ಶಿವಮೊಗ್ಗ ಲೈವ್.ಕಾಂ | SHIMOGA NEWS | 9 ಸೆಪ್ಟಂಬರ್ 2020
ಭರ್ತಿಯಾದ ಭದ್ರಾ ಜಲಾಶಯಕ್ಕೆ ಭದ್ರಾವತಿ ಶಾಸಕ ಸಂಗಮೇಶ್ವರ ಅವರು ಬಾಗಿನ ಅರ್ಪಿಸಿದರು. ಕುಟುಂಬ ಸಹಿತ ಭದ್ರಾ ಡ್ಯಾಂಗೆ ತೆರಳಿದ್ದ ಅವರು ಬಾಗಿನ ಅರ್ಪಿಸಿದರು.
ಕರೋನ ಸೋಂಕು ಹಿನ್ನೆಲೆಯಲ್ಲಿ ಈ ಬಾರಿ ಅಭಿಮಾನಿಗಳು, ಬೆಂಬಲಿಗರು, ಪಕ್ಷದ ಕಾರ್ಯಕರ್ತರಿಗೆ ಆಹ್ವಾನ ನೀಡಿರಲಿಲ್ಲ. ಕುಟುಂಬದ ಸಹಿತಿ ಬಿಆರ್ಪಿಗೆ ಆಗಮಿಸಿದ್ದ ಸಂಗಮೇಶ್ವರ ಅವರು, ಬೋಟ್ನಲ್ಲಿ ತೆರಳಿ ಬಾಗಿನ ಅರ್ಪಿಸಿದರು.
ಸಹೋದರ ಬಿ.ಕೆ.ಜಗನ್ನಾಥ್, ಬಿ.ಕೆ.ಶಿವಕುಮಾರ್ ಹಾಗೂ ಕುಟುಂಬದವರು ಇದ್ದರು.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]