ಶಿವಮೊಗ್ಗ ಜಿಲ್ಲೆಯಲ್ಲಿ ಇವತ್ತು ಮಳೆಯ ಮುನ್ಸೂಚನೆ, ತಾಪಮಾನ ತುಸು ಇಳಿಕೆ, ಎಲ್ಲೆಲ್ಲಿ ಎಷ್ಟಿರುತ್ತೆ ಉಷ್ಣಾಂಶ?

WEATHER-REPORT-SHIMOGA-

ಹವಾಮಾನ ವರದಿ : ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಬುಧವಾರ ಮಳೆಯಾಗಿದೆ. ಇವತ್ತು ಕೂಡ ಮಳೆಯ ಮುನ್ಸೂಚನೆ ನೀಡಲಾಗಿದೆ. ಈ ಮಧ್ಯೆ ಬಿಸಲು ಮತ್ತು ಶಕೆ ಜೋರಿದೆ. (Weather Report). ಯಾವ್ಯಾವ ತಾಲೂಕಿನಲ್ಲಿ ಎಷ್ಟಿರುತ್ತೆ ತಾಪಮಾನ? ಶಿವಮೊಗ್ಗ, ಭದ್ರಾವತಿ ತಾಲೂಕಿನಲ್ಲಿ ಇವತ್ತು ಗರಿಷ್ಠ 34 ಡಿಗ್ರಿ, ಕನಿಷ್ಠ 23 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಇರಲಿದೆ. ಜೋರು ಮಳೆಯ ಮುನ್ಸೂಚನೆ ನೀಡಲಾಗಿದೆ.  ತೀರ್ಥಹಳ್ಳಿ ತಾಲೂಕಿನಲ್ಲಿ ಇವತ್ತು ಗರಿಷ್ಠ 33 ಡಿಗ್ರಿ ಸೆಲ್ಸಿಯಸ್‌, ಕನಿಷ್ಠ 26 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಇರಲಿದೆ. ಸಾಧಾರಣ … Read more

ಶಿವಮೊಗ್ಗದಲ್ಲಿ ಸ್ನೇಹಿತನಿಂದಲೇ ವ್ಯಕ್ತಿಯ ಕೊಲೆ, ಹೇಗಾಯ್ತು ಘಟನೆ?

Police-Jeep-With-Light-New.

ಶಿವಮೊಗ್ಗ : ಸ್ನೇಹಿತರ ನಡುವಿನ ಭಿನ್ನಾಭಿಪ್ರಾಯದಿಂದ ಆರಂಭವಾದ ಜಗಳ (Altercation) ಕೊಲೆಯಲ್ಲಿ ಅಂತ್ಯವಾಗಿದೆ. ತಾಲೂಕಿನ ತ್ಯಾವರೆಕೊಪ್ಪದಲ್ಲಿ ಬುಧವಾರ ಘಟನೆ ಸಂಭವಿಸಿದೆ. ತ್ಯಾವರೆಕೊಪ್ಪ ಗ್ರಾಮದ ದೇವರಾಜು (31) ಮೃತರು. ಈತನ ಸ್ನೇಹಿತ ವೆಂಕಟೇಶ್‌ (36) ಹತ್ಯೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಇಬ್ಬರ ಮಧ್ಯೆ ಗಲಾಟೆಯಾಗಿದ್ದು (Altercation) ಈ ಸಂದರ್ಭ ವೆಂಕಟೇಶ್‌, ದೇವರಾಜನಿಗೆ ಗುದ್ದಲಿಯಿಂದ ತಲೆಗೆ ಹೊಡೆದಿದ್ದಾನೆ ಎಂದು ಆರೋಪಿಸಲಾಗಿದೆ. ತೀವ್ರ ಗಾಯಗೊಂಡಿದ್ದ ದೇವರಾಜು ಸ್ಥಳದಲ್ಲಿ ಸಾವನ್ನಪ್ಪಿದ್ದಾನೆ. ಘಟನೆ ಸಂಬಂಧ ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ … Read more

ದಿನ ಭವಿಷ್ಯ | ಇವತ್ತು ಯಾವ ರಾಶಿಯವರಿಗೆ ಹೇಗಿದೆ?

