ಶಿವಮೊಗ್ಗದಲ್ಲಿ 3 ಕೆ.ಜಿ ಬೆಳ್ಳಿ ವಸ್ತು, ₹17 ಲಕ್ಷದ ಚಿನ್ನಾಭರಣ ಕಳವು, ಹೇಗಾಯ್ತು ಘಟನೆ?

Police-Jeep-in-Shimoga-city

ಶಿವಮೊಗ್ಗ: ಮನೆಯೊಂದರ ಬೀಗ ಮುರಿದು ಲಕ್ಷಾಂತರ ಮೌಲ್ಯದ ಚಿನ್ನಾಭರಣ, ಬೆಳ್ಳಿ ವಸ್ತುಗಳನ್ನು ಕಳ್ಳತನ ಮಾಡಲಾಗಿದೆ. ಶಿವಮೊಗ್ಗ ನಗರದ ದೂರವಾಣಿ ಬಡಾವಣೆಯ ಅಶ್ವಿನಿ ಎಂಬುವವರ ಮನೆಯಲ್ಲಿ ಕಳ್ಳತನವಾಗಿದೆ (Theft). ಅಶ್ವಿನಿ ಕುಟುಂಬದೊಂದಿಗೆ ತಮ್ಮ ತಾಯಿ ಮನೆಗೆ ತೆರಳಿದ್ದರು. ದೀಪಾವಳಿ ಹಬ್ಬದ ಬೆಳಗ್ಗೆ ಪಕ್ಕದ ಮನೆಯವರು ಅಶ್ವಿನಿ ಅವರಿಗೆ ಕರೆ ಮಾಡಿ ‘ಮನೆ ಬಾಗಿಲು ತೆಗೆದಿದ್ದು, ಮನೆಯಲ್ಲೇ ಇದ್ದೀರʼ ಎಂದು ವಿಚಾರಿಸಿದ್ದರು. ಕೂಡಲೆ ಊರಿನಿಂದ ಮರಳಿದ್ದು, ಪರಿಶೀಲಿಸಿದಾಗ ಚಿನ್ನಾಭರಣ, ಬೆಳ್ಳಿ ವಸ್ತುಗಳು ಕಳುವಾಗಿರುವುದು ಗೊತ್ತಾಗಿದೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ಮನೆಯ … Read more

ಬೆಳ್ಳಿ ಮತ್ತಷ್ಟು ದುಬಾರಿ, ಚಿನ್ನದ ಬೆಲೆಯು ಹೆಚ್ಚಳ, ಎಷ್ಟಾಗಿದೆ ರೇಟ್‌?

BUSINESS-NEWS.webp

ಮಾರುಕಟ್ಟೆ ಮಾಹಿತಿ: ಚಿನಿವಾರ ಪೇಟೆಯಲ್ಲಿ ಗುರುವಾರ ನಡೆದ ವಹಿವಾಟಿನಲ್ಲಿ ಬೆಳ್ಳಿ ದರವು (Silver Price) ಹೊಸ ದಾಖಲೆ ನಿರ್ಮಿಸಿದೆ. ಪ್ರತಿ ಕೆ.ಜಿ ಬೆಳ್ಳಿ 2,000 ರೂ. ಏರಿಕೆಯಾಗಿ 1.04 ಲಕ್ಷ ರೂ.ಗೆ ಮಾರಾಟವಾಗಿದೆ. ಈ ಹಿಂದೆ ಮಾರ್ಚ್ 19ರಂದು 1.03 ಲಕ್ಷ ರೂ. ಗರಿಷ್ಠ ಮಟ್ಟಕ್ಕೆ ತಲುಪಿತ್ತು. ಚಿನ್ನದ ದರದಲ್ಲಿಯೂ ಗಣನೀಯ ಏರಿಕೆ ಕಂಡುಬಂದಿದೆ. ಶುದ್ಧ ಚಿನ್ನ (ಶೇ 99.9 ಪರಿಶುದ್ಧತೆ) 10 ಗ್ರಾಂಗೆ 430 ರೂ. ಏರಿಕೆಯಾಗಿ 99,690 ರೂ.ಗೆ ತಲುಪಿದೆ. ಹಾಗೆಯೇ, ಆಭರಣ ಚಿನ್ನದ … Read more

ಶಿವಮೊಗ್ಗಕ್ಕೆ ಎರಡು ಚಿನ್ನ, ಎರಡು ಬೆಳ್ಳಿ, ಮೂರು ಕಂಚಿನ ಪದಕ

Taekwondo

SHIMOGA, 13 AUGUST 2024 :‌ ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ರಾಜ್ಯಮಟ್ಟದ ಟೇಕ್ವಾಂಡೋ ಸ್ಪರ್ಧೆಯಲ್ಲಿ ಶಿವಮೊಗ್ಗ ಜಿಲ್ಲೆಯ ಕ್ರೀಡಾಪಟುಗಳು 7 ಪದಕ (Medal) ಪಡೆದಿದ್ದಾರೆ ಎಂದು ಟೇಕ್ವಾಂಡೋ (Taekwondo) ಸಂಸ್ಥೆಯ ಜಿಲ್ಲಾ ಕಾರ್ಯದರ್ಶಿ ಆ‌ರ್.ಮೀನಾಕ್ಷಿ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಟೇಕ್ವಾಂಡೋ ಅಸೋಸಿಯೇಷನ್‌ ಕಾರ್ಯದರ್ಶಿ ಸಿ.ಎ.ಶಶಿವರ್ಧನ್ ನೇತೃತ್ವದಲ್ಲಿ ಬೆಂಗಳೂರಿನಲ್ಲಿ 41ನೇ ರಾಜ್ಯಮಟ್ಟದ ಟೇಕ್ವಾಂಡೋ ಅಧಿಕೃತ ಚಾಂಪಿಯನ್‌ಶಿಪ್‌ನಲ್ಲಿ ಜಿಲ್ಲೆಯ 18 ಮಕ್ಕಳು ಭಾಗವಹಿಸಿದ್ದರು. ತಲಾ ಎರಡು ಚಿನ್ನ ಮತ್ತು ಬೆಳ್ಳಿ ಹಾಗೂ 3 ಕಂಚಿನ ಪದಕ ಗೆದ್ದಿದ್ದಾರೆ … Read more

ಶಿವಮೊಗ್ಗದಲ್ಲಿ ಮನೆಯ ಹಂಚು ತೆಗೆದು ಒಳ ನುಗ್ಗಿ 1200 ಉಂಗುರ ಕದ್ದ ಖದೀಮರು

crime name image

SHIVAMOGGA LIVE NEWS | 9 DECEMBER 2022 ಶಿವಮೊಗ : ಮನೆಯ ಮೇಲ್ಛಾವಣಿಯ ಹಂಚು ತೆಗೆದು 1200 ಉಂಗುರಗಳನ್ನು (rings) ಕಳ್ಳತನ ಮಾಡಲಾಗಿದೆ. ಮನೆ ಮಾಲೀಕ ಊರಿಗೆ ಹೋಗಿದ್ದ ವೇಳೆ ಘಟನೆ ಸಂಭವಿಸಿದೆ. ಉಪ್ಪಾರ ಕೇರಿ 2ನೇ ಅಡ್ಡರಸ್ತೆಯಲ್ಲಿರುವ ರಾಜು ಎಂಬುವವರಿಗೆ ಸೇರಿದ ಮನೆಯಲ್ಲಿ ಘಟನೆ ಸಂಭವಿಸಿದೆ. ರಾಜು ಅವರು ಬೆಳ್ಳಿಯ ಉಂಗುರಗಳನ್ನು (rings) ಅಚ್ಚು ಮಾಡಿ ಅಂಗಡಿಗಳಿಗೆ ಮಾರಾಟ ಮಾಡುವ ಕೆಲಸ ಮಾಡುತ್ತಾರೆ. ಇದನ್ನೂ ಓದಿ – 5 ದಿನ ಬಿಟ್ಟು ಶಿವಮೊಗ್ಗದ ಮನೆಗೆ ಬಂದ … Read more

ಶಿವಮೊಗ್ಗದ ರಾಘವೇಂದ್ರ ಮಠಕ್ಕೆ ಬೆಳ್ಳಿ ದ್ವಾರ ಬಾಗಿಲು

shimoga raghavendra mutt at tilakanagara

ಶಿವಮೊಗ್ಗದ ಲೈವ್.ಕಾಂ | SHIMOGA NEWS | 11 ಫೆಬ್ರವರಿ 2022 ಶಿವಮೊಗ್ಗದ ತಿಲಕನಗರ ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠದಲ್ಲಿ ಬೆಳ್ಳಿ ದ್ವಾರಬಾಗಿಲು ಅಳವಡಿಸಲಾಗಿದೆ. ಸುಮಾರು 25 ಕೆ.ಜಿ. ಬೆಳ್ಳಿ ಬಳಸಿ ದ್ವಾರ ಬಾಗಿಲು ನಿರ್ಮಿಸಲಾಗಿದೆ. ಕಾರ್ಕಳದ ಬಡಗಿಯರು ಈ ದ್ವಾರಬಾಗಿಲಿನ ವಿನ್ಯಾಸ ರೂಪುಗೊಳಿಸಿದ್ದಾರೆ. ಶಿವಮೊಗ್ಗದ ಭೀಮಾಗೋಲ್ಡ್ ಜ್ಯೂವೆಲರ್ಸ್ ಮಾರ್ಗದರ್ಶನದಲ್ಲಿ ನಿರ್ಮಾಣ ಮಾಡಲಾಗಿದೆ. ಬೆಳ್ಳಿ ದ್ವಾರ ಬಾಗಿಲಿನಲ್ಲಿ ಶ್ರೀ ವಿಷ್ಣುವಿನ ದಶಾವತಾರ ಮೂಡಿ ಬಂದಿದೆ. ಇದು ಭಕ್ತರನ್ನು ಆಕರ್ಷಿಸುತ್ತಿದೆ. ಇದನ್ನೂ ಓದಿ | About Shivamogga Live

ಬೆಳ್ಳಿ ಗೆದ್ದ ಐಎಎಸ್ ಅಧಿಕಾರಿ, ಅವರು ಆಡಿ ಬೆಳೆದ ವಿನೋಬನಗರ ರಸ್ತೆಯಲ್ಲಿ ಸಿಹಿ ಹಂಚಿ ಜನರ ಖುಷಿ

050921 Celebration at Vinobanagara over paralympics

ಶಿವಮೊಗ್ಗ ಲೈವ್.ಕಾಂ |SHIMOGA NEWS | 5 ಸೆಪ್ಟೆಂಬರ್ 2021 ಐಎಎಸ್ ಅಧಿಕಾರಿ ಸುಹಾಸ್ ಯತಿರಾಜ್ ಪ್ಯಾರಾಲಿಂಪಿಕ್ಸ್’ನಲ್ಲಿ ಬೆಳ್ಳಿ ಪದಕ ಗೆಲ್ಲುತ್ತಿದ್ದಂತೆ ಶಿವಮೊಗ್ಗದಲ್ಲಿ ಅವರು ಆಡಿ ಬೆಳೆದ ರಸ್ತೆಯ ನಿವಾಸಿಗಳು ಸಂಭ್ರಮಾಚರಣೆ ಮಾಡಿದರು. ನೆರೆಹೊರೆಯ ಮನೆಯವರು ಸಿಹಿ ಹಂಚಿ ಖುಷಿಪಟ್ಟರು. ಅಲ್ಲದೆ ಫೋನ್ ಮೂಲಕ ಶುಭಾಶಯಗಳನ್ನು ತಿಳಿಸಿದರು. ಸುಹಾಸ್ ಯತಿರಾಜ್ ಅವರು ಪ್ಯಾರಾಲಿಂಪಿಕ್ಸ್ ಬ್ಯಾಡ್ಮಿಂಟನ್ ಸಿಂಗಲ್ಸ್ ಪಂದ್ಯದಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ. ರಾಷ್ಟ್ರಪತಿ ರಾಮನಾಥ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ದೇಶಾದ್ಯಂತ ಜನರು ಅಭಿನಂದನೆ ಸಲ್ಲಿಸಿದರು. … Read more