ಭದ್ರಾವತಿಯ 10 ಮಂದಿಗೆ ತಲಾ 1 ವರ್ಷ ಜೈಲು, ₹8000 ದಂಡ, ಕಾರಣವೇನು?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಭದ್ರಾವತಿ: ಹಂಚಿನ ಸಿದ್ಧಾಪುರ (Bhadravathi) ಗ್ರಾಮದಲ್ಲಿ ನಡೆದಿದ್ದ ಹಲ್ಲೆ ಹಾಗೂ ಮಹಿಳೆಯರಿಗೆ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಇಲ್ಲಿನ ಒಂದನೇ ಎ.ಸಿ.ಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯವು ಹತ್ತು ಮಂದಿ ಆರೋಪಿಗಳನ್ನು ದೋಷಿಗಳೆಂದು ಪರಿಗಣಿಸಿ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದೆ.

2019ರ ಮಾರ್ಚ್‌ 8ರಂದು ಶಿವರಾತ್ರಿ ಹಬ್ಬದ ಸಂದರ್ಭ ದೇವಸ್ಥಾನಕ್ಕೆ ಹೋಗಿದ್ದ ಸಾಕ್ಷಿ ಅಭಿಲಾಷ್ ಎಂಬುವವರನ್ನು ಆರೋಪಿ ರುದ್ರೇಶ್ ಹಾಗೂ ಇತರರು ಅವಹೇಳನಕಾರಿಯಾಗಿ ಮಾತನಾಡಿಸಿ ಕಿಚಾಯಿಸಿದ್ದರು. ಇದೇ ವಿಚಾರವಾಗಿ ಅಂದು ಸಂಜೆ ಆರೋಪಿಗಳು ಗುಂಪುಕಟ್ಟಿಕೊಂಡು ಸಾಕ್ಷಿ ಅವರ ಮನೆಗೆ ನುಗ್ಗಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಮನೆಯಲ್ಲಿದ್ದ ಮಹಿಳೆಯರಿಗೆ ದೈಹಿಕವಾಗಿ ಕಿರುಕುಳ ನೀಡಿದ್ದರು. ಗಲಾಟೆ ಬಿಡಿಸಲು ಬಂದ ರಾಜಪ್ಪ ಎಂಬುವವರನ್ನು ತಳ್ಳಿ, ಅವರ ಕೈಬೆರಳು ಮುರಿದು ತಲೆಗೆ ಹೊಡೆದು ಗಂಭೀರವಾಗಿ ಗಾಯಗೊಳಿಸಲಾಗಿತ್ತು. ಅಲ್ಲದೆ ಮನೆಯ ಸಿಸಿ ಕ್ಯಾಮೆರಾ ಹಾಗೂ ವಾಹನಕ್ಕೆ ಹಾನಿ ಮಾಡಿ ಜೀವಬೆದರಿಕೆ ಹಾಕಲಾಗಿತ್ತು.

Bhadravathi News Graphics

ಈ ಕುರಿತು ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನ ತನಿಖಾಧಿಕಾರಿ ಎ.ಎಸ್.ಐ ಕೃಷ್ಣ ನಾಯ್ಕ್ ಅವರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರ ಸಲ್ಲಿಸಿದ್ದರು.

ಇದನ್ನೂ ಓದಿ – ನಾಳೆ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ ಸಿಎಂ ಸಿದ್ದರಾಮಯ್ಯ, ಕಾರಣವೇನು?

ವಿಚಾರಣೆ ನಡೆಸಿದ ನ್ಯಾಯಾಧೀಶರಾದ ರವಿ ಕುಮಾರ್ ವಿ. ಅವರು ತೀರ್ಪು ಪ್ರಕಟಿಸಿದ್ದಾರೆ. ಆರೋಪಿಗಳಾದ ರುದ್ರೇಶ್, ವಿಶ್ವ, ಶಿವು, ಗಿರೀಶ್, ಶಶಿಧರ್, ಮಧು, ಶೇಖರಪ್ಪ, ರಾಜಪ್ಪ, ಮಲ್ಲಿಕಾ ಮತ್ತು ಹರೀಶ ಅವರಿಗೆ ತಲಾ ಒಂದು ವರ್ಷ ಕಾರಾಗೃಹ ಶಿಕ್ಷೆ ಹಾಗೂ ₹8,000 ದಂಡ ವಿಧಿಸಲಾಗಿದೆ. ದಂಡದ ಮೊತ್ತದಲ್ಲಿ ಒಟ್ಟು ₹80,000 ಅನ್ನು ಗಾಯಾಳುಗಳಿಗೆ ಪರಿಹಾರವಾಗಿ ನೀಡುವಂತೆ ನ್ಯಾಯಾಲಯ ಆದೇಶಿಸಿದೆ ಎಂದು ಪೊಲೀಸ್‌ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಸರ್ಕಾರದ ಪರವಾಗಿ ಅಪರ ಸರ್ಕಾರಿ ಅಭಿಯೋಜಕ ತಿಪ್ಪೇಶ್ ರಾವ್ ಅವರು ವಾದ ಮಂಡಿಸಿದ್ದರು.

number-1-advt-copy-new.webp

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment