ಶಿವಮೊಗ್ಗ KPTCL ಸಿಬ್ಬಂದಿಯಿಂದ ಪ್ರತಿಭಟನೆ, ಕೇಂದ್ರದ ಬಿಲ್ ವಿರುದ್ಧ ಘೋಷಣೆ

051020 Mescom Employees Protest 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 5 ಅಕ್ಟೋಬರ್ 2020 ವಿದ್ಯುತ್ ಕಂಪನಿಗಳ ಖಾಸಗೀಕರಣಕ್ಕೆ ವಿರೋಧ ಮತ್ತು ಉತ್ತರ ಪ್ರದೇಶದ ಇಂಧನ ಇಲಾಖೆ ನೌಕರರ ಪ್ರತಿಭೆಟನೆಗೆ ಬೆಂಬಲ ಸೂಚಿಸಿ ಶಿವಮೊಗ್ಗ KPTCL ಸಿಬ್ಬಂದಿ ಪ್ರತಿಭಟನೆ ನಡೆಸಿದರು. ಶಿವಮೊಗ್ಗ ಕೇಂದ್ರ ರೈಲ್ವೆ ನಿಲ್ದಾಣ ಬಳಿಯ ಮೆಸ್ಕಾಂ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಲಾಯಿತು. ಖಾಸಗೀಕರಣದ ವಿರುದ‍್ಧ ಆಕ್ರೋಶ ವ್ಯಕ್ತಪಡಿಸಿದ ಸಿಬ್ಬಂದಿ, ವಿದ್ಯತ್ ಬಿಲ್‍ ವಿರುದ್ಧ ಘೋಷಣೆ ಕೂಗಿದರು. ಹತ್ತು ನಿಮಿಷದ ಸಾಂಕೇತಿಕ ಪ್ರತಿಭಟನೆ ವಿದ್ಯುತ್ ಬಿಲ್ ವಿರೋಧಿಸಿ ಸಾಂಕೇತಿಕವಾಗಿ … Read more

ಇದೇ ಶಿವಮೊಗ್ಗ ಜಿಲ್ಲೆಯ ಮೊದಲ ಪೊಲೀಸ್ ಠಾಣೆ, ಎಲ್ಲಿದೆ? ಈಗ ಹೇಗಿದೆ?

041020 Kote Police Station Old Station 1

ಶಿವಮೊಗ್ಗ ಲೈವ್.ಕಾಂ | NAMMURU SHIVAMOGGA | 3 ಅಕ್ಟೋಬರ್ 2020 ಈ ಕಟ್ಟಡ ಶಿವಮೊಗ್ಗ ಪೊಲೀಸ್ ಇಲಾಖೆಯ ಪ್ರತಿ ಬೆಳವಣಿಗೆಯನ್ನು ಗಮನಿಸಿದೆ. ಬ್ರಿಟೀಷ್ ಕಾಲದ ಪೊಲೀಸ್ ವ್ಯವಸ್ಥೆಯಿಂದ, ಈಗಿನ ಹೈಟೆಕ್ನಾಲಜಿ ಪೊಲೀಸಿಂಗ್ ತನಕ ಎಲ್ಲದಕ್ಕೂ ಸಾಕ್ಷಿಯಾಗಿದೆ. ಶಿವಮೊಗ್ಗದ ಕೋಟೆ ಪೊಲೀಸ್ ಠಾಣೆ ಅವರಣದಲ್ಲಿ ಇರುವ ಹಂಚಿನ ಕಟ್ಟಡ, ಜಿಲ್ಲೆಯ ಪೊಲೀಸ್ ಇಲಾಖೆಯ ಇತಿಹಾಸ ತಿಳಿಸುತ್ತದೆ. ಯಾಕೆಂದರೆ ಇದುವೆ ಶಿವಮೊಗ್ಗ ಜಿಲ್ಲೆಯ ಮೊದಲ ಪೊಲೀಸ್ ಠಾಣೆ. 1851ರಲ್ಲಿ ಈ ಪೊಲೀಸ್ ಠಾಣೆಯನ್ನು ನಿರ್ಮಿಸಲಾಯಿತು. ಬ್ರಿಟೀಷರು ಭಾರತಕ್ಕೆ ಬಂದಾಗ … Read more

ನಟ, ನಟಿಯರಷ್ಟೇ ಅಲ್ಲ ಡ್ರಗ್ಸ್ ದಂಧೆಯಲ್ಲಿರುವ ಎಲ್ಲರ ವಿರುದ್ಧ ಕಠಿಣ ಕ್ರಮ ಅಗತ್ಯ, ಎಬಿವಿಪಿಯಿಂದ ಸಹಿ ಸಂಗ್ರಹ

110920 ABVP Signature Campaign in Shimoga 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 11 ಸೆಪ್ಟಂಬರ್ 2020 ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ವತಿಯಿಂದ ನಗರದ ಶಿವಪ್ಪನಾಯಕ ವೃತ್ತದಲ್ಲಿ ಮಾದಕ ವಸ್ತುಗಳ ವಿರುದ್ಧ ಸಹಿ ಸಂಗ್ರಹ ಅಭಿಯಾನ ಆಯೋಜಿಸಲಾಗಿತ್ತು. ಮಾದಕ ವಸ್ತುಗಳ ವಿರುದ್ಧವಾಗಿ ಮತ್ತು ಡ್ರಗ್ಸ್ ದಂಧೆಯಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ರಾಜ್ಯದಲ್ಲಿ ಡ್ರಗ್ಸ್ ದಂಧೆಯಲ್ಲಿ ಭಾಗಿಯಾಗಿರುವ ಪ್ರಭಾವಿ ವ್ಯಕ್ತಿಗಳ ಹಾಗೂ ನಟ, ನಟಿಯರ ವಿರುದ್ಧ ಸೂಕ್ತ ತನಿಖೆ ನಡೆಸಬೇಕು ಎಂದು ಒತ್ತಾಯಿಸಲಾಯಿತು. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ … Read more

ಬೇಡಿಕೆ ಈಡೇರಿಸಿ ಇಲ್ಲಾಂದ್ರೆ ಬೆಂಗಳೂರು ಚಲೋ ಮಾಡ್ತೀವಿ, 9ನೇ ವಾರಕ್ಕೆ ಅತಿಥಿ ಉಪನ್ಯಾಸಕರ ಪ್ರತಿಭಟನೆ

080920 Guest Lecturers Protest 9th Week 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 8 ಸೆಪ್ಟಂಬರ್ 2020 ಸೇವೆ ಖಾಯಂಗೆ ಒತ್ತಾಯಿಸಿ ಶಿವಮೊಗ್ಗದಲ್ಲಿ ಅತಿಥಿ ಉಪನ್ಯಾಸಕರ ನಡೆಸುತ್ತಿರುವ ಪ್ರತಿಭಟನೆ ಒಂಭತ್ತನೆ ವಾರಕ್ಕೆ ಕಾಲಿಟ್ಟಿದೆ. ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಅತಿಥಿ ಉಪನ್ಯಾಸಕರು, ಬೇಡಿಕೆ ಈಡೇರದಿದ್ದರೆ ಬೆಂಗಳೂರು ಚಲೋ ಮಾಡಲಾಗುತ್ತದೆ ಎಂದು ಎಚ್ಚರಿಸಿದರು. ಸೇವೆ ಖಾಯಂಗೊಳಿಸಬೇಕು, ಲಾಕ್ ಡೌನ್ ಅವಧಿಯನ್ನು ಸೇವಾವಧಿ ಎಂದು ಪರಿಗಣಿಸಬೇಕು, ಕೂಡಲೆ ವೇತನ ಬಿಡುಗಡೆ ಮಾಡಬೇಕು, ಆತ್ಮಹತ್ಯೆ ಮಾಡಿಕೊಂಡ ಉಪನ್ಯಾಸಕರಿಗೆ ಪರಿಹಾರ ನೀಡಬೇಕು ಎಂದು ಪ್ರತಿಭಟನಾನಿರತರು ಆಗ್ರಹಿಸಿದರು. ಬೇಡಿಕೆ … Read more

