ಕೈಯಲ್ಲಿದ್ದ ಬ್ರೇಸ್ ಲೆಟ್, ಕೊರಳಲಿದ್ದ ಚೈನ್ ಗಾಗಿ ಯುವಕನಿಗೆ ಚಾಕು ಇರಿದ ‘ಸ್ನೇಹಿತ’

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

 SHIVAMOGGA LIVE NEWS 

BHADRAVATHI| ಕೈಯಲ್ಲಿದ್ದ ಚಿನ್ನದ ಬ್ರೇಸ್ ಲೆಟ್ (bracelet), ಕೊರಳಲ್ಲಿದ್ದ ಬಂಗಾರದ ಸರ ಕೊಡುವಂತೆ ಯುವಕನಿಗೆ ಆತನ ಸ್ನೇಹಿತನೆ ಚಾಕುವಿನಿಂದ ಮನಸೋಯಿಚ್ಛೆ ಚುಚ್ಚಿ ಕೊಲೆಗೆ ಯತ್ನಿಸಿದ್ದಾನೆ.

Shimoga Nanjappa Hospital

ಭದ್ರಾವತಿಯ ಕುರುಬರ ಬೀದಿಯಲ್ಲಿ ನಿರ್ಮಾಣ ಹಂತದ ಕಟ್ಟಡದಲ್ಲಿ ಘಟನೆ ಸಂಭವಿಸಿದೆ. ಮಿಲಾದ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಯುವಕ ಖಾಜಿ ಮೊಹಲ್ಲಾಗೆ ತೆರಳಿದ್ದ. ಈ ಸಂದರ್ಭ ಅಖೀಬ್ ಅಲಿಯಾಸ್ ಅಡಿ ಎಂಬಾತ ಸಿಕ್ಕಿದ್ದಾನೆ. ಪರಿಚಿತನಾಗಿದ್ದರಿಂದ ಯುವಕ ಆತನೊಂದಿಗೆ ಮಾತನಾಡುತ್ತಿದ್ದ.

ಸಿಗರೇಟ್ ಸೇದಲು ಹೋಗೋಣ ಎಂದು ಅಖೀಬ್ ಯುವಕನನ್ನು ಕರೆದೊಯ್ದಿದ್ದಾನೆ. ಕುರುಬರ ಬೀದಿಯಲ್ಲಿರುವ ನಿರ್ಮಾಣ ಹಂತದ ಕಟ್ಟಡದ ಬಳಿ ಕರೆದೊಯ್ದು, ಕೈಯಲ್ಲಿರುವ ಬ್ರೇಸ್ ಲೆಟ್ (bracelet) ಮತ್ತು ಚಿನ್ನದ ಸರವನ್ನು ಕೊಡುವಂತೆ ಅಖೀಬ್ ಒತ್ತಾಯಿಸಿದ್ದಾನೆ. ಇದಕ್ಕೆ ಯುವಕ ಒಪ್ಪದಿದ್ದಾಗ, ಅಖೀಬ್ ತಾನು ತಂದಿದ್ದ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಯುವಕನ ಎಡ ಪಕ್ಕೆ, ಎದೆ ಮತ್ತು ತೊಡೆಗೆ ಚುಚ್ಚಿದ್ದಾನೆ.

ಯುವಕ ಅಲ್ಲಿಂದ ತಪ್ಪಿಸಿಕೊಂಡು ಓಡಿ ಬಂದಿದ್ದು, ಮನೆಯವರು ಗಮನಿಸಿ ಕೂಡಲೆ ಭದ್ರಾವತಿ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆ ಸಂಬಂಧ ಯುವಕನ ಬಾವ ರಾಜಿಕ್ ಅಹಮದ್ ಅವರು ಭದ್ರಾವತಿ ಹಳೆ ನಗರ ಠಾಣೆಗೆ ದೂರು ನೀಡಿದ್ದಾರೆ.

ಕ್ಲಿಕ್ ಮಾಡಿ ಇದನ್ನೂ ಓದಿ ‘ಶಿವಮೊಗ್ಗ – ಭದ್ರಾವತಿ ಹೆದ್ದಾರಿ ಪರಿಸ್ಥಿತಿ 40 ಪರ್ಸೆಂಟ್ ಕಮಿಷನ್ ವ್ಯವಹಾರಕ್ಕೆ ಸಾಕ್ಷಿ’

Shimoga Nanjappa Hospital

ADVERTISEMENT

  • ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
  • ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422

SHIVAMOGGA LIVE WHATSAPP

ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : September 24, 2022

Leave a Comment