ಒಕ್ಕಲಿಗರ ಸಂಘದ ಚುನಾವಣೆ, ಧರ್ಮೇಶ್’ಗೆ ಭರ್ಜರಿ ಗೆಲುವು, ಯಾವ್ಯಾವ ತಾಲೂಕಿನಲ್ಲಿ ಎಷ್ಟು ಮತ ಬಂದಿದೆ?
ಶಿವಮೊಗ್ಗ ಲೈವ್.ಕಾಂ | SHIMOGA NEWS | 15 ಡಿಸೆಂಬರ್ 2021 ತೀವ್ರ ಕುತೂಹಲ ಕೆರಳಿಸಿದ್ದ ಒಕ್ಕಲಿಗರ ಸಂಘದ ರಾಜ್ಯ ನಿರ್ದೇಶಕರ ಸ್ಥಾನದ ಚುನಾವಣೆಯಲ್ಲಿ ತೀರ್ಥಹಳ್ಳಿಯ ಧರ್ಮೇಶ್ ಸಿರಿಬೈಲು ಅವರು ಭರ್ಜರಿ ಗೆಲುವು ಸಾಧಿಸಿದ್ದಾರೆ. ಪ್ರತಿಸ್ಪರ್ಧಿ ಭದ್ರಾವತಿಯ ಕುಮಾರ್ ಅವರಿಗಿಂತಲೂ ಎರಡು ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಜಯಶಾಲಿಯಾಗಿದ್ದಾರೆ. ಧರ್ಮೇಶ್ ಅವರು 5808 ಮತಗಳನ್ನು ಪಡೆದಿದ್ದಾರೆ. ಕುಮಾರ್ ಅವರು 3486 ಮತಗಳನ್ನು ಗಳಿಸಿದ್ದಾರೆ. ಬಹುಮತ ಪಡೆದ ಧರ್ಮೇಶ್ ಅವರನ್ನು ಜಯಶಾಲಿ ಎಂದು ಘೋಷಿಸಲಾಯಿತು. ಬೆಂಬಲಿಗರಿಂದ ಸಂಭ್ರಮಾಚಾರಣೆ ಧರ್ಮೇಶ್ … Read more