ಶಿವಮೊಗ್ಗ ಸುಬ್ಬಣ್ಣ ಇನ್ನಿಲ್ಲ, ಅವರ ಬಗ್ಗೆ ಗೊತ್ತಿರಬೇಕಾದ 8 ವಿಚಾರಗಳಿವು
ಶಿವಮೊಗ್ಗ| ಖ್ಯಾತ ಸುಗಮ ಸಂಗೀತ ಗಾಯಕ ಶಿವಮೊಗ್ಗ ಸುಬ್ಬಣ್ಣ (83) ನಿಧನರಾಗಿದ್ದಾರೆ. ಬೆಂಗಳೂರಿನ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಅವರು ಕೊನೆಯುಸಿರೆಳೆದರು. ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಇವತ್ತು ಶಿವಮೊಗ್ಗ ಸುಬ್ಬಣ್ಣ (SHIMOGA SUBBANNA) ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಗೊತ್ತಿರಬೇಕಾದ ಸಂಗತಿಗಳಿವು ಶಿವಮೊಗ್ಗ ಸುಬ್ಬಣ್ಣ ಅವರ ನಿಜ ಹೆಸರು ಜಿ.ಸುಬ್ರಹ್ಮಣ್ಯಂ. ಹೊಸನಗರ (HOSANAGARA) ತಾಲೂಕು ನಗರ ಗ್ರಾಮದಲ್ಲಿ 1938ರಲ್ಲಿ ಜನನ. ತಂದೆ ಗಣೇಶ್ ರಾವ್ ಮತ್ತು ತಾಯಿ ರಂಗನಾಯಕಮ್ಮ. … Read more