ಸೋಗಾನೆ ವಿಮಾನ ನಿಲ್ದಾಣಕ್ಕೆ ಮನೆ, ಜಮೀನು ಕಳೆದುಕೊಂಡವರಿಗೆ ಸೈಟು, ಎಷ್ಟು ಅಳತೆಯದ್ದು? ಯಾವಾಗ ಸಿಗಲಿದೆ?

shivamogga graphics map

ಶಿವಮೊಗ್ಗ ಲೈವ್.ಕಾಂ | SHIMOGA NEWS | 25 ಆಗಸ್ಟ್ 2020 ಸೋಗಾನೆಯಲ್ಲಿ ವಿಮಾನ ನಿಲ್ದಾಣ ಕಾಮಗಾರಿಗೆ ಮನೆ ಮತ್ತು ಜಮೀನು ಕಳೆದುಕೊಂಡ ಪ್ರತಿ ಕುಟುಂಬಕ್ಕೆ ನಿವೇಶನ ನೀಡಲು ಈಗಲೂ ಬದ್ಧವಾಗಿದ್ದು, ಸೂಕ್ತ ಸ್ಥಳದ ಹುಡುಕಾಟ ನಡೆಯುತ್ತಿದೆ ಎಂದು ಶಿವಮೊಗ್ಗ ಗ್ರಾಮಾಂತರ ಶಾಸಕ ಕೆ.ಬಿ.ಅಶೋಕ ನಾಯ್ಕ ತಿಳಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಡಿಸಿ ಮತ್ತು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಅಶೋಕನಾಯ್ಕ, ನಿವೇಶನ ನೀಡುವ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ … Read more

ಶಿವಮೊಗ್ಗ, ಭದ್ರಾವತಿಯಲ್ಲಿ ಪೊಲೀಸ್ ದಾಳಿ, ಓಸಿ ದಂಧೆಕೋರರ ಅರೆಸ್ಟ್

prison hand cuff image

ಶಿವಮೊಗ್ಗ ಲೈವ್.ಕಾಂ | SHIMOGA / BHADRAVATHI NEWS | 14 ಆಗಸ್ಟ್ 2020 ಮಟ್ಕಾ ದಂಧೆಕೋರರ ವಿರುದ್ಧ ಜಿಲ್ಲಾ ಪೊಲೀಸರು ದಾಳಿ ಮುಂದುವರೆಸಿದ್ದಾರೆ. ಶಿವಮೊಗ್ಗದ ದೊಡ್ಡಪೇಟೆ ಮತ್ತು ಭದ್ರಾವತಿಯ ಹಳೆನಗರ ಠಾಣೆಗಳ ವ್ಯಾಪ್ತಿಯಲ್ಲಿ ಗುರುವಾರ ಪ್ರತ್ಯೇಕವಾಗಿ ದಾಳಿಗಳನ್ನು ನಡೆಸಲಾಗಿದೆ. ಕೇಸ್ 1 | ಶಿವಮೊಗ್ಗ ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿ ಶಿವಮೊಗ್ಗದ ಎನ್‍.ಟಿ.ರಸ್ತೆಯಲ್ಲಿ ರಸ್ತೆಯಲ್ಲಿ ಮಟ್ಕಾ ಬರೆಯುತ್ತಿರುವ ಕುರಿತು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಲಾಯಿತು. ಕೆ.ಆರ್.ಪುರಂ ನಿವಾಸಿ ತಬ್ರೆಜ್ ಪಾಷಾ (40) ಎಂಬಾತನನ್ನು ಬಂಧಿಸಲಾಗಿದೆ. … Read more

SDPI ಒಂದು ಜುಜುಬಿ ಸಂಘಟನೆ, ಉತ್ತರ ಪ್ರದೇಶ ಮಾದರಿಯಲ್ಲಿ ಗಲಭೆಕೋರರ ಆಸ್ತಿ ಮಟ್ಟುಗೋಲಿಗೆ ಸಂಪುಟದಲ್ಲಿ ಚರ್ಚೆ

Eshwarappa MLA 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 11 ಆಗಸ್ಟ್ 2020 ಮತಾಂಧರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿದೆ. ಉತ್ತರ ಪ್ರದೇಶ ಮಾದರಿಯಲ್ಲಿ ಗಲಭೆಕೋರರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಕುರಿತು ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಲಾಗುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ‍್ವರಪ್ಪ ತಿಳಿಸಿದ್ದಾರೆ. ಬೆಂಗಳೂರು ಗಲಭೆ ಸಂಬಂಧ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಚಿವ ಈಶ್ವರಪ್ಪ, ಮತಾಂಧ ಮುಸ್ಲಿಮರ ಗೂಂಡಾಗಿರಿ, ದೊಂಬಿಯನ್ನು ಇತರ ಮುಸ್ಲಿಮ್ ಮುಖಂಡರು ಖಂಡಿಸಬೇಕು. ಹಾಗಾಂತ ಎಲ್ಲಾ ಮುಸ್ಲಿಮರು ಗೂಂಡಾಗಳಲ್ಲ. ಈ ಸಮುದಾಯದಲ್ಲೂ ಸೌಮ್ಯ … Read more

