| No.1 News Website |
| ಶಿವಮೊಗ್ಗ ಲೈವ್ ಮಲೆನಾಡು ಭಾಗದಲ್ಲಿ ಅತಿ ಹಚ್ಚು ಓದುಗರು ಮತ್ತು ಅತಿ ಹೆಚ್ಚು ವಿವ್ಸ್ ಹೊಂದಿರುವ ವೆಬ್‌ಸೈಟ್. ನೀವು ನಮ್ಮ ವಾಟ್ಸಪ್ ಗ್ರೂಪ್ ಸೇರಲು » ಇಲ್ಲಿ ಕ್ಲಿಕ್ ಮಾಡಿ. |
![]()
ಶಿವಮೊಗ್ಗದ ಲೈವ್.ಕಾಂ | BHADRAVATHI NEWS | 9 ಜನವರಿ 2022
ಆನ್ ಲೈನ್ ಜೂಜಾಟ ಆಡಿಸುತ್ತಿದ್ದವರ ಮೇಲೆ ಭದ್ರಾವತಿ ಪೊಲೀಸರು ದಾಳಿ ಮಾಡಿದ್ದಾರೆ. ಪ್ರಕರಣ ಸಂಬಂಧ ಇಬ್ಬರನ್ನು ಬಂಧಿಸಿದ್ದಾರೆ. ಆನ್ ಲೈನ್ ಜೂಜಾಟವನ್ನು ರಾಜ್ಯ ಸರ್ಕಾರ ನಿಷೇಧ ಮಾಡಿದ್ದು, ಆ ಬಳಿಕ ಜಿಲ್ಲೆಯಲ್ಲಿ ದಾಖಲಾದ ಮೊದಲ ಪ್ರಕರಣ ಇದಾಗಿದೆ.
ಭದ್ರಾವತಿಯ ಹೊಸ ಸಿದ್ದಾಪುರದ ತಾರೇಶ್ (27), ಕಡದಕಟ್ಟೆಯ ಚೇತನ್ (25) ಎಂಬುವವರನ್ನು ಬಂಧಿಸಲಾಗಿದೆ.
ಏನಿದು ಪ್ರಕರಣ?
ಬಂಧಿತರಿಬ್ಬರು ಮೊಬೈಲ್ ಆಪ್ ಮೂಲಕ ಆನ್’ಲೈನ್ ಅಂದರ್ ಬಾಹರ್, ಕ್ಯಾಸಿನೋ, ಕ್ರಿಕೆಟ್ ಬಿಗ್ ಬ್ಯಾಷ್ ಜೂಜಾಟಗಳನ್ನು ನಡೆಸುತ್ತಿದ್ದ ಬಗ್ಗೆ ಆರೋಪವಿತ್ತು. ಜನರಿಂದ ಹಣ ಪಡೆದು ಜೂಜಾಟದಲ್ಲಿ ತೊಡಗಿಸುತ್ತಿದ್ದರು. ಗೆದ್ದವರಿಗೆ ಆನ್ ಲೈನ್ ಮೂಲಕ ಅಥವಾ ಕೆಲವರಿಗೆ ನೇರವಾಗಿ ಹಣ ಕೊಡುತ್ತಿದ್ದರು. ಅಲ್ಲದೆ ಈ ಮೂಲಕ ಲಕ್ಷಾಂತರ ರೂ. ಸಂಪಾದನೆ ಮಾಡಿರುವ ಬಗ್ಗೆ ಆರೋಪವಿತ್ತು.
ಆನ್ ಲೈನ್ ಜೂಜಾಟದ ಕುರಿತು ಖಚಿತ ಮಾಹಿತಿ ಲಭ್ಯವಾದ ಹಿನ್ನೆಲೆ ಭದ್ರಾವತಿ ನ್ಯೂ ಟೌನ್ ಠಾಣೆ ಪೊಲೀಸರು ದಾಳಿ ನಡೆಸಿ, ಇಬ್ಬರನ್ನು ಬಂಧಿಸಿದ್ದಾರೆ. ಬಂಧಿತರಿಂದ 13 ಸಾವಿರ ರೂ. ನಗದು, 1.51 ಲಕ್ಷ ರೂ. ಮೌಲ್ಯದ ಮೂರು ಮೊಬೈಲ್ ಫೋನ್, ಒಂದು ಕಾರು ವಶಕ್ಕೆ ಪಡೆಯಲಾಗಿದೆ.
