ಸಿಗಂದೂರು ದೇಗುಲ, ರಾಮಪ್ಪ ಕುಟುಂಬದ ವಿರುದ್ಧ ಪಿತೂರಿ, ಮುಜರಾಯಿಗೆ ವಹಿಸದಂತೆ ಒತ್ತಾಯ

141020 Hulthikoppa Shridar Ediga Sanga Over Siganduru Issue 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 14 ಅಕ್ಟೋಬರ್ 2020 ಸಿಗಂದೂರು ಶ್ರೀ ಚೌಡೇಶ್ವರಿ ದೇಗುಲವನ್ನು ಮುಜರಾಯಿ ಇಲಾಖೆಗೆ ಸೇರಿಸಬಾರದು ಎಂದು ಜಿಲ್ಲಾ ಆರ್ಯ ಈಡಿಗರ ಸಂಘ ಸರ್ಕಾರಕ್ಕೆ ಆಗ್ರಹಿಸಿದೆ. VIDEO REPORT ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರ್ಯ ಈಡಿಗ ಸಂಘದ ಜಿಲ್ಲಾಧ್ಯಕ್ಷ ಶ್ರೀಧರ್ ಹುಲ್ತಿಕೊಪ್ಪ, ಎಲ್ಲ ಧರ್ಮದ ಜನರಿಗೆ ಗೌರವದೊಂದಿಗೆ ಅನೇಕ ಧಾರ್ಮಿಕ, ಸಾಮಾಜಿಕ ಸೇವೆ ಮತ್ತು ಸಹಕಾರ ನೀಡುತ್ತಾ ಬರುತ್ತಿರುವ ದೇವಸ್ಥಾನ ಆಡಳಿತ ಮಂಡಳಿ ಬಗ್ಗೆ ಕೆಲವರು ಇಲ್ಲಸಲ್ಲದ ಅಪಪ್ರಚಾರ ಮಾಡಿ ದೇವಸ್ಥಾನವನ್ನು ಮುಜರಾಯಿ … Read more

ದೇವಸ್ಥಾನದಲ್ಲಿ ಹುಂಡಿ, ದೇವರ ಬೆಳ್ಳಿ ವಸ್ತುಗಳ ಕಳ್ಳತನ, ಮನೆಗೆ ನುಗ್ಗಿ 24 ಸಾವಿರ ಮೌಲ್ಯದ ವಸ್ತುಗಳ ಕಳವು

131020 RML Nagara Temple Theft 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 13 ಅಕ್ಟೋಬರ್ 2020 ಶಿವಮೊಗ್ಗದಲ್ಲಿ ಬೀಗ ಒಡೆದು ಕಳ್ಳತನ ಮಾಡಲಾಗಿದೆ. ಎರಡು ಪ್ರತ್ಯೇಕ ಪ್ರಕರಣಗಳು ವರದಿಯಾಗಿದೆ. ದೇವಸ್ಥಾನದಲ್ಲಿ ಕಳ್ಳತನ ಆರ್.ಎಂ.ಎಲ್.ನಗರದ ಶ್ರೀ ಶನೇಶ್ಚರ ದೇವ್ಥಾನದ ಶಟರ್ ಮುರಿದು ಕಳ್ಳತನ ಮಾಡಲಾಗಿದೆ. ದೇವರ ಹುಂಡಿ, ದೇವರಿಗೆ ತೊಡಿಸಿದ್ದ ಬೆಳ್ಳಿ ಆಭರಣಗಳು ಕಳ್ಳತನ ಮಾಡಲಾಗಿದೆ. ದೊಡ್ಡಪೇಟೆ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮನೆಯಲ್ಲಿ ಕಳ್ಳತನ ಅಜಾದ್ ನಗರದ ಮೂರನೇ ತಿರುವಿನಲ್ಲಿ ಮನೆಗೆ ಕನ್ನ ಹಾಕಿರುವ … Read more