ಅಯೋಧ್ಯೆಯಲ್ಲಿ ರಾಮ ಮಂದಿರ ಭೂಮಿ ಪೂಜೆ, ಶಿವಮೊಗ್ಗದಲ್ಲಿ ಹೇಗಿರುತ್ತೆ ಗೊತ್ತಾ ಸಂಭ್ರಮಾಚರಣೆ?

030820 VHP Ramesh Babu about ayodhya 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 3 ಆಗಸ್ಟ್ 2020 ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯಕ್ಕೆ ಆಗಸ್ಟ್ 5ರಂದು ಭೂಮಿ ಪೂಜೆ ನೆರವೇರಿಸುತ್ತಿರುವ ಹಿನ್ನೆಲೆ, ಶಿವಮೊಗ್ಗದ ಎಲ್ಲಾ ತಾಲೂಕಿನಲ್ಲಿ ಸಂಭ್ರಮಾಚರಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕರೋನ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕೈಗೊಂಡು ಸಂಭ್ರಮಾಚರಣೆ ಮಾಡಲು ವಿಶ್ವ ಹಿಂದೂ ಪರಿಷತ್ ನಿರ್ಧರಿಸಿದೆ. ಶಿವಮೊಗ್ಗದಲ್ಲಿ ಹೋಮ, ಸನ್ಮಾನ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ವಿಹೆಚ್‌ಪಿ ಜಿಲ್ಲಾಧ್ಯಕ್ಷ ರಮೇಶ್ ಬಾಬು ಜಾದವ್, ಭೂಮಿ ಪೂಜೆಯ ದಿನ ಬೆಳಗ್ಗೆ ಶಿವಮೊಗ್ಗದ ಕೋಟೆ ಶ್ರೀ … Read more

BREAKING NEWS | ಶಿವಮೊಗ್ಗ ಜಿಲ್ಲೆಯಾದ್ಯಂತ ಇವತ್ತಿಂದಲೇ ಇಲ್ಲ ಲಾಕ್ ಡೌನ್

Shimoga City Nehru Road General Image 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 22 ಜುಲೈ 2020 ಶಿವಮೊಗ್ಗ ಜಿಲ್ಲೆಯಾದ್ಯಂತ ವಿಧಿಸಿದ್ದ ಲಾಕ್‍ ಡೌನ್ ಆದೇಶವನ್ನು ಹಿಂಪಡೆಯಲಾಗಿದೆ. ಇವತ್ತಿಂದ ಶಿವಮೊಗ್ಗ ಜಿಲ್ಲೆಯಲ್ಲಿ ಲಾಕ್‍ ಡೌನ್ ಇರುವುದಿಲ್ಲ. ವ್ಯಾಪಾರ, ವಹಿವಾಟು ಎಂದಿನಂತೆ ನಡೆಯಲಿದೆ. ಆದರೆ ಕೇಂದ್ರ ಸರ್ಕಾರ ವಿಧಿಸಿರುವ ನೈಟ್ ಕರ್ಫ್ಯೂ ಜಾರಿಯಲ್ಲಿ ಇರಲಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ‍್ವರಪ್ಪ, ಕರೋನ ಸೋಂಕು ಹರಡದಂತೆ ತಡೆಯಲು ಮಧ್ಯಾಹ್ನ 2 ಗಂಟೆಯಿಂದ ಮರುದಿನ ಬೆಳಗ್ಗೆ 5 ಗಂಟೆವರೆಗೆ ಶಿವಮೊಗ್ಗ ಜಿಲ್ಲೆಯಾದ್ಯಂತ ಲಾಕ್‍ ಡೌನ್ … Read more

ಚಲಿಸುತ್ತಿದ್ದ ಕಾರಿನಲ್ಲಿ ದಿಢೀರ್ ಬೆಂಕಿ, ಧಗಧಗ ಹೊತ್ತಿ ಉರಿದ ಕಾರು

030720 Car Burn Near Mandagadde 1

ಶಿವಮೊಗ್ಗ ಲೈವ್.ಕಾಂ | MANDAGADDE NEWS | 3 ಜುಲೈ 2020 ಚಲಿಸುತ್ತಿದ್ದ ಕಾರಿನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ. ಕೆಲವೆ ನಿಮಿಷದಲ್ಲಿ ಕಾರಿಗೆ ಸಂಪೂರ್ಣವಾಗಿ ಬೆಂಕಿ ಆವರಿಸಿಕೊಂಡಿದೆ. ಮಂಡಗದ್ದೆ ಬಳಿ 15ನೇ ಮೈಲಿ ಬಳಿ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಶಾರ್ಟ್ ಸರ್ಕಿಟ್‌ನಿಂದಾಗಿ ಬೆಂಕಿ ಹೊತ್ತಿಕೊಂಡಿದೆ. ಕಾರಿನಲ್ಲಿ ಇದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಾಳೂರು ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ‌.

