ಶಿವಮೊಗ್ಗ ಲೈವ್.ಕಾಂ | SHANKARAGHATTA NEWS | 17 ಡಿಸೆಂಬರ್ 2021
ಕುವೆಂಪು ವಿಶ್ವವಿದ್ಯಾಲಯದ ಕ್ಯಾಂಪಸ್’ನಲ್ಲಿ ಹೆಜ್ಜೇನು ದಾಳಿಗೆ ತುತ್ತಾಗಿ ವಿದ್ಯಾರ್ಥಿಯೊಬ್ಬರಿಗೆ ಗಂಭೀರ ಗಾಯವಾಗಿದೆ. ಅವರನ್ನು ಶಿವಮೊಗ್ಗದ ನಂಜಪ್ಪ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಐಸಿಯುನಲ್ಲಿ ದಾಖಲು ಮಾಡಲಾಗಿದೆ.
ಇವತ್ತು ಸಂಜೆ ಶಂಕರಘಟ್ಟದ ಕುವೆಂಪು ವಿವಿ ಕ್ಯಾಂಪಸ್’ನ ಕಲಾ ವಿಭಾಗದ ಕಟ್ಟಡದ ಮುಂದೆ ಘಟನೆ ಸಂಭವಿಸಿದೆ. ಪತ್ರಿಕೋದ್ಯಮ ವಿಭಾಗದ ಪ್ರೊ. ಡಿ.ಎಸ್.ಪೂರ್ಣಾನಂದ, ಕಚೇರಿ ಸಹಾಯಕ ನಾಗರಾಜ್, ಸಂಶೋಧನಾ ವಿದ್ಯಾರ್ಥಿ ಪ್ರವೀಣ್ ಎಂಬುವವರ ಮೇಲೆ ಹೆಜ್ಜೇನುಗಳು ದಾಳಿ ಮಾಡಿವೆ.
ಕಲಾ ವಿಭಾಗದ ಕಟ್ಟಡದಲ್ಲಿ ಗೂಡು ಕಟ್ಟಿದ್ದ ಹೆಜ್ಜೇನುಗಳು ಸಂಜೆ ವೇಳೆಗೆ ದಾಳಿ ನಡೆಸಿವೆ. ಮೂವರಿಗೆ ಕುವೆಂಪು ವಿವಿಯ ಆರೋಗ್ಯ ಕೇಂದ್ರದಲ್ಲಿ ದಾಖಲಿಸಿಕೊಂಡು ಚಿಕಿತ್ಸೆ ನೀಡಲಾಗಿದೆ. ಪ್ರೊ. ಡಿ.ಎಸ್.ಪೂರ್ಣಾನಂದ ಮತ್ತು ಕಚೇರಿ ಸಹಾಯಕ ನಾಗರಾಜ್ ಅವರು ಮನೆಗೆ ಮರಳಿದ್ದಾರೆ. ಸಂಶೋಧನಾ ವಿದ್ಯಾರ್ಥಿ ಪ್ರವೀಣ್ ಅವರಿಗೆ ಹೆಚ್ಚಿನ ಪ್ರಮಾಣದ ಜೇನುಗಳು ದಾಳಿ ಮಾಡಿದ್ದವು. ಹಾಗಾಗಿ ಅವರನ್ನು ಶಿವಮೊಗ್ಗದ ನಂಜಪ್ಪ ಆಸ್ಪತ್ರೆಯ ಐಸಿಯುನಲ್ಲಿ ದಾಖಲಿಸಲಾಗಿದೆ.