ಅಂಗಡಿ ಮುಂದೆ ಕುಳಿತಿದ್ದವರ ಮೇಲೆ ಕರಡಿ ದಾಳಿ, ಗ್ರಾಮಸ್ಥರಲ್ಲಿ ಭೀತಿ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 13 SEPTEMBER 2023

HOLEHONNURU : ಅಂಗಡಿಯೊಂದರ ಕಟ್ಟೆ ಮೇಲೆ ಕುಳಿತಿದ್ದ ಇಬ್ಬರು ಗ್ರಾಮಸ್ಥರ ಮೇಲೆ ಕರಡಿ (BEAR) ದಾಳಿ ನಡೆಸಿದೆ. ಈ ವೇಳೆ ಸ್ಥಳದಲ್ಲಿದವರು ಜೋರಾಗಿ ಕೂಗಾಡಿದ್ದರಿಂದ ಕರಡಿ ಓಡಿ ಹೋಗಿ ಸಮೀಪದ ಅಡಿಕೆ ತೋಟದಲ್ಲಿ ಮರೆಯಾಗಿದೆ.

ಸಮೀಪದ ಮಲ್ಲಾಪುರ ಗ್ರಾಮದಲ್ಲಿ ಸೋಮವಾರ ರಾತ್ರಿ ಘಟನೆ ಸಂಭವಿಸಿದೆ. ಅರಣ್ಯಾಧಿಕಾರಿಗಳಿಗೆ ತಿಳಿಸಿದರೂ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.

ಲಕ್ಷ್ಮೀಪುರ ಕ್ಯಾಂಪ್ ಹಾಗೂ ಭಗವತಿಕೆರೆ ಗುಡ್ಡಗಳಲ್ಲಿ ಕರಡಿಗಳು (BEAR) ಸಂಚರಿಸುತ್ತಿವೆ. ಅರಣ್ಯ ಇಲಾಖೆ ಸಿಬ್ಬಂದಿ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದರು.

ಇದನ್ನೂ ಓದಿ – ಶಿವಮೊಗ್ಗದ ವಾಹನ ಸವಾರರೆ ಹುಷಾರ್‌, ಈ ರಸ್ತೆಯಲ್ಲಿ ಸ್ವಲ್ಪ ಯಾಮಾರಿದ್ರು ಅಪಘಾತ ಫಿಕ್ಸ್‌

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment