ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
BHADRAVATHI NEWS, 21 SEPTEMBER 2024 : ವಿಐಎಸ್‌ಎಲ್ (VISL) ಕಾರ್ಖಾನೆಯ ಸೆಂಟ್ರಲ್ ಎಲೆಕ್ಟ್ರಿಕ್ ವರ್ಕ್‌ಶಾಪ್‌ನಲ್ಲಿದ್ದ ಸುಮಾರು 50 ಕೆ.ಜಿ. ತೂಕದ ತಾಮ್ರದ ತಂತಿ ಕಳ್ಳತನವಾಗಿದೆ. ಎಲೆಕ್ಟ್ರಿಕ್ ವರ್ಕ್‌ಶಾಪ್ ಬೀಗ ತೆಗೆಯದೆ ಒಳಗಿದ್ದ ಟೂಲ್ಸ್ ಬಳಸಿ ಕಳವು ಮಾಡಲಾಗಿದೆ ಎಂದು ಆರೋಪಿಸಿ ದೂರು ನೀಡಿಲಾಗಿದೆ. ಕಾರ್ಮಿಕರು ಬೆಳಗ್ಗೆ 7 ಗಂಟೆಗೆ ಶಿಫ್ಟ್‌ಗೆ ಕೆಲಸಕ್ಕೆ ಬಂದಾಗ ಕಳ್ಳತನ ಬೆಳಕಿಗೆ ಬಂದಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಹೇಗಾಯ್ತು ಕೃತ್ಯ? ದೂರಿನಲ್ಲಿ ಏನಿದೆ?
ಸೆ.8ರಂದು ಮಧ್ಯಾಹ್ನ ಶಿಫ್ಟ್ ಮುಗಿಸಿದ್ದ ಕಾರ್ಮಿಕರು ಎಲೆಕ್ಟ್ರಿಕ್ ವರ್ಕ್‌ಶಾಪ್ ಬಾಗಿಲು ಲಾಕ್ ಮಾಡಿ, ಕೀ ಅನ್ನು ಎಂದಿನಂತೆ ಸೆಂಟ್ರಲ್ ಆಫೀಸ್‌ಗೆ ಕೊಟ್ಟಿದ್ದರು. ಮರುದಿನ ಬೆಳಗ್ಗೆ ಶಿಫ್ಟ್‌ಗೆ ಬಂದಾಗ ವರ್ಕ್‌ಶಾಪ್ ಬಾಗಿಲಿನ ಕೀ ತೆಗೆದು ಒಳಗೆ ಹೋಗಿದ್ದಾರೆ. ಟೂಲ್ಸ್ ಬಾಕ್ಸ್‌ನ ಬೀಗ ಮುರಿದಿರುವುದು ಗೊತ್ತಾಗಿದೆ. ಅದರಲ್ಲಿದ್ದ ಟೂಲ್ಸ್ ಬಳಸಿ, ರಿಪೇರಿಗೆ ತಂದಿದ್ದ ವೆಲ್ಡಿಂಗ್ ಮೆಷಿನ್‌ನ ತಾಮ್ರದ ವೈಂಡಿಂಗ್ ಕಳ್ಳತನ ಮಾಡಲಾಗಿದೆ.
ಅಂದಾಜು 35 ಸಾವಿರ ರೂ. ಮೌಲ್ಯದ 50 ಕೆ.ಜಿ ತೂಕದ ತಾಮ್ರದ ತಂತಿ ಕಳುವಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಭದ್ರಾವತಿ ನ್ಯೂ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ » ಈದ್ ಮೆರವಣಿಗೆ, ಶಿವಮೊಗ್ಗದಲ್ಲಿ ವಾಹನ ಸಂಚಾರ ಮಾರ್ಗ ಬದಲಾವಣೆ