ಶಿವಮೊಗ್ಗ ಲೈವ್.ಕಾಂ | 3 ಮಾರ್ಚ್ 2019
ಗಣಿ ಮಂಜೂರು ಮಾಡಿಸಿದರೆ ವಿಎಐಎಸ್ಎಲ್’ಗೆ ಬಂಡಾವಳ ಹಾಕುತ್ತೇವೆ, ಕಾರ್ಖಾನೆಯನ್ನು ಪುನಾರಂಭ ಮಾಡಿಸುತ್ತೇವೆ ಎಂದು ಭಾಷಣ ಮಾಡಿದ ಬಿಜೆಪಿ ಮಂತ್ರಿಗಳು ಮತ್ತು ಸಂಸದರು, ಈವರೆಗೂ ಕಾರ್ಖಾನೆಗಾಗಿ ಏನನ್ನೂ ಮಾಡಿಲ್ಲ ಎಂದು ಭದ್ರಾವತಿ ಶಾಸಕ ಸಂಗಮೇಶ್ವರ್ ಆರೋಪಿಸಿದ್ದಾರೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಐಎಸ್ಎಲ್ ಕಾರ್ಖಾನೆಗೆ ಗಣಿ ಮಂಜೂರಾಗಿದೆ. ಕೇಂದ್ರದ ಒಪ್ಪಿಗೆ ಸಿಕ್ಕಿದೆ. ಈಗ ಕಾರ್ಖಾನೆಯನ್ನು ಆರಂಭಿಸುವುದು ಕೇಂದ್ರ ಸರ್ಕಾರದ ಜವಾಬ್ದಾರಿ. ಗುತ್ತಿಗೆ ಕಾರ್ಮಿಕರಿಗೆ 26 ದಿನ ಕೆಲಸ ನೀಡಬೇಕು ಎಂಬ ಹೋರಾಟಕ್ಕೆ ತಮ್ಮ ಬೆಂಬಲವಿದೆ ಎಂದರು.
ಎಂಪಿಎಂ ಆರಂಭಕ್ಕೆ ನಡೆಯುತ್ತಿದೆ ಪ್ರಯತ್ನ
ಎಂಪಿಎಂ ಕಾರ್ಖಾನೆಯ ಕಾರ್ಮಿಕರಿಗೆ ಸಿಗಬೇಕಾದ ಸೌಲಭ್ಯಗಳನ್ನು ಕೊಡಿಸುವಲ್ಲಿ ಸಫಲರಾಗಿರುವುದಾಗಿ ತಿಳಿಸಿದ ಸಂಗಮೇಶ್ವರ್, ಕಾರ್ಖಾನೆ ಆರಂಭಕ್ಕೆ ಪ್ರಯತ್ನಿಸುತ್ತಿರುವುದಾಗಿ ಸ್ಪಷ್ಟಪಡಿಸಿದರು. ಲೀಸ್ ಆಧಾರದ ಮೇಲೆ ಕಾರ್ಖಾನೆ ಶುರು ಮಾಡುವ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.
ಕಾಂಗ್ರೆಸ್ ಮುಖಂಡ ಚಂದ್ರೆಗೌಡ, ಹೆಚ್.ಎಲ್.ಷಡಾಕ್ಷರಿ, ರಾಮೇಗೌಡ, ಶ್ರೀನಿವಾಸ್, ಬಿ.ಟಿ.ನಾಗರಾಜ್, ಖಲೀಲ್ ಸೇರಿದಂತೆ ಹಲವರು ಸುದ್ದಿಗೋಷ್ಠಿಯಲ್ಲಿದ್ದರು.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200
ಸುದ್ದಿಗಾಗಿ ಮೊಬೈಲ್ ನಂಬರ್ | 9964634494
ಈ ಮೇಲ್ | [email protected]