ಇತಿಹಾಸ ಸಂಶೋಧಕ ಜಯದೇವಪ್ಪ ಜೈನಕೇರಿ ನಿಧನ, ಸಂಸದ ರಾಘವೇಂದ್ರ ಸೇರಿ ಹಲವರ ಸಂತಾಪ

ಶಿವಮೊಗ್ಗ ಲೈವ್.ಕಾಂ | SHIMOGA NEWS | 8 ಸೆಪ್ಟಂಬರ್ 2020 ಇತಿಹಾಸ ಸಂಶೋಧಕ ಜಯದೇವಪ್ಪ ಜೈನಕೇರಿ ನಿಧನಕ್ಕೆ ಸಂಸದ ಬಿ.ವೈ.ರಾಘವೇಂದ್ರ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ. ಅನಾರೋಗ್ಯಕ್ಕೆ ಒಳಗಾಗಿದ್ದರು ಜಯದೇವಪ್ಪ ಜೈನಕೇರಿ (82) ಅವರು ಲೇಖಕ, ಇತಿಹಾಸ ಸಂಶೋಧಕರಾಗಿ ಚಾಪು ಮೂಡಿಸಿದ್ದರು. ವೈಚಾರಿಕ ಪ್ರಬಂಧ ಮಂಡನೆ, ದೇಗುಲಗಳ ಕುರಿತು ಬರಹ, ಉಪನ್ಯಾಸ, ಶರಣರು ಮತ್ತು ಶರಣ ಸಾಹಿತ್ಯದ ಕುರಿತು ಬರಹಗಳು, ಕೃತಿ ಪ್ರಕಟಿಣೆಯಲ್ಲಿ ತೊಡಗಿಸಿಕೊಂಡಿದ್ದರು. ಆನಂದಪುರದ ಮುರುಘಾಮಠದ ಆವರಣದಲ್ಲಿ ವಸ್ತು ಸಂಗ್ರಹಾಲಯ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ … Read more

ಸಾಗರ ಶಾಸಕ ಹರತಾಳು ಹಾಲಪ್ಪ ಮತ್ತೆ ಆಸ್ಪತ್ರೆಗೆ ದಾಖಲು

Haratalu-Halappa

ಶಿವಮೊಗ್ಗ ಲೈವ್.ಕಾಂ | SAGARA NEWS | 8 ಸೆಪ್ಟಂಬರ್ 2020 ಕೆಲವು ದಿನದ ಹಿಂದೆಯಷ್ಟೆ ಕರೋನದಿಂದ ಗುಣವಾಗಿ ಸಾಗರಕ್ಕೆ ಮರಳಿದ್ದ ಶಾಸಕ ಹರತಾಳು ಹಾಲಪ್ಪ ಅವರ ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಾಸ ಕಂಡು ಬಂದಿದೆ. ಹಾಗಾಗಿ ಅವರು ಬೆಂಗಳೂರಿಗೆ ತೆರಳಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೋವಿಡ್‍ಗೆ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದ ಹರತಾಳು ಹಾಲಪ್ಪ ಅವರಿಗೆ ವಿಶ್ರಾಂತಿ ಪಡೆಯುವಂತೆ ವೈದ್ಯರು ಸೂಚಿಸಿದ್ದರು. ಆದರೆ ಹಾಲಪ್ಪ ಅವರು ಕ್ಷೇತ್ರದ ವಿವಿಧೆಡೆ ಸಂಚರಿಸಿ, ಪರಿಶೀಲನೆ ನಡೆಸಿದ್ದರು. ಊಟದಲ್ಲಿ ವ್ಯತ್ಯಾಸವಾದ … Read more