ಜಿಲ್ಲೆಯಲ್ಲಿ ಇದೆ ಮೊದಲ ಕೇಸ್
ಆನ್ ಲೈನ್ ಜೂಜಾಟವನ್ನು ರಾಜ್ಯ ಸರ್ಕಾರ ನಿಷೇಧಗೊಳಿಸಿದೆ. ಈ ನಿಯಮ ಜಾರಿಗೆ ಬಂದ ಬಳಿಕ ಶಿವಮೊಗ್ಗ ಜಿಲ್ಲೆಯಲ್ಲಿ ದಾಖಲಾಗುತ್ತಿರುವ ಮೊದಲ ಪ್ರಕರಣ ಇದಾಗಿದೆ. ಮೊಬೈಲ್ ಅಪ್ಲಿಕೇಷನ್ ಡೆವಲಪರ್, ಹ್ಯಾಂಡ್ಲರ್’ಗಳು, ಲೋಕಲ್ ಬುಕ್ಕಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.
ಭದ್ರಾವತಿ ಸಿಟಿ ಪ್ರೊಬೆಷನರಿ ಡಿವೈಎಸ್’ಪಿ ಗಜಾನನ ವಾಮನ ಸತಾರ್ ನೇತೃತ್ವದಲ್ಲಿ ನ್ಯೂ ಟೌನ್ ಠಾಣೆ ಸಿಬ್ಬಂದಿ ಸುನೀಲ್ ಕುಮಾರ್, ನಾಗರಾಜ್, ಹನುಮಂತ ಆವಟಿ, ವಿಜಯಕುಮಾರ್.ಡಿ.ಸಿ ಅವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
![]()
ಶಿವಮೊಗ್ಗದಲ್ಲಿ ಏನೇನಾಯ್ತು? ಇಲ್ಲಿವೆ ಸುದ್ದಿಗಳು. ಕೆಳಗಿರುವ ಹೆಡ್‌ಲೈನ್ ಮೇಲೆ ಕ್ಲಿಕ್ ಮಾಡಿ, ಸುದ್ದಿ ಓದಿ.
- ಸಿಗಂದೂರು ಸೇತುವೆ ಮೇಲೆ ಆತ್ಮಹತ್ಯೆಗೆ ಯತ್ನಿಸಿದ ಮೈಸೂರಿನ ವ್ಯಕ್ತಿ
- ಯಡೇಹಳ್ಳಿ ಕ್ರಾಸ್ ಬಳಿ ಅರಣ್ಯ ಸಂಚಾರಿ ದಳದ ದಾಳಿ, ಕಾರಾವಾರದ ವ್ಯಕ್ತಿ ಅರೆಸ್ಟ್
- ಅಡಿಕೆ ಎಲೆಚುಕ್ಕಿ ರೋಗ, ಬಾಕಿ ಹಣ ಬಿಡುಗಡೆಗೆ ಸಿಎಂ ಸೂಚನೆ
- ಕಿತ್ತೂರು ರಾಣಿ ಚನ್ನಮ್ಮ, ವೀರ ಮಹಿಳೆ ಪ್ರಶಸ್ತಿಗೆ ಅರ್ಜಿ
- ಸಾಗರ ನಗರಸಭೆ ಎಚ್ಚರಿಕೆ, ಬೀದಿ ನಾಯಿಗಳ ನಿಯಂತ್ರಣ ಕುರಿತು ಪ್ರಮುಖ ಪ್ರಕಟಣೆ
- ‘ಶಿವಮೊಗ್ಗ ಮಹಾನಗರ ಪಾಲಿಕೆಗೆ ಜನವರಿ 2ರವರೆಗೆ ಗಡುವುʼ
- ತೀರ್ಥಹಳ್ಳಿ ಎಳ್ಳಮಾವಾಸ್ಯೆ ಜಾತ್ರೆಗೆ ಸಿದ್ಧತೆ ಜೋರು, ಯಾವ್ಯಾವ ದಿನ ಏನೇನು ಕಾರ್ಯಕ್ರಮ ಇರಲಿದೆ?
- ಬಾವಿಗೆ ಬಿದ್ದ ಗೂಳಿ, ಹರಸಾಹಸ ಮಾಡಿ ಮೇಲೆತ್ತಿದ ಅಗ್ನಿಶಾಮಕ ಸಿಬ್ಬಂದಿ, ಆಗಿದ್ದೆಲ್ಲಿ?
![]()