CET, ಕಾಮೆಡ್‌-ಕೆ ಸೀಟು ಆಯ್ಕೆ ಹೇಗೆ? ಶಿವಮೊಗ್ಗದಲ್ಲಿ ತಜ್ಞರ ಜೊತೆ ಜುಲೈ 13ಕ್ಕೆ ಸಂವಾದ

140525 JNNCE engineering college in Shimoga

ಶಿವಮೊಗ್ಗ: ನಗರದ ಜೆಎನ್‌ಎನ್‌ ಇಂಜಿನಿಯರಿಂಗ್‌ ಕಾಲೇಜಿನಲ್ಲಿ ಎಂಬಿಎ-ಎಂಸಿಎ ಸಭಾಂಗಣದಲ್ಲಿ ಜುಲೈ 13ರಂದು ಬೆಳಗ್ಗೆ 10 ಗಂಟೆಗೆ CET/ಕಾಮೆಡ್-ಕೆ ಸೀಟು ಆಯ್ಕೆ ಪ್ರಕ್ರಿಯೆ ಕುರಿತು ಶಿಕ್ಷಣ ತಜ್ಞರೊಂದಿಗೆ ವಿಶೇಷ ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿದೆ. ಸಿಇಟಿ/ಕಾಮೆಡ್-ಕೆ ಸೀಟು ಆಯ್ಕೆ ಪ್ರಕ್ರಿಯೆಯನ್ನು ನೇರ ಪ್ರಾತ್ಯಕ್ಷಿಕೆ ಮೂಲಕ ತಿಳಿಸಲಾಗುತ್ತಿದ್ದು, ಜೊತೆಯಲ್ಲಿ ವಿವಿಧ ಇಂಜಿನಿಯರಿಂಗ್‌ ವಿಭಾಗಗಳ ಪರಿಚಯ, ಉದ್ಯೋಗವಕಾಶಗಳು, ವಿವಿಧ ವಿದ್ಯಾರ್ಥಿ ವೇತನಗಳ ಕುರಿತಾಗಿ ತಜ್ಞರು ಮಾಹಿತಿ ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರು ಭಾಗವಹಿಸಬಹುದಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಮೊ.ಸಂಖ್ಯೆ: 9632471667 ಸಂಪರ್ಕಿಸಲು ಪ್ರಕಟಣೆಯಲ್ಲಿ … Read more

ದಿನ ಪಂಚಾಂಗ | 12 ಜುಲೈ 2025 | ಇವತ್ತು ಯಾವ ನಕ್ಷತ್ರವಿದೆ? ವಿಜಯ ಮುಹೂರ್ತ ಎಷ್ಟು ಹೊತ್ತಿಗೆ?

Indina-Panchanga-today Panchanga

ಈ ದಿನದ ಪಂಚಾಂಗ (Panchanga) ವಾರ : ಶನಿವಾರ, 12 ಜುಲೈ 2025 ಸೂರ್ಯೋದಯ : 5.32 am ಸೂರ್ಯಾಸ್ತ : 7.22 pm ನಕ್ಷತ್ರ : ಉತ್ತರಾಷಾಢ ಶುಭ ಸಮಯ ಬ್ರಹ್ಮ ಮುಹೂರ್ತ ಬೆಳಗ್ಗೆ 4.10 ರಿಂದ 4.51ರವರೆಗೆ ಪ್ರಾಥಃ ಸಂಧ್ಯ ಬೆಳಗ್ಗೆ 4.31 ರಿಂದ 5.32ರವರೆಗೆ ಅಭಿಜಿತ್‌ ಬೆಳಗ್ಗೆ 11.59 ರಿಂದ 12.54ರವರೆಗೆ ವಿಜಯ ಮುಹೂರ್ತ ಮಧ್ಯಾಹ್ನ 2.45 ರಿಂದ 3.40ರವರಗೆ ಗೋಧೂಳಿ ಮುಹೂರ್ತ ಸಂಜೆ 7.20 ರಿಂದ 7.41ರವರೆಗೆ ರಾಹು, ಯಮಗಂಡ, ಗುಳಿಕ … Read more

ಶುಭೋದಯ ಶಿವಮೊಗ್ಗ ಸುಭಾಷಿತ | 12 ಜುಲೈ 2025

SHUBODAYA-SHIVAMOGGA2

ರಾಯಲ್‌ ಕಾಫಿ, ನೆಹರು ರಸ್ತೆ, ಶಿವಮೊಗ್ಗ ಅರ್ಪಿಸುವ ಇಂದಿನ ಸುಭಾಷಿತ (Subhashita) ಇಂದಿನ ಸುಭಾಷಿತ: ಒಬ್ಬ ಉತ್ತಮ ನಾಯಕನು ದಾರಿಯನ್ನು ತೋರಿಸುವವನಲ್ಲ, ಬದಲಿಗೆ ಇತರರು ತಮ್ಮ ದಾರಿಯನ್ನು ಕಂಡುಕೊಳ್ಳಲು ಸಹಾಯ ಮಾಡುವವನು. ಮಹಾಭಾರತದಲ್ಲಿ, ಶ್ರೀಕೃಷ್ಣನು ಪಾಂಡವರಿಗೆ ನೇರವಾಗಿ ಯುದ್ಧ ಗೆಲ್ಲಿಸುವುದಿಲ್ಲ. ಬದಲಿಗೆ, ಅವನು ಅರ್ಜುನನಿಗೆ ಭಗವದ್ಗೀತೆಯನ್ನು ಬೋಧಿಸುವ ಮೂಲಕ, ಧರ್ಮದ ಮಾರ್ಗವನ್ನು ತಿಳಿಸುವ ಮೂಲಕ, ಮತ್ತು ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಮಾರ್ಗದರ್ಶನ ನೀಡುವ ಮೂಲಕ ನಾಯಕತ್ವವನ್ನು ವಹಿಸುತ್ತಾನೆ. ಕೃಷ್ಣನ ಈ ನಾಯಕತ್ವದ ಶೈಲಿಯು ಇತರರಿಗೆ ತಮ್ಮ ಸಾಮರ್ಥ್ಯಗಳನ್ನು ಅರಿತುಕೊಂಡು, ತಮ್ಮ … Read more

ಶಿವಮೊಗ್ಗ ಜೈಲಿನ ಖೈದಿಯ ಹೊಟ್ಟೆಯೊಳಗೆ ಮೊಬೈಲ್‌ ಫೋನ್‌ ಪತ್ತೆ..!

Shimoga-Central-Jail-Prison

ಶಿವಮೊಗ್ಗ: ಸೋಗಾನೆಯ ಕೇಂದ್ರ ಕಾರಾಗೃಹದ ಖೈದಿಯೊಬ್ಬನ (Inmate) ಹೊಟ್ಟೆಯಲ್ಲಿ ಮೊಬೈಲ್‌ ಫೋನ್‌ ಪತ್ತೆಯಾಗಿದೆ. ಮೆಗ್ಗಾನ್‌ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆಸಿ ಮೊಬೈಲ್‌ ಫೋನ್‌ ಹೊರಗೆ ತೆಗೆಯಲಾಗಿದೆ. ಖೈದಿ ದೌಲತ್‌ ಅಲಿಯಾಸ್‌ ಗುಂಡ (30) ಎಂಬಾತನ ಹೊಟ್ಟೆಯಲ್ಲಿ ಒಂದು ಇಂಚು ಅಗಲದ, ಮೂರು ಇಂಚು ಉದ್ದದ ಮೊಬೈಲ್‌ ಫೋನ್‌ ಪತ್ತೆಯಾಗಿದೆ. ಕಲ್ಲು ನುಂಗಿದ್ದೀನಿ ಅಂತಾ ಆಸ್ಪತ್ರೆಗೆ ಬಂದ ಪ್ರಕರಣವೊಂದರಲ್ಲಿ ದೌಲತ್‌ ಅಲಿಯಾಸ್‌ ಗುಂಡನಿಗೆ ಶಿವಮೊಗ್ಗದ ನ್ಯಾಯಾಲಯ 10 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಈತ ಜೂನ್‌ 24ರಂದು ಜೈಲಿನ ಆಸ್ಪತ್ರೆಗೆ … Read more