ಕರೋನದಿಂದ ಗುಣಮುಖ, ಇಬ್ಬರು KSRP ಸಿಬ್ಬಂದಿ ಮೆಗ್ಗಾನ್ ಆಸ್ಪತ್ರೆಯಿಂದ ಬಿಡುಗಡೆ

Mc Gann Hospital Building

ಶಿವಮೊಗ್ಗ ಲೈವ್.ಕಾಂ | SHIMOGA NEWS | 9 ಜೂನ್ 2020 ಕರೋನಾಗೆ ಚಿಕಿತ್ಸೆ ಪಡೆದು ಗುಣವಾದ ಹಿನ್ನೆಲೆ ಇಬ್ಬರು ಪೊಲೀಸರನ್ನು ಮೆಗ್ಗಾನ್ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಬೆಂಗಳೂರಿನ ಪಾದರಾಯನಪುರದಲ್ಲಿ ಬಂದೋಬಸ್ತ್ ಡ್ಯೂಟಿಗೆ ತೆರಳಿದ್ದ KSRP ಪೊಲೀಸರಿಗೆ ಸೋಂಕು ತಗುಲಿತ್ತು. 23 ವರ್ಷದ KSRP ಕಾನ್ಸ್‍ಟೇಬಲ್ ಮತ್ತು 49 ವರ್ಷದ ಕಾನ್ಸ್‍ಟೇಬಲ್ ಒಬ್ಬರನ್ನು ಬಿಡುಗಡೆ ಮಾಡಲಾಗಿದೆ. ಇವರನ್ನು ಆಸ್ಪತ್ರೆಯ ಆಂಬುಲೆನ್ಸ್ ಮೂಲಕ ಮನೆಗೆ ಬಿಟ್ಟು ಬರಲಾಗಿದೆ. ಗುಣವಾಗಿದ್ದರೂ ಇವರು ಹೋಂ ಕ್ವಾರಂಟೈನ್‍ನಲ್ಲಿ ಇರಬೇಕಾಗುತ್ತದೆ.   ಶಿವಮೊಗ್ಗ ಲೈವ್.ಕಾಂನಲ್ಲಿ … Read more

ಶಿವಮೊಗ್ಗದಲ್ಲಿ ಇವತ್ತಿನಿಂದ ಗುಡಿ, ಚರ್ಚು, ಮಸೀದಿ ಓಪನ್, ಏನೆಲ್ಲ ಪೂರ್ವ ಸಿದ್ಧತೆ ಮಾಡಿಕೊಳ್ಳಲಾಗಿದೆ?

080620 All Temples Open after Lockdown 1 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 8 ಜೂನ್ 2020 ಲಾಕ್‍ಡೌನ್ 5.0 ಸಡಿಲಿಕೆ ಬೆನ್ನಿಗೆ ಶಿವಮೊಗ್ಗದಲ್ಲಿ ಗುಡಿ, ಚರ್ಚು, ಮಸೀದಿಗಳು ಸೇರಿದಂತೆ ಎಲ್ಲಾ ಪ್ರಾರ್ಥನಾ ಮಂದಿರಗಳು ಇವತ್ತಿನಿಂದ ಬಾಗಿಲು ತೆಗೆಯಲಿವೆ. ಈ ಹಿನ್ನೆಲೆಯಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ಶಿವಮೊಗ್ಗದ ದೇವಾಲಯಗಳಲ್ಲಿ ಸ್ವಚ್ಛತಾ ಕಾರ್ಯ ನಡೆಸಲಾಗಿದೆ. ಕಸ ಗುಡಿಸಿ, ನೀರು ಹಾಕಿ ಸ್ವಚ್ಛತೆ ಮಾಡಿಕೊಳ್ಳಲಾಗಿದೆ. ದೇಗುಲಗಳ ಆವರಣದಲ್ಲಿ ಸ್ಯಾನಿಟೈಸರ್ ಸಿಂಪಡಿಸಲಾಗಿದೆ. ಆವರಣ, ಗರ್ಭಗುಡಿ, ಪ್ರದಕ್ಷಿಣೆ ಹಾಕುವ ಸ್ಥಾಗಳಲ್ಲಿ ಸ್ಯಾನಿಟೈಸರ್ ಸಿಂಪಡಣೆ ಮಾಡಲಾಗಿದೆ. ಚರ್ಚ್‍ನಲ್ಲೂ ಪ್ರಾರ್ಥನೆಗ ಸಿದ್ಧತೆ ಶಿವಮೊಗ್ಗದ … Read more

ಶಿವಮೊಗ್ಗ ಮಹಾನಗರ ಪಾಲಿಕೆ ಉಪ ಮೇಯರ್ ಪತಿ ವಿರುದ್ಧ ದೂರು, ಕಾರಣವೇನು ಗೊತ್ತಾ?

