ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
BHADRAVATHI NEWS, 21 SEPTEMBER 2024 : ವಿಐಎಸ್‌ಎಲ್ (VISL) ಕಾರ್ಖಾನೆಯ ಸೆಂಟ್ರಲ್ ಎಲೆಕ್ಟ್ರಿಕ್ ವರ್ಕ್‌ಶಾಪ್‌ನಲ್ಲಿದ್ದ ಸುಮಾರು 50 ಕೆ.ಜಿ. ತೂಕದ ತಾಮ್ರದ ತಂತಿ ಕಳ್ಳತನವಾಗಿದೆ. ಎಲೆಕ್ಟ್ರಿಕ್ ವರ್ಕ್‌ಶಾಪ್ ಬೀಗ ತೆಗೆಯದೆ ಒಳಗಿದ್ದ ಟೂಲ್ಸ್ ಬಳಸಿ ಕಳವು ಮಾಡಲಾಗಿದೆ ಎಂದು ಆರೋಪಿಸಿ ದೂರು ನೀಡಿಲಾಗಿದೆ. ಕಾರ್ಮಿಕರು ಬೆಳಗ್ಗೆ 7 ಗಂಟೆಗೆ ಶಿಫ್ಟ್‌ಗೆ ಕೆಲಸಕ್ಕೆ ಬಂದಾಗ ಕಳ್ಳತನ ಬೆಳಕಿಗೆ ಬಂದಿದೆ.
ಹೇಗಾಯ್ತು ಕೃತ್ಯ? ದೂರಿನಲ್ಲಿ ಏನಿದೆ?
ಸೆ.8ರಂದು ಮಧ್ಯಾಹ್ನ ಶಿಫ್ಟ್ ಮುಗಿಸಿದ್ದ ಕಾರ್ಮಿಕರು ಎಲೆಕ್ಟ್ರಿಕ್ ವರ್ಕ್‌ಶಾಪ್ ಬಾಗಿಲು ಲಾಕ್ ಮಾಡಿ, ಕೀ ಅನ್ನು ಎಂದಿನಂತೆ ಸೆಂಟ್ರಲ್ ಆಫೀಸ್‌ಗೆ ಕೊಟ್ಟಿದ್ದರು. ಮರುದಿನ ಬೆಳಗ್ಗೆ ಶಿಫ್ಟ್‌ಗೆ ಬಂದಾಗ ವರ್ಕ್‌ಶಾಪ್ ಬಾಗಿಲಿನ ಕೀ ತೆಗೆದು ಒಳಗೆ ಹೋಗಿದ್ದಾರೆ. ಟೂಲ್ಸ್ ಬಾಕ್ಸ್‌ನ ಬೀಗ ಮುರಿದಿರುವುದು ಗೊತ್ತಾಗಿದೆ. ಅದರಲ್ಲಿದ್ದ ಟೂಲ್ಸ್ ಬಳಸಿ, ರಿಪೇರಿಗೆ ತಂದಿದ್ದ ವೆಲ್ಡಿಂಗ್ ಮೆಷಿನ್‌ನ ತಾಮ್ರದ ವೈಂಡಿಂಗ್ ಕಳ್ಳತನ ಮಾಡಲಾಗಿದೆ.

ಅಂದಾಜು 35 ಸಾವಿರ ರೂ. ಮೌಲ್ಯದ 50 ಕೆ.ಜಿ ತೂಕದ ತಾಮ್ರದ ತಂತಿ ಕಳುವಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಭದ್ರಾವತಿ ನ್ಯೂ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ » ಈದ್ ಮೆರವಣಿಗೆ, ಶಿವಮೊಗ್ಗದಲ್ಲಿ ವಾಹನ ಸಂಚಾರ ಮಾರ್ಗ ಬದಲಾವಣೆ
LATEST NEWS
- ಸಾವಿನಲ್ಲು ಸಾರ್ಥಕತೆ ಮೆರೆದ ಶಿರಾಳಕೊಪ್ಪದ ಯುವಕ, ಬಹು ಅಂಗಾಂಗ ದಾನ, ಆಗಿದ್ದೇನು?

- ಶಿವಮೊಗ್ಗದ ಕರ್ನಾಟಕ ಸಂಘದಲ್ಲಿ ನಟಿ ರಂಜನಿ ರಾಘವನ್ ಉಪನ್ಯಾಸ, ಯಾವಾಗ? ಏನು ವಿಷಯ?

- ‘ಶಾಸಕರಿಗೆ ಹೇಳಿ ನೀನೆ ತಡೆದಿದ್ದೀಯ’ ಎಂದು ಆರೋಪಿಸಿ ವ್ಯಕ್ತಿ ಮೇಲೆ ಚಪ್ಪಲಿಯಿಂದ ಹಲ್ಲೆ, ಏನಿದು ಪ್ರಕರಣ?

- ಶಿವಮೊಗ್ಗದಲ್ಲಿ ರಾಷ್ಟ್ರಮಟ್ಟದ ಬಯಲು ಕುಸ್ತಿ, ಹೇಗಿತ್ತು ಎರಡನೇ ದಿನದ ಕಾದಾಟ? ಯಾರೆಲ್ಲ ಗೆದ್ದರು?

- ತೀರ್ಥಹಳ್ಳಿಯಲ್ಲಿ ಫಾರ್ಚುನರ್ ಕಾರಿನಲ್ಲಿ ಬಂದು ಇಂಜಿನಿಯರ್ಗೆ ಬೆದರಿಸಿ ಹಣ ವಸೂಲಿ, ಏನಿದು ಕೇಸ್?

About The Editor
ನಿತಿನ್ ಆರ್.ಕೈದೊಟ್ಲು