DINA-BHAVISHYA

ಮೇಷ :  ಈದಿನ ನೆಮ್ಮದಿ ನಿಮ್ಮದು. ಹಣಕಾಸಿನ ಸ್ಥಿತಿ ಚುರುಕು. ಆರೋಗ್ಯ ಸ್ಥಿರ. ಆದರೆ ಅಧಿಕ ಖರ್ಚು. ನಾಗನ ಪೂಜೆ ಮಾಡಿಸಿ. (BHAVISHYA) ವೃಷಭ : ನಿಮ್ಮ ದಿನ ಅನುಕೂಲಕರವು – ಅನಾನುಕೂಲವೂ ಆಗಿದೆ. ವಿದ್ಯಾರ್ಥಿಗಳಿಗೆ ಅನುಕೂಲ. ಆರೋಗ್ಯ ಚೇತರಿಕೆ. ಉದ್ಯೋಗದಲ್ಲಿ ಉತ್ತಮ. ದೇವಿಗೆ 16 ನಮಸ್ಕಾರ ಮಾಡಿ. ಮಿಥುನ : ಸಿಟ್ಟಿನ ಮಾತು ತೊಂದರೆ ನೀಡಬಹುದು. ಹಿರಿಯರನ್ನ ಗೌರವಿಸಿ. ಉನ್ನತ  ವಿದ್ಯಾಭ್ಯಾಸದ ಯೋಗ. ನಿರಂತರ ಭಾಗ್ಯ ನಡೆಯುತ್ತದೆ. ನಾಗನಿಗೆ ಪಂಚಾಮೃತ ಪೂಜೆ ಮಾಡಿಸಿ. ಕರ್ಕ : … Read more

ಶಿವಮೊಗ್ಗ ಈದ್ಗಾ ಮೈದಾನಕ್ಕೆ ಬೇಲಿ ವಿವಾದ, ಬೀದಿಗಿಳಿದ ಮುಸ್ಲಿಂ ಸಮುದಾಯ, ಇಡೀ ದಿನ ಏನೇನಾಯ್ತು?

Edga-maidana-fencing-row-muslims-protest-in-Shimoga

ಶಿವಮೊಗ್ಗ : ಈದ್ಗಾ ಮೈದಾನಕ್ಕೆ ಬೇಲಿ (fencing) ಹಾಕಿದ್ದ ವಿವಾದ ಹೊಸ ಸ್ವರೂಪ ಪಡೆದುಕೊಂಡಿದೆ. ಇವತ್ತು ಮುಸ್ಲಿಂ ಸಮುದಾಯ ಪ್ರತಿಭಟನೆ ನಡೆಸಿದ್ದು, ಮೈದಾನವು ವಕ್ಫ್‌ ಆಸ್ತಿ ಎಂದು ಜಿಲ್ಲಾಧಿಕಾರಿಗೆ ದಾಖಲೆ ಒದಗಿಸಿದೆ. ಇನ್ನೊಂದೆಡೆ ಈದ್ಗಾ ಮೈದಾನದಲ್ಲಿ ವಾಹನ ನಿಲುಗಡೆಯನ್ನು ತಾತ್ಕಾಲಿಕವಾಗಿ ನಿಷೇಧಿಸಿ ಜಿಲ್ಲಾಧಿಕಾರಿ ಸೂಚಿಸಿದ್ದಾರೆ. ಇವತ್ತು ಇಡೀ ದಿನ ಏನೇನಾಯ್ತು? ಇದನ್ನೂ ಓದಿ » ಭದ್ರಾವತಿಯಲ್ಲಿ ರಾತ್ರೋರಾತ್ರಿ ದಿಢೀರ್‌ ರಸ್ತೆ ತಡೆ, ಶಾರದಾ ಅಪ್ಪಾಜಿ ನೇತೃತ್ವದಲ್ಲಿ ಪ್ರತಿಭಟನೆ, ಕಾರಣವೇನು? ಮುಸ್ಲಿಂ ಸಮುದಾಯದಿಂದ ಪ್ರತಿಭಟನೆ ಇನ್ನು, ಬೇಲಿ (fencing) ವಿವಾದದ … Read more

ಸಾಗರದಲ್ಲಿ ಮಹಾಗಣಪತಿಯ ವೈಭವದ ರಥೋತ್ಸವ, ಎಷ್ಟು ಜನ ಭಾಗವಹಿಸಿದ್ದರು? ಏನೆಲ್ಲ ಕಾರ್ಯಕ್ರಮ ಇರುತ್ತೆ?

mahaganapathi-ratotsava-in-Sagara-city

ಸಾಗರ : ಇತಿಹಾಸ ಪ್ರಸಿದ್ಧ ಶ್ರೀ ಮಹಾಗಣಪತಿ ರಥೋತ್ಸವವು (Ratotsava) ವಿಜೃಂಭಣೆಯಿಂದ ನಡೆಯಿತು. ಸಾವಿರಾರು ಭಕ್ತರು ರಥೋತ್ಸವ ಕಣ್ತುಂಬಿಕೊಂಡು ದೇವರಿಗೆ ಪ್ರಾರ್ಥನೆ ಸಲ್ಲಿಸಿದರು. ಗಣಪತಿಯ ವಿಗ್ರಹವನ್ನು ಅಲಂಕೃತ ರಥದಲ್ಲಿ (Ratotsava) ಕುಳ್ಳಿರಿಸಿ ಪೂಜೆ ಸಲ್ಲಿಸಲಾಯಿತು. ಮಂಗಳವಾರ ಬೆಳಗ್ಗೆ 9.45 ರಿಂದ ಬೆಳಗ್ಗೆ 10.05ರವರೆಗೆ ಭಕ್ತರು ಹರ್ಷೋದ್ಗಾರಗಳ ನಡುವೆ ರಥವನ್ನು ಎಳೆದರು. ಇಷ್ಟಾರ್ಥಗಳ ಈಡೇರಿಕೆಗೆ ಭಕ್ತರು ರಥದತ್ತ ಬಾಳೆಹಣ್ಣು ತೂರಿದರು. ರಾತ್ರಿ ರಥದ ರಾಜಬೀದಿ ಉತ್ಸವ ನಡೆಯಿತು. ಏ.2ರಂದು ಕುಂಕುಮೋತ್ಸವ, ಅವಭೃತ, ಅಂಕುರಾರ್ಪಣೆ, 3ರಂದು ಗಣಪತಿ ಹವನ, 4ರಂದು … Read more

ಮಹಿಳೆ ಸ್ನಾನ ಮಾಡುವಾಗ ಇಣುಕಿದ ಯುವಕ, ಅರೆಸ್ಟ್‌

Bhadravathi-News-Update

ಭದ್ರಾವತಿ : ಮಹಿಳೆಯೊಬ್ಬರು ಸ್ನಾನ ಮಾಡುವಾಗ ಇಣುಕಿ ನೋಡಿದ ಯುವಕನನ್ನು (Youth) ಪೊಲೀಸರು ಬಂಧಿಸಿದ್ದಾರೆ. ಭದ್ರಾವತಿಯ ಹೊಸಮನೆ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭಸಿದೆ. ಮನೋಜ್‌ (25) ಎಂಬಾತನನ್ನು ಬಂಧಿಸಲಾಗಿದೆ. ಮಹಿಳೆಯೊಬ್ಬರು ಸ್ನಾನ ಮಾಡುವಾಗ ಮನೋಜ್‌ ಇಣುಕಿ ನೋಡುತ್ತಿದ್ದ. ಮಹಿಳೆಯ ಪತಿ ಇದನ್ನು ಗಮನಿಸಿದಾಗ ಮನೋಜ್‌ ಅಲ್ಲಿಂದ ಪರಾರಿಯಾಗಿದ್ದ ಎಂದು ಆರೋಪಿಸಲಾಗಿದೆ. ದೂರು ನೀಡಿದ ಹಿನ್ನೆಲೆ ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ » ಸ್ನೇಹಿತರೊಂದಿಗೆ ತೆರಳಿದ್ದ ಬಾಲಕ, ನೀರಿನಲ್ಲಿ ಮುಳುಗಿ ಸಾವು

