ಭದ್ರಾವತಿಯಲ್ಲಿ ತವರಿಗೆ ಮರಳಿದ ಯೋಧನಿಗೆ ಅದ್ಧೂರಿ ಸ್ವಾಗತ

Published On : ಏಪ್ರಿಲ್ 7, 2026

Published By : ನಿತಿನ್‌ ಆರ್‌.ಕೈದೊಟ್ಲು 

ಭದ್ರಾವತಿ: ಭಾರತೀಯ ಸೇನೆಯಲ್ಲಿ 18 ವರ್ಷ ಸೇವೆ ಸಲ್ಲಿಸಿ ತವರಿಗೆ ಮರಳಿದ ಯೋಧ (soldier) ಟಿ.ಪಿ.ವಿಶ್ವನಾಥ ಅವರನ್ನು ತಾಲೂಕಿನ ಗಂಗೂರು ಗ್ರಾಮದಲ್ಲಿ ಅದ್ಧೂರಿಯಾಗಿ ಸ್ವಾಗತಿಸಿ ಗೌರವ ಸಮರ್ಪಿಸಲಾಯಿತು.

ಈ ಸಂದರ್ಭ ಮಾತನಾಡಿದ ಗ್ರಾಮ ಮುಖಂಡರು, ದೇಶದ ಸೇನೆಯಲ್ಲಿ ಸೇವೆ ಸಲ್ಲಿಸಿ ಬಂದ ಗ್ರಾಮದ ಟಿ.ಪಿ.ವಿಶ್ವನಾಥ ಯುವಕರಿಗೆ ಮಾರ್ಗದರ್ಶಕರಾಗಿದ್ದಾರೆ. ಅವರನ್ನು ಕಂಡು ಯುವ ಸಮೂಹವು ತಾವೂ ಅವರಂತೆ ಭಾರತ ಮಾತೆಯ ಕೀರ್ತಿ ಪತಾಕೆ ಹಾರಿಸುವಂತಹ ಸದವಕಾಶ ಕಲ್ಪಿಸಿಕೊಳ್ಳಬೇಕು. ವೀರ ಯೋಧರರು ಸಹಾ ಯುವಕರಿಗೆ ದೇಶ ಭಕ್ತಿ ಹೆಚ್ಚಿಸುವಂತಹ ಮಾರ್ಗದರ್ಶನ ನೀಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

Welcome-for-retired-army-person-T-P-Vishwanath

ದೊಡೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ದೊಡ್ಡೇರಿ, ಗಂಗೂರು ಸುತ್ತಮುತ್ತಲಿನ ಮುಖಂಡರಾದ ರವಿ, ಮಂಜುನಾಥ್, ಶ್ರೀನಿವಾಸ್, ಪರಮೇಶ್ವರಪ್ಪ, ರಾಮಮೂರ್ತಿ, ಜಗದೀಶ್, ಬಾಬುರಾವ್, ರಾಮ, ಸಿದ್ದರಾಮಪ್ಪ, ಗಣೇಶ್, ಸತೀಶ್, ಮಾಜಿ ಸೈನಿಕರ ಸಂಘ, ರೈಲ್ವೆ ನೌಕರರು, ಮಹಿಳಾ ಸಂಘಟನೆಗಳ ಪ್ರಮುಖರು ಉಪಸ್ಥಿತರಿದ್ದರು.

ಇದನ್ನೂ ಓದಿ : ಆಪರೇಷನ್‌ ಸಿಂಧೂರ, ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲಿ ಯೋಧನ ಕುಟುಂಬಕ್ಕೆ ಅದ್ಧೂರಿ ಸ್ವಾಗತ, ಹೇಗಿತ್ತು? ಯಾರೆಲ್ಲ ಇದ್ದರು?

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : ಏಪ್ರಿಲ್ 7, 2026

Leave a Comment