ಇನ್ನೂ ಪತ್ತೆಯಾಗದ ಸುಳಿವು, ನಾಲ್ವರಿಗಾಗಿ ಭದ್ರಾ ನಾಲೆಯಲ್ಲಿ ಶೋಧ ಕಾರ್ಯ ಬಿರುಸು, ಈತನಕ ಏನೇನಾಯ್ತು?

Published On : ಜನವರಿ 19, 2026

Published By : ನಿತಿನ್‌ ಆರ್‌.ಕೈದೊಟ್ಲು 

ಹೊಳೆಹೊನ್ನೂರು: ಭದ್ರಾ ನಾಲೆಯಲ್ಲಿ ಬಟ್ಟೆ ತೊಳೆಯಲು ಹೋಗಿದ್ದ ಒಂದೇ ಕುಟುಂಬದ ನಾಲ್ವರು ನಾಪತ್ತೆಯಾಗಿದ್ದು (missing family) ಅವರಿಗಾಗಿ ಶೋಧ ಕಾರ್ಯ ಆರಂಭವಾಗಿದೆ. ಎರಡನೇ ದಿನದ ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಸಿಬ್ಬಂದಿ ರಬರ್‌ ಬೋಟ್‌ಗಳ ಮೂಲಕ ನಾಲೆಯಲ್ಲಿ ಹುಡುಕಾಟ ನಡೆಸುತ್ತಿದ್ದಾರೆ.

ಅರಬಿಳಚಿ ಗ್ರಾಮದ ನೀಲಾಬಾಯಿ(50), ಮಗ ರವಿಕುಮಾರ್(23), ಮಗಳು ಶ್ವೇತಾ(24) ಮತ್ತು ಅಳಿಯ ಶಿಕಾರಿಪುರ ತಾಲೂಕು ಬೆಂಡೆಕಟ್ಟೆ ಗ್ರಾಮದ ಪರಶುರಾಮ(28) ನಾಪತ್ತೆಯಾಗಿದ್ದಾರೆ. ಅರಬಿಳಚಿಯ ಮಾರಿಹಬ್ಬಕ್ಕೆಂದು ಬಂದಿದ್ದ ಮಗಳು ಮತ್ತು ಅಳಿಯನೊಂದಿಗೆ ಅತ್ತೆ ನೀಲಾಬಾಯಿ, ಮಗ ರವಿಕುಮಾರ್‌ನನ್ನು ಕರೆದುಕೊಂಡು ಬಟ್ಟೆ ತೊಳೆಯಲು ಹೋಗಿದ್ದರು.

ಜಾತ್ರೆಗೆ ಹೋಗಿ ಬಂದಿದ್ದರು

ಮಗಳು ಅಳಿಯ ತನ್ನಿಬ್ಬರು ಮಕ್ಕಳನ್ನು ಕರೆದುಕೊಂಡು ಅರಬಿಳಚಿಯ ಮಾರಿ ಜಾತ್ರೆಗೆ ಬಂದಿದ್ದರು. ಮಂಗಳವಾರ ಹಾಗೂ ಬುಧವಾರ ಎರಡು ದಿನ ಮಾರಿ ಹಬ್ಬ ಮುಗಿದ ನಂತರ ಬಟ್ಟೆ ತೊಳೆಯಲು ಹೋಗಿದ್ದರು. ಶನಿವಾರ ಇದೇ ಸ್ಥಳಕ್ಕೆ ನೆಂಟರನ್ನು ಕರೆದುಕೊಂಡು ಹೋಗಿ ಬಟ್ಟೆಗಳನ್ನು ತೊಳೆದುಕೊಂಡು ಬಂದಿದ್ದಾರೆ. ಭಾನುವಾರ ಶ್ವೇತಾಳ ಇಬ್ಬರು ಮಕ್ಕಳನ್ನು ಅಜ್ಜನ ಬಳಿ ಬಿಟ್ಟು ಉಳಿದ ಬಟ್ಟೆಗಳನ್ನು ತೊಳೆಯಲು ಹೋಗಿದ್ದರು ಎಂದು ತಿಳಿದು ಬಂದಿದೆ.

190126 Arahatolalu family search at Bhadra canal

ದಡದಲ್ಲಿ ಬಟ್ಟೆ, ಬೈಕ್‌ಗಳು

ಭದ್ರಾ ನಾಲೆಯ ದಡದಲ್ಲಿ ಬಟ್ಟೆ ಹಾಗೂ ಬೈಕ್‌ಗಳನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಟ್ಟೆ, ತೊಳೆಯುವಾಗ ಆಯತಪ್ಪಿ ಬಿದ್ದಿರುವ ಶಂಕೆ ವ್ಯಕ್ತವಾಗಿದೆ. ಒಬ್ಬರು ಆಕಸ್ಮಿಕವಾಗಿ ಕಾಲು ಜಾರಿ ನಾಲೆಗೆ ಬಿದ್ದಿದ್ದಾರೆ. ಒಬ್ಬರನ್ನು ರಕ್ಷಿಸಲು ಹೋಗಿ ಮತ್ತೊಬ್ಬರು ನೀರುಪಾಲಾಗಿರುವ ಸಾಧ್ಯತೆ ಇದೆ.

ಎರಡನೇ ದಿನದ ಕಾರ್ಯಾಚರಣೆ

ಭಾನುವಾರ ರಾತ್ರಿಯವರೆಗೆ ನಾಲ್ವರಿಗಾಗಿ ಶೋಧ ಕಾರ್ಯ ನಡೆಸಲಾಯಿತು. ಕತ್ತಲಾಗಿದ್ದರಿಂದ ಶೋಧ ಕಾರ್ಯ ಸ್ಥಗಿತಗೊಳಿಸಲಾಗಿತ್ತು. ಇಂದು ಬೆಳಗ್ಗೆಯಿಂದ ಭದ್ರಾ ನಾಲೆಯಲ್ಲಿ ಅಗ್ನಿಶಾಮಕ ಸಿಬ್ಬಂದಿ ಪುನಃ ಕಾರ್ಯಾಚರಣೆ ಆರಂಭಿಸಿದ್ದಾರೆ. ಹೊಳೆಹೊನ್ನೂರು ಠಾಣೆ ಪೊಲೀಸರು ಸ್ಥಳದಲ್ಲಿದ್ದಾರೆ.

ಇದನ್ನೂ ಓದಿ – ಶಿವಮೊಗ್ಗದಲ್ಲಿ ಗ್ಯಾರಂಟಿ ಯೋಜನೆಗಳ ಕಾರ್ಯಾಗಾರ, ಯಾರೆಲ್ಲ ಭಾಗವಹಿಸ್ತಾರೆ? ಏನೆಲ್ಲ ಇರಲಿದೆ?

Total-Readers-of-Shivamogga-Live
JNN College of Engineering Admissions started

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : ಜನವರಿ 19, 2026

Leave a Comment