ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 12 FEBRUARY 2024
BHADRAVATHI : ಪಾನಮತ್ತನಾಗಿದ್ದ ಯುವಕನೊಬ್ಬ ಭರ್ತಿಯಾಗಿದ್ದ ಅಡುಗೆ ಅನಿಲ ಸಿಲಿಂಡರ್ ಅನ್ನು ನಡು ರಸ್ತೆಗೆ ತಂದು ಎತ್ತಿ ಬಿಸಾಡಿ ಆತಂಕ ಸೃಷ್ಟಿಸಿದ್ದಾನೆ. ಕುಡಿದ ಮತ್ತಿನಲ್ಲಿ ಆತ ಸಿಲಿಂಡರ್ ಸ್ಪೋಟಿಸಬಹುದು ಎಂದು ಸ್ಥಳೀಯರು ಆತಂಕಕ್ಕೀಡಾಗಿ ಪೊಲೀಸರಿಗೆ ವಿಷಯ ತಿಳಿಸಿದ್ದರು. ಕುಡುಕನ ರಂಪಾಟದ ವಿಡಿಯೋಗಳು ಈಗ ವೈರಲ್ ಆಗಿದೆ.
ಇದನ್ನೂ ಓದಿ – VISL ಕಾರ್ಖಾನೆ ವಿಚಾರ, ದೆಹಲಿಗೆ ನಿಯೋಗ, 2 ಪ್ರಮುಖ ಬೇಡಿಕೆ ಈಡೇರಿಕೆಗೆ ಉಕ್ಕು ಪ್ರಾಧಿಕಾರಕ್ಕೆ ಒತ್ತಾಯ
ಭದ್ರಾವತಿ ನಗರದ ಹೊಸಮನೆ ಬಲಭಾಗದ 3ನೇ ಅಡ್ಡರಸ್ತೆಯಲ್ಲಿ ಕಳೆದ ಶನಿವಾರ ರಾತ್ರಿ ಘಟನೆ ಸಂಭವಿಸಿದೆ. ಸ್ಥಳೀಯ ನಿವಾಸಿಯೊಬ್ಬ ಕುಡಿದ ಮತ್ತಿನಲ್ಲಿ ಮನೆಯೊಳಗಿಂದ ಸಿಲಿಂಡರ್ ತಂದು ಹೊರಗೆ ಇಟ್ಟು ರಂಪಾಟ ಮಾಡಿದ್ದಾನೆ. ಸಿಲಿಂಡರ್‌ಗೆ ಬೆಂಕಿ ಹಚ್ಚಿ ಸ್ಪೋಟಿಸುವುದಾಗಿ ಬೆದರಿಸಿದ್ದಾನೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಸಿಲಿಂಡರ್ ಎತ್ತೆತ್ತಿ ಎಸೆದು ಆತಂಕ ಸೃಷ್ಟಿ
ಅಡುಗೆ ಅನಿಲದ ಸಿಲಿಂಡರ್ ಅನ್ನು ನಡು ರಸ್ತೆಗೆ ತಂದಿಟ್ಟು ಹುಚ್ಚಾಟ ಮಾಡಿದ್ದಾನೆ. ಒಂದೆರಡು ಬಾರಿ ಸಿಲಿಂಡರ್ ಅನ್ನು ಎತ್ತೆತ್ತಿ ಎಸೆದಿದ್ದಾನೆ. ಇದನ್ನು ಕಂಡು ಸ್ಥಳೀಯರು ದೂರಕ್ಕೆ ಓಡಿದ್ದಾರೆ. ಕೂಡಲೆ ಪೊಲೀಸರಿಗೆ ವಿಷಯ ಮುಟ್ಟಿಸಿದ್ದರು. ಇನ್ನು, ಈತನ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಇಡೀ ರಸ್ತೆಯ ನಿವಾಸಿಗಳು ಸಹಿ ಮಾಡಿ ಭದ್ರಾವತಿ ಹೊಸಮನೆ ಠಾಣೆಗೆ ದೂರು ನೀಡಿದ್ದಾರೆ. ಆದರೆ ಯಾವುದೆ ಕ್ರಮವಾಗಿಲ್ಲ ಎಂದು ಸ್ಥಳೀಯರು ಆಪಾದಿಸಿದ್ದಾರೆ.
ಇದನ್ನೂ ಓದಿ – ಮಟಮಟ ಮಧ್ಯಾಹ್ನ ಮನೆಗೆ ನುಗ್ಗಿದ ಕಳ್ಳ, ಹೊರಬಂದು ಚಿಲಕ ಹಾಕಿದ ಮಹಿಳೆ, ಜನ ಮನೆಯೊಳಗೆ ಹೋದಾಗ ಕಾದಿತ್ತು ಶಾಕ್
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422