070420 Complaint Against Deputy Mayor husband 1

ಶಿವಮೊಗ್ಗ ಲೈವ್.ಕಾಂ | SHIMOGA | 7 ಏಪ್ರಿಲ್ 2020 ಕನ್ಸರ್’ವೆನ್ಸಿಯಲ್ಲಿ ಹಾಕಲಾಗಿದ್ದ ಸ್ಲ್ಯಾಬ್’ಗಳನ್ನು ಖಾಸಗಿ ಸಂಸ್ಥೆಯೊಂದರ ಬಳಕೆಗೆ ಸಾಗಿಸಲಾಗಿದೆ ಎಂದು ಆರೋಪಿಸಿ ಶಿವಮೊಗ್ಗ ಮಹಾನಗರ ಪಾಲಿಕೆ ಉಪ ಮೇಯರ್ ಅವರ ಪತಿ ವಿರುದ್ಧ ಯುವ ಕಾಂಗ್ರೆಸ್ ಕಾರ್ಯಕರ್ತರು ದೂರು ನೀಡಿದ್ದಾರೆ. ಶಿವಮೊಗ್ಗದ ಟ್ಯಾಂಕ್ ಮೊಹಲ್ಲಾದ 6,7 ಮತ್ತು 8ನೇ ಅಡ್ಡರಸ್ತೆಯಲ್ಲಿರುವ ಕನ್ಸರ್’ವೆನ್ಸಿಗಳಲ್ಲಿ ಹಾಕಲಾಗಿದ್ದ ಸ್ಲ್ಯಾಬ್’ಗಳನ್ನು ಗೂಡ್ಸ್ ವಾಹನದಲ್ಲಿ ಸಾಗಿಸಲಾಗಿದೆ. ಉಪ ಮೇಯರ್ ಸುರೇಖಾ ಮುರಳೀಧರ್ ಅವರ ಪತಿ ನೇತೃತ್ವದಲ್ಲೇ ಈ ಕೆಲಸ ಆಗಿದೆ ಎಂದು ಯುವ … Read more

ಆನಂದಪುರ ಸುತ್ತಮುತ್ತ ಗ್ರಾಮಗಳಲ್ಲಿ ಭಾರಿ ಗಾಳಿ, ಮಳೆ, ಮನೆಗಳ ಮೇಲೆ ಬಿದ್ದ ಮರ, ಯುವತಿಗೆ ಗಾಯ

050420 Tree Fall on Houses 1

ಶಿವಮೊಗ್ಗ ಲೈವ್.ಕಾಂ | SAGARA | 5 ಏಪ್ರಿಲ್ 2020 ಆನಂದಪುರ ಸುತ್ತಮುತ್ತ ಶನಿವಾರ ಭಾರಿ ಗಾಳಿ, ಮಳೆಯಾಗಿದೆ. ಗಾಳಿಯ ರಭಸಕ್ಕೆ ಮರಗಳು ಬುಡಮೇಲಾಗಿದ್ದು, ಮನೆಗಳ ಮೇಲೆ ಉರುಳಿವೆ. ಇದರಿಂದ ಅಪಾರ ನಷ್ಟ ಉಂಟಾಗಿದೆ. ಚನ್ನಶೆಟ್ಟಿಕೊಪ್ಪ ಗ್ರಾಮದ ಮೋಹನ್ ವಜ್ರಪ್ಪ ಎಂಬುವವರ ಮನೆ ಮೇಲೆ ತೆಂಗಿನ ಮರ ಬಿದ್ದು ಮೇಲ್ಛಾವಣಿ ಜಖಂ ಆಗಿದೆ. ಮನೆಯೊಳಗಿದ್ದ ಮೇಘಾ (20) ಎಂಬ ಯುವತಿ ತಲೆ ಮೇಲೆ ಹೆಂಚು ಮತ್ತು ರೀಪು ಬಿದ್ದು ಪೆಟ್ಟಾಗಿದೆ. ಗಾಯಾಳುವನ್ನು ಸಾಗರದ ಉಪವಿಭಾಗೀಯ ಆಸ್ಪತ್ರೆಗೆ ದಾಖಲು … Read more