ಶಿವಮೊಗ್ಗ ಲೈವ್.ಕಾಂ | BHADRAVATHI NEWS | 8 ಸೆಪ್ಟಂಬರ್ 2020
ಭದ್ರಾ ಜಲಾಶಯ ಭರ್ತಿಯಾದ ಹಿನ್ನಲೆಯಲ್ಲಿ ಭದ್ರಾ ಅಣೆಕಟ್ಟಿಗೆ ರೈತ ಸಂಘದ ವತಿಯಿಂದ ಬಾಗಿನ ಅರ್ಪಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಗೌರವಾಧ್ಯಕ್ಷ ಹೆಚ್.ಆರ್ ಬಸವರಾಜಪ್ಪ, ಭದ್ರಾ ಅಣೆಕಟ್ಟೆ ಸತತವಾಗಿ 3 ವರ್ಷ ತುಂಬಿದ್ದು ರೈತರಿಗೆ ಹರ್ಷ ತಂದಿದೆ. ನೀರು ಸದ್ಬಳಕೆ ಮಾಡಿ ಕೊಂಡರೆ ಮುಂದಿನ ಬೇಸಿಗೆ ಬೆಳೆಯನ್ನು ಸಹ ಬೆಳೆಯಬಹುದು ಎಂದರು.
ತುಂಗಾ ನದಿಯಿಂದ ಕಣಬೂರು ಮತ್ತು ಕುಸ್ಕೂರು ಹತ್ತಿರ ಪಂಪ್ ಹೌಸ್ ಕಾಮಗಾರಿ ಈಗ ಪ್ರಾರಂಭವಾಗಿದೆ. ಪೂರ್ಣಗೊಳ್ಳಲು 2 ವರ್ಷ ಬೇಕಾಗಬಹುದು. ಬಯಲು ಸೀಮೆಗೆ ನೀರು ಕೊಡಲು ನಮ್ಮ ತಕರಾರಿಲ್ಲ ಆದಷ್ಟು ಜಾಗ್ರತೆ ತುಂಗಾ ನದಿಯಿಂದ 17 ಟಿ.ಎಂ.ಸಿ ನೀರೆತ್ತಿ ಭದ್ರಾ ನದಿಯಿಂದ 6.5 ಟಿ.ಎಂ.ಸಿ ಸೇರಿ ಒಟ್ಟು 23.5ಟಿ.ಎಂ.ಸಿ ನೀರು ಕೊಡಲು ಸರ್ಕಾರದಿಂದ ಯೋಜನೆ ಮಂಜೂರಾಗಿದ್ದು ತುಂಗಾ ನದಿಯಿಂದ ನೀರೆತ್ತುವ ಕಾಮಗಾರಿ ಕೂಡಲೇ ಪೂರ್ಣಗೊಳ್ಳಬೇಕು ಎಂದು ಬಸವರಾಜಪ್ಪ ಆಗ್ರಹಿಸಿದರು.
ಕಾರ್ಯಕ್ರಮದಲ್ಲಿ ರೈತಸಂಘದ ಜಿಲ್ಲಾಧ್ಯಕ್ಷ ಎಸ್.ಶಿವಮೂರ್ತಿ, ಟಿ.ಎಂ.ಚಂದ್ರಪ್ಪ ಹಿಟ್ಟೂರು, ಈಶಣ್ಣ ಅರಬಿಳಚಿ, ಡಿ.ಹೆಚ್ ರಾಮಚಂದ್ರಪ್ಪ, ಜಿ.ಎನ್.ಪಂಚಾಕ್ಷರಿ, ಹಾಲಪ್ಪ, ಶೇಖರಪ್ಪ ಯಡೇಹಳ್ಳಿ, ಪರಮಶಿವಯ್ಯ ಇತರರು ಭಾಗವಹಿಸಿದ್ದರು.
https://www.facebook.com/liveshivamogga/videos/314546413130946/?t=1
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]