ಭದ್ರಾವತಿಯ ವಿವಿಧೆಡೆ ಇವತ್ತು ಇಡೀ ದಿನ ಕರೆಂಟ್‌ ಇರಲ್ಲ, ಎಲ್ಲೆಲ್ಲಿ?

power cut mescom ELECTRICITY

ಭದ್ರಾವತಿ : ನಗರ ಮೆಸ್ಕಾಂ ಉಪ ವಿಭಾಗದಲ್ಲಿ ವಿದ್ಯುತ್ ಮಾರ್ಗಗಳ ತುರ್ತು ನಿರ್ವಹಣಾ ಕಾರ್ಯ ಇರಲಿದೆ. ಆದ್ದರಿಂದ ಏ.2 ರಂದು ಬೆಳಗ್ಗೆ 9.30 ರಿಂದ ಸಂಜೆ 5.30 ರವರೆಗೆ ಭದ್ರಾವತಿಯ ವಿವಿಧೆಡೆ ವಿದ್ಯುತ್ ವ್ಯತ್ಯಯವಾಗಲಿದೆ (Power Cut) ಎಂದು ನಗರ ಮೆಸ್ಕಾಂ ಎಇಇ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಜನ್ನಾಪುರ, ಹುತ್ತಾಕಾಲೋನಿ, ಅಪ್ಪರ್ ಹುತ್ತಾ, ಜಿಂಕ್ ಲೈನ್, ವೇಲೂರ್ ಶೆಡ್, ಭಂಡಾರಹಳ್ಳಿ ಇನ್ನು ಮುಂತಾದ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯ ಆಗಲಿದೆ. ಇದನ್ನೂ ಓದಿ » ಶಿವಮೊಗ್ಗ ಜಿಲ್ಲೆಗೆ ಇವತ್ತು ಮಳೆ ಅಲರ್ಟ್‌, … Read more

ಬೆಂಗಳೂರಿನಲ್ಲಿ ಅಹೋರಾತ್ರಿ ಧರಣಿ, ಶಿವಮೊಗ್ಗದಿಂದ ನೂರಾರು ಬಿಜೆಪಿ ಕಾರ್ಯಕರ್ತರು, ಎಂಎಲ್‌ಎ ಹೇಳಿದ್ದೇನು?

MLA-SN-Channabasappa-Shimoga.

ಶಿವಮೊಗ್ಗ : ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿರುವ ಕಾಂಗ್ರೆಸ್ ರಾಜ್ಯ ಸರಕಾರದ ವಿರುದ್ಧ ಏ.2ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಜನಾಕ್ರೋಶ ಸಭೆ, ಅಹೋರಾತ್ರಿ ಧರಣಿ (Protest) ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ತಿಳಿಸಿದರು. ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲಾ ಆಹಾರ ಪದಾರ್ಥಗಳ ಬೆಲೆ ಏರಿದೆ. ರೈತರಿಗೆ ಸಹಾಯ ಮಾಡುವ ನೆಪದಲ್ಲಿ ಜನರ ಮೇಲೆ ಬೆಲೆ ಏರಿಕೆಯ ಹೊರೆ ಹೊರಿಸುತ್ತಿದ್ದಾರೆ ಎಂದು ಆರೋಪಿಸಿದರು. ಬೆಲೆ ಏರಿಕೆ ವಿರುದ್ಧ ನಡೆಯುವ ಅಹೋರಾತ್ರಿ ಹೋರಾಟದಲ್ಲಿ ಜಿಲ್ಲೆಯ … Read more

