SHIVAMOGGA LIVE NEWS, 19 DECEMBER 2024
ಭದ್ರಾವತಿ : ರೈಸ್ ಮಿಲ್ (Rice Mill) ಒಂದರಲ್ಲಿ ಬಾಯ್ಲೆರ್ ಸ್ಪೋಟಗೊಂಡಿದೆ. ದೊಡ್ಡ ಪ್ರಮಾಣದ ಹಾನಿ ಸಂಭವಿಸಿರುವ ಮಾಹಿತಿ ಲಭ್ಯವಾಗಿದೆ. ಭದ್ರಾವತಿಯ ಚನ್ನಗಿರಿ ರಸ್ತೆಯಲ್ಲಿರುವ ರೈಸ್ ಮಿಲ್ನಲ್ಲಿ ಘಟನೆ ಸಂಭವಿಸಿದೆ.
ಸ್ಪೋಟದ ರಭಸಕ್ಕೆ ರೈಸ್ ಮಿಲ್ ಸಂಪೂರ್ಣ ಹಾನಿಯಾಗಿದೆ. ಮಿಲ್ ಒಳಗಿದ್ದ ವಸ್ತುಗಳು ಬಹು ದೂರದವರೆಗೆ ಹಾರಿ ಹೋಗಿ ಬಿದ್ದಿವೆ. ಸ್ಪೋಟದ ಸಂದರ್ಭ ರೈಸ್ ಮಿಲ್ನಲ್ಲಿ ಕಾರ್ಮಿಕರು ಮತ್ತು ಜನರು ಇದ್ದರು ಎಂದು ಹೇಳಲಾಗುತ್ತಿದೆ. ಘಟನೆಯಾದ ತಕ್ಷಣ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ, ಆಂಬುಲೆನ್ಸ್ಗಳು ಸ್ಥಳಕ್ಕೆ ದೌಡಾಯಿಸಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೆ ತಿಳಿಯಬೇಕಿದೆ.
ಇದನ್ನೂ ಓದಿ » ಕಾರು ಕೊಳ್ಳುವವರಿಗೆ ಗುಡ್ ನ್ಯೂಸ್, ಶಿವಮೊಗ್ಗದಲ್ಲಿ ಅತಿ ದೊಡ್ಡ ಎಕ್ಸ್ಚೇಂಜ್ ಮೇಳ, ಯಾವಾಗ? ಎಲ್ಲಿ?