ಶಿವಮೊಗ್ಗ ನಗರದ ವಿವಿಧೆಡೆ ಜೂ.11ರಂದು ಬೆಳಗ್ಗೆಯಿಂದ ಸಂಜೆವರೆಗೆ ಕರೆಂಟ್ ಇರಲ್ಲ

POWER-CUT-UPDATE-NEWs ELECTRICITY

SHIVAMOGGA LIVE NEWS | SHIMOGA | 10 ಜೂನ್ 2022 ಮಂಗಳೂರು ವಿದ್ಯುತ್ಚಕ್ತಿ ಸರಬರಾಜು ಕಂಪನಿಯ ಎಂಆರ್‍ಎಸ್ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ಪರಿವರ್ತಕ ಸ್ಥಳಾಂತರ ಕಾಮಗಾರಿ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಶಿವಮೊಗ್ಗ ನಗರದ ವಿವಿಧೆಡೆ ಜೂನ್ 11ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ. ಎಲ್ಲೆಲ್ಲಿ ಕರೆಂಟ್ ಇರಲ್ಲ? ಎಂಆರ್‍ಎಸ್ ಕ್ವಾಟ್ರಸ್, ಹರಿಗೆ, ಶುಗರ್ ಫ್ಯಾಕ್ಟರಿ, ಮಲವಗೊಪ್ಪ, ದುಮ್ಮಳ್ಳಿ ರಸ್ತೆ, ಮಾರಿಯಮ್ಮ ಕಾಲೋನಿ ಹಾಗೂ … Read more

ಶಿವಮೊಗ್ಗದಲ್ಲಿ ಸ್ನೇಹಿತನನ್ನು ಕೊಂದು ಮೂಟೆ ಕಟ್ಟಿ ಹೂತು ಹಾಕಿದ್ದವನಿಗೆ ಜೀವಾವಧಿ ಶಿಕ್ಷೆ

prison hand cuff image

ಶಿವಮೊಗ್ಗದ ಲೈವ್.ಕಾಂ | SHIMOGA NEWS | 11 ಫೆಬ್ರವರಿ 2022 ಸಾಲ ಹಿಂತಿರುಗಿಸುವಂತೆ ಕೇಳಿದ ಸ್ನೇಹಿತನನ್ನು ಹತ್ಯೆ ಮಾಡಿ, ಮೃತದೇಹವನ್ನು ಮೂಟೆ ಕಟ್ಟಿ ಹೂತು ಹಾಕಿದ್ದ ಪ್ರಕರಣ ಸಂಬಂಧ ಅಪರಾಧಿಗೆ ಜೀವಾವಧಿ ಶಿಕ್ಷೆಯಾಗಿದೆ. 2.50 ಲಕ್ಷ ರೂ. ದಂಡ ಕಟ್ಟುವಂತೆಯೂ ನ್ಯಾಯಾಲಯ ಆದೇಶಿಸಿದೆ. ಕಲ್ಲಹಳ್ಳಿಯ ಶ್ರೀಧರ (36) ಶಿಕ್ಷೆಗೆ ಒಳಗಾದವನು. ಶಿವಮೊಗ್ಗ ಗ್ಯಾರೇಜ್ ರಸ್ತೆಯ ಮಂಜಪ್ಪ (43) ಎಂಬಾತನನ್ನು ಹತ್ಯೆ ಮಾಡಲಾಗಿತ್ತು. ಏನಿದು ಪ್ರಕರಣ? ಶ್ರೀಧರ ಮತ್ತು ಮಂಜಪ್ಪ ಸ್ನೇಹಿತರಾಗಿದ್ದರು. ಮಂಜಪ್ಪನು ಶ್ರೀಧರನಿಗೆ 9 ಲಕ್ಷ … Read more