ಪತ್ನಿಯ ಮೂಗನ್ನೆ ಕಚ್ಚಿ ತುಂಡರಿಸಿದ ಪತಿ, ಶಿವಮೊಗ್ಗದ ಆಸ್ಪತ್ರೆಗೆ ದಾಖಲಾದ ಮಹಿಳೆ

Crime-News-General-Image

ಶಿವಮೊಗ್ಗ: ಧರ್ಮಸ್ಥಳ ಸಂಘದ ಸಾಲದ ವಿಚಾರವಾಗಿ ಜಗಳವಾಗಿ ಪತಿಯೆ ಪತ್ನಿಯ ಮೂಗನ್ನು (Nose) ಕಚ್ಚಿ ತುಂಡರಿಸಿದ್ದಾನೆ. ಚನ್ನಗಿರಿ ತಾಲೂಕಿನ ಮಂಟರಘಟ್ಟ ಗ್ರಾಮದಲ್ಲಿ ಘಟನೆ ಸಂಭವಿಸಿದೆ. ತುಂಡಾದ ಮೂಗಿನೊಂದಿಗೆ ಪತ್ನಿ ಶಿವಮೊಗ್ಗದ ಆಸ್ಪತ್ರೆಗೆ ದಾಖಲಾಗಿದ್ದಾಳೆ. ಸಾಲದ ವಿಚಾರವಾಗಿ ಕಿರಿಕ್ ವಿಜಯ್ ಮತ್ತು ವಿದ್ಯಾ ದಂಪತಿ ಧರ್ಮಸ್ಥಳ ಸ್ವಸಹಾಯ ಸಂಘದಿಂದ ₹2 ಲಕ್ಷ ಸಾಲ ಪಡೆದಿದ್ದರು. ಇಬ್ಬರು ಸೇರಿ ಕಂತು ಕಟ್ಟುತ್ತಿದ್ದರು. ಕಳೆದ ಎರಡು ವಾರ ಹಣವಿಲ್ಲದ್ದರಿಂದ ವಿದ್ಯಾ ಸಾಲದ ಕಂತು ಪಾವತಿಸಿರಲಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ. ಸಂಘದವರು ಪತಿ … Read more

BREAKING NEWS – ಭದ್ರಾ ಜಲಾಶಯದ ಗೇಟುಗಳು ಓಪನ್, ಎಷ್ಟು ನೀರು ಹೊಳೆಗೆ ಹರಿಸಲಾಗ್ತಿದೆ?

Bhadra-Dam-Water-Out-Flow

ಭದ್ರಾವತಿ: ಭದ್ರಾ ಜಲಾಶಯದ (Dam) ನಾಲ್ಕು ಕ್ರಸ್ಟ್ ಗೇಟ್‌ಗಳನ್ನು ಮೇಲೆತ್ತಿ ನದಿಗೆ ನೀರು ಹರಿಸಲಾಗುತ್ತಿದೆ. ಇಂದು ಸಂಜೆ ಗೇಟ್‌‌ಗಳನ್ನು ಮೇಲೆತ್ತಲಾಗಿದೆ. ಕ್ರಸ್ಟ್ ಗೇಟ್‌ಗಳ ಮೂಲಕ 3300 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಪ್ರಸ್ತುತ ಜಲಾಶಯಕ್ಕೆ 11 ಸಾವಿರ ಕ್ಯೂಸೆಕ್ ಒಳಹರಿವು ಇದೆ. ಭದ್ರಾ ಜಲಾಶಯವು ಗರಿಷ್ಠ 186 ಅಡಿ ನೀರಿನ ಸಂಗ್ರಹ ಮಟ್ಟ ಹೊಂದಿದೆ. ಸದ್ಯ 174 ಅಡಿಯಷ್ಟು ನೀರು ಸಂಗ್ರಹವಾಗಿದೆ. ಜಲಾನಯನ ಪ್ರದೇಶದಲ್ಲಿ ಮಳೆ ಮುಂದುವರೆದಿದ್ದು, ಒಳಹರಿವು ಮತ್ತಷ್ಟು ಹೆಚ್ಚಳದ ನಿರೀಕ್ಷೆ ಇದೆ. ಇದನ್ನೂ ಓದಿ » ಶಿವಮೊಗ್ಗದಿಂದ … Read more

ಶಿವಮೊಗ್ಗದಿಂದ ಮಂತ್ರಾಲಯಕ್ಕೆ ಬರಿಗಾಲಲ್ಲಿ ನಡಿಗೆ ಆರಂಭಿಸಿದ ಅರ್ಚಕ

Pawan-Kumar-Bhat-padayathre-to-mantralaya.

ಶಿವಮೊಗ್ಗ: ಲೋಕಕಲ್ಯಾಣ ಮತ್ತು ನಾಡಿನ ಜನರ ಉತ್ತಮ ಆರೋಗ್ಯಕ್ಕಾಗಿ ಶಿವಮೊಗ್ಗದ ಅರ್ಚಕರೊಬ್ಬರು ಮಂತ್ರಾಲಯಕ್ಕೆ (Mantralaya) ಬರಿಗಾಲಲ್ಲಿ ನಡಿಗೆ ಆರಂಭಿಸಿದ್ದಾರೆ. ನಗರದ ಕೋಟೆ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಸ್ಥಾನದಿಂದ ಪಾದಯಾತ್ರೆ ಶುರು ಮಾಡಿದ್ದಾರೆ. ಅರ್ಚಕ ಪವನ್‌ ಕುಮಾರ್‌ ಭಟ್‌ ಅವರು ಶಿವಮೊಗ್ಗದಿಂದ ಮಂತ್ರಾಲಯಕ್ಕೆ ಪಾದಯಾತ್ರೆ ಮಾಡುತ್ತಿದ್ದಾರೆ. 13 ದಿನ ಹಗಲು ಮತ್ತು ರಾತ್ರಿ ನಿರಂತರವಾಗಿ ನಡೆಯಲಿದ್ದಾರೆ. ಮಂತ್ರಾಲಯದಲ್ಲಿ ಶ್ರೀ ರಾಘವೇಂದ್ರ ಸ್ವಾಮಿ ದರ್ಶನ ಪಡೆದು ಪವನ್‌ ಕುಮಾರ್‌ ಭಟ್‌ ಅವರು ರೈಲಿನಲ್ಲಿ ಪ್ರಯಾಗ್‌ರಾಜ್‌ ತಲುಪಲಿದ್ದಾರೆ. ಇದನ್ನೂ ಓದಿ » ರವೀಂದ್ರನಗರ … Read more

ಶಿವಮೊಗ್ಗ ತಾಲೂಕಿನ ವಿವಿಧೆಡೆ ನಾಳೆ ಇಡೀ ದಿನ ಕರೆಂಟ್‌ ಇರಲ್ಲ

power cut mescom ELECTRICITY

ಶಿವಮೊಗ್ಗ: ನಗರ ಉಪವಿಭಾಗ-2ರ ಘಟಕ-6ರ ವ್ಯಾಪ್ತಿಯಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಆದ್ದರಿಂದ ಜು.12 ರಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 6ರವರೆಗೆ ನಗರದ ವಿವಿಧೆಡೆ ವಿದ್ಯುತ್‌ (Power Cut) ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ. ಎಲ್ಲೆಲ್ಲಿ ಕರೆಂಟ್‌ ಇರಲ್ಲ? ಗೋಪಿಶೆಟ್ಟಿಕೊಪ್ಪ, ಸಿದ್ದೇಶ್ವರ ಸರ್ಕಲ್, ಭವಾನಿ ಲೇಔಟ್, ಆಶ್ರಯ ಬಡಾವಣೆ, ಚಾಲುಕ್ಯನಗರ, ಕೆ.ಹೆಚ್.ಬಿ. ಕಾಲೋನಿ, ಹಳೆ ಊರು ಗೋಪಿಶೆಟ್ಟಿಕೊಪ್ಪ, ಗದ್ದೆಮನೆ ಲೇಔಟ್, ಮಂಜಪ್ಪ ಬಸಪ್ಪ ಲೇಔಟ್, ಜಿ.ಎಸ್.ಕ್ಯಾಸ್ಟಿಂಗ್, ಸೋಮಣ್ಣ ಫ್ಯಾಕ್ಟರಿ, ಸಲೀಮ್ ಫ್ಯಾಕ್ಟರಿ, ಕಾಮತ್ ಲೇಔಟ್, … Read more

ಶಿವಮೊಗ್ಗದಲ್ಲಿ ಲಾರಿ ಡಿಕ್ಕಿಯಾಗಿ ಪೊಲೀಸ್‌ ಚೌಕಿ ನಜ್ಜುಗುಜ್ಜು

Tipper-collides-with-police-chowki-at-Amir-Ahmed-Circle

ಶಿವಮೊಗ್ಗ: ಚಾಲಕನ ನಿಯಂತ್ರಣ ತಪ್ಪಿದ ಲಾರಿಯೊಂದು ಕಳೆದ ರಾತ್ರಿ ಅಮೀರ್‌ ಅಹಮದ್‌ ಸರ್ಕಲ್‌ನಲ್ಲಿದ್ದ ಪೊಲೀಸ್‌ ಚೌಕಿಗೆ (Police Chowky) ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್‌ ಯಾರಿಗು ಸಮಸ್ಯೆಯಾಗಿಲ್ಲ. ಸರ್ಕಲ್‌ನಲ್ಲಿ ಸ್ಮಾರ್ಟ್‌ ಸಿಟಿ ವತಿಯಿಂದ ಸ್ಥಾಪಿಸಲಾಗಿದ್ದ ಪೊಲೀಸ್‌ ಚೌಕಿಗೆ ಲಾರಿ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಪೊಲೀಸ್‌ ಚೌಕಿ ಹಾನಿಗೀಡಾಗಿದೆ. ಈ ಸಂದರ್ಭ ಚೌಕಿಯ ಒಳಗೆ ಪೊಲೀಸರು ಇರಲಿಲ್ಲ. ಹಾಗಾಗಿ ಅನಾಹುತ ತಪ್ಪಿದೆ. ನಾಲ್ಕು ದಿನದ ಹಿಂದೆ ಇದೇ ಸರ್ಕಲ್‌ನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಖಾಸಗಿ ಬಸ್‌ ಪಲ್ಟಿಯಾಗಿತ್ತು. ಇದನ್ನೂ ಓದಿ … Read more

BREAKING NEWS – ಶಿವಮೊಗ್ಗದಲ್ಲಿ ಯುವಕನ ಕೊಲೆ, ಸ್ಥಳಕ್ಕೆ ಪೊಲೀಸರು ದೌಡು

Murder-at-Bommanakatte-E-Block-in-Shimoga.

ಶಿವಮೊಗ್ಗ: ರಾತ್ರಿ ಪಾರ್ಟಿ ವೇಳೆ ಗಲಾಟೆಯಾಗಿ ಸ್ನೇಹಿತನೆ (friends) ಯುವಕನ ಕೊಲೆ ಮಾಡಿದ್ದಾನೆ. ಶಿವಮೊಗ್ಗದ ಬೊಮ್ಮನಕಟ್ಟೆಯ ಇ-ಬ್ಲಾಕ್‌ನಲ್ಲಿ ಘಟನೆ ಸಂಭವಿಸಿದೆ. ಬೊಮ್ಮನಕಟ್ಟೆ ಎ-ಬ್ಲಾಕ್‌ ನಿವಾಸಿ ಪವನ್‌ (28) ಕೊಲೆಯಾದ ಯುವಕ. ಪವನ್‌, ಕಳೆದ ರಾತ್ರಿ ಸ್ನೇಹಿತ ಶಿವಕುಮಾರ್‌ ಮನೆಯಲ್ಲಿ ಪಾರ್ಟಿಗೆ ತೆರೆಳಿದ್ದ. ಮದ್ಯ ಸೇವಿಸಿದ ಬಳಿಕ ಸ್ನೇಹಿತರ ಮಧ್ಯೆ ಗಲಾಟೆಯಾಗಿದೆ ಎಂದು ಆರೋಪಿಸಲಾಗಿದೆ. ಗಲಾಟೆಯಲ್ಲಿ ಪವನ್‌ ಹತ್ಯೆಯಾಗಿದೆ. ಘಟನೆ ಸಂಬಂಧ ಒಬ್ಬನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ. ವಿನೋಬನಗರ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ. … Read more