ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
BHADRAVATHI NEWS, 27 AUGUST 2024 : ತೀವ್ರ ಕುತೂಹಲ ಮೂಡಿಸಿದ್ದ ಭದ್ರಾವತಿ ನಗರಸಭೆ ಉಪಾಧ್ಯಕ್ಷ ಹುದ್ದೆ ಕಾಂಗ್ರೆಸ್ ಪಾಲಾಗಿದೆ. 11ನೇ ವಾರ್ಡ್‌ನ ನಗರಸಭೆ ಸದಸ್ಯ ಮಣಿ ನೂತನ ಉಪಾಧ್ಯಕ್ಷರಾಗಿ (Vice President) ಆಯ್ಕೆಯಾದರು.
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
ಒಟ್ಟು 35 ಮತಗಳ ಪೈಕಿ ಮಣಿ ಕಾಂಗ್ರೆಸ್ ಪಕ್ಷದ 18 ನಗರಸಭೆ ಸದಸ್ಯರು ಮತ್ತು ಶಾಸಕ ಸಂಗಮೇಶ್ವರ ಮತ ಸೇರಿ ಒಟ್ಟು 19 ಮತ ಪಡೆದು ವಿಜಯಶಾಲಿಯಾದರು. ನೂತನ ಉಪಾಧ್ಯಕ್ಷ ಮಣಿ ಅವರಿಗೆ ಶಾಸಕ ಬಿ.ಕೆ.ಸಂಗಮೇಶ್ವರ್ ಸೇರಿದಂತೆ ಕಾಂಗ್ರೆಸ್ ಸದಸ್ಯರು, ಮುಖಂಡರು, ಕಾರ್ಯಕರ್ತರು ಅಭಿನಂದನೆ ಸಲ್ಲಿಸಿದರು.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಕೈ ಕೊಟ್ಟ ಬಿಜೆಪಿ, ಜೆಡಿಎಸ್‌ಗೆ ಕಸಿವಿಸಿ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ಸವಿತಾ ಉಮೇಶ್ ಕಣಕ್ಕಿಳಿದಿದ್ದರು. ಇದರಿಂದ ಉಪಾಧ್ಯಕ್ಷ ಹುದ್ದೆಯ ಚುನಾವಣೆ ಕುತೂಹಲ ಮೂಡಿಸಿತ್ತು. ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ತಮ್ಮ ಪಕ್ಷದ ಸದಸ್ಯರಿಗೆ ವಿಪ್ ನೀಡಿದ್ದವು. ಆದರೆ ಬಿಜೆಪಿಯ ವಿ.ಕದಿರೇಶ್, ಅನಿತಾ ಮಲ್ಲಪ್ಪ, ಶಶಿಕಲಾ ನಾರಾಯಣಪ್ಪ ಚುನಾವಣೆಗೆ ಗೈರಾಗಿದ್ದರು. ಜೆಡಿಎಸ್‌ನ 12, ಬಿಜೆಪಿ 4, ಪಕ್ಷೇತರ 1 ಮತ ಸೇರಿ ಸವಿತಾ ಉಮೇಶ್ ಅವರಿಗೆ 17 ಮತ ಲಭಿಸಬೇಕಿತ್ತು. ಮೂವರು ಬಿಜೆಪಿ ಸದಸ್ಯರು ಗೈರಾಗಿದ್ದರಿಂದ ಮೈತ್ರಿ ಅಭ್ಯರ್ಥಿ ಸವಿತಾ ಉಮೇಶ್ 14 ಮತ ಪಡೆಯಲು ಸಫಲವಾದರು.
ಶಿವಮೊಗ್ಗ ಉಪ ವಿಭಾಗಾಧಿಕಾರಿ ಸತ್ಯನಾರಾಯಣ ಅವರು ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ಪೌರಾಯುಕ್ತ ಪ್ರಕಾಶ್ ಎಂ.ಚೆನ್ನಪ್ಪನವರ್ ಸೇರಿದಂತೆ ಹಲವರು ಇದ್ದರು.
ಇದನ್ನೂ ಓದಿ ⇒ ಸರ್ಕಾರಿ ಕಚೇರಿ ಮುಂದೆ ಅಡಿಕೆ ಸುರಿದು ಹೋರಾಟಕ್ಕೆ ನಿರ್ಧಾರ, ದಿನಾಂಕ ಪ್ರಕಟ, ಕಾರಣವೇನು?