ಶಿವಮೊಗ್ಗದ ಬಿದಿರೆಯಲ್ಲಿ ಸೈಟ್ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559ಸೈಟ್ ಮಾರಾಟಕ್ಕಿದೆ
ಶಿವಮೊಗ್ಗದಲ್ಲಿ ಬಿ.ಇಡಿ ಕೋರ್ಸ್ಗೆ ಪ್ರವೇಶಾತಿ ಆರಂಭ
SHIVAMOGGA LIVE NEWS | 29 NOVEMBER 2023
BHADRAVATHI : ಜಮೀನಿನಲ್ಲಿ ಸಿಡಿಲು ಬಡಿದು ಸಹೋದರರಿಬ್ಬರು ಸಾವನ್ನಪ್ಪಿದ್ದಾರೆ. ಭದ್ರಾವತಿ ತಾಲೂಕು ಹುಣಸೆಕಟ್ಟೆ ಜಂಕ್ಷನ್ ಬಳಿ ಮಂಗಳವಾರ ರಾತ್ರಿ ಘಟನೆ ಸಂಭವಿಸಿದೆ.
ಗೌಳಿಗರ ಕ್ಯಾಂಪ್ ನಿವಾಸಿಗಳಾದ ಬೀರು (32) ಮತ್ತು ಸುರೇಶ್ (35) ಮೃತ ದುರ್ದೈವಿಗಳು. ಜಮೀನಿನಲ್ಲಿ ಭತ್ತ ಕಟಾವು ಮಾಡಿ ರಾಶಿ ಹಾಕಲಾಗಿತ್ತು. ಕಳೆದ ರಾತ್ರಿ ಮಳೆಯಾಗಿದ್ದರಿಂದ ಭತ್ತದ ರಾಶಿಯನ್ನು ರಕ್ಷಿಸಲು ಜಮೀನಿಗೆ ತೆರಳಿದ್ದರು. ಈ ಸಂದರ್ಭ ಸಿಡಿಲು ಬಡಿದಿದೆ. ಬಹು ಹೊತ್ತಿನ ತನಕ ಮಕ್ಕಳು ಮನೆಗೆ ಹಿಂತಿರುಗದ ಹಿನ್ನೆಲೆ ಕುಟುಂಬದವರು ಜಮೀನಿನ ಬಳಿ ಹುಡುಕಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಇದನ್ನೂ ಓದಿ – ಶಿವಮೊಗ್ಗ, ಭದ್ರಾವತಿ, ಶಿಕಾರಿಪುರದ ವಿವಿಧೆಡೆ ಮಳೆ ಅಬ್ಬರ, ಎಲ್ಲೆಲ್ಲಿ ಮಳೆಯಾಗುತ್ತಿದೆ?
ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಮೃತದೇಹಗಳನ್ನು ಭದ್ರಾವತಿ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಭದ್ರಾವತಿ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
ಇದನ್ನೂ ಓದಿ – ಶಿವಮೊಗ್ಗ ಜಿಲ್ಲೆಯಲ್ಲಿ ಇವತ್ತು ಏನೇನಾಯ್ತು? ಇಲ್ಲಿದೆ ಟಾಪ್ 15 ಸುದ್ದಿಗಳು






