ನಾಟಿ ಮಾಡಿದ್ದ 300 ಅಡಿಕೆ ಗಿಡಗಳು ನಾಶ, ರೈತನಿಗೆ ಜೀವ ಬೆದರಿಕೆ ಆರೋಪ

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

SHIVAMOGGA LIVE NEWS | 3 SEPTEMBER 2023

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

HOLEHONNURU : ಅರ್ಧ ಎಕರೆಯಲ್ಲಿ ನಾಟಿ ಮಾಡಿದ್ದ 300 ಅಡಿಕೆ (Areca Plant) ಗಿಡಗಳನ್ನು ನಾಶ ಪಡಿಸಲಾಗಿದೆ. ಲಕ್ಷಾಂತರ ರೂ. ನಷ್ಟ ಅನುಭವಿಸಿರುವ ರೈತ ಹೊಳೆಹೊನ್ನೂರು ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ. ತಮಗೆ ಜೀವ ಬೆದರಿಕೆ ಇದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಆನವೇರಿಯ (Anaveri) ರೈತ ಲೋಕೇಶಪ್ಪ ಜಂಗರಮನಹಳ್ಳಿಯ ಅರ್ಧ ಎಕರೆ ಜಮೀನಿನಲ್ಲಿ 300 ಅಡಿಕೆ ಗಿಡಗಳನ್ನು (Areca Plant) ನೆಟ್ಟಿದ್ದರು. ಜಮೀನು ವಿವಾದದ ಹಿನ್ನೆಲೆ ರಫೀಕ್‌ ಮತ್ತು ಫಯಾಜ್‌ ಎಂಬುವವರು ಗಿಡಗಳನ್ನು ನಾಶ ಪಡಿಸಿದ್ದಾರೆ. ಇದರಿಂದ ತಮಗೆ ಲಕ್ಷಾಂತರ ರೂ. ನಷ್ಟವಾಗಿದೆ ಎಂದು ಲೋಕೇಶಪ್ಪ ದೂರಿನಲ್ಲಿ ಆಪಾದಿಸಿದ್ದಾರೆ.

ಇದನ್ನೂ ಓದಿ – ಮನೆ ಮೇಲೆ ಪೊಲೀಸ್‌ ದಾಳಿ, ಹಿತ್ತಲಲ್ಲಿ ಅಡಿಕೆ ಗಿಡಗಳ ಮಧ್ಯೆ ಶೋಧ, ಮಾಲೀಕನ ವಿರುದ್ಧ ದಾಖಲಾಯ್ತು ಕೇಸ್‌

ಗುರುವಾರ ರಾತ್ರಿ ಘಟನೆ ಸಂಭವಿಸಿದ್ದು ಇವರಿಬ್ಬರು ತಮಗೆ ಅವಾಚ್ಯವಾಗಿ ನಿಂದಿಸಿ, ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಹೊಳೆಹೊನ್ನೂರು ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment