರಿಸಲು ತೀವ ಒತ್ತಡ ಕೇಳಿಬಂದ ಹಿನ್ನೆಲೆಯಲ್ಲಿ ಬಿಆರ್‌ಪಿಯ ಭದ್ರಾ ಜಲಾಶಯದಿಂದ ಬೇಸಿಗೆ ಹಂಗಾಮಿಗೆ ಸತತ 120 ದಿನಗಳ ಕಾಲ ನೀರು ಹರಿಸಲು ನೀರಾವರಿ ನಿಗಮ ತೀರ್ಮಾನಿಸಿದೆ. ಈ ಹಿನ್ನೆಲೆಯಲ್ಲಿ ಎಡದಂಡೆ ನಾಲೆಯಲ್ಲಿ ಜ.7ರ ಮಧ್ಯರಾತ್ರಿ ಹಾಗೂ ಬಲದಂಡೆ ನಾಲೆಯಲ್ಲಿ ಜ.8ರ ಮಧ್ಯರಾತ್ರಿಯಿಂದ ನೀರು ಹರಿಸಲಾಗುತ್ತದೆ. ಮೇ 6ರ ಮಧ್ಯರಾತ್ರಿ ನೀರನ್ನು ನಿಲ್ಲಿಸಲಾಗುವುದು. ಭದ್ರಾ ಬಲದಂಡೆ ನಾಲೆಯ 90,622 ಹೆಕ್ಟೇರ್ ಹಾಗೂ ಎಡದಂಡೆ … Read more

GOOD NEWS | ಮಂಗನ ಕಾಯಿಲೆ ಜಾಗೃತಿಗೆ ಸ್ಟಾರ್ ನಟ, ನಟಿಯರು, ಯಾವೆಲ್ಲ ಸೆಲಬ್ರಿಟಿಗಳು ಬರ್ತಾರೆ? ಜಾಗೃತಿ ಹೇಗಿರುತ್ತೆ?

ಶಿವಮೊಗ್ಗ ಲೈವ್.ಕಾಂ | SHIMOGA | 7 ಜನವರಿ 2020 ಮಲೆನಾಡಲ್ಲಿ ಮತ್ತೆ ಮಂಗನ ಕಾಯಿಲೆ ಆತಂಕ ಶುರುವಾಗಿದೆ. ಈ ನಡುವೆ ಆರೋಗ್ಯ ಇಲಾಖೆ ವತಿಯಿಂದ ಲಸಿಕಾ ಕಾರ್ಯಕ್ರಮ ನಡೆಯುತ್ತಿದೆ. ಆದರೆ ಮಂಗನ ಕಾಯಿಲೆ ಕುರಿತು ಮತ್ತಷ್ಟು ವ್ಯಾಪಕವಾಗಿ ಜಾಗೃತಿ ಮೂಡಿಸಲು ಸೆಲಬ್ರಿಟಿಗಳ ಮೊರೆ ಹೋಗಲಾಗುತ್ತಿದೆ. ದೇಶಾದ್ಯಂತ ಪಲ್ಸ್ ಪೋಲಿಯೊ ಲಿಸಿಕಾ ಕಾರ್ಯಕ್ರಮದ ಜಾಗೃತಿಗೆ ಸಿನಿಮಾ ಸ್ಟಾರ್’ಗಳು, ಕ್ರಿಕೆಟಿಗರು ಸೇರಿದಂತೆ ಸೆಲಬ್ರಿಟಿಗಳನ್ನು ಬಳಕೆ ಮಾಡಿಕೊಳ್ಳಲು ಯೋಜಿಸಲಾಗುತ್ತಿದೆ. ಅದೇ ಮಾದರಿಯಲ್ಲಿ ಮಂಗನ ಕಾಯಿಲೆಗೂ ಜಾಗೃತಿ ಮೂಡಿಸಲು ಆರೋಗ್ಯ ಇಲಾಖೆ … Read more

ಟಾರ್ಗೆಟ್ ಮಾಡಿಕೊಂಡು ದಾಳಿ ನಡೆಸಿದ ಎಬಿವಿಪಿ ಕಾರ್ಯಕರ್ತರು, ಕೂಡಲೇ ಬಂಧನಕ್ಕೆ ಒತ್ತಾಯ

ಶಿವಮೊಗ್ಗ ಲೈವ್.ಕಾಂ | SHIMOGA | 6 ಜನವರಿ 2020 ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿ ಸಂಘದ ಮುಖಂಡರು, ವಿದ್ಯಾರ್ಥಿಗಳು, ಪ್ರಾಧ್ಯಾಪಕರ ಮೇಲೆ ಮನಸೋ ಇಚ್ಛೆ ಹಲ್ಲೆ ನಡೆಸಿರುವ ಎಬಿವಿಪಿ ಕಾರ್ಯಕರ್ತರು ಮತ್ತು ಗೂಂಡಾಗಳನ್ನು ಬಂಧಿಸಬೇಕು ಅಂತಾ ಒತ್ತಾಯಿಸಿ ಶಿವಮೊಗ್ಗ ಎನ್.ಎಸ್.ಯು.ಐ. ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ NSUI ಕಾರ್ಯಕರ್ತರು, ಹಾಸ್ಟೆಲ್ ಶುಲ್ಕ ಹೆಚ್ಚಳ, ಪೌರತ್ವ (ತಿದ್ದುಪಡಿ) ಕಾಯ್ದೆ, ರಾಷ್ಟ್ರೀಯ ಪೌರತ್ವ ನೊಂದಣಿ ಮತ್ತು ರಾಷ್ಟ್ರೀಯ ಜನಸಂಖ್ಯಾ ನೊಂದಣಿ ವಿಚಾರಗಳನ್ನು … Read more