ಶಿವಮೊಗ್ಗ LIVE
ಭದ್ರಾವತಿ: ಜಮೀನು ವಿಷಯವಾಗಿ (land dispute) ಅಕ್ಕ, ತಮ್ಮನ ಕುಟುಂಬದ ನಡುವೆ ನಡೆದ ಜಗಳದಲ್ಲಿ ತಮ್ಮನ ಸಾವು ಸಂಭವಿಸಿದೆ. ಭದ್ರಾವತಿ ತಾಲೂಕು ಅಂತರಗಂಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉಕ್ಕುಂದದಲ್ಲಿ ಘಟನೆ ಸಂಭವಿಸಿದೆ.
ಸುಬ್ರಹ್ಮಣ್ಯ(70) ಮೃತಪಟ್ಟವರು. ಸುಬ್ರಹ್ಮಣ್ಯ ಮತ್ತು ಅವರ ಹಿರಿಯ ಸಹೋದರಿ ಪೂವಮ್ಮ ಅವರ ಕುಟುಂಬದ ನಡುವೆ ಜಮೀನು ವಿಷಯವಾಗಿ ಹಲವು ಬಾರಿ ಜಗಳವಾಗಿತ್ತು. ಮಂಗಳವಾರ ಮಧ್ಯಾಹ್ನ ಸುಬ್ರಹ್ಮಣ್ಯ ಅವರೊಂದಿಗೆ ಪೂವಮ್ಮ ಅವರ ಮಕ್ಕಳು ಜಗಳಕ್ಕಿಳಿದಿದ್ದರು. ಈ ಸಂದರ್ಭ ಸುಬ್ರಹ್ಮಣ್ಯ ಪ್ರಜ್ಞಾಹೀನರಾಗಿದ್ದಾರೆ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ » ಬೊಲೇರೋ ವಾಹನ ಪಲ್ಟಿ, ಮಹಿಳೆ ಸಾವು, ಎಲ್ಲಿ? ಹೇಗಾಯ್ತು ಘಟನೆ?
ಕೂಡಲೆ ಅವರನ್ನು ಭದ್ರಾವತಿ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ದಲಾಗಿದೆ. ಅಷ್ಟರಲ್ಲಿ ಸುಬ್ರಹ್ಮಣ್ಯ ಮೃತಪಟ್ಟಿದ್ದರು. ಜಗಳದ ನಡುವೆ ಕೆಳಗೆ ಬಿದ್ದ ಸುಬ್ರಹ್ಮಣ್ಯ ಅವರಿಗೆ ಹೃದಯಾಘಾತವಾಗಿರುವ ಸಂಭವವಿದೆ ಎಂದು ವೈದ್ಯರು ಶಂಕಿಸಿದ್ದಾರೆ. ಸುಬ್ರಹ್ಮಣ್ಯ ಕುಟುಂಬದವರು ನಾಲ್ವರ ವಿರುದ್ಧ ಭದ್ರಾವತಿ ಗ್ರಾಮಾಂತರ ಠಾಣೆ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.
LATEST NEWS
- ಶಿವಮೊಗ್ಗ ಜಿಲ್ಲಾಧಿಕಾರಿಗೆ ಸೈಬರ್ ವಂಚಕರ ಕಾಟ, ಆಗಿದ್ದೇನು? ಪ್ರಕಟಣೆಯಲ್ಲಿ ಡಿಸಿ ಹೇಳಿದ್ದೇನು?

- ಮಹಿಳೆಯರಿಗೆ ಗುಡ್ ನ್ಯೂಸ್, ಶಿವಮೊಗ್ಗದಲ್ಲಿ ಜನವರಿ 17ರಿಂದ ಮೇಳ, ಏನೇನೆಲ್ಲ ಇರಲಿದೆ?

- ಭದ್ರಾ ನಾಲೆಗೆ ಹಾರಿ ಗೃಹಿಣಿ ಆತ್ಮಹತ್ಯೆ ಕೇಸ್, ಪಾಂಡಿಚೇರಿಯಲ್ಲಿ ಪತಿ ಅರೆಸ್ಟ್

- ಶಿವಮೊಗ್ಗದಲ್ಲಿ ಡಾಗ್ ಶೋ, ರಿಜಿಸ್ಟರ್ ಮಾಡಿಕೊಳ್ಳಲು ಸೂಚನೆ, ಯಾವಾಗ? ಎಲ್ಲಿ ನಡೆಯುತ್ತೆ?

- ಫೋನ್ ಕರೆ, ಶಿವಮೊಗ್ಗದಿಂದ ವ್ಯಕ್ತಿ ದೌಡು, ಆನವಟ್ಟಿ ಮನೆ ಬಳಿ ಕಾದಿತ್ತು ಶಾಕ್

About The Editor
ನಿತಿನ್ ಆರ್.ಕೈದೊಟ್ಲು






