ಶಿವಮೊಗ್ಗ ಲೈವ್.ಕಾಂ | SHIMOGA NEWS | 1 ಸೆಪ್ಟೆಂಬರ್ 2021
ಗಾಂಜಾ ಪ್ಯಾಕೆಟ್’ಗಳನ್ನು ಮಾರಾಟ ಮಾಡುತ್ತಿದ್ದ ವ್ಯಕ್ತಿ ಮೇಲೆ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ಗಾಂಜಾ ಮತ್ತು ನಗದು ವಶಕ್ಕೆ ಪಡೆಯಲಾಗಿದೆ.
ಭದ್ರಾವತಿ ತಾಲೂಕು ಬಾರಂದೂರು ಕ್ರಾಸ್ ಬೈಪಾಸ್ ಮುಖ್ಯ ರಸ್ತೆ ಬಳಿ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ದಾಳಿಯಾಗಿದೆ.
ಇರ್ಫಾನ್ ಎಂಬಾತ ಹೂವು, ಕಾಯಿ, ಬೀಜಗಳಿಂದ ಕೂಡಿದ ಒಣ ಗಾಂಜಾದ ಸಾಚೇಟ್’ಗಳನ್ನು ಮಾರಾಟ ಮಾಡುತ್ತಿದ್ದ. ಆತನ ಬಳಿ 116 ಗ್ರಾಂ ಗಾಂಜಾ ಪತ್ತೆಯಾಗಿದೆ. 550 ರೂ. ನಗದು ಕೂಡ ಪತ್ತೆಯಾಗಿದ್ದು, ಅದನ್ನು ಅಬಕಾರಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ | ಬಾರಂದೂರು ಬಳಿ ಭೀಕರ ಅಪಘಾತ, ಸೀಟ್’ನಲ್ಲೇ ಸಿಕ್ಕಿಬಿದ್ದು ಚಾಲಕ ಸಾವು
ಇರ್ಫಾನ್ ವಿರುದ್ಧ ಅಬಕಾರಿ ಇಲಾಖೆ ಅಧಿಕಾರಿಗಳು NDPS ಕಾಯ್ದೆ ಅಡಿ ಪ್ರಕರಣ ದಾಖಲು ಮಾಡಿದ್ದಾರೆ ಉಪ ಆಯುಕ್ತ ಕ್ಯಾಪ್ಟನ್ ಅಜಿತ್ ಕುಮಾರ್, ಭದ್ರಾವತಿ ವಲಯದ ಅಬಕಾರಿ ನಿರೀಕ್ಷಕ ಸುನೀಲ್ ಕಲ್ಲೂರ, ಉಪ ನಿರೀಕ್ಷಕ ಶಿವರಾಜ ಹಾಗೂ ಮುಖ್ಯಪೇದೆ ಸುಧಾಮಣೆ, ಕಾನ್ಸ್’ಟೇಬಲ್’ಗಳಾದ ಜ್ಞಾನೇಶ, ಶಿವಮೂರ್ತಿ, ಮಲ್ಲಿಕಾರ್ಜನ್ ಶಶಿಧರ್ ಸೇರಿದಂತೆ ಮತ್ತಿತರ ಸಿಬ್ಬಂದಿಗಳು ಕಾರ್ಯಾಚರಣೆಲ್ಲಿ ಪಾಲ್ಗೊಂಡಿದ್ದರು.
(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200