ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 6 FEBRUARY 2024
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
BHADRAVATHI : ಹಿತ್ತಾಳೆ, ಬೆಳ್ಳಿ, ಬಂಗಾರದ ವಸ್ತುಗಳಿಗೆ ಪಾಲಿಶ್ ಮಾಡಿಕೊಡುವುದಾಗಿ ನಂಬಿಸಿ ಮಹಿಳೆಯೊಬ್ಬರ ಮಾಂಗಲ್ಯ ಸರ ಕಳ್ಳತನ ಮಾಡಲಾಗಿದೆ. ಭದ್ರಾವತಿಯ ಭಂಡಾರಹಳ್ಳಿಯಲ್ಲಿ ಘಟನೆ ಸಂಭವಿಸಿದೆ.
ಫಳಫಳ ಹೊಳೆಯಿತು ಹಿತ್ತಾಳೆ ಲೋಟ
ಜಯಮ್ಮ ಎಂಬುವವರ ಮನೆ ಬಳಿ ಬಂದ ಇಬ್ಬರು ಅಪರಿಚಿತರು ಹಿತ್ತಾಳೆ, ಬೆಳ್ಳಿ, ಚಿನ್ನದ ವಸ್ತುಗಳಿಗೆ ಪಾಲಿಶ್ ಮಾಡಿಕೊಡುವುದಾಗಿ ತಿಳಿಸಿದ್ದರು. ನಂಬಿದ ಜಯಮ್ಮ ಮೊದಲು ಹಿತ್ತಾಳೆ ಲೋಟ ನೀಡಿದ್ದು, ಇಬ್ಬರು ಅಪರಿಚಿತರು ಲೋಟ ಹೊಳೆಯುವಂತೆ ಮಾಡಿಕೊಟ್ಟರು. ವಿಶ್ವಾಸ ಹೆಚ್ಚಾದ ಹಿನ್ನೆಲೆ ಕೊರಳಲ್ಲಿದ್ದ ಮಾಂಗಲ್ಯ ಸರಕ್ಕೆ ಪಾಲಿಶ್ ಮಾಡಿ ಕೊಡುವಂತೆ ಸೂಚಿಸಿದರು.
ಒಲೆ ಮೇಲಿದ್ದ ಬಾಕ್ಸ್ ತೆಗೆದಾಗ ಶಾಕ್
ಚಿನ್ನದ ಸರ ಪಾಲಿಶ್ ಮಾಡಲು ಬಟ್ಟಲು ಬೇಕು ಎಂದು ಅಪರಿಚಿತರು ತಿಳಿಸಿದ್ದರು. ಜಯಮ್ಮ ಸ್ಟೀಲ್ ಬಾಕ್ಸ್ ತಂದುಕೊಟ್ಟಿದ್ದು, ಅದರೊಳಗೆ ಅಪರಿಚಿತರು ಚಿನ್ನದ ಸರ, ನೀರು, ಪೌಡರ್ ಮತ್ತು ಅರಿಶಿಣ ಹಾಕಿದರು. ಇದನ್ನು ಒಲೆ ಮೇಲಿಟ್ಟು 10 ನಿಮಿಷ ಕುದಿಸಬೇಕು. ಬಳಿಕ ಚಿನ್ನದ ಸರವನ್ನು ಹೊರ ತೆಗೆದರೆ ಹೊಳೆಯುತ್ತದೆ ಎಂದು ನಂಬಿಸಿದರು. ಅಂತೆ ಜಯಮ್ಮ ಒಲೆ ಮೇಲಿರಿಸಿ ಕುದಿಸಿ ಸ್ಟೀಲ್ ಬಾಕ್ಸ್ನ ಒಳಗೆ ಕೈ ಹಾಕಿದಾಗ ತಾಳಿ ಸರ ಇರಲಿಲ್ಲ.
ಬೈಕ್ ಹತ್ತಿ ಪರಾರಿಯಾದ ಖದೀಮರು
ಚಿನ್ನದ ತಾಳಿ ಸರ ಕಳ್ಳತನದ ಆರಿವಾಗುತ್ತಿದ್ದಂತೆ ಜಯಮ್ಮ, ಅವರ ಮಗ ಮತ್ತು ಮೊಮ್ಮಗ ಕೂಡಲೆ ಅಪರಿಚಿತರ ಕುರಿತು ಅಕ್ಕಪಕ್ಕದವರಿಗೆ ವಿಚಾರಿಸಿದರು. ಇಬ್ಬರು ಬೈಕ್ ಹತ್ತಿ ಹೋಗಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಪಾಲಿಶ್ ಮಾಡಿಕೊಡುವುದಾಗಿ ನಂಬಿಸಿ 2.10 ಲಕ್ಷ ರೂ. ಮೌಲ್ಯದ ಚಿನ್ನದ ತಾಳಿ ಸರ ಕದ್ದೊಯ್ದವರ ವಿರುದ್ಧ ಜಯಮ್ಮ ದೂರು ನೀಡಿದ್ದಾರೆ. ಭದ್ರಾವತಿ ನ್ಯೂ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಾಲಿಶ್ ನೆಪದಲ್ಲಿ ವಂಚನೆ ಇದೆ ಮೊದಲಲ್ಲ
ಹಿತ್ತಾಳೆ, ಚಿನ್ನ, ಬೆಳ್ಳಿ ವಸ್ತುಗಳಿಗೆ ಪಾಲಿಶ್ ಮಾಡಿಕೊಡುವುದಾಗಿ ನಂಬಿಸಿ ಮಹಿಳೆಯರನ್ನು ವಂಚಿಸುತ್ತಿರುವುದು ಇದೆ ಮೊದಲಲ್ಲ. ಜಿಲ್ಲೆಯಲ್ಲಿ ಈ ಹಿಂದೆಯು ಹಲವು ಪ್ರಕರಣ ದಾಖಲಾಗಿದೆ. ಮಹಿಳೆಯರು ಈ ಕುರಿತು ಎಚ್ಚರ ವಹಿಸಿದರೆ ಇಂತಹ ಅನಾಹುತ ತಪ್ಪಲಿದೆ.
ಇದನ್ನೂ ಓದಿ – ಶಿವಮೊಗ್ಗ ಮಹಾನಗರ ಪಾಲಿಕೆ ಜನನ, ಮರಣ ವಿಭಾಗದ ಮೇಲೆ ಲೋಕಾಯುಕ್ತ ದಾಳಿ