ಸ್ನೇಹಿತರೊಂದಿಗೆ ತೆರಳಿದ್ದ ಬಾಲಕ, ನೀರಿನಲ್ಲಿ ಮುಳುಗಿ ಸಾವು

boy-missing-at-mattur-check-dam-in-Shimoga-taluk

ಶಿವಮೊಗ್ಗ : ಸ್ನೇಹಿತರೊಂದಿಗೆ ಈಜಲು ತೆರಳಿದ್ದ ಬಾಲಕನೊಬ್ಬ ಚೆಕ್‌ ಡ್ಯಾಮ್‌ನಲ್ಲಿ (dam) ಮುಳುಗಿ ಸಾವನ್ನಪ್ಪಿದ್ದಾನೆ ಎಂದು ಶಂಕಿಸಲಾಗಿದೆ. ಮತ್ತೊರು – ಹೊಸಹಳ್ಳಿ ಚೆಕ್‌ ಡ್ಯಾಮ್‌ನಲ್ಲಿ ಮಂಗಳವಾರ ಘಟನೆ ಸಂಭವಿಸಿದೆ. ರಾಗಿಗುಡ್ಡದ ರಹಮತ್‌ (16) ಮೃತ ಬಾಲಕ. ಘಟನೆ ಕುರಿತು ಮಾಹಿತಿ ಲಭ್ಯವಾಗುತ್ತಿದ್ದಂತೆ ತುಂಗಾ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲಿಸಿದರು. ಮೃತದೇಹವನ್ನು ಹೊರ ತಗೆಯಲಾಗಿದ್ದು, ಮರಣೋತ್ತರ ಪರೀಕ್ಷೆಗೆ ಮೆಗ್ಗಾನ್‌ ಆಸ್ಪತ್ರೆಗೆ ರವಾನಿಸಲಾಗಿದೆ. ಇದನ್ನೂ ಓದಿ » ರಾತ್ರೋರಾತ್ರಿ ಸರಣಿ ಕಳ್ಳತನ, ಲಕ್ಷ ಲಕ್ಷದ ಚಿನ್ನಾಭರಣ, ಹಣ ಹೊತ್ತೊಯ್ದ … Read more

ಶಿವಮೊಗ್ಗ ಜಿಲ್ಲೆಗೆ ಇವತ್ತು ಮಳೆ ಅಲರ್ಟ್‌, ಮೈಸುಡಲಿದೆ ಬಿಸಿಲು, ಎಲ್ಲೆಲ್ಲಿ ಎಷ್ಟಿರುತ್ತೆ ತಾಪಮಾನ?

WEATHER-REPORT-SHIMOGA-

ಹವಾಮಾನ ವರದಿ : ಶಿವಮೊಗ್ಗ ಜಿಲ್ಲೆಯಲ್ಲಿ ಬಿಸಿಲಿನ ಅಬ್ಬರ ಜೋರಿದೆ. ಇವತ್ತು ಕೂಡ ಉಷ್ಣಾಂಶ ಹೆಚ್ಚಿರಲಿದೆ. ಇನ್ನು ಅಲ್ಲಲ್ಲಿ ಸಾಧಾರಣ ಅಥವಾ ತುಂತುರು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ವರದಿಯಲ್ಲಿದೆ (Weather Report). ಯಾವ್ಯಾವ ತಾಲೂಕಿನಲ್ಲಿ ಎಷ್ಟಿರುತ್ತೆ ತಾಪಮಾನ? ಶಿವಮೊಗ್ಗ, ಭದ್ರಾವತಿ ತಾಲೂಕಿನಲ್ಲಿ ಇವತ್ತು ಗರಿಷ್ಠ 36 ಡಿಗ್ರಿ, ಕನಿಷ್ಠ 22 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಇರಲಿದೆ. ತೀರ್ಥಹಳ್ಳಿ ತಾಲೂಕಿನಲ್ಲಿ ಇವತ್ತು ಗರಿಷ್ಠ 34 ಡಿಗ್ರಿ ಸೆಲ್ಸಿಯಸ್‌, ಕನಿಷ್ಠ 26 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಇರಲಿದೆ. ಹೊಸನಗರ, … Read more