ಭದ್ರಾವತಿಯಲ್ಲಿ ಕೆಜಿಗಟ್ಟಲೆ ಗಾಂಜಾ ಸಾಗಿಸುತ್ತಿದ್ದ ಎಂಟು ಮಂದಿ ಅರೆಸ್ಟ್, ಕಾರು ವಶಕ್ಕೆ

070920 Old Town Police Arrest Ganja Smugglers 1

ಶಿವಮೊಗ್ಗ ಲೈವ್.ಕಾಂ | BHADRAVATHI NEWS | 7 ಸೆಪ್ಟಂಬರ್ 2020 ಓಮ್ನಿ ಕಾರಿನಲ್ಲಿ ಸಾಗಿಸುತ್ತಿದ್ದ ಎರಡು ಲಕ್ಷ ಮೌಲ್ಯದ ಗಾಂಜಾ ವಶಕ್ಕೆ ಪಡೆಯಲಾಗಿದೆ. ಪ್ರಕರಣ ಸಂಬಂಧ ಎಂಟು ಮಂದಿಯನ್ನು ಬಂಧಿಸಲಾಗಿದೆ. ಕಾರಿನಲ್ಲಿತ್ತು ಕೆಜಿಗಟ್ಟಲೆ ಗಾಂಜಾ ಮಾರಾಟ ಮಾಡುವ ಸಲುವಾಗಿ ಕಾರಿನಲ್ಲಿ ಗಾಂಜಾ ಸಾಗಿಸಲಾಗುತ್ತಿತ್ತು. ಖಚಿತ ಮಾಹಿತ ಮೇರೆಗೆ ಬಿ.ಹೆಚ್.ರಸ್ತೆಯಲ್ಲಿ ದಾಳಿ ನಡೆಸಿದ ಭದ್ರಾವತಿ ಪೊಲೀಸರು, ಆರು ಕೆ.ಜಿ 400 ಗ್ರಾಂ ಗಾಂಜಾ ಪತ್ತೆಯಾಗಿದೆ. ಎಂಟು ಮಂದಿ ಅರೆಸ್ಟ್ ಗಾಂಜಾ ಸಾಗಿಸುತ್ತಿದ್ದ ಪ್ರಕರಣ ಸಂಬಂಧ ಭದ್ರಾವತಿ ಪೊಲೀಸರು … Read more

ಈ ಅಧಿವೇಶನದಲ್ಲೇ ನ್ಯಾ.ಸದಾಶಿವ ವರದಿ ಜಾರಿಗೊಳಿಸಿ, ಶಿವಮೊಗ್ಗದಲ್ಲಿ ಆಗ್ರಹ

070920 DSS Protest for Sadashiva Ayoga 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 7 ಸೆಪ್ಟಂಬರ್ 2020 ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗ ವರದಿ ಅನುಷ್ಠಾನಗೊಳಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಶಿವಮೊಗ್ಗದಲ್ಲಿ ಪ್ರತಿಭಟನೆ ನಡೆಸಲಾಯಿತು. ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಡಿಎಸ್‍ಎಸ್ ಕಾರ್ಯಕರ್ತರು, ಸೆಪ್ಟೆಂಬರ್‍ ತಿಂಗಳಲ್ಲಿ ನಡೆಯುವ ವಿಧಾನ ಮಂಡಲ ಅಧಿವೇಶನದಲ್ಲಿ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಯನ್ನು ಮಂಡಿಸಿ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು. https://www.facebook.com/liveshivamogga/videos/716608112259457/?t=0 ಒಳ ಮೀಸಲಾತಿ ಜಾರಿಗೆ ತರುವ ಅಧಿಕಾರ ಆಯಾ ರಾಜ್ಯ ಸರ್ಕಾರಗಳಿಗೆ … Read more

ಕೋಡಿ ಒಡೆದ ಬೊಮ್ಮನಕಟ್ಟೆ ಕೆರೆ, ಅಕ್ಕಪಕ್ಕದ ಜಮೀನಿಗೆ ನೀರು, ಬೆಳೆ ಹಾನಿ

070920 Bommanakatte Lake Kodi 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 7 ಸೆಪ್ಟಂಬರ್ 2020 ಬೊಮ್ಮನಕಟ್ಟೆಯಲ್ಲಿ ಕೆರೆ ಕೋಡಿ ಒಡೆದು ಅಕ್ಕಪಕ್ಕದ ಜಮೀನಿಗೆ ನೀರು ನುಗ್ಗಿದೆ. ನಾಟಿ ಮಾಡಿದ್ದ ಭತ್ತದ ಬೆಳೆ ಸಂಪೂರ್ಣ ಜಲಾವೃತವಾಗಿದೆ. ಭಾನುವಾರ ಸಂಜೆ ಸುರಿದ ಜೋರು ಮಳೆಯಿಂದ ಕೆರೆಗೆ ಭಾರಿ ಪ್ರಮಾಣದ ನೀರು ಹರಿದು ಬಂದಿದೆ. ಸೋಮಿನಕೊಪ್ಪ, ಗೆಜ್ಜೇನಹಳ್ಳಿ, ಕೋಟೆ ಗಂಗೂರು, ಬಸವನಗಂಗೂರು ಸೇರಿದಂತೆ ವಿವಿಧೆಡೆಯಿಂದ ನೀರು ಬೊಮ್ಮನಕಟ್ಟೆ ಕರೆಗೆ ಹರಿದು ಬರುತ್ತದೆ. ಕೆರೆ ಕೋಡಿ ಒಡೆದು ಪಕ್ಕದ ಜಮೀನಿಗೆ ನೀರು ನುಗ್ಗಿದೆ. ಈಚೆಗಷ್ಟೆ ಭತ್ತದ … Read more