ಸಾಗರ ತಾಲೂಕು ಪಂಚಾಯಿತಿ ಅಧ್ಯಕ್ಷ ವಿರುದ್ಧ ಅವಿಶ್ವಾಸದ ನೊಟೀಸ್, ಕೂಡಲೇ ಸಭೆ ಕರೆಯುವಂತೆ ಸದಸ್ಯರ ಆಗ್ರಹ

SAGARA MAP GRAPHICS 1

ಶಿವಮೊಗ್ಗ ಲೈವ್.ಕಾಂ | SAGARA | 1 ಫೆಬ್ರವರಿ 2020 ಸಾಗರ ತಾಲೂಕು ಪಂಚಾಯಿತಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡನೆಗೆ ಸಭೆ ಕರೆಯಲು ಹನ್ನೊಂದು ಸದಸ್ಯರು ಜಿಲ್ಲಾಧಿಕಾರಿ ಮತ್ತು ತಾಪಂ ಕಾರ್ಯನಿರ್ವಾಹಕ ಅಧಿಕಾರಿಗೆ ನೋಟಿಸ್ ನೀಡಿದ್ದಾರೆ. ನಾಲ್ಕು ತಿಂಗಳಿನಿಂದ ಸಭೆಯನ್ನೇ ಕರೆದಿಲ್ಲ. ಅಧ್ಯಕ್ಷರ ಮೇಲೆ ನಮಗೆ ವಿಶ್ವಾಸವಿಲ್ಲ. ಹೀಗಾಗಿ ಅವಿಶ್ವಾಸ ಗೊತ್ತುವಳಿ ಮಂಡನೆಗೆ ಸಭೆ ಕರೆಯಬೇಕು ಎಂದು ಮನವಿ ಮಾಡಿದ್ದಾರೆ. ಬಿಜೆಪಿಯ 6, ಕಾಂಗ್ರೆಸ್ ಮತ್ತು ಜೆಡಿಎಸ್‌ನ ತಲಾ ಒಬ್ಬರು, ಮೂವರು ಪಕ್ಷೇತರರು … Read more

ಜಿಲ್ಲೆಯಾದ್ಯಂತ ಬಿಜೆಪಿ ಕಾರ್ಯಕರ್ತರ ಸಂಭ್ರಮಾಚರಣೆ, ಯಾವ್ಯಾವ ತಾಲೂಕಲ್ಲಿ ಹೇಗಿತ್ತು ಸಂಭ್ರಮ?

ಶಿವಮೊಗ್ಗ ಲೈವ್.ಕಾಂ | SHIMOGA | 09 ಡಿಸೆಂಬರ್ 2019 ಉಪ ಚುನಾವಣೆಯಲ್ಲಿ ಬಿಜೆಪಿ ಭರ್ಜರಿಗೆ ಗೆಲುವು ಸಾಧಿಸಿದ ಹಿನ್ನೆಲೆ, ಜಿಲ್ಲೆಯಾದ್ಯಂತ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದರು. ಪಟಾಕಿ ಸಿಡಿಸಿ, ಸಿಹಿ ಹಂಚಿ ಖುಷಿಪಟ್ಟರು. ಭದ್ರಾವತಿಯಲ್ಲಿ ಸಂಭ್ರಮ ಜೋರು ರಂಗಪ್ಪ ಸರ್ಕಲ್’ನಲ್ಲಿ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಿಸಿದರು. ಸಿಎಂ ಯಡಿಯೂರಪ್ಪ ಮತ್ತು ಪಕ್ಷದ ಚಿಹ್ನೆಗೆ ಹಾರ ಹಾಕಿದರು. ತಾಲೂಕು ಅಧ್ಯಕ್ಷ ಪ್ರಭಾಕರ್, ಪ್ರಮುಖರಾದ ಕದಿರೇಶ್, ರಾಮಚಂದ್ರ, ಧರ್ಮಪ್ರಸಾದ್, ಮಂಗೋಟೆ ರುದ್ರೇಶ್, ಬಿ.ಕೆ.ಶ್ರೀನಾಥ್, ಶೋಭಾ, ಅನ್ನಪೂರ್ಣ ಸೇರಿದಂತೆ ಹಲವರು ಈ … Read more

ಸಾಗರದ ಸಿಗಂದೂರು ರಸ್ತೆಯಲ್ಲಿ ಕಾಡುಕೋಣಗಳು ಪ್ರತ್ಯಕ್ಷ, ವಿಡಿಯೋ ವೈರಲ್

ಶಿವಮೊಗ್ಗ ಲೈವ್.ಕಾಂ | 30 ಮಾರ್ಚ್ 2019 ಸಾಗರ ಪಟ್ಟಣದಲ್ಲಿ ಕಾಡುಕೋಣಗಳು ಓಡಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಎರಡು ಕಾಡುಕೋಣಗಳು ರಾಜಾರೋಷವಾಗಿ ರಸ್ತೆಯಲ್ಲಿ ಸಾಗುತ್ತಿರುವುದನ್ನು ಮೊಬೈಲ್ ಕ್ಯಾಮರಾದಲ್ಲಿ ಸೆರೆ ಹಿಡಿಯಲಾಗಿದೆ. ಗುರುವಾರ ಮಧ್ಯರಾತ್ರಿ ಸಾಗರದ ಎಸ್.ಎನ್.ನಗರದಲ್ಲಿ ಎರಡು ಕಾಡು ಕೋಣಗಳು ಪ್ರತ್ಯಕ್ಷವಾಗಿವೆ. ಸಾಗರ ಸಿಗಂದೂರು ರಸ್ತೆಯಲ್ಲಿ ಹೋಗುತ್ತಿದ್ದ ಕಾಡುಕೋಣಗಳನ್ನು, ರಸ್ತೆಯಲ್ಲಿ ಸಾಗುತ್ತಿದ್ದ ಲಾರಿ, ಕಾರಿನಲ್ಲಿ ತೆರಳುತ್ತಿದ್ದವರು ಗಮನಿಸಿ, ವಾಹನಗಳನ್ನು ಸೈಡಿಗೆ ನಿಲ್ಲಿಸಿದ್ದಾರೆ. ಕಾಡುಕೋಣಗಳ ವಿಚಾರ ತಿಳಿಯದ ಪೊಲೀಸರು, ಬೈಕಿನಲ್ಲಿ ಅವುಗಳ ಬಳಿಗೆ ಹೋಗಿ, ಬೆದರಿ ಹಿಂತಿರುಗುವ ದೃಶ್ಯ, … Read more