ಶಿವಮೊಗ್ಗದ ಲೈವ್.ಕಾಂ | BHADRAVATHI NEWS | 2 ಜನವರಿ 2022
ಸಿನಿಮಾದ ಪ್ರಮೋಷನ್’ಗಾಗಿ ಭದ್ರಾವತಿಗೆ ಆಗಮಿಸಿದ್ದ ನಟ ಡಾಲಿ ಧನಂಜಯ ಅವರಿಗೆ ಅಭಿಮಾನಿಗಳು ಜೆಸಿಬಿ ಮೂಲಕ ಹಾರ ಹಾಕಿ ಸಂಭ್ರಮಿಸಿದರು. ಈ ನಡುವೆ ನಟ ಧನಂಜಯ ಅವರು ಮಾಜಿ ಶಾಸಕ ಅಪ್ಪಾಜಿ ಗೌಡ ಅವರ ನಿವಾಸಕ್ಕೆ ತೆರಳಿ, ಕುಟುಂಬದವರೊಂದಿಗೆ ಮಾತುಕತೆ ನಡೆಸಿದರು.
ಬಡವ ರಾಸ್ಕಲ್ ಸಿನಿಮಾದ ಪ್ರಮೋಷನ್’ಗಾಗಿ ನಟ ಡಾಲಿ ಧನಂಜನಯ ಇವತ್ತು ಭದ್ರಾವತಿಗೆ ಭೇಟಿ ನೀಡಿದ್ದರು. ನೇತ್ರಾವತಿ ಚಿತ್ರಮಂದಿರದಲ್ಲಿ ಅಭಿಮಾನಿಗಳಿಗೆ ನಟ ಡಾಲಿ ಧನಂಜಯ ಅವರು ಕೃತಜ್ಞತೆ ಸಲ್ಲಿಸಿದರು. ಈ ವೇಳೆ ತಮ್ಮ ನೆಚ್ಚಿನ ನಟನನ್ನು ಕಣ್ತುಂಬಿಕೊಳ್ಳಲು, ಫೋಟೊ ಕ್ಲಿಕ್ಕಿಸಿಕೊಳ್ಳಲು ಅಭಿಮಾನಿಗಳ ಮಧ್ಯೆ ನೂಕುನುಕ್ಕಲು ಉಂಟಾಯಿತು.
ಜೆಸಿಬಿಯಿಂದ ಹೂವಿನ ಹಾರ
ನಟ ಡಾಲಿ ಧನಂಜಯ ಅವರಿಗೆ ಭದ್ರಾವತಿಯ ಅಭಿಮಾನಿಗಳು ಜೆಸಿಬಿ ಬಳಿಸಿ, ಹೂವಿನ ಹಾರ ಹಾಕಿದರು. ಬೃಹತ್ ಹೂವಿನ ಹಾರ ಹಾಕಿಸಿಕೊಂಡ ನಟ ಧನಂಜಯ ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿದರು.
ಮಾಜಿ ಶಾಸಕರ ಮನೆಗೆ ಭೇಟಿ
ಇದೆ ವೇಳೆ ಭದ್ರಾವತಿಯ ಉಂಬ್ಳೆಬೈಲು ರಸ್ತೆಯಲ್ಲಿರುವ ಮಾಜಿ ಶಾಸಕ ಅಪ್ಪಾಜಿಗೌಡ ಅವರ ಮನೆಗೆ ನಟ ಧನಂಜಯ ಅವರು ಭೇಟಿ ನೀಡಿದರು. ಅವರ ಕುಟುಂಬದವರೊಂದಿಗೆ ಧನಂಜನ ಕೆಲ ಹೊತ್ತು ಮಾತುಕತೆ ನಡೆಸಿದರು. ಅವರೊಂದಿಗೆ ಫೋಟೊ ಕ್ಲಿಕ್ಕಿಸಿಕೊಂಡರು.