ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 7 JULY 2024
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
BHADRAVATHI : ಭದ್ರಾ ಜಲಾಶಯದ ತಳಮಟ್ಟದ ಗೇಟ್ನಲ್ಲಿ (Gate) ಉಂಟಾಗಿದ್ದ ತಾಂತ್ರಿಕ ದೋಷ ಸರಿಪಡಿಸಲಾಗಿದೆ. ಗೇಟ್ಗಳನ್ನು ಬಂದ್ ಮಾಡಲಾಗಿದ್ದು, ನೀರು ಪೋಲು ತಡೆಯಲಾಗಿದೆ. ಇದರಿಂದ ಅಚ್ಚುಕಟ್ಟು ಭಾಗದ ರೈತರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ನಿರಂತರ ಶ್ರಮ, ರಿವರ್ ಗೇಟ್ ರಿಪೇರಿ
ಭದ್ರಾ ಜಲಾಶಯದ ಪವರ್ ಹೌಸ್ ಪಕ್ಕದಲ್ಲಿ ಇದ್ದ ರಿವರ್ ಗೇಟ್ಗಳಲ್ಲಿ ತಾಂತ್ರಿಕ ದೋಷ ಉಂಟಾಗಿತ್ತು. ಸುಮಾರು 5 ಇಂಚಿನಷ್ಟು ತೆರೆದುಕೊಂಡಿದ್ದವು. ಇದರಿಂದ ಸುಮಾರು 1500 ರಿಂದ 2 ಸಾವಿರ ಕ್ಯೂಸೆಕ್ಸ್ ನೀರು ಹೊಳೆಗೆ ಹರಿದು ಹೋಗುತ್ತಿತ್ತು. ವಿಷಯ ಗಂಭೀರ ಸ್ವರೂಪ ಪಡೆಯುತ್ತಿದ್ದಂತೆ ಗೇಟ್ ಬಂದ್ ಮಾಡುವ ಪ್ರಕ್ರಿಯೆ ಆರಂಭಿಸಲಾಗಿತ್ತು.
ಜಲಾಶಯದ ಇಂಜಿನಿಯರ್ಗಳು, ಗುತ್ತಿಗೆದಾರ ವೇದಮೂರ್ತಿ, ನೌಕರರ ತಂಡ 48 ಗಂಟೆ ನಿರಂತರ ಶ್ರಮ ವಹಿಸಿದೆ. ರಾತ್ರಿ ಹೊತ್ತಲ್ಲು ಕೆಲಸ ನಿರ್ವಹಿಸಿ ತಾಂತ್ರಿಕ ದೋಷ ಸರಿಪಡಿಸಲಾಗಿದೆ. ಕೊನೆಗೆ ಸ್ಲೂಯಿಸ್ ಗೇಟ್ಗಳು ಬಂದ್ ಆಗಿವೆ. ಒಂದು ವೇಳೆ ಈ ಗೇಟ್ಗಳು ಬಂದ್ ಆಗದೆ ಇದ್ದಿದ್ದರೆ ಜಲಾಶಯದಲ್ಲಿ ಈ ಭಾರಿ ನೀರಿನ ಸಂಗ್ರಹ ಸಂಪೂರ್ಣ ಕುಸಿಯುತ್ತಿತ್ತು.
ಅಚ್ಚುಕಟ್ಟು ರೈತರ ಆತಂಕ ದೂರ
ಮಳೆಗಾಲಕ್ಕೂ ಮುನ್ನ ಜಲಾಶಯಗಳ ಗೇಟ್ಗಳ ನಿರ್ವಹಣೆ, ತಾಂತ್ರಿಕ ದೋಷಗಳ ಪರಿಶೀಲನೆ ನಡೆಸಲಾಗುತ್ತದೆ. ಆದರೆ ಭದ್ರಾ ಜಲಾಶಯದಲ್ಲಿ ಅಧಿಕಾರಿಗಳು ಮಳೆ ಶುರುವಾಗಿ, ಒಳ ಹರಿವು ಆರಂಭವಾದ ಮೇಲೆ ನಿರ್ಹವಣೆ ಆರಂಭಿಸಿದ್ದರು. ಈ ವೇಳೆ ರಿವರ್ ಗೇಟ್ನಲ್ಲಿ (ಸ್ಲೂಯಿಸ್ ಗೇಟ್) ತಾಂತ್ರಿಕ ಸಮಸ್ಯೆ ಉಂಟಾಗಿ ಮುಚ್ಚಲಾಗದ ಸ್ಥಿತಿಗೆ ತಲುಪಿತ್ತು. ಇದರಿಂದ ಜಲಾಶಯದಲ್ಲಿ ಸಂಗ್ರಹವಾಗಿದ್ದ ನೀರು ಅನಾಯಾಸವಾಗಿ ಹೊಳೆಗೆ ಹರಿದು ಹೋಗುತ್ತಿತ್ತು.
ವಿಚಾರ ತಿಳಿಯುತ್ತಲೆ ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಕೆ.ಪಿ.ಅಂಶುಕುಮಾರ್ ಜಲಾಶಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಅಚ್ಚುಕಟ್ಟು ಭಾಗದ ರೈತರು ಕೂಡ ಡ್ಯಾಂಗೆ ಬಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು.
ಇದನ್ನೂ ಓದಿ – ಶಿವಮೊಗ್ಗ ವಕೀಲರ ಸಂಘಕ್ಕೆ ನೂತನ ಅಧ್ಯಕ್ಷ, ಪದಾಧಿಕಾರಿಗಳು, ಯಾರೆಲ್ಲ ಗೆದ್ದಿದ್ದಾರೆ? ಎಷ್ಟು ಮತ ಪಡೆದಿದ್ದಾರೆ?