ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 26 SEPTEMBER 2023
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
BHADRAVATHI : ಪ್ರತಿಷ್ಠಿತ ಹಿಂದೂ ಮಹಾಸಭಾ ಗಣಪತಿ ಮೆರವಣಿಗೆಗೆ ಕ್ಷಣಗಣನೆ ಆರಂಭವಾಗಿದೆ. ರಾಜಬೀದಿ ಕೇಸರಿಮಯವಾಗಿದೆ. ಇನ್ನು, ವಿಸರ್ಜನಾ ಪೂರ್ವ ಮೆರವಣಿಗೆ ಹಿನ್ನೆಲೆ ಬಿಗಿ ಪೊಲೀಸ್ ಬಂದೋಬಸ್ತ್ (Bandobast) ಕೈಗೊಳ್ಳಲಾಗಿದೆ.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ಭದ್ರಾವತಿಯ ಹೊಸಮನೆ ಬಡಾವಣೆಯಲ್ಲಿ ಹಿಂದೂ ಮಹಾಸಭಾ ಗಣಪತಿ ಮೂರ್ತಿ ಪ್ರತಿಷ್ಠಾಪಿಸಲಾಗಿದೆ. ಇವತ್ತು ಗಣಪತಿಯ ಮೆರವಣಿಗೆ ನಡೆಯಲಿದೆ. ಇದಕ್ಕಾಗಿ ಹಿಂದೂ ಕಾರ್ಯಕರ್ತರು ಅದ್ಧೂರಿ ಸಿದ್ಧತೆ ಮಾಡಿಕೊಂಡಿದ್ದಾರೆ.
ಕೇಸರಮಯ ಮರವಣಿಗೆ ಹಾದಿ
ಗಣಪತಿ ಮೆರೆವಣಿಗೆ ಸಾಗುವ ಹಾದಿ ಉದ್ದಕ್ಕು ಕೇಸರಿಮಯವಾಗಿದೆ. ಕೇಸರಿ ಬಂಟಿಂಗ್ಸ್ ಕಟ್ಟಿ ಹಿಂದು ಸಂಘಟನೆಗಳ ಕಾರ್ಯಕರ್ತರು ಅಲಂಕಾರ ಮಾಡಿದ್ದಾರೆ. ಪ್ರಮುಖ ಸರ್ಕಲ್‌ಗಳಲ್ಲಿಯು ಕೇಸರಿ ಬಂಟಿಂಗ್ಸ್ ರಾರಾಜಿಸುತ್ತಿವೆ. ಇನ್ನು, ಪ್ರತಿ ವರ್ಷದಂತೆ ಈ ಬಾರಿಯು ಅನ್ನಸಂತರ್ಪಣೆ, ಮೆರವಣಿಗೆಯಲ್ಲಿ ಸಾಗುವವರಿಗೆ ತಂಪು ಪಾನೀಯ, ಸಿಹಿ ತಿಂಡಿ ವಿತರಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಪೊಲೀಸರಿಂದ ರೂಟ್ ಮಾರ್ಚ್
ಹಿಂದೂ ಮಹಾಸಭ ಗಣಪತಿ ಮೆರವಣಿಗೆ ಹಿನ್ನೆಲೆ ಪೊಲೀಸ್ ಇಲಾಖೆ ವತಿಯಿಂದ ಸೋಮವಾರ ಪಥ ಸಂಚಲನ ನಡೆಸಲಾಯಿತು. ಕನಕ ಮಂಟಪದಿಂದ, ಕಂಚಿ ಬಾಗಿಲು ಮುಖಾಂತರ, ಎನ್.ಎಸ್.ಟಿ ರಸ್ತೆ, ಜಾಮಿಯಾ ಮಸೀದಿ, ಖಾಜಿ ಮೊಹಲ್ಲಾ, ಓಟಿ ರಸ್ತೆ, ಮಾಧವಾಚಾರ್ ವೃತ್ತ, ಚೌಕ್ ಮಸೀದಿ, ಗಾಂಧಿ ವೃತ್ತ, ಒಎಸ್ಎಂ ರಸ್ತೆ, ಹೊಸಮನೆ ಸಂತೆ ಮೈದಾನ, ಹೊಳೆಹೊನ್ನೂರು ವೃತ್ತ, ಅನ್ವರ್ ಕಾಲೋನಿ, ಲಕ್ಷ್ಮಿ ಸಾಮಿಲ್, ಜಟ್ ಪಟ್ ನಗರ, ಕಂಚಿ ಬಾಗಿಲು, ಪುನಾಃ ಕನಕ ಮಂಟಪದವರೆಗೆ ಮೆರವಣಿಗೆ ಸಾಗಿತು.
ಇದನ್ನೂ ಓದಿ – ಶಿವಮೊಗ್ಗದ ರಾಗಿಗುಡ್ಡ ಕೇಸರಿಮಯ, ಸಾಲು ಸಾಲು ಗಣಪತಿ ಮೆರವಣಿಗೆಗೆ ಭರ್ಜರಿ ಸಿದ್ಧತೆ, ಬಂದೋಬಸ್ತ್ ಹೆಚ್ಚಳ
ಬಿಗಿ ಪೊಲೀಸ್ ಬಂದೋಬಸ್ತ್
ಮೆರವಣಿಗೆ ಸುಗಮವಾಗಿ ಸಾಗಲು ಭದ್ರಾವತಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ (Bandobast) ಕೈಗೊಳ್ಳಲಾಗಿದೆ. ಬಂದೋಬಸ್ತ್ ಕರ್ತವ್ಯಕ್ಕೆ 10 ಡಿವೈಎಸ್‌ಪಿಗಳು, 20 ಇನ್ಸ್‌ಪೆಕ್ಟರ್‌ಗಳು, 60 ಸಬ್ ಇನ್ಸ್‌ಪೆಕ್ಟರ್‌ಗಳು, 100 ಸಹಾಯಕ ಪೊಲೀಸ್ ಉಪನಿರೀಕ್ಷಕರು, 600 ಪೊಲೀಸ್ ಹೆಡ್ ಕಾನ್ಸ್ ಟೆಬಲ್ ಮತ್ತು ಪೊಲೀಸ್ ಕಾನ್ಸ್ ಟೆಬಲ್‌ಗಳು, 500 ಗೃಹರಕ್ಷಕ ದಳ ಸಿಬ್ಬಂದಿ, 6 ಡಿಎಆರ್ ತುಕಡಿ, 8 ಕೆಎಸ್ಆರ್.ಪಿ ತುಕಡಿ, 1 ಕ್ಯೂಆರ್.ಟಿ ತುಕಡಿ ಮತ್ತು 1 ಆರ್.ಎ.ಎಫ್ ಕಂಪನಿಯನ್ನು ನಿಯೋಜಿಸಲಾಗಿದೆ. ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಬಂದೋಬಸ್ತ್‌ಗೆ ನಿಯೋಜನೆಗೊಂಡಿರುವ ಸಿಬ್ಬಂದಿಗೆ ಬ್ರೀಫಿಂಗ್ ಮಾಡಿದರು.