ಸಿಗಂದೂರು ಚೌಡೇಶ್ವರಿ ದೇಗುಲ ಮುಜರಾಯಿಗೆ ಬೇಡ, ಅಂತಹ ಪ್ರಯತ್ನವಾದರೆ ಉಗ್ರ ಹೋರಾಟ

090920 Protest in Favour of Siganduru 1

ಶಿವಮೊಗ್ಗ ಲೈವ್.ಕಾಂ | SAGARA NEWS | 9 ಸೆಪ್ಟಂಬರ್ 2020 ಸಿಗಂದೂರು ಶ್ರೀ ಚೌಡೇಶ್ವರಿ ದೇವಸ್ಥಾನವನ್ನು ಮುಜರಾಯಿಗೆ ಸೇರಿಸದಂತೆ ಆಗ್ರಹಿಸಿದ ಸಾಗರದಲ್ಲಿ ನಾಗರಿಕ ವೇದಿಕೆ ವತಿಯಿಂದ ಉಪ ವಿಭಾಗಾಧಿಕಾರಿ ಅವರಿಗೆ ಮನವಿ ಸಲ್ಲಿಸಲಾಯಿತು. ಸಿಗಂದೂರು ಕ್ಷೇತ್ರಕ್ಕೆ ಶತಮಾನಗಳ ಐತಿಹ್ಯವಿದೆ. ಧರ್ಮದರ್ಶಿ ರಾಮಪ್ಪ ಅವರು ಸುಮಾರು 30 ವರ್ಷದಿಂದ ದೇಗುಲದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಸಿಗಂದೂರು ಚೌಡೇಶ್ವರಿ ಟ್ರಸ್ಟ್‍ ಮೂಲಕ ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ ಕಾರ್ಯಗಳನ್ನು ನಡೆಸುತ್ತಿದ್ದಾರೆ. ದೇಗುಲಕ್ಕೆ ಬರುವ ಭಕ್ತರಿಗೆ ಮೂಲ ಸೌಕರ್ಯ ಒದಗಿಸಲು ಶ್ರಮಿಸುತ್ತಿದ್ದಾರೆ … Read more

ಸ್ವಚ್ಛತೆ ವಿಚಾರವಾಗಿ ತೀರ್ಥಹಳ್ಳಿಯ ಹಣಗೆರೆಯಲ್ಲಿ ಗ್ರಾಮಸ್ಥರ ಗದ್ದಲ, ಲಘು ಲಾಠಿ ಪ್ರಹಾರ

Hanagere temple board

ಶಿವಮೊಗ್ಗ ಲೈವ್.ಕಾಂ | THIRTHAHALLI NEWS | 9 ಸೆಪ್ಟಂಬರ್ 2020 ಗ್ರಾಮದ ಸ್ವಚ್ಛತೆ ವಿಚಾರವಾಗಿ ಎರಡು ಗುಂಪುಗಳ ನಡುವೆ ಗಲಾಟೆಯಾಗಿದೆ. ಗುಂಪು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಕೋಮು ಸೌಹಾರ್ದತೆಗೆ ಹೆಸರಾಗಿರುವ ಹಣಗೆರೆ ಕಟ್ಟೆಯಲ್ಲಿ ಈ ಘಟನೆ ಸಂಭವಿಸಿದೆ. ಗಲಾಟೆಗೆ ಕಾರಣವೇನು? ಹಣಗೆರೆ ಕಟ್ಟೆಗೆ ವನ್ಯಜೀವಿ ವಿಭಾಗದ ಡಿಸಿಎಫ್‍ ಐ.ಎಂ.ನಾಗರಾಜ್ ಅವರು ಭೇಟಿ ನೀಡಿದ್ದರು. ಪರಿಸರ ಹಾನಿ ಮತ್ತು ಅತಿಕ್ರಮ ವಿಚಾರವಾಗಿ ಪರಿಶೀಲನೆ ನಡೆಸಿದರು. ಈ ವೇಳೆ ಎರಡು ಗುಂಪುಗಳ … Read more

ನವುಲೆ ಶನಿಮಹಾತ್ಮ ದೇವಸ್ಥಾನದಲ್ಲಿ ಭಕ್ತರಿಗಿಲ್ಲ ಪ್ರವೇಶ, ಕರೋನ ಮುಗಿಯೋವರೆಗೂ ನಿರ್ಬಂಧ

ಶಿವಮೊಗ್ಗ ಲೈವ್.ಕಾಂ | SHIMOGA NEWS | 26 ಆಗಸ್ಟ್ 2020 ಶಿವಮೊಗ್ಗ ನಗರದಲ್ಲಿ ಕರೋನ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಶಿವಮೊಗ್ಗದ ದೇವಸ್ಥಾನವೊಂದರಲ್ಲಿ ಭಕ್ತರ ಪ್ರವೇಶವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ.   ನವುಲೆಯ ಸಂಕಟ ವಿಮೋಚನ ಶ್ರೀ ಶನೈಶ್ಚರ ಸ್ವಾಮಿ ದೇವಸ್ಥಾನದಲ್ಲಿ ಆಗಸ್ಟ್ 26ರಿಂದ ಸಾರ್ವಜನಿಕರಿಗೆ ದೇವರ ದರ್ಶನ ಇರುವುದಿಲ್ಲ ಎಂದು ದೇವಸ್ಥಾನದ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ನಗರದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಕೊರೋನಾ ವೈರಸನ್ನು ತಡೆಯುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ದೇವಸ್ಥಾನಕ್ಕೆ ಭಕ್ತರು ಹೆಚ್ಚಾಗಿ … Read more

ಸಿಗಂದೂರು ಚೌಡೇಶ್ವರಿ ದೇವಸ್ಥಾನವನ್ನು ಸರ್ಕಾರ ವಶಕ್ಕೆ ಪಡೆಯಲಿ, ಸಾಗರದಲ್ಲಿ ಪ್ರತಿಭಟನೆ, ಸರ್ಕಾರಕ್ಕೆ ಆಗ್ರಹ

140820 Dalit Sangarsha Samiti Memorandum about Siganduru Temple 1

ಶಿವಮೊಗ್ಗ ಲೈವ್.ಕಾಂ | SAGARA NEWS | 14 ಆಗಸ್ಟ್ 2020 ಸಿಗಂದೂರು ಶ್ರೀ ಚೌಡೇಶ್ವರಿ ದೇವಸ್ಥಾನವನ್ನು ಸರ್ಕಾರ ತನ್ನ ವಶಕ್ಕೆ ಪಡೆಯಬೇಕು ಎಂದು ಒತ್ತಾಯಿಸಿ ಸಾಗರದಲ್ಲಿ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಉಪ ವಿಭಾಗಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಮಾಡಿದ್ದಾರೆ. ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ಪರಮೇಶ್ವರ ದೂಗೂರು ನೇತೃತ್ವದಲ್ಲಿ ಉಪ ವಿಭಾಗಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು. ದೇವಸ್ಥಾನಕ್ಕೆ ಅಪಾರ ಪ್ರಮಾಣದಲ್ಲಿ ಕಾಣಿಕೆ ಹಣ ಬರುತ್ತಿದೆ. ಈ ಹಣ ದುರುಪಯೋಗ ಆಗಿದೆ. … Read more

ಶಿವಮೊಗ್ಗದಲ್ಲಿ ರಾಮ ಮಂದಿರಕ್ಕಾಗಿ ವಿಶೇಷ ಪೂಜೆ, ಸಂಘದ ಕಾರ್ಯಕರ್ತರಿಂದ ಬ್ಯಾಂಡ್ ಬಾರಿಸಿ ಗೌರವ ನಮನ

050820 Rama Mandira Pooje In Shimoga 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 5 ಆಗಸ್ಟ್ 2020 ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಇವತ್ತು ಭೂಮಿ ಪೂಜೆ ನೆರವೇರಲಿದೆ. ಈ ಹಿನ್ನೆಲೆಯಲ್ಲಿ ಶಿವಮೊಗ್ಗದಲ್ಲಿ ಇವತ್ತು ವಿಶೇಷ ಪೂಜೆ, ಹೋಮ ನೆರವೇರಿಸಲಾಯಿತು. ಶಿವಮೊಗ್ಗದ ಕೋಟೆ ಶ್ರೀ ಸೀತಾರಾಮಾಂಜನೇಯ ದೇವಸ್ಥಾನದಲ್ಲಿ ವಿಶ್ವ ಹಿಂದೂ ಪರಿಷತ್ ವತಿಯಿಂದ ಶ್ರೀ ರಾಮತಾರಕ ಹೋಮ ನಡೆಸಲಾಯಿತು. ಬೆಳಗ್ಗೆಯಿಂದಲೇ ಸಂಘ ಪರಿವಾರದ ಕಾರ್ಯಕರ್ತರು, ಕರ ಸೇವೆಯಲ್ಲಿ ಭಾಗವಹಿಸಿದ್ದವರು ಹೋಮದಲ್ಲಿ ಪಾಲ್ಗೊಂಡಿದ್ದರು. ಸಂಸದ, ಸಚಿವರು ಭೇಟಿ ಸಂಸದ ಬಿ.ವೈ.ರಾಘವೇಂದ್ರ, ಸಚಿವ ಕೆ.ಎಸ್.ಈಶ್ವರಪ್ಪ ಅವರು … Read more

ಸಾಗರದಲ್ಲಿ ಗಂಡನ ಮನೆ ಸೇರಿದ ಮಾರಿಕಾಂಬೆ, ದರ್ಶನಕ್ಕೆ ಜನವೊ ಜನ, ವಸ್ತು ಪ್ರದರ್ಶನಕ್ಕೆ ಚಾಲನೆ, ಸರ್ಕಸ್ ಉದ್ಘಾಟಿಸಿದ್ರು ಮಾಜಿ ಮಿನಿಸ್ಟರ್

ಶಿವಮೊಗ್ಗ ಲೈವ್.ಕಾಂ | SAGARA | 19 ಫೆಬ್ರವರಿ 2020 ತವರು ಮನೆಯಲ್ಲಿ ಪ್ರತಿಷ್ಠಾಪಿಸಿದ್ದ ಶ್ರೀ ಮಾರಿಕಾಂಬ ದೇವಿ ಮೂರ್ತಿಯನ್ನು ಗಂಡನ ಮನೆಗೆ ತರಲಾಗಿದೆ. ಈ ವೇಳೆ ಅದ್ಧೂರಿಯಾದ ರಾಜಬೀದಿ ಉತ್ಸವದ ನಡೆಯಿತು. ಮಂಗಳವಾರ ರಾತ್ರಿ 10ಕ್ಕೆ ಮಹಾಮಂಗಳಾರತಿ ನಂತರ ಪೋತರಾಜನಿಂದ ಚಾವಟಿ ಸೇವೆ ಹಾಗೂ ಹೆಣ್ಣು ಒಪ್ಪಿಸುವ ವಿಧಿವಿಧಾನಗಳು ನಡೆದವು. ಸಹಸ್ರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಉತ್ಸವದಲ್ಲಿ ಭಾಗಿಯಾದರು. ಶ್ರೀ ದೇವಿಯ ದಂಡಿನ ಮೆರವಣಿಗೆ ಹಾಗೂ ರಾಜಬೀದಿ ಉತ್ಸವ ಜನರನ್ನು ಆಕರ್ಷಿಸಿತು. ಕಣ್ಸೆಳೆದ ಸಾಂಸ್ಕೃತಿಕ ಕಲಾ ತಂಡಗಳು … Read more

ರಾಮೇಶ್ವರ ದೇವಸ್ಥಾನ ಕಳ್ಳತನ ಕೇಸ್, ಕಿಮ್ಮನೆ ಹೆಸರು ಹಾಳು ಮಾಡಲು ಯತ್ನ, ಬಿಜೆಪಿ ವಿರುದ್ಧ ಯುವ ಕಾಂಗ್ರೆಸ್ ಆಕ್ರೋಶ

Kimmane Rathnakar General Image 1

ಶಿವಮೊಗ್ಗ ಲೈವ್.ಕಾಂ | THIRTHAHALLI | 10 ಸೆಪ್ಟೆಂಬರ್ 2019 ತೀರ್ಥಹಳ್ಳಿಯ ಪುರಾಣ ಪ್ರಸಿದ್ಧ ಶ್ರೀ ರಾಮೇಶ್ವರ ದೇವಸ್ಥಾನದಲ್ಲಿ ನಡೆದ ಕಳ್ಳತನ ಪ್ರಕರಣದಲ್ಲಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರ ಹೆಸರನ್ನು ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ವಿನಾಕಾರಣ ಪ್ರಸ್ತಾಪಿಸುತ್ತಿದ್ದಾರೆ ಎಂದು ಯುವ ಕಾಂಗ್ರೆಸ್ ತಾಲೂಕು ಘಟಕ ಆಕ್ರೋಶ ವ್ಯಕ್ತಪಡಿಸಿದೆ. ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಯುವ ಕಾಂಗ್ರೆಸ್ ಅಧ್ಯಕ್ಷ ಪ್ರದೀಪ್ ಕೆಳಕೆರೆ, ಬಿಜೆಪಿ ಯುವ ಮೋರ್ಚಾದವರು ನಿರಂತರ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ. ಶ್ರೀ ರಾಮೇಶ್ವರ ದೇವಸ್ಥಾನದಲ್ಲಿನ … Read more

ಗರ್ಭಗುಡಿಯಲ್ಲಿ ಜಾರಿಬಿತ್ತು ನಾಮಪತ್ರದ ಫೈಲ್, ಹಾರಲೇ ಇಲ್ಲ ಯಡಿಯೂರಪ್ಪಗೆ ಬುಕ್ ಮಾಡಿದ್ದ ಹೆಲಿಕಾಪ್ಟರ್

ಶಿವಮೊಗ್ಗ ಲೈವ್.ಕಾಂ | 28 ಮಾರ್ಚ್ 2019 ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಅವರ ನಾಮಪತ್ರ ಇದ್ದ ಫೈಲ್, ದೇವಸ್ಥಾನದ ಗರ್ಭಗುಡಿಯಲ್ಲಿ ಜಾರಿಬಿತ್ತು. ಇದರಿಂದ ಕೆಲಕ್ಷಣ ರಾಘವೇಂದ್ರ ಮತ್ತವರ ಕುಟುಂಬ ವಿಚಲಿತರಾದ ಘಟನೆ ನಡೆಯಿತು. ನಾಮಪತ್ರ ಸಲ್ಲಿಸುವ ಹಿನ್ನೆಲೆ, ಬೆಳಗ್ಗೆಯಿಂದಲೇ ರಾಘವೇಂದ್ರ, ಕುಟುಂಬ ಸಹಿತವಾಗಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸುತ್ತಿದ್ದರು. ಶಿಕಾರಿಪುರದ ಹುಚ್ಚರಾಯಸ್ವಾಮಿ ದೇವಸ್ಥಾನಕ್ಕೆ ತೆರಳಿದ್ದ ರಾಘವೇಂದ್ರ, ದೇವರ ಆಶೀರ್ವಾದ ಬೇಡಿದರು. ನಂತರ ಶಿವಮೊಗ್ಗದ ರವೀಂದ್ರನಗರ ಗಣಪತಿ ದೇವಸ್ಥಾನಕ್ಕೆ ಕುಟುಂಬ ಸಹಿತ ಭೇಟಿ ನೀಡಿದ್ದರು. ಈ ವೇಳೆ, ನಾಮಪತ್ರದ … Read more