ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | 4 ಡಿಸೆಂಬರ್ 2018
ಪ್ರತ್ಯೇಕ ಪ್ರಕರಣದಲ್ಲಿ ಕಬ್ಬು ಮತ್ತು ನೂರು ಕ್ವಿಂಟಾಲ್ ಜೋಳ ಬೆಂಕಿಗೆ ಆಹುತಿಯಾಗಿದೆ. ಇದರಿಂದ ರೈತರಿಗೆ ಭಾರೀ ಪ್ರಮಾಣದ ನಷ್ಟ ಉಂಟಾಗಿದೆ.
ನೂರು ಕ್ವಿಂಟಾಲ್ ಜೋಳಕ್ಕೆ ಬೆಂಕಿ
ಆಕಸ್ಮಿಕವಾಗಿ ಬೆಂಕಿ ತಗುಲಿ ಸುಮಾರು ನೂರು ಕ್ವಿಂಟಾಲ್’ನಷ್ಟು, ಕಟಾವು ಮಾಡಿದ್ದ ಮೆಕ್ಕೆ ಜೋಳ ಸುಟ್ಟು ಹೋಗಿದೆ. ತಾಲೂಕಿನ ಹೆಗ್ಗೋಡು ಗ್ರಾಮದ ಮಲ್ಲಿಕಾರ್ಜುನಗೌಡ ಎಂಬುವವರಿಗೆ ಸೇರಿದ ಮೆಕ್ಕೆ ಜೋಳಕ್ಕೆ ಬೆಂಕಿ ತುಗಿಲಿದೆ. ನಾಲ್ಕು ಎಕರೆಯಲ್ಲಿ ಬೆಳೆದ ಮೆಕ್ಕೆ ಜೋಳವನ್ನು ಕಟಾವು ಮಾಡಿ, ರಾಶಿ ಹಾಕಿದ್ದರು. ಇದಕ್ಕೆ ಬೆಂಕಿ ತಗುಲಿದೆ. ಕೃಷಿ ಅಧಿಕಾರಿ ವಿಜಯ್ ಕುಮಾರ್, ಗ್ರಾಮ ಲೆಕ್ಕಾಧಿಕಾರಿ ಶೋಭಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸದರು.
ಶಾರ್ಟ್ ಸರ್ಕಿಟ್, ಕಬ್ಬು ಧಗಧಗ
ವಿದ್ಯುತ್ ಶಾರ್ಟ್ ಸರ್ಕಿಟ್’ನಿಂದಾಗಿ ತಾಲೂಕಿನಲ್ಲಿ ಕಬ್ಬಿನ ಬೆಳೆ ಧಗಧಗ ಉರಿದು ಹೋಗಿದೆ. ಸುಣ್ಣದ ಹಳ್ಳಿ ಬಳಿ ಕಬ್ಬಿನ ಗದ್ದೆಗೆ ಬೆಂಕಿ ತಗುಲಿದೆ. ಮಸರಹಳ್ಳಿ ಗ್ರಾಮದ ಮಧು ಎಂಬುವವರಿಗೆ ಸೇರಿದ ಕಬ್ಬಿನ ಗದ್ದೆ ಇದು. ಎರಡೂವರೆ ಎಕರೆಯಲ್ಲಿದ್ದ ಕಬ್ಬು ಬೆಂಕಿಗೆ ಆಹುತಿಯಾಗಿದೆ. ವಿಚಾರ ತಿಳಿಯುತ್ತಿದ್ದಂತೆ ಭದ್ರಾವತಿ ಮತ್ತು ತರೀಕೆರೆಯ ಅಗ್ನಿಶಾಮಕ ವಾಹನಗಳು ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಿದವು.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200
ಸುದ್ದಿಗಾಗಿ ಕರೆ ಮಾಡಿ | 9964634494
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422