ಶಿವಮೊಗ್ಗ ಲೈವ್.ಕಾಂ | BHADRAVATHI NEWS | 3 ಸೆಪ್ಟೆಂಬರ್ 2021
ಭದ್ರಾವತಿ ನಗರಸಭೆ 29ನೇ ವಾರ್ಡ್ ಚುನಾವಣೆ ನಡೆಯುತ್ತರುವ ಬೂತ್ ಮುಂದೆ ಮೂರು ಪಕ್ಷಗಳು ಮುಖಂಡರು, ಕಾರ್ಯಕರ್ತರು ಘೋಷಣೆ ಕೂಗಿರುವ ಘಟನೆ ನಡೆದಿದೆ. ಇದರಿಂದ ಕೆಲ ನಿಮಿಷ ಬೂತ್ ಮುಂದೆ ಗೊಂದಲದ ವಾತಾವರಣ ನಿರ್ಮಾಣವಾಯಿತು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಜಯಶ್ರೀ ಸರ್ಕಲ್’ನಲ್ಲಿರುವ ಮತಗಟ್ಟೆ ಬಳಿ ಘಟನೆ ಸಂಭವಿಸಿದೆ. ಮೂರು ಪಕ್ಷದ ಕಾರ್ಯಕರ್ತರು ಘೋಷಣೆಗಳನ್ನು ಕೂಗಿದ್ದರಿಂದ ಕೆಲಕಾಲ ಗೊಂದಲ ನಿರ್ಮಾಣವಾಯಿತು. ಯಾವುದೆ ಅಹಿತಕರ ಘಟನೆ ಸಂಭವಿಸದಂತೆ ಪೊಲೀಸರು ಬಂದೋಬಸ್ತ್ ಮಾಡಿದರು.
ಮೊಳಗಿದ ಜೈ ಶ್ರೀರಾಮ್ ಘೋಷಣೆ
ಬೂತ್ ಸಮೀಪ ಬಿಜೆಪಿ ಕಾರ್ಯಕರ್ತರು ಪಕ್ಷದ ಪರವಾಗಿ ಘೋಷಣೆ ಮೊಳಗಿಸಿದರು. ಅಲ್ಲದೆ ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದರು. ಇದೇ ವೇಳೆ ಶಾಸಕ ಸಂಗಮೇಶ್ವರ್, ಪುತ್ರ ಬಸವೇಶ್ ಅವರು ಜಯಶ್ರೀ ಸರ್ಕಲ್ ಬಳಿಗೆ ಆಗಮಿಸಿದರು. ಹಾಗಾಗಿ ಕಾಂಗ್ರೆಸ್ ಕಾರ್ಯಕರ್ತರು ಕೂಡ ಘೋಷಣೆ ಆರಂಭಿಸಿದರು. ಮತ್ತೊಂದೆಡೆ ಜೆಡಿಎಸ್ ಕಾರ್ಯಕರ್ತರು ಕೂಡ ಘೋಷಣೆ ಶುರು ಮಾಡಿದರು.
ತಬ್ಬಿಬ್ಬಾದ ಪೊಲೀಸರು, ಜನರು
ಏಕಾಏಕಿ ಘೋಷಣೆಗಳು ಆರಂಭವಾಗುತ್ತಿದ್ದಂತೆ ಪೊಲೀಸರು ಮತ್ತು ಜನರು ತಬ್ಬಿಬ್ಬಾದರು. ಕೂಡಲೆ ಅಲರ್ಟ್ ಆದ ಪೊಲೀಸರು ಸರ್ಕಲ್ ಮಧ್ಯಕ್ಕೆ ಬಂದರು. ಇನ್ನು ಜನರು ಕೂಡ ಕೆಲಸ ಕ್ಷಣ ಗಾಬರಿಯಾದರು.
ಈ ಹಿಂದೆ ಕಬಡಿ ಪಂದ್ಯಾವಳಿ ಸಂದರ್ಭ ಘೋಷಣೆ ವಿಚಾರವಾಗಿ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಕೈ ಕೈ ಮಿಲಾಯಿಸಿದ್ದರು. ಶಾಸಕ ಸಂಗಮೇಶ್ವರ್ ಅವರ ಕುಟುಂಬದವರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಇದೆ ಕಾರಣ ಇವತ್ತು ಘೋಷಣೆಗಳು ಆರಂಭವಾಗುತ್ತಿದ್ದಂತೆ ಗೊಂದಲ ನಿರ್ಮಾಣವಾಗಿತ್ತು.
(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200