25 ಕೆ.ಜಿ ಅಕ್ಕಿ, 5 ಕೆ.ಜಿ ಟೊಮೆಟೊ, ದಿನಸಿ ಪೂರೈಸುವಂತೆ ಪ್ರಾಂಶುಪಾಲರಿಗೆ ಅತಿಥಿ ಉಪನ್ಯಾಸಕರ ಮನವಿ, ಕಾರಣವೇನು?

ಸೈಟ್‌ ಮಾರಾಟಕ್ಕಿದೆ

ಶಿವಮೊಗ್ಗದ ಬಿದಿರೆಯಲ್ಲಿ ಸೈಟ್‌ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559

ಶಿವಮೊಗ್ಗದಲ್ಲಿ ಬಿ.ಇಡಿ ಕೋರ್ಸ್‌ಗೆ ಪ್ರವೇಶಾತಿ ಆರಂಭ

⇒ ಪೂರ್ತಿ ಡಿಟೇಲ್ಸ್‌ಗೆ ಇಲ್ಲಿ ಕ್ಲಿಕ್‌ ಮಾಡಿ

SHIVAMOGGA LIVE | 2 AUGUST 2023

HOLEHONNURU : ಸಂಬಳ ಇಲ್ಲದ ಅತಿಥಿ ಉಪನ್ಯಾಸಕರು (Guest Lecturers ) ವಿಭಿನ್ನವಾಗಿ ತಮ್ಮ ಅಳಲು ತೋಡಿಕೊಂಡಿದ್ದಾರೆ. ಮೂರು ತಿಂಗಳಿನಿಂದ ಸಂಬಳ ಇಲ್ಲ, ಜೀವನ ನಡೆಸುವುದು ಕಷ್ಟವಾಗುತ್ತಿದೆ. ಸಂಬಳ ಕೊಡುವವರೆಗೂ ಪ್ರತಿ ತಿಂಗಳ ರೇಷನ್ ಕೊಡುವಂತೆ ಪಟ್ಟಿ ಮಾಡಿ ಪ್ರಾಂಶುಪಾಲರ ಮೂಲಕ ಶಿಕ್ಷಣ ಇಲಾಖೆಗೆ ಬೇಡಿಕೆ ಸಲ್ಲಿಸಿದ್ದಾರೆ.

ಮೂರು ತಿಂಗಳಿನಿಂದ ಸಂಬಳವಿಲ್ಲ

ರಾಜ್ಯಾದ್ಯಂತ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರಿಗೆ (Guest Lecturers ) ಮೂರು ತಿಂಗಳಿನಿಂದ ಸಂಬಳ ಆಗಿಲ್ಲ. ಇದನ್ನು ಖಂಡಿಸಿ ಇಲ್ಲಿನ ಹೊಳೆಹೊನ್ನೂರು ಪ್ರಥಮ ದರ್ಜೆ ಕಾಲೇಜು ಅತಿಥಿ ಉಪನ್ಯಾಸಕರು ವಿಭಿನ್ನವಾದ ಮನವಿ ಪತ್ರ ಬರೆದಿದ್ದಾರೆ.

Holehonnuru College Guest lecturers memorandum

“ಮಾನ್ಯ ಘನ ಸರ್ಕಾರ ಕಳೆದ ಮೂರು ತಿಂಗಳಿನಿಂದ ಬಡ, ನಿರ್ಗತಿಕ ಅತಿಥಿ ಉಪನ್ಯಾಸಕರಿಗೆ ಬರಬೇಕಾದ ಗೌರವ ಧನ ತಡೆ ಹಿಡಿದಿದೆ. ಇದರಿಂದ ನಮ್ಮನ್ನು ನಂಬಿಕೊಂಡಿರುವ ಕುಟುಂಬ ಉಪವಾಸದಿಂದ ನರಳುವಂತಾಗಿದೆ. ಸರ್ಕಾರ ನಮ್ಮ ಗೌರವ ಧನ ಬಿಡುಗಡೆ ಮಾಡುವವರೆಗೂ ನಮಗೆ ಅಗತ್ಯವಿರುವ ಈ ಕೆಳಕಂಡ ದಿನಸಿ ವಸ್ತು ಪೂರೈಸಬೇಕೆಂದು ವಿನಂತಿಸಿಕೊಳ್ಳುತ್ತಿದ್ದೇವೆ” ಎಂದು ಜತೆಗೆ ಅಗತ್ಯವಿರುವ ವಸ್ತುಗಳ ಪಟ್ಟಿ ಹಾಕಿದ್ದಾರೆ.

ಇದನ್ನೂ ಓದಿ – ಶಿವಮೊಗ್ಗದಲ್ಲಿ ಹೆಲ್ಮೆಟ್‌ಗೆ ಡಿಮಾಂಡಪ್ಪೋ ಡಿಮಾಂಡ್‌, ನಾಲ್ಕೈದು ಪಟ್ಟು ಏರಿದ ಸೇಲ್ಸ್‌, ಯಾವ ಹೆಲ್ಮೆಟ್‌ಗೆ ಹೆಚ್ಚಿದೆ ಬೇಡಿಕೆ?

ದಿನಸಿಯ ಪಟ್ಟಿ

25 ಕೆ.ಜಿಯ ಅಕ್ಕಿ, 5 ಕೆ.ಜಿ ಟೊಮೆಟೊ, 10 ಕೆ.ಜಿ ಈರುಳ್ಳಿ, 1 ಕೆ.ಜಿ. ಒಣಮೆಣಸು, 2 ಕೆ.ಜಿ. ಹಸಿ ಮೆಣಸು, 2 ಕೆ.ಜಿ ತೊಗರಿಬೇಳೆ, ಅರ್ಧ ಕೆ,ಜಿ ಬೆಳ್ಳುಳ್ಳಿ, ಕಾಲು ಕೆ.ಜಿ ಶುಂಠಿ, ಅಗತ್ಯವಿರುವಷ್ಟು ಹಾಲು, ಮೊಸರು, 1 ಎಲ್‌ಪಿಜಿ ಸಿಲಿಂಡರ್ ಕೊಡಬೇಕು ಎಂದು ಸರಕಾರಕ್ಕೆ ಮನವಿ ಮಾಡಿದ್ದಾರೆ.

PARISHRAMA neet academy

ಮತ್ತಷ್ಟು ಕಾಲೇಜುಗಳಲ್ಲಿ ಮನವಿ

ವೇತನ, ಸೇವೆ ಕಾಯಂಗಾಗಿ ಅತಿಥಿ ಉಪನ್ಯಾಸಕರು ಹಲವು ವರ್ಷಗಳಿಂದ ಪ್ರತಿಭಟನೆ, ಮನವಿ ಸಲ್ಲಿಸುತ್ತಿದ್ದಾರೆ. ಹೊಳೆಹೊನ್ನೂರು ಕಾಲೇಜು ಅತಿಥಿ ಉಪನ್ಯಾಸಕರ ವಿಭಿನ್ನ ಮನವಿ ಈಗ ಅತಿಥಿ ಉಪನ್ಯಾಸಕರ ವಲಯದಲ್ಲಿ ತೀವ್ರ ಚರ್ಚೆ ಹುಟ್ಟುಹಾಕಿದೆ. ಇದೆ ಮಾದರಿ ಮನವಿ ನೀಡುವುದಕ್ಕೆ ಇತರೆ ಕಾಲೇಜುಗಳ ಮತ್ತಷ್ಟು ಅತಿಥಿ ಉಪನ್ಯಾಸಕರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎಂದು ತಿಳಿದು ಬಂದಿದೆ.

Leave a Comment