ತುಂಗಾ ನಗರ ಠಾಣೆ ಪೊಲೀಸರ ದಾಳಿ, ಬಳ್ಳಾರಿಯ ಇಬ್ಬರು, ಟಿಪ್ಪುನಗರದ ಇಬ್ಬರು ಅರೆಸ್ಟ್

Arrest News Graphics

ಶಿವಮೊಗ್ಗ ಲೈವ್.ಕಾಂ | SHIMOGA CRIME NEWS | 2 ಡಿಸೆಂಬರ್ 2021 ಗಾಂಜಾ ದಂಧೆಕೋರರ ವಿರುದ್ಧ ಶಿವಮೊಗ್ಗ ಪೊಲೀಸರು ಕಾರ್ಯಾಚರಣೆ ಮುಂದುವರೆಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ಎನ್.ಆರ್.ಪುರ ರಸ್ತೆಯಲ್ಲಿ ದಾಳಿ ನಡೆಸಿ, ನಾಲ್ವರನ್ನು ಬಂಧಿಸಿದ್ದಾರೆ. ಮಾರಾಟಕ್ಕೆ ತಂದಿದ್ದ ಗಾಂಜಾ ವಶಕ್ಕೆ ಪಡೆಯಲಾಗಿದೆ. ಎನ್.ಆರ್.ಪುರ ರಸ್ತೆಯ ಪುಟ್ಟಪ್ಪ ಕ್ಯಾಂಪ್ ಬಳಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿರುವ ಕುರಿತು ಖಚಿತ ಮಾಹಿತಿ ಮೇರೆಗೆ ತುಂಗಾ ನಗರ ಠಾಣೆ ಪೊಲೀಸರು ದಾಳಿ ನಡೆಸಿದ್ದಾರೆ. ಲೇಔಟ್’ನಲ್ಲಿ ದ್ವಿಚಕ್ರ ವಾಹನವನ್ನು ನಿಲ್ಲಿಸಿಕೊಂಡು ನಾಲ್ವರು ಯುವಕರು … Read more

ಜಿಲ್ಲಾಧಿಕಾರಿ ಕಚೇರಿ ಅಧಿಕಾರಿ ನಾಪತ್ತೆ ಕೇಸ್, 15 ಗಂಟೆ ಕಳೆದರೂ ಸಿಗದ ಸುಳಿವು, ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

280921 FDA Giriraj wife complaints about missing

ಶಿವಮೊಗ್ಗ ಲೈವ್.ಕಾಂ | SHIMOGA NEWS | 28 ಸೆಪ್ಟೆಂಬರ್ 2021 ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿ ಕಣ್ಮರೆಯಾಗಿ ಹದಿನೈದು ಗಂಟೆಯಾಗಿದೆ. ಈವರೆಗೂ ಅವರ ಸುಳಿವು ಪತ್ತೆಯಾಗಿಲ್ಲ. ಈ ಮಧ್ಯೆ ಅವರ ಕುಟುಂಬದವರು ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಇದನ್ನು ಓದಿ | ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವಾಟ್ಸಪ್ ಮೆಸೇಜ್ ಮಾಡಿ ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿ ನಾಪತ್ತೆ ಶಿವಮೊಗ್ಗ ಡಿಸಿ ಕಚೇರಿಯ ಸೆಕ್ಷನ್ ಒಂದರ ಎಫ್ .ಡಿ.ಎ ಆಗಿರುವ ಗಿರಿರಾಜ್ ಅವರು ಬಸವನಗುಡಿಯ ತಮ್ಮ ಮನೆಯಿಂದ ನಾಪತ್ತೆಯಾಗಿದ್ದಾರೆ. ಇದು ಅಧಿಕಾರಿಗಳ … Read more

ರೈಲ್ವೆ ಹಳಿ ಜಲಾವೃತ, ತಾಳಗುಪ್ಪದಿಂದ ಹೊರಡುವ ರೈಲುಗಳ ಸಂಚಾರಕ್ಕೆ ಅಡ್ಡಿ

230721 Railway Lane Drowned in Rain Water 1

ಶಿವಮೊಗ್ಗ ಲೈವ್.ಕಾಂ | TALAGUPPA NEWS | 23 ಜುಲೈ 2021 ಭಾರಿ ಮಳೆ ಹಿನ್ನೆಲೆ ಹಳಿ ಮೇಲೆ ನೀರು ನಿಂತಿರುವುದರಿಂದ ರೈಲು ಸಂಚಾರಕ್ಕೆ ಅಡ್ಡಿಯಾಗುವ ಸಂಭವವಿದೆ. ತಾಳಗುಪ್ಪ ಸಮೀಪದ ಕಾನ್ಲೆ ಎಂಬಲ್ಲಿ ರೈಲು ಹಳಿ ಮೇಲೆ ನೀರು ನಿಂತಿದೆ. ಹಳಿ ಮೇಲೆ ನೀರು ನಿಂತಿರುವುದರಿಂದ ರೈಲು ಸಂಚಾರಕ್ಕೆ ತೊಂದರೆ ಉಂಟಾಗಲಿದೆ. ಹಾಗಾಗಿ ತಾಳಗುಪ್ಪದಿಂದ ರೈಲು ಸಂಚಾರ ಸ್ಥಗಿತಗೊಳ್ಳುವ ಸಂಭವವಿದೆ. ತಾಳಗುಪ್ಪದಿಂದ ಮೈಸೂರಿಗೆ ತೆರಳುತ್ತಿದ್ದ ಮಧ್ಯಾಹ್ನದ ರೈಲು ಸಾಗರ ಜಂಬಗಾರು ರೈಲ್ವೆ ನಿಲ್ದಾಣದಿಂದ ಸಂಚಾರ ಆರಂಭಿಸುವ ಸಾಧ್ಯತೆ … Read more

ಶಿಮಮೊಗ್ಗ ಮೇಯರ್ ಸಿಟಿ ರೌಂಡ್ಸ್, ವಿವಿಧ ಬಡಾವಣೆಗಳಲ್ಲಿ ಪರಿಶೀಲನೆ, ಏನೆಲ್ಲ ಸೂಚನೆ ಕೊಟ್ಟಿದ್ದಾರೆ?

150521 Mayor Visit Rain Affected Areas 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 15 MAY 2021 ಭಾರಿ ಮಳೆಯಿಂದ ಶಿವಮೊಗ್ಗ ನಗರದ ವಿವಿಧೆಡೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಹಾನಿ ಸಂಭವಿಸಿದೆ. ಮೇಯರ್ ನೇತೃತ್ವದ ತಂಡ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ನಗರದ ವಿವಿಧೆಡೆ ಮನೆಗಳಿಗೆ ನೀರು ನುಗ್ಗಿ ಆಸ್ತಿಪಾಸ್ತಿ ಹಾನಿ ಸಂಭವಿಸಿದೆ. ಇವೆಲ್ಲದರ ಪರಿಶೀಲನೆ ನಡೆಸಿದ ಮೇಯರ್, ತುರ್ತು ಕಾರ್ಯಪ್ರವೃತ್ತರಾಗುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಕೆಲವು ಬಡಾವಣೆಗಳ ಚರಂಡಿ ತುಂಬಿ ರಸ್ತೆಯ ಮೇಲೆ ನೀರು ನಿಂತಿದೆ. ಹಾಗಾಗಿ … Read more

ಗಾಂಧಿ ಬಜಾರ್‌ನಲ್ಲಿ ದಿಢೀರ್ ಮಾಸ್ಕ್ ಕಾರ್ಯಾಚರಣೆ, ಬೈಕ್ ಬಿಟ್ಟು ಹೋದ ಯುವಕ, ವರ್ತಕರು ಗರಂ

020520 Left Right Policy in Shimoga Gandhi Bazaar 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 31 MARCH 2021 ಕರೋನ ಎರಡನೆ ಅಲೆ ಭೀತಿ, ರಾಜ್ಯ ಸರ್ಕಾರ ಮಾಸ್ಕ್ ಮತ್ತು ಸಾಮಾಜಿಕ ಅಂತರ ಕಡ್ಡಾಯಗೊಳಿಸಿದ ಬೆನ್ನಿಗೆ ಶಿವಮೊಗ್ಗದಲ್ಲಿ ಮಾಸ್ಕ್ ಕಾರ್ಯಾಚರಣೆ ಶುರುವಾಗಿದೆ. ಹೆಚ್ಚು ಜನ ಸೇರುವೆಡೆ ಮಾಸ್ಕ್ ಧರಿಸದೆ ಓಡಾಡುತ್ತಿದ್ದವರಿಗೆ ಪಾಲಿಕೆ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ. ಗಾಂಧಿ ಬಜಾರ್‍ನಲ್ಲಿ  ಮಹಾನಗರ ಪಾಲಿಕೆ ಅಧಿಕಾರಿಗಳು ದಿಢೀರ್ ಮಾಸ್ಕ್ ಕಾರ್ಯಾಚರಣೆ ಆರಂಭಿಸಿದರು. ಬಸವೇಶ್ವರ ದೇವಸ್ಥಾನದ ಬಳಿ ಮಾಸ್ಕ್ ಧರಿಸದೆ ಬರುತ್ತಿದ್ದವರನ್ನು ತಡೆದು, ದಂಡ ಹಾಕಿದ್ದಾರೆ. ಮಹಾನಗರ ಪಾಲಿಕೆ … Read more

ಶರಾವತಿ ನದಿಗಾಗಿ ಸಾಗರ ಸಂಪೂರ್ಣ ಬಂದ್, ಹಳ್ಳಿ ಹಳ್ಳಿಯಲ್ಲೂ ನಡೆಯುತ್ತಿದೆ ಪ್ರತಿಭಟನೆ

ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ | 10 ಜುಲೈ 2019 ಶರಾವತಿ ನದಿ ನೀರನ್ನು ಬೆಂಗಳೂರಿಗೆ ಒಯ್ಯುವ ಅವೈಜ್ಞಾನಿಕ ಯೋಜನೆಯನ್ನು ವಿರೋಧಿಸಿ ಸಾಗರದಲ್ಲಿ ಬಂದ್ ಸಂಪೂರ್ಣ ಯಶಸ್ವಿಯಾಗಿದೆ. ತಾಲೂಕು ಕೇಂದ್ರ ಮಾತ್ರವಲ್ಲದೆ, ಗ್ರಾಮೀಣ ಪ್ರದೇಶದಲ್ಲೂ ಹೋರಾಟಕ್ಕೆ ಬೆಂಬಲ ವ್ಯಕ್ತವಾಗಿದೆ. ಸಾಗರ ಪಟ್ಟಣದಲ್ಲಿ ಅಂಗಡಿ ಮುಂಗಟ್ಟು ಬಂದ್ ಆಗಿವೆ. ಖಾಸಗಿ ಬಸ್ ಸೇವೆ ಸ್ಥಗಿತಗೊಂಡಿರುವುದರಿಂದ, ಸದಾ ಗಿಜಿಗುಡುತ್ತಿದ್ದ ಸಾಗರ ಖಾಸಗಿ ಬಸ್ ನಿಲ್ದಾಣದ ಸ್ಥಬ್ಧವಾಗಿದೆ. ಇನ್ನು ವಾಹನ ಸಂಚಾರವೂ ವಿರಳವಾಗಿದೆ. ಸಾಗರದ ಗ್ರಾಮೀಣ ಭಾಗದಲ್ಲೂ ಪ್ರತಿಭಟನೆ ನಡೆಯುತ್ತಿದೆ. ಸಿಗಂದೂರಿಗೆ … Read more