ಬೆಳ್ಳಂಬೆಳಗ್ಗೆ ಕಸ ಬಿಸಾಡಲು ಮನೆಯಿಂದ ಹೊರ ಬಂದ ಮಹಿಳೆ ಸಾವು, ಹೆದ್ದಾರಿ ಮೇಲಿತ್ತು ಮೃತದೇಹ, ಆಗಿದ್ದೇನು?

ಸೈಟ್‌ ಮಾರಾಟಕ್ಕಿದೆ

ಶಿವಮೊಗ್ಗದ ಬಿದಿರೆಯಲ್ಲಿ ಸೈಟ್‌ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559

ಶಿವಮೊಗ್ಗದಲ್ಲಿ ಬಿ.ಇಡಿ ಕೋರ್ಸ್‌ಗೆ ಪ್ರವೇಶಾತಿ ಆರಂಭ

⇒ ಪೂರ್ತಿ ಡಿಟೇಲ್ಸ್‌ಗೆ ಇಲ್ಲಿ ಕ್ಲಿಕ್‌ ಮಾಡಿ

SHIVAMOGGA LIVE NEWS | 30 APRIL 2024

BHADRAVATHI : ಬೆಳಗಿನ ಜಾವ ಕಸ ಬಿಸಾಡಲು ತೆರಳಿದ್ದ ಮಹಿಳೆಗೆ ಭದ್ರಾವತಿ – ಚನ್ನಗಿರಿ ರಾಜ್ಯ ಹೆದ್ದಾರಿಯಲ್ಲಿ ಅಪರಿಚಿತ ವಾಹನ ಡಿಕ್ಕಿಯಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಭದ್ರಾವತಿಯ ಶ್ರೀರಾಮನಗರದಲ್ಲಿ ಘಟನೆ ಸಂಭವಿಸಿದೆ. ಗ್ರಾಮದ ಪದ್ಮಮ್ಮ (53) ಮೃತ ದುರ್ದೈವಿ.

ಬೆಳಗ್ಗೆ 5.50ಕ್ಕೆ ಪದ್ಮಮ್ಮ ಮನೆ ಕಸ ಗುಡಿಸಿ, ಚಾನಲ್‌ ಬಳಿ ಬಿಸಾಡಿ ಬರಲು ತೆರಳಿದ್ದರು. ರಾಜ್ಯ ಹೆದ್ದಾರಿ ದಾಟುವಾಗ ಅಪರಿಚಿತ ವಾಹನ ಡಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ ಎಂದು ಆರೋಪಿಸಲಾಗಿದೆ. ಅಪಘಾತಪಡಿಸಿದ ವಾಹನ ಸ್ಥಳದಲ್ಲಿ ನಿಲ್ಲಿಸದೆ ಪರಾರಿಯಾಗಿದೆ. ಘಟನೆ ಸಂಬಂಧ ಪದ್ಮಮ್ಮ ಪತಿ ರಾಮೇಗೌಡ ದೂರು ನೀಡಿದ್ದಾರೆ. ಭದ್ರಾವತಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ – ಗಾಂಧಿ ಬಜಾರ್‌ ದೇಗುಲದಲ್ಲಿ ಕಳವು, ದೇವಿಯ ಮೂರ್ತಿಯ ಮುಖದ ಮೇಲೆ ಗೀಚಿದ ಕಿಡಿಗೇಡಿಗಳು

Leave a Comment