ಟ್ರಾಕ್ಟರ್‌ ಚಾಲಕನ ಒಂದು ತಪ್ಪು ನಿರ್ಧಾರಕ್ಕೆ 19 ವರ್ಷದ ಯುವಕ ಸಾವು, ಆಗಿದ್ದೇನು?

Tyavarekoppa-Shimoga-Sagara-Road

ಶಿವಮೊಗ್ಗ: ಸಾಗರ ರಸ್ತೆಯಲ್ಲಿ ನಿಲ್ಲಿಸಿದ್ದ ಟ್ರಾಕ್ಟರ್‌ಗೆ ಬೈಕ್ (bike) ಡಿಕ್ಕಿ ಹೊಡೆದು 19 ವರ್ಷದ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮುದ್ದಿನಕೊಪ್ಪ ಟ್ರೀ ಪಾರ್ಕ್ ಬಳಿ ಘಟನೆ ನಡೆದಿದೆ. ಚಾಮುಂಡಿಪುರ ಗ್ರಾಮದ ಶರವಣ (19) ಯಮಹಾ ಬೈಕ್‌ನಲ್ಲಿ ಶಿವಮೊಗ್ಗದಿಂದ ಆಯನೂರು ಮಾರ್ಗವಾಗಿ ತೆರಳುತ್ತಿದ್ದರು. ಮುದ್ದಿನಕೊಪ್ಪ ಬಳಿ ಸೂಚನಾ ಫಲಕ ಅಥವಾ ರಿಫ್ಲೆಕ್ಟರ್ ಸ್ಟಿಕ್ಕರ್ ಇಲ್ಲದೆ ರಸ್ತೆಗೆ ಟ್ರಾಕ್ಟರ್‌ ನಿಲ್ಲಿಸಲಾಗಿತ್ತು. ಟ್ರಾಲಿಯ ಹಿಂಭಾಗಕ್ಕೆ ಬೈಕ್ ಡಿಕ್ಕಿ ಹೊಡೆದಿದ್ದು, ಶರವಣನ ಮುಖ ಮತ್ತು ಎದೆಗೆ ಗಂಭೀರ ಪೆಟ್ಟು ಬಿದ್ದಿದೆ. ತೀವ್ರ ರಕ್ತಸ್ರಾವದಿಂದಾಗಿ … Read more

ಶಿವಮೊಗ್ಗದ ಸಾಗರ ರಸ್ತೆಯಲ್ಲಿ ಬಸ್‌, ಬೈಕ್‌ ಡಿಕ್ಕಿ, ಸಿರಿಗೆರೆಯ ಇಬ್ಬರಿಗೆ ಗಾಯ

bike-collision-with-bus-in-sagara-road-in-shimoga.

ಶಿವಮೊಗ್ಗ: ಪಿಇಎಸ್‌ ಕಾಲೇಜು ಸಮೀಪ ಸಾಗರ ರಸ್ತೆಯಲ್ಲಿ ಬಸ್ ಹಾಗೂ ಬೈಕ್ (bike collision) ನಡುವೆ ನಡೆದ ಅಪಘಾತದಲ್ಲಿ ಇಬ್ಬರು ಬೈಕ್ ಸವಾರರು ಗಾಯಗೊಂಡಿದ್ದಾರೆ. ಶಿವಮೊಗ್ಗದಿಂದ ಸಾಗರದ ಕಡೆಗೆ ಹೋಗುತ್ತಿದ್ದ ಬಸ್ ಮತ್ತು ಬೈಕ್ ನಡುವೆ ಈ ಡಿಕ್ಕಿ ಸಂಭವಿಸಿದೆ. ಗಾಯಗೊಂಡವರು ಶಿವಮೊಗ್ಗ ಸಮೀಪದ ಸಿರಿಗೆರೆ ಮೂಲದವರು ಎಂದು ಗುರುತಿಸಲಾಗಿದೆ. ಗಾಯಾಳುಗಳನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಅಪಘಾತದ ರಭಸಕ್ಕೆ ಹೊಸ ಬೈಕ್ ಸಂಪೂರ್ಣವಾಗಿ ಜಖಂಗೊಂಡಿದೆ. ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಯಲ್ಲಿ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ. … Read more