ಶಿವಮೊಗ್ಗ ವಿಮಾನ ನಿಲ್ದಾಣ ರಸ್ತೆಯಲ್ಲಿ ಶಿಕ್ಷಕನ ದರೋಡೆ, ರೀಲ್ಸ್‌ಗೆ ಲೈಕ್‌ ಕೊಟ್ಟವನಿಂದಲೇ ಕೃತ್ಯ

SHIMOGA-NEWS-UPDATE

ಶಿವಮೊಗ್ಗ: ‘ನಿಮ್ಮ ರೀಲ್ಸ್‌ನ ಅಭಿಮಾನಿಗಳು’ ಎಂದು ತಿಳಿಸಿ ಟೀಚರ್‌ (Teacher) ಒಬ್ಬರನ್ನು ದರೋಡೆ ಮಾಡಲಾಗಿದೆ. ಶಿವಮೊಗ್ಗ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಪೆಟ್ರೋಲ್‌ ಬಂಕ್‌ ಬಳಿ ಕೃತ್ಯ ನಡೆದಿದೆ. ಖಾಸಗಿ ಶಾಲೆಯೊಂದರ ಶಿಕ್ಷಕ (ಹೆಸರು ಗೌಪ್ಯ) ಇನ್‌ಸ್ಟಾಗ್ರಾಂನಲ್ಲಿ ರೀಲ್ಸ್‌ ಅಪ್‌ಲೋಡ್‌ ಮಾಡುತ್ತಿದ್ದರು. ಅವರ ಇನ್‌ಸ್ಟಾಗ್ರಾಂಗೆ ವ್ಯಕ್ತಿಯೊಬ್ಬ ಮೆಸೇಜ್‌ ಮಾಡಿದ್ದ. ಶಿಕ್ಷಕನ ರೀಲ್ಸ್‌ಗೆ ಮೆಚ್ಚುಗೆಯನ್ನೂ ವ್ಯಕ್ತಪಡಿಸಿದ್ದ. ಕೊನೆಗೆ ಶಿಕ್ಷಕನನ್ನು ಭೇಟಿಯಾಗಬೇಕು ಎಂದು ತಿಳಿಸಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ನ.7ರ ರಾತ್ರಿ 9.30ಕ್ಕೆ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಪೆಟ್ರೋಲ್‌ ಬಂಕ್‌ ಬಳಿ … Read more

ಕುಬಟೂರು ಬಳಿ ಬೈಕುಗಳ ಡಿಕ್ಕಿ, ಶಿಕ್ಷಕಿಯ ಕಾಲಿಗೆ ಗಂಭೀರ ಗಾಯ, ಶಿವಮೊಗ್ಗದ ಆಸ್ಪತ್ರೆಗೆ ದಾಖಲು

ACCIDENT-NEWS-GENERAL-IMAGE.

ಸೊರಬ: ಶಾಲೆ ಮುಗಿಸಿ ದ್ವಿಚಕ್ರ ವಾಹನದಲ್ಲಿ ಮನೆಗೆ ಮರಳುತ್ತಿದ್ದ ಶಿಕ್ಷಕಿಗೆ (Teacher) ಎದುರಿನಿಂದ ಬೈಕ್‌ ಡಿಕ್ಕಿ ಹೊಡೆದಿದೆ. ಶಿಕ್ಷಕಿಯ ಬಲಗಾಲಿಗೆ ಗಂಭೀರ ಗಾಯವಾಗಿದ್ದು, ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಶಿಕ್ಷಕಿ ರತ್ನಾ ಅವರು ಶಾಲೆ ಕರ್ತವ್ಯ ಮುಗಿಸಿಕೊಂಡು ಮಧ್ಯಾಹ್ನ ಸೊರಬ ತಾಲೂಕು ತಿಮ್ಮಾಪುರದ ಮನೆಗೆ ಹಿಂತಿರುಗುತ್ತಿದ್ದರು. ಕುಬಟೂರು ಸಮೀಪ ರತ್ನಾ ಅವರು ತಮ್ಮ ದ್ವಿಚಕ್ರ ವಾಹನದಲ್ಲಿ ತೆರಳುವಾಗ ಎದುರಿನಿಂದ ಆಟೋ ಬರುತಿತ್ತು. ರಸ್ತೆಯ ಎಡ ಬದಿಯಲ್ಲಿ ಗುಂಡಿ ಇದ್ದಿದ್ದರಿಂದ ರತ್ನಾ ತಮ್ಮ ದ್ವಿಚಕ್ರ ವಾಹನವನ್ನು ರಸ್ತೆ ಎಡಬದಿಯಲ್ಲಿ ನಿಲ್ಲಿಸಿಕೊಂಡು, ಆಟೋ … Read more

ರಾತ್ರಿ ವಾಕಿಂಗ್‌ ಮಾಡುತ್ತಿದ್ದ ಶಿಕ್ಷಕನ ಮೇಲೆ ನಾಲ್ವರು ಅಪರಿಚಿತರಿಂದ ದಾಳಿ, ಮುಂದೇನಾಯ್ತು?

Police-Van-Jeep-at-Shimoga-Nehru-Road

ಶಿವಮೊಗ್ಗ : ರಾತ್ರಿ ಊಟ ಮುಗಿಸಿ ಮನೆ ಸಮೀಪ ವಾಕಿಂಗ್‌ (Walking) ಮಾಡುತ್ತಿದ್ದ ಶಿಕ್ಷಕರೊಬ್ಬರಿಗೆ ಹೊಡೆದ ನಾಲ್ವರು ಯುವಕರು ಮೊಬೈಲ್‌ ಕಸಿದುಕೊಂಡು ಪರಾರಿಯಾಗಿದ್ದಾರೆ. ವಿನೋಬನಗರ ಪೊಲೀಸ್‌ ಠಾಣೆ ವ್ಯಾಪ್ತಿಯ ಅರವಿಂದ ನಗರದಲ್ಲಿ ಘಟನೆ ಸಂಭವಿಸಿದೆ. ಶಿಕ್ಷಕ ವೀರೇಶ್‌ ಅವರು ರಾತ್ರಿ 10 ಗಂಟೆ ಹೊತ್ತಿಗೆ ಅರವಿಂದ ನಗರದಿಂದ ಸೂರ್ಯ ಲೇಔಟ್‌ ಕಡೆಗೆ ವಾಕಿಂಗ್‌ ಮಾಡುತ್ತಿದ್ದರು. ಈ ವೇಳೆ ಎದುರಾದ ನಾಲ್ವರು ಅಪರಿಚಿತ ಯುವಕರು ವೀರೇಶ್‌ ಅವರ ಹಣೆಗೆ ಹೊಡೆದು, ಶರ್ಟ್‌ ಜೇಬಿನಲ್ಲಿದ್ದ ರೆಡ್‌ ಮಿ ಮೊಬೈಲ್‌ ಕಸಿದುಕೊಂಡಿದ್ದಾರೆ … Read more

ಲಾರಿ ಡಿಕ್ಕಿ, ಪ್ರಾಥಮಿಕ ಶಾಲೆ ಶಿಕ್ಷಕಿ ದುರ್ಮರಣ, ಹೇಗಾಯ್ತು ಘಟನೆ?

School-Teacher-Shakuntala-succumbed-at-agaradalli

HOLEHONNURU NEWS, 26 OCTOBER 2024 : ಲಾರಿ ಡಿಕ್ಕಿ ಹೊಡೆದು ಶಿಕ್ಷಕಿಯೊಬ್ಬರು (Teacher) ಮೃತಪಟ್ಟಿದ್ದಾರೆ. ಹೊಳೆಹೊನ್ನೂರು ಸಮೀಪದ ಆಗರದಹಳ್ಳಿಯಲ್ಲಿ ಘಟನೆ ಸಂಭವಿಸಿದೆ. ಚನ್ನಗಿರಿ ತಾಲೂಕು ಮಾನವಿಕಟ್ಟೆ ಮೂಲದ, ಸಾಗರ ತಾಲೂಕು ಪ್ರಾಥಮಿಕ ಶಾಲೆ ಶಿಕ್ಷಕಿ ಶಕುಂತಲಾ (29) ಮೃತರು. ಆಗರದಹಳ್ಳಿಯಲ್ಲಿ ಸ್ನೇಹಿತೆ ಮನೆಗೆ ತೆರಳಿ ಆಕೆಯನ್ನು ಭೇಟಿಯಾಗಿ,  ಶಿವಮೊಗ್ಗದಲ್ಲಿ ಆಯೋಜಿಸಲಾಗಿದ್ದ ತರಬೇತಿಯಲ್ಲಿ ಭಾಗವಹಿಸಲು ತೆರಳುತ್ತಿದ್ದರು. ಬಸ್‌ ಹತ್ತಲು ರಸ್ತೆ ದಾಟುವಾಗ ಲಾರಿ ಡಿಕ್ಕಿ ಹೊಡೆದಿತ್ತು. ಇದನ್ನೂ ಓದಿ » MRPಗಿಂತಲು ಹೆಚ್ಚಿನ ದರಕ್ಕೆ ಮದ್ಯ ಮಾರಾಟ ಮಾಡದಂತೆ … Read more

ಬ್ಯಾಂಕ್‌ ಮ್ಯಾನೇಜರ್‌ಗೆ ಕರೆ ಮಾಡಿದ ಶಿಕ್ಷಕಿ, 24 ಗಂಟೆ ಬಳಿಕ ಕಾದಿತ್ತು ಶಾಕ್

Online-Fraud-In-Shimoga

SHIMOGA NEWS, 22 OCTOBER 2024 : ಗೂಗಲ್‌ನಲ್ಲಿ ಯುನಿಯನ್‌ ಬ್ಯಾಂಕ್‌ (Bank) ಮ್ಯಾನೇಜರ್‌ ನಂಬರ್‌ ಸರ್ಚ್‌ ಮಾಡಿ ಕರೆ ಮಾಡಿದ್ದ ಮಹಿಳೆಯ ಬ್ಯಾಂಕ್‌‌ ಖಾತೆಯಿಂದ 9.19 ಲಕ್ಷ ರೂ. ಕಣ್ಮರೆಯಾಗಿದೆ. ಶಿವಮೊಗ್ಗ ಶಿಕ್ಷಕಿಯೊಬ್ಬರು ಹಣ ಕಳೆದುಕೊಂಡು ಸಿಇಎನ್‌ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಬ್ಯಾಂಕಿಂಗ್‌ ವ್ಯವಹಾರ ಸಂಬಂಧ ಮಾಹಿತಿ ಪಡೆಯಲು ಶಿಕ್ಷಕಿಯೊಬ್ಬರು (ಹೆಸರು ಗೌಪ್ಯ) ಗೂಗಲ್‌ನಲ್ಲಿ ಯುನಿಯನ್‌ ಬ್ಯಾಂಕ್‌ ಮ್ಯಾನೇಜರ್‌ ಮೊಬೈಲ್‌ ನಂಬರ್‌ ಸರ್ಚ್‌ ಮಾಡಿದ್ದರು. ಅಲ್ಲಿ ದೊರೆತ ನಂಬರ್‌ಗೆ ಕರೆ ಮಾಡಿದಾಗ ವ್ಯಕ್ತಿಯೊಬ್ಬ ಮ್ಯಾನೇಜರ್‌ … Read more

ಶಾಲೆ ಆವರಣದಲ್ಲಿಯೇ ಕುಸಿದು ಬಿದ್ದು ಶಿಕ್ಷಕ ಕೊನೆಯುಸಿರು

Teacher-Breathed-last-at-sagara

SAGARA NEWS, 16 OCTOBER 2024 : ವಿದ್ಯಾರ್ಥಿಗಳಿಗೆ ವಾಲಿಬಾಲ್‌ ತರಬೇತಿ ನೀಡುತ್ತಿದ್ದಾಗ ಶಾಲೆ ಆವರಣದಲ್ಲಿಯೇ ಕುಸಿದು ಬಿದ್ದು ಶಿಕ್ಷಕರೊಬ್ಬರು (Teacher) ಮೃತಪಟ್ಟಿದ್ದಾರೆ. ಸಾಗರ ತಾಲೂಕು ಖಾಸಗಿ ಶಾಲೆಯೊಂದರಲ್ಲಿ ಇಂದು ಮಧ್ಯಾಹ್ನ ಘಟನೆ ಸಂಭವಿಸಿದೆ. ಪ್ರಗತಿ ಸಂಯುಕ್ತ ಪ್ರೌಢಶಾಲೆಯ ಶಿಕ್ಷಕ ಗಜಾನನ ಹಿರೇಮಠ ಮೃತರು. ವಿದ್ಯಾರ್ಥಿಗಳಿಗೆ ವಾಲಿಬಾಲ್‌ ತರಬೇತಿ ನೀಡುತ್ತಿದ್ದಾಗ ಕುಸಿದು ಬಿದ್ದಿದ್ದಾರೆ. ಸಾಗರ ಉಪ ವಿಭಾಗೀಯ ಆಸ್ಪತ್ರೆಗೆ ಅವರನ್ನು ಕರೆದೊಯ್ಯುವಾಗ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾರೆ. ಇದನ್ನೂ ಓದಿ » ಶಿವಮೊಗ್ಗದಲ್ಲಿ ಸಿಟಿ ಬಸ್‌ ಪಲ್ಟಿ ಕ್ಷೇತ್ರ ಶಿಕ್ಷಣಾಧಿಕಾರಿ … Read more

ಶಿವಮೊಗ್ಗದ ಮನೆಯಲ್ಲಿ ಮುಖ್ಯ ಶಿಕ್ಷಕ ನೇಣಿಗೆ ಶರಣು

Crime-News-General-Image

SHIVAMOGGA LIVE NEWS | 1 NOVEMBER 2023 SHIMOGA : ಅನುದಾನಿತ ಶಾಲೆಯೊಂದರ ಮುಖ್ಯ ಶಿಕ್ಷಕ (Teacher) ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಶೋಕನಗರದಲ್ಲಿ ಘಟನೆ ಸಂಭವಿಸಿದೆ. ಷಣ್ಮುಖಪ್ಪ (42) ಅವರು ಭಾನುವಾರ ರಾತ್ರಿ ನೇಣು ಬಿಗಿದುಕೊಂಡಿದ್ದಾರೆ. ಷಣ್ಮುಖಪ್ಪ ಅವರು ಡೆತ್‌ನೋಟ್‌ ಬರೆದಿದ್ದಾರೆ ಎಂದು ಹೇಳಲಾಗುತ್ತಿದೆ. ದೊಡ್ಡಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ- ಶಿವಮೊಗ್ಗ ಜಿಲ್ಲೆಯ ಹವಾಮಾನ ವರದಿ | ನವೆಂಬರ್‌ 1ರಂದು ಯಾವ್ಯಾವ ತಾಲೂಕಿನಲ್ಲಿ ಎಷ್ಟಿರುತ್ತೆ ತಾಪಮಾನ?

ಶಿಕ್ಷಕರ ನೇಮಕಾತಿ, ಅ.21ರಂದು ಶಿವಮೊಗ್ಗದಲ್ಲಿ ಕೌನ್ಸಲಿಂಗ್‌, ಎಲ್ಲಿ ನಡೆಯುತ್ತೆ ಕೌನ್ಸಲಿಂಗ್‌?

DDPI-office-Shimoga.

SHIVAMOGGA LIVE NEWS | 20 OCTOBER 2023 SHIMOGA : 2022ನೇ ಸಾಲಿನ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಮುಖ್ಯ ಆಯ್ಕೆ ಪಟ್ಟಿಯಲ್ಲಿನ ಕೌನ್ಸಲಿಂಗ್‌ಗೆ ಅರ್ಹ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲಾಗಿದೆ. ಅ.21ರಂದು ಶಿವಮೊಗ್ಗದಲ್ಲಿ ಕೌನ್ಸಲಿಂಗ್‌ (Counselling) ನಡೆಯಲಿದೆ ಎಂದು ಡಿಡಿಪಿಐ ಸಿ.ಆರ್ ಪರಮೇಶ್ವರಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅ.19ರಂದು ಶಾಲಾ ಶಿಕ್ಷಣ ಇಲಾಖೆಯ ವೆಬ್‍ಸೈಟ್ https://schooleducation.karnataka.gov.in  ನಲ್ಲಿ ಕೌನ್ಸಲಿಂಗ್‌ಗೆ ಅರ್ಹರಾದ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಲಾಗಿದೆ. ಗಣಿತ ಮತ್ತು ವಿಜ್ಞಾನ, ಸಮಾಜ ವಿಜ್ಞಾನ, ಜೀವ ವಿಜ್ಞಾನ ಮತ್ತು ಆಂಗ್ಲಭಾಷಾ … Read more

ಭದ್ರಾವತಿಯಲ್ಲಿ ಶಿಕ್ಷಕನ ಪರ ಬೀದಿಗಿಳಿಯಿತು ಇಡೀ ಊರು, ರಸ್ತೆ ತಡೆದು ರಾಜಕಾರಣಿಗಳಿಗೆ ಹಿಡಿಶಾಪ ಹಾಕಿದ ಗ್ರಾಮಸ್ಥರು

Protest-in-favor-of-Teacher-at-Aralihalli-at-Bhadravathi.webp

SHIVAMOGGA LIVE NEWS | 21 SEPTEMBER 2023 BHADRAVATHI : ಮುಖ್ಯ ಶಿಕ್ಷಕರೊಬ್ಬರ ವರ್ಗಾವಣೆ (Transfer) ಖಂಡಿಸಿ ಗ್ರಾಮಸ್ಥರು ಶಾಲೆ ಮುಂಭಾಗ ಪ್ರತಿಭಟಿಸಿ (PROTEST), ರಸ್ತೆ ತಡೆ ಮಾಡಿ ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಕೆಲಕಾಲ ಶಾಲೆ ಸಮೀಪ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಭದ್ರಾವತಿ ತಾಲೂಕು ಅರಳಿಹಳ್ಳಿ ಸರ್ಕಾರಿ ಪ್ರೌಢಶಾಲೆ (High School) ಮುಖ್ಯ ಶಿಕ್ಷಕ ಮೋತಿ ನಾಯ್ಕ್‌ ಅವರ ವರ್ಗಾವಣೆ ಖಂಡಿಸಿ ಪೋಷಕರು, ಗ್ರಾಮಸ್ಥರು, ಗ್ರಾಮ ಪಂಚಾಯಿತಿ ಸದಸ್ಯರು ಪ್ರತಿಭಟನೆ ನಡೆಸಿದರು. ರಾಜಕೀಯ ಒತ್ತಡ ಮತ್ತು … Read more

ಕುಂಸಿ ಬಳಿಯಿಂದ ಕುಮಟಾಗೆ ತೆರಳಿ ಬಾಕ್ಸ್‌ ತೆಗೆದ ಶಿಕ್ಷಕಿ, ನರ್ಸ್‌ಗೆ ಕಾದಿತ್ತು ಬಿಗ್‌ ಶಾಕ್‌, ಮಹಾ ವಂಚನೆ ವಿರುದ್ಧ ಕೇಸ್‌

crime name image

SHIVAMOGGA LIVE NEWS | 5 SEPTEMBER 2023 SHIMOGA : ಸುತ್ತೂರು ಮಠದ ಹೆಸರು ದುರ್ಬಳಕೆ ಮಾಡಿಕೊಂಡು ಶಿಕ್ಷಕಿ ಮತ್ತು ನರ್ಸ್‌ಗೆ ಸಿನಿಮೀಯ ರೀತಿಯಲ್ಲಿ 6 ಲಕ್ಷ ರೂ. ಹಣ ವಂಚಿಸಲಾಗಿದೆ. ದುಪ್ಪಟ್ಟು ಹಣದ (Money Doubling) ಆಸೆಗೆ ಬಿದ್ದು ಲಕ್ಷ ಲಕ್ಷ ಹಣ ಕಳೆದುಕೊಂಡ ಮಹಿಳೆಯರು ಶಿವಮೊಗ್ಗ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ. ಸುತ್ತೂರು ಮಠದ ಹೆಸರು ಬಳಕೆ ಸುತ್ತೂರು ಮಠದಲ್ಲಿ ಮ್ಯಾನೇಜರ್‌ ಎಂದು ಹೇಳಿಕೊಂಡು ಕುಮಟದ ಶಿಕ್ಷಕಿ ಸುರೇಖಾ ಅವರಿಗೆ ವ್ಯಕ್ತಿಯೊಬ್ಬ ಕರೆ ಮಾಡಿದ್ದ. … Read more