ಶಿವಮೊಗ್ಗ ಲೈವ್.ಕಾಂ | BHADRAVATHI NEWS | 21 ಸೆಪ್ಟಂಬರ್ 2020
ಕರೋನ ನೆಪದಲ್ಲಿ ವಿದ್ಯುತ್ ಬಿಲ್ ಪಾವತಿಸದ ಗ್ರಾಹಕರಿಗೆ ಮೆಸ್ಕಾಂ ಶಾಕ್ ನೀಡಿದೆ. ಭದ್ರಾವತಿಯಲ್ಲಿ ಬಿಲ್ ಪಾವತಿಸದ ಗ್ರಾಹಕರ ವಿದ್ಯುತ್ ಕಡಿತ ಮಾಡುವ ಎಚ್ಚರಿಕೆ ನೀಡಿದೆ.
ಕರೋನ ಕಾರಣ ಮೆಸ್ಕಾಂನಲ್ಲಿ ಕಂದಾಯ ವಸೂಲಾತಿ ಕುಂಠಿತವಾಗಿದೆ. ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡ ಗ್ರಾಹಕರು ಕೂಡಲೆ ಹಣ ಪಾವತಿಸಬೇಕು ಎಂದು ಮನವಿ ಮಾಡಿದೆ.
ಒಂದು ವೇಳೆ ಬಿಲ್ ಪಾವತಿಸದಿದ್ದರೆ, ಸೆಪ್ಟೆಂಬರ್ 21ರಿಂದ 30ರವರೆಗೆ ಸಾಮೂಹಿಕವಾಗಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ ಎಂದು ಮೆಸ್ಕಾಂ ತಿಳಿಸಿದೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]