ಶಿವಮೊಗ್ಗದ ಬಿದಿರೆಯಲ್ಲಿ ಸೈಟ್ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559ಸೈಟ್ ಮಾರಾಟಕ್ಕಿದೆ
ಶಿವಮೊಗ್ಗದಲ್ಲಿ ಬಿ.ಇಡಿ ಕೋರ್ಸ್‌ಗೆ ಪ್ರವೇಶಾತಿ ಆರಂಭ
ಶಿವಮೊಗ್ಗ ಲೈವ್.ಕಾಂ | ಹೊಳೆಹೊನ್ನೂರು | 11 ಜುಲೈ 2019
ಬಾರ್ ಕ್ಯಾಶಿಯರ್’ನನ್ನು ಅಡ್ಡಗಟ್ಟಿ ಹಣ ದೋಚಿದ್ದ ನಾಲ್ವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಂಧಿತರ ಪೈಕಿ ಅದೇ ಮದ್ಯದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದವನು ಸೇರಿದ್ದಾನೆ.
ಜಂಬರಘಟ್ಟ ಗ್ರಾಮದ ಬಸವರಾಜ್ (38), ಶ್ರೀನಿವಾಸ್ ಅಲಿಯಾಸ್ ಗೋವಾ (24), ನವೀನ್ (23), ಅವಿನಾಶ್ (24) ಬಂಧಿತರು. ಬಾರ್ ಕ್ಯಾಶಿಯರ್ ವೆಂಕಟೇಶ್, ಸೋಮವಾರ ರಾತ್ರಿ 85 ಸಾವಿರ ಹಣ ತೆಗೆದುಕೊಂಡು ಜಂಬರಘಟ್ಟಕ್ಕೆ ತೆರಳುತ್ತಿದ್ದರು. ಈ ವೇಳೆ ವೆಂಕಟೇಶ್ ಅವರನ್ನು ಅಡ್ಡಗಟ್ಟಿದ ಮುಸುಕುಧಾರಿಗಳು, ಬೆದರಿಸಿ 85 ಸಾವಿರ ರೂ. ಹಣ ದೋಚಿದ್ದರು. ಈ ಸಂಬಂಧ ಹೊಳೆಹೊನ್ನೂರು ಪೊಲೀಸ್ ಠಾಣೆಗೆ ವೆಂಕಟೇಶ್ ದೂರು ನೀಡಿದ್ದರು.
ಸುಳಿವು ಕೊಟ್ಟವನು ಬಾರ್ ಒಳಗೆ ಇದ್ದ
ಪ್ರಕರಣದ ತನಿಖೆ ಆರಂಭಿಸಿದ ಹೊಳೆಹೊನ್ನೂರು ಪೊಲೀಸರಿಗೆ ವೆಂಕಟೇಶ್, ಬಾರ್’ನಿಂದ ಹಣ ತೆಗೆದುಕೊಂಡು ಹೋಗುವ ಮಾಹಿತಿಯನ್ನು ಬಾರ್ ಒಳಗಿನವರೇ ಕೊಟ್ಟಿರುವ ಅನುಮಾನ ಮೂಡಿತು. ವಿಚಾರಣೆ ನಡೆಸಿದಾಗ ಅದೇ ಬಾರ್’ನಲ್ಲಿ ಕೆಲಸ ಮಾಡುತ್ತಿದ್ದ ಬಸವರಾಜು ಸಿಕ್ಕಿಬಿದ್ದಿದ್ದಾನೆ.
ಬಸವರಾಜು ನೀಡಿದ ಮಾಹಿತಿ ಆಧಾರದ ಮೇಲೆ ಉಳಿದವರು, ವೆಂಕಟೇಶ್ ಅವರನ್ನು ಅಡ್ಡಗಟ್ಟಿ ಹಣ ದೋಚಿದ್ದಾರೆ. ಪೊಲೀಸರ ಮಿಂಚಿನ ಕಾರ್ಯಾಚರಣೆಯಿಂದ, ಆರೋಪಿಗಳು ಶೀಘ್ರದಲ್ಲೇ ಪತ್ತೆಯಾಗಿದ್ದಾರೆ. ಇವರಿಂದ 80 ಸಾವಿರ ಹಣ, ಘಟನೆಗೆ ಬಳಿಸಿದ್ದ 45 ಸಾವಿರ ಮೌಲ್ಯದ ಬೈಕ್, 25 ಸಾವಿರ ಮೌಲ್ಯದ 4 ಮೊಬೈಲ್ ವಶಕ್ಕೆ ಪಡೆಯಲಾಗಿದೆ.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200
ಸುದ್ದಿಗಾಗಿ ಮೊಬೈಲ್ ನಂಬರ್ | 9964634494
ಈ ಮೇಲ್ | shivamoggalive